Author: B.R.Nagarathna

12

ವಾಟ್ಸಾಪ್ ಕಥೆ 45 : ಎಲ್ಲವನ್ನೂ ನೀಡುವ ದೇವರು.

Share Button

ಒಬ್ಬ ಗೌರವಾನ್ವಿತ ಗೃಹಸ್ಥನ ಮನೆಯಲ್ಲಿ ಅವನಿಗಿದ್ದ ಒಬ್ಬಳೇ ಮಗಳ ಐದುವರ್ಷದ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಆತ ತನ್ನ ಗೆಳೆಯರ ಬಳಗ, ಆಪ್ತೇಷ್ಟರೆಲ್ಲರನ್ನೂ ಆಹ್ವಾನಿಸಿದ್ದ. ಆ ಗುಂಪಿನಲ್ಲಿ ಒಬ್ಬ ನಾಸ್ತಿಕ ಗೆಳೆಯನೂ ಇದ್ದನು. ಆತ ಗೃಹಸ್ಥನ ಪುಟ್ಟ ಮಗಳಿಗೆ ಒಂದು ಸುಂದರವಾದ ಮರದ ಬೊಂಬೆಯನ್ನು ಉಡುಗೊರೆಯಾಗಿ ತಂದುಕೊಟ್ಟು...

10

ಥೀಮ್ : ‘ನೆನಪಿನ ಜೋಳಿಗೆ’- ಹಸಿಬೆಯ ಚೀಲ

Share Button

ಪೀಠಿಕೆ: ಇಲ್ಲಿ ಜೋಳಿಗೆ ಎಂಬ ಪದವನ್ನು ಉದ್ದೇಶಪೂರ್ವಕವಾಗಿ ಬಳಸಲಾಗಿದೆ. ಏಕೆಂದರೆ ಜೋಳಿಗೆ ಎಂದರೆ ಅದೊಂದು ಚೀಲ. ಅದು ಏನನ್ನಾದರೂ ತನ್ನೊಳಗೆ ಇರಿಸಿಕೊಳ್ಳಬಲ್ಲುದು. ಹಾಗಾಗಿ ನನ್ನ ಬಾಲ್ಯಕಾಲದ ಗ್ರಾಮೀಣ ಬದುಕಿನಲ್ಲಿ ನಾನುಕಂಡಿದ್ದು ಈಗ ಮರೆಯಾಗಿರುವ ಅನೇಕ ಉಪಯುಕ್ತ ಸಾಧನಗಳ ನೆನಪುಗಳನ್ನು ಈ ಜೋಳಿಗೆ ಸಂಗ್ರಹದಲ್ಲಿಟ್ಟುಕೊಂಡಿದೆ. ಎರಡು ದಶಕಕ್ಕೂ ಹೆಚ್ಚು...

8

ವಾಟ್ಸಾಪ್ ಕಥೆ 44 : ಅಂತಸ್ತಿಗಿಂತ ಕರ್ಮನಿಷ್ಠೆ ದೊಡ್ಡದು.

Share Button

ಒಂದೂರು. ಅಲ್ಲಿ ಒಬ್ಬ ಜಮೀನುದಾರ ಮತ್ತು ಅವನಲ್ಲಿ ಸೇವೆಯಲ್ಲಿದ್ದ ಸಹಾಯಕರಿಬ್ಬರೂ ಒಂದೇ ದಿನ ತೀರಿಹೋದರು. ಸತ್ತ ನಂತರ ಅವರಿಬ್ಬರ ಆತ್ಮಗಳು ಯಮಧರ್ಮರಾಜನ ಆಸ್ಥಾನದಲ್ಲಿ ವಿಚಾರಣೆಗಾಗಿ ನಿಂತವು. ಜಮೀನುದಾರನ ಖಾತೆಯಲ್ಲಿನ ವಿವರಗಳೆಲ್ಲವನ್ನು ಪರಿಶೀಲಿಸಿದ ನಂತರ ಯಮಧರ್ಮನು ಅವನಿಗೆ ಅಲ್ಲಿ ಸೇವಕನ ಕೆಲಸ ನಿರ್ವಹಿಸುವಂತೆ ಆದೇಶಿಸಿದ. ಸೇವಕನ ವಿವರಗಳನ್ನು ಪರಿಶೀಲಿಸಿ...

12

ಎಲ್ಲಿಗೆ ಪಯಣ?

Share Button

ಮನೆಯ ಎಲ್ಲ ಕೆಲಸಗಳನ್ನು ಮುಗಿಸಿ ಮಾರನೆಯ ಬೆಳಗಿನ ಉಪಾಹಾರಕ್ಕೆ ಪರಿಕರಗಳನ್ನು ಅಣಿಮಾಡಿದ್ದರು ಪಾರ್ವತಿ. ನೀರುತುಂಬಿದ ಜಗ್ಗು, ಲೋಟಗಳನ್ನು ಹಿಡಿದು ತಮ್ಮ ರೂಮಿಗೆ ಬಂದರು. ಗಂಡ ಶಿವರಾಮುವಿನ ಸುಳಿವೇ ಇಲ್ಲ. ಇಷ್ಟು ಹೊತ್ತಿನಲ್ಲಿ ಎಲ್ಲಿ ಹೋದರೆಂದುಕೊಳ್ಳುತ್ತಾ ಬಾತ್‌ರೂಮಿನ ಕಡೆ ಕಣ್ಣಾಡಿಸಿದರು.ಊಹುಂ, ಅಲ್ಲಿ ಬಾಗಿಲು ಹೊರಗಿನಿಂದ ಬೋಲ್ಟ್ ಹಾಕಿದೆ. ಹಾಗಾದರೆ...

7

ವಾಟ್ಸಾಪ್ ಕಥೆ 43 : ಏಕಾಗ್ರತೆ.

Share Button

ಅದೊಂದು ಪಾನಗೃಹ. ಅಲ್ಲಿ ಗ್ರಾಹಕರ ಗದ್ದಲ. ಕುಡಿಯುವುದು, ತಿನ್ನುವುದು, ತಮ್ಮತಮ್ಮೊಳಗೆ ಜೋರು ದನಿಯಲ್ಲಿ ಹರಟುವುದು ಎಲ್ಲವೂ ನಿರಂತರವಾಗಿ ನಡೆದಿತ್ತು. ಗ್ರಾಹಕರ ವೈವಿಧ್ಯಮಯ ಬೇಡಿಕೆಗಳಿಗೆ ತಕ್ಕಂತೆ ಅಂಗಡಿಯ ಕೆಲಸಗಾರರು ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಸರಭರ ಓಡಾಡುತ್ತಾ ಸೇವೆ ಮಾಡುತ್ತಿದ್ದರು. ಅಂಗಡಿಯ ಮೂಲೆಯಲ್ಲಿ ಒಂದು ಖುರ್ಚಿ ಅದರ ಮುಂದೊಂದು ಮೇಜು ಇದ್ದವು...

9

ಅಧಿಕ

Share Button

ಈ ವರ್ಷದಲ್ಲಿ ಶ್ರಾವಣಮಾಸ ಅಧಿಕವಾಗಿ ಬಂದಿತ್ತು. ಆಗ ಸಂಪ್ರದಾಯಸ್ಥರು ಪಂಚಾಗದಂತೆ ಅದನ್ನು ಹೊರತುಪಡಿಸಿ ನಿಜ ಶ್ರಾವಣಮಾಸದಲ್ಲಿ ಮಾತ್ರ ಬಹುತೇಕ ಶುಭಕಾರ್ಯಗಳನ್ನು ಮಾಡುವುದುಂಟು. ಇಂತಹ ಅಧಿಕ ಮಾಸಗಳು ಚಾಂದ್ರಮಾನ ಪದ್ಧತಿಯಲ್ಲಿ ನಾಲ್ಕುವರ್ಷಗಳಿಗೊಂದರಂತೆ ಬರುತ್ತವೆ. ಇದು ಕ್ಯಾಲೆಂಡರಿನಲ್ಲಿ ಪರಿಗಣಿಸುವ ಹನ್ನೆರಡು ತಿಂಗಳಿಗೆ ಸರಿದೂಗಿಸಲು ಮಾಡುವ ಒಂದು ಸಣ್ಣ ಹೊಂದಾಣಿಕೆ. ಹೀಗಾಗಿ...

8

ವಾಟ್ಸಾಪ್ ಕಥೆ 42 : ಸ್ವರ್ಗ-ನರಕ.

Share Button

ಒಂದೂರಿಗೆ ಒಮ್ಮೆ ಕುದುರೆಯೇರಿ ರಾಜದೂತನೊಬ್ಬ ಕಾರಣಾಂತರದಿಂದ ಬಂದಿಳಿದ. ಆ ಊರಿನ ಜನರು ಮುಗ್ಧರು. ರಾಜ್ಯದ ರಾಜನೆಂದರೆ ಅಪಾರ ಗೌರವ. ಅವನನ್ನು ರಾಜನೇ ಬಂದನೆಂಬಂತೆ ಉಪಚಾರ ಮಾಡಿದರು. ಅವನಿಗೆ ತುಂಬ ಸಂತೋಷವಾಯಿತು. ಅವನಿಗೆ ರುಚಿಕರವಾದ ಭೋಜನ ಮಾಡಿಸಿ ಮಲಗಿಕೊಳ್ಳಲು ಒಳ್ಳೆಯ ವ್ಯವಸ್ಥೆ ಮಾಡಿಕೊಟ್ಟರು. ಇನ್ನೇನಾದರೂ ಬೇಕಾದರೆ ಕೂಗಿ ಕರೆದರೆ...

16

ಬೇಗುದಿ

Share Button

ಯಾವುದೋ ಸಮಾರಂಭಕ್ಕೆ ಹೊರಟಿದ್ದ ಮಗಳು, ಅಳಿಯ, ಮೊಮ್ಮಗನನ್ನು ಬೀಳ್ಕೊಟ್ಟು ಮನೆಯ ಮುಂದಿನ ಗೇಟನ್ನು ಭದ್ರಪಡಿಸಿ ಬಂದರು ಗಿರಿಜಮ್ಮ. ಒಳಗಿನಿಂದ ಕೈಯಲ್ಲಿ ಕಾಫಿ ಲೋಟಗಳನ್ನು ಹಿಡಿದುಕೊಂಡು ಬಂದ ಬೀಗಿತ್ತಿ ಲಲಿತಮ್ಮನವರನ್ನು ನೋಡಿದವರೇ ”ಅರೆ ! ನೀವೇಕೆ ತರಲು ಹೋದಿರಿ, ನಾನೇ ಬಂದು ತೆಗೆದುಕೊಳ್ಳುತ್ತಿದ್ದೆ” ಎಂದರು. ”ಪರವಾಗಿಲ್ಲ ಬಿಡಿ, ಅದರಲ್ಲೇನಿದೆ...

8

ವಾಟ್ಸಾಪ್ ಕಥೆ 41 : ನಿಜವಾದ ಸಂಪತ್ತು.

Share Button

ಒಂದೂರಿನಲ್ಲಿ ಒಬ್ಬ ಸಿರಿವಂತನಿದ್ದನು. ಅವನಿಗೆ ನಾಲ್ಕು ಜನ ಗಂಡುಮಕ್ಕಳಿದ್ದರು. ಎಲ್ಲರಿಗೂ ಮದುವೆಯಾಗಿ ನಾಲ್ಕು ಜನ ಸೊಸೆಯಂದಿರು ಬಂದಿದ್ದರು. ಸಿರಿವಂತನು ಮಡದಿ, ಮಕ್ಕಳು ಮತ್ತು ಸೊಸೆಯಂದಿರೊಟ್ಟಿಗೆ ಸುಖವಾಗಿದ್ದನು. ಅವರೆಲ್ಲರೂ ಪ್ರೀತಿ ವಿಶ್ವಾಸದಿಂದಿದ್ದರು. ಸಿರಿವಂತನಿಗೆ ಹೀಗಾಗಿ ಯಾವುದಕ್ಕೂ ಕೊರತೆ ಎಂಬುದೇ ಇರಲಿಲ್ಲ. ಹೀಗಿರುವಾಗ ಒಂದುದಿನ ಸಿರಿವಂತನಿಗೆ ಕನಸಿನಲ್ಲಿ ಲಕ್ಷ್ಮೀದೇವಿಯು ಕಾಣಿಸಿಕೊಂಡಳು....

6

ಈ ಕೂಸು ನಮಗಿರಲಿ.

Share Button

ಬೆಳಗ್ಗೆ ಐದುಗಂಟೆಗೆ ಎದ್ದು ಮನೆಗೆಲಸ ಮುಗಿಸಿ ಮಕ್ಕಳಿಬ್ಬರನ್ನೂ ಶಾಲೆಗೆ ತಯಾರುಮಾಡಿ ಕಳಿಸಿದ ಗೋಪಾಲ ತನ್ನ ಸ್ನಾನಪಾನಾದಿಗಳನ್ನು ಮುಗಿಸಿ ತಿಂಡಿ ತಂದು ಮಧ್ಯಾನ್ಹದ ಬುತ್ತಿ ಕಟ್ಟಿಕೊಂಡು ಅಂಗಡಿ ಬಾಗಿಲು ತೆರೆಯಲು ಸಿದ್ಧನಾಗುತ್ತಿದ್ದ. ಇದ್ದ ಒಂದು ಕೋಣೆಯ ಮಂಚದ ಮೇಲೆ ಹಸುಗೂಸೊಂದನ್ನು ಮಲಗಿಸಿಕೊಂಡು ಮಲಗಿದ್ದ ಹಸಿಬಾಣಂತಿ ಕೌಸಲ್ಯಾ ಅಲ್ಲಿಂದಲೇ ಗಂಡನ...

Follow

Get every new post on this blog delivered to your Inbox.

Join other followers: