ಮಬ್ಬು
ದಾರಿ ದೀವಿಗೆಯೊಂದುಬೇಕೀಗದಾರಿ ಅಸ್ಪಷ್ಟ, ಕವಲುಗಳುನೂರು ಫಲಕಗಳು ಹಳೆಯದಾಗಿವೆಕಣ್ಣುಗಳು ಕಿರಿದಾಗಿವೆಬದುಕಿನ ದಾರಿತೋರುವವರಾರು ಮುಳ್ಳು ಕಲ್ಲುಗಳ ಮೆಟ್ಟಿಕಣಿವೆಗಳ ಪೈಪೋಟಿದಾಟಿ ಹಿಡಿಯಬೇಕಿದೆಸಿಗದೂರ ಹುಡುಕಿ ಸರಿರಾತ್ರಿ ಚಂದ್ರಮಕೂಡ ಮರೆಸಣ್ಣ ಮೋಡದೊಳಗೆ ಸೆರೆಸುತ್ತಲಿನ ಮಿಣುಕು ತಾರೆತೋರಲಾರವು ಆಸರೆ ಹಿಂದೆ ದೂರದಲೆಲ್ಲೋಬೆಳಕಿದ್ದ ಹಾಗೆಕಣ್ಣು ಮುಚ್ಚಿಯೂನಡೆಯಬಹುದಿತ್ತೇನೋಎನ್ನುವ ಹಾಗಿತ್ತು ಭ್ರಮೆ ಕುಳಿತು ಕುಳಿತಲ್ಲೇನಿಂತಲ್ಲೇ ನಿಂತು ಇರಲಾಗದುಮಬ್ಬು ದಾರಿಯಲ್ಲಿಮುಗ್ಗರಿಸದೆ ಮುನ್ನಡೆಯಲುಬೇಕಿದೆ...
ನಿಮ್ಮ ಅನಿಸಿಕೆಗಳು…