Author: Dr.Gayathri Devi Sajjan

5

ಜ್ಯೋತಿರ್ಲಿಂಗ 7: ರಾಮೇಶ್ವರ

Share Button

ದಕ್ಷಿಣ ಭಾರತದ ಪ್ರವಾಸಕ್ಕೆಂದು ಬಂದವಳು, ರಾಮೇಶ್ವರದ ಕಡಲ ತೀರದಲ್ಲಿ ನಿಂತಾಗ, ರಾಮಾಯಣದ ಕೆಲವು ಪ್ರಸಂಗಗಳು ಮನದಲ್ಲಿ ತೇಲಿ ಬಂದವು – ದಂಡಕಾರಣ್ಯದಲ್ಲಿ ಪರ್ಣಕುಟೀರವೊಂದರಲ್ಲಿ ವಾಸವಾಗಿದ್ದ ರಾಮ, ಸೀತೆ, ಲಕ್ಷ್ಮಣರು. ಸೀತೆಯ ಮನ ಸೆಳೆದ, ಚಿನ್ನದ ಬಣ್ಣದ ಜಿಂಕೆಯ ರೂಪದಲ್ಲಿ ಪ್ರತ್ಯಕ್ಷನಾದ ಮಾರೀಚ, ಪರಮ ಸುಂದರಿಯಾದ ಸೀತೆಯನ್ನು ಕಂಡು...

7

ಜ್ಯೋತಿರ್ಲಿಂಗ 6 : ಭೀಮಾ ಶಂಕರ

Share Button

ಪಟ್ಟಣಗಳ ಸದ್ದು ಗದ್ದಲದಿಂದ ದೂರ, ಜನ ಜಂಗುಳಿಯ ನೂಕು ನುಗ್ಗಾಟದಿಂದ ಬಹುದೂರ, ಕಾಂಕ್ರೀಟ್ ಕಾಡುಗಳಿಂದ ಇನ್ನೂ ದೂರವಿರುವ ಭೀಮಾಶಂಕರನ ದರ್ಶನ ಮಾಡೋಣ ಬನ್ನಿ. ಮಹಾರಾಷ್ಟ್ರದ ಪುಣೆಯಿಂದ 129 ಕಿ.ಮೀ. ದೂರದಲ್ಲಿರುವ ಖೇಡ್ ತಾಲ್ಲೂಕಿನ ಬೋರ್‌ಗಿರಿ ಎಂಬ ಗ್ರಾಮದಲ್ಲಿ, ಡಾಕಿನಿ ಬೆಟ್ಟದ ಬಳಿಯಿರುವ, ಭೀಮಾ ನದಿಯ ತೀರದಲ್ಲಿರುವ ದೇಗುಲವೇ...

6

ಜ್ಯೋತಿರ್ಲಿಂಗ 5 : ವೈದ್ಯನಾಥೇಶ್ವರ

Share Button

‘ಬೋಲ್ ಭಂ, ಬೋಲ್ ಭಂ’, ಎನ್ನುವ ಭಕ್ತರ ಕೂಗು ಕೇಳಿಸುತ್ತಿದೆಯಾ ವೈದ್ಯನಾಥ. ಎಲ್ಲಿರುವೆ ನೀನು, ಏಕೆ ಕಾಡುವೆ ನಿನ್ನ ದರುಶನಕ್ಕಾಗಿ ಬರುವ ಭಕ್ತರನ್ನು? ಮಹಾರಾಷ್ಟ್ರದ ಪರ್ಲಿಯಲ್ಲಿರುವೆಯೋ, ಅಥವಾ ಜಾರ್ಖಂಡ್‌ನ ದೇವಘರ್ ನಲ್ಲಿರುವೆಯೋ, ಅಥವಾ ಹಿಮಾಚಲದ ಕಾಂಗ್ರಾ ನಗರದಲ್ಲಿರುವೆಯೋ ತಂದೆ? ಕನ್ವರ್ ಯಾತ್ರೆಯ ಸಮಯದಲ್ಲಿ,, ಬಿಹಾರದ ಸುಲ್ತಾನ್‌ಗಂಜ್‌ನಲ್ಲಿ ಹರಿಯುವ...

6

ಜ್ಯೋತಿರ್ಲಿಂಗ 4 ;ಓಂಕಾರೇಶ್ವರ

Share Button

ಓಂ, ಓಂ, ಓಂ, ..ಓಂಕಾರದ ನಾದ ಕೇಳಿಸುತ್ತಿದೆಯಲ್ಲವೇ? ಈ ಪ್ರಣವ ನಾದ ಅ ಕಾರ, ಉ ಕಾರ ಮತ್ತು ಮ ಕಾರಗಳಿಂದ ಉದ್ಭವವಾಗಿದೆ. ಇವು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ ಸಂಕೇತವಾಗಿ ನಿಂತರೆ, ಓಂಕಾರವು ಪರಬ್ರಹ್ಮನ ಸಂಕೇತವಾಗಿ ನಿಲ್ಲುವುದು. ಹಿಂದು ಧರ್ಮದಲ್ಲಿ ಬರುವ ಎಲ್ಲಾ ಮಂತ್ರಗಳೂ ‘ಓಂ‘ಕಾರದಿಂದಲೇ...

9

ಜ್ಯೋತಿರ್ಲಿಂಗ 3-ಉಜ್ಜಯಿನಿಯ ಮಹಾಕಾಲೇಶ್ವರ

Share Button

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ, ಮಹಾಕಾಲೇಶ್ವರನ ಹೆಸರು ಕೇಳಿಯೇ ಮೈಯಲ್ಲಿ ನಡುಕ ಹುಟ್ಟಿ, ಮನದಲ್ಲಿ ಭಯ ಮೂಡಿತ್ತು. ಮುಂಜಾನೆ ಎರಡೂವರೆಗೇ, ತಣ್ಣೀರಿನಲ್ಲಿ ಸ್ನಾನ ಮಾಡಿ, ಮಹಾಕಾಲನ ಭಸ್ಮಾರತಿ ನೋಡಲು ದೇಗುಲಕ್ಕೆ ಹೋಗಿದ್ದೆವು. ಪ್ರತಿದಿನ ಆರು ನೂರು ಜನರಿಗೆ ಮಾತ್ರ ಅವಕಾಶ ಇರುತ್ತದೆ. ಮೂರೂವರೆ ಹೊತ್ತಿಗೇ, ಭೂಮಿಯೇ ನಡುಗಿದಂತಹ ಅನುಭವ, ಗಂಟೆ,...

7

ಜ್ಯೋತಿರ್ಲಿಂಗ 2-ಶ್ರೀಶೈಲ ಮಲ್ಲಿಕಾರ್ಜುನ

Share Button

ಮಹಾದೇವಿಯಕ್ಕನ ಆರಾಧ್ಯ ದೈವವಾದ ಚನ್ನಮಲ್ಲಿಕಾರ್ಜುನನ ದರ್ಶನ ಮಾಡೋಣ ಬನ್ನಿ. ಮಂಗಳಕರನೂ, ಚೆಲುವನೂ ಆದ ಶಿವನ ಜ್ಯೋತಿರ್ಲಿಂಗ ಸ್ವರೂಪನಾದ ಮಲ್ಲಿಕಾರ್ಜುನನ್ನು ಅಕ್ಕ ತನ್ನ ಕನಸಲ್ಲಿ ಕಂಡದ್ದಾದರೂ ಹೇಗೆ? ಅಕ್ಕಾ ಕೇಳವ್ವಾ, ನಾನೊಂದ ಕನಸ ಕಂಡೆಅಕ್ಕಿ, ಅಡಕೆ, ತೆಂಗಿನಕಾಯಿ ಕಂಡೇನವ್ವಾಚಿಕ್ಕ ಚಿಕ್ಕ ಜಡೆಗಳ, ಸುಲಿಪಲ್ಲ ಗೊರವನುಬಿಕ್ಷಕೆ ಬಂದುದ ಕಂಡೇನವ್ವಮಿಕ್ಕು ಮೀರಿ...

12

ಜ್ಯೋತಿರ್ಲಿಂಗ 1-ಸೌರಾಷ್ಟ್ರದ ಸೋಮನಾಥ

Share Button

ಗುಜರಾತಿನ ಪ್ರವಾಸಕ್ಕೆಂದು ಹೋದವರು, ಸೋಮನಾಥನ ದರ್ಶನ ಪಡೆಯದೇ ಬರುವುದುಂಟೇ? ಸೋಮನಾಥನ ದೇಗುಲದ ಮುಂದೆ ನಿಂತವರನ್ನು ಆಯಸ್ಕಾಂತದಂತೆ ಆಕರ್ಷಿಸಿದ್ದು ಭವ್ಯವಾದ ಸೋಮನಾಥನ ಆಲಯ. ಅರಬ್ಬೀ ಸಮುದ್ರ ತೀರ, ಅಪೂರ್ವವಾದ ಶಿಲ್ಪಕಲೆ, ಅದ್ಭುತವಾದ ವಾಸ್ತುಶಿಲ್ಪ ಹಾಗೂ ಇತಿಹಾಸವನ್ನು ಹೊಂದಿರುವ ದೇವಾಲಯ, ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯ ಸ್ಥಾನದಲ್ಲಿ ನಿಲ್ಲುತ್ತದೆ. ಗುಜರಾತಿನ ಕಾಟಿಯಾವಾಡಿನ...

10

ಜ್ಯೋತಿ ಸ್ವರೂಪನಾದ ಆದಿದೈವ – ಶಿವ

Share Button

ಅಂದು ಶಿವರಾತ್ರಿ. ಶಿವಾಲಯಗಳಲ್ಲಿ – ಗಂಟೆ, ಜಾಗಟೆಗಳ ಸದ್ದಿನೊಂದಿಗೆ, ಓಂಕಾರದ ನಾದ ಹೊರ ಹೊಮ್ಮುತ್ತಿತ್ತು ಪುಷ್ಪಗಳಿಂದ, ಧೂಪ ದೀಪಗಳಿಂದ ಅಲಂಕೃತನಾದ ಶಿವನನ್ನು ಹೇಗೆ ತಾನೆ ಬಣ್ಣಿಸಲಿ?. ನಾನು ನೋಡ ನೋಡುತ್ತಿದ್ದಂತೇ, ಆ ದೀಪಗಳ ಮಧ್ಯೆ ಕಂಗೊಳಿಸುತ್ತಿದ್ದ ಶಿವಲಿಂಗ ನಿಧಾನವಾಗಿ ಜ್ಯೋತಿ ಸ್ವರೂಪವಾಗಿ ಇಡೀ ಗರ್ಭಗುಡಿಯ ತುಂಬಾ ವ್ಯಾಪಿಸಿತು....

12

ಯಾರಿವನು ಅಪರಿಚಿತ?

Share Button

ಒಮ್ಮೆ ಸ್ಕಾಟ್ ಲ್ಯಾಂಡಿನಲ್ಲಿ ವಾಸವಾಗಿದ್ದ ಮಗನ ಮನೆಯಿಂದ ಇಂಗ್ಲೆಂಡಿನಲ್ಲಿದ್ದ ತಮ್ಮನ ಮನೆಗೆ ರೈಲಿನಲ್ಲಿ ಬಂದೆ. ಪಯಣದುದ್ದಕ್ಕೂ ನಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ಕಡಲ ತೀರ, ಅಲ್ಲಲ್ಲಿ ಹಸಿರು ಹೊದ್ದ ಬೆಟ್ಟ ಗುಡ್ಡಗಳು, ಜೂನ್ ತಿಂಗಳಾದ್ದರಿಂದ ಎಲ್ಲಿ ನೋಡಿದರೂ ಮರ ಗಿಡಗಳಲ್ಲಿ ಬಣ್ಣ ಬಣ್ಣದ ಹೂಗಳು ಅರಳಿ ನಿಂತಿದ್ದವು. ಸುಮಾರು...

11

ಹೊಂದಿಕೊಂಡು ಬಾಳು ಮಗೂ

Share Button

ಅಂದು ನಮ್ಮ ಪಕ್ಕದ ಅಪಾರ್ಟ್‌ಮೆಂಟಿನಲ್ಲಿ ವಾಸವಾಗಿದ್ದ ಮಾನಸ, ಅಜಿತ್ ದಂಪತಿಗಳ ಮಗ, ಸೊಸೆ, ಮೊಮ್ಮಕ್ಕಳು ವಿದೇಶಕ್ಕೆ ಹಿಂದಿರುಗಿದ್ದರು. ಹದಿನೈದು ದಿನದಿಂದ ಸಂಭ್ರಮದಲ್ಲಿ ತೇಲಾಡುತ್ತಿದ್ದ ಮನೆ ಬಿಕೋ ಎನ್ನುತ್ತಿತ್ತು. ಅಜಿತ್ ಹೊರಗೆ ತಿರುಗಾಡಲು ಹೋಗಿದ್ದರು. ನಾನು ಮಾನಸ ಜೊತೆ ಹರಟಲು, ಅವರ ಮನೆಗೆ ಹೋದೆ. ಬಾಗಿಲು ಅರೆಬರೆ ತೆರೆದಿತ್ತು....

Follow

Get every new post on this blog delivered to your Inbox.

Join other followers: