Author: K M Sharanabasavesha
ಮನದಾಳದಲ್ಲಿ ಹರಳುಗಟ್ಟಿದ ಭಾವನೆಗಳ ಅಭಿವ್ಯಕ್ತಿ ಈ ಕಾವ್ಯಹೇಳಬೇಕೆಂಬ ತುಡಿತಕ್ಕೆ ಹೊರಬಾಗಿಲು ಈ ಕವನ ಪದಗಳೆಂಬ ಸಿಂಹಾಸನದ ಮೇಲೆ ರಾರಾಜಿಸುವ ರಾಣಿ ಈ ಕಬ್ಬಶೋಕವೇ ಮಡುಗಟ್ಟಿ ಕೊರಳು ಒತ್ತಿ ಬರುವಾಗಅಕ್ಷರಗಳೆಂಬ ಕಣ್ಣೀರಾಗಿ ಹರಿಯುವ ಈ ಪದ್ಯ ಹೃದಯ ಖುಷಿಯಿಂದ ತುಂಬಿ ಮೈ ಮನಗಳೇ ನರ್ತಿಸುತ್ತಿರುವಾಗಸಾಲುಗಳೆಂಬ ನಗುವಾಗಿ ಬರುವ ಈ...
ಸರ್ವ ಶಕ್ತಿ ಆದಿಶಕ್ತಿ ರೂಪ ಎಂದೆನ್ನ ಕರೆಯುವರುಇವಳೇ ಸಂಸಾರದ ಕಣ್ಣು ಬಾಳಿನ ದೀಪ ಎಂದೆಲ್ಲಾ ಹೊಗಳುವರು ಇವಳಿದ್ದ ಕಡೆ ಶಾಂತಿ ನಲಿವು ನೆಮ್ಮದಿ ಎಂದು ಕೊಂಡಾಡುವರು ಆದರೂ ಇಂದಿಗೂ ನಿಂತಿಲ್ಲ ನನ್ನ ಶೋಷಣೆಇನ್ನೂ ಕೊನೆಗೊಂಡಿಲ್ಲ ಎನ್ನ ತೀರದ ಬವಣೆ ಸರಿಸಮನಾಗಿ ದುಡಿಯಲು ಬಂದರೆ ನೂರಾರು ಅಡೆತಡೆಗಳುಮನೆಯವರಿಂದಲೇ ಮೂದಲಿಕೆಯ...
ಅರಿಶಿಣ ಹತ್ತಿದೆ ಜವಾಬ್ದಾರಿಯೆಂಬ ಹಳದಿ ಅಂಟಿದೆಕಾರ್ಯ ಕಟ್ಟಳೆಗಳೆಂದು ಹೊರಗೆ ಇರುತ್ತಿದ್ದ ಬಾಲಕಿಯಿಂದು ಹೊಸಲು ದಾಟಲು ಹಿಂಜರಿಯುತಿದೆ ಅಲೆಯುವ ಕಾಲುಗಳಿಗೆ ಓಡುವ ಮನಸ್ಸಿಗೆ ಇಂದುಹಿರಿಯರ ಒತ್ತಾಸೆ ಬಿಡದೆ ಕಟ್ಟಿ ಹಾಕಿದೆಮೊದಲಿನ ತುಂಟತನ ಮಾಯವಾಗಿ ಪ್ರಬುದ್ಧತೆ ಮೊಗದಲಿ ಮನೆ ಮಾಡಿದೆ ಪ್ರೀತಿಯೆಂಬ ಹರಿದ್ರಾ ಕೊಂಬು ತೇಯ್ದು ಮಮತೆಯೆಂಬ ಎಣ್ಣೆಯ ಬೆರಸಿ...
ಅಮ್ಮನ ಹೊಟ್ಟೆ ಗಟ್ಟಿ ಹಿಡಿದು ಮರದಿಂದ ಮರಕ್ಕೆ ಹಾರುತ್ತಿದ್ದೆತಾಯಿ ನೀಡಿದ ಸವಿ ಸವಿ ಹಣ್ಣುಗಳ ಹಿಡಿಯಾಗಿ ತಿನ್ನುತ್ತಿದ್ದೆ ಗಳಿಗೆಯೂ ಎನ್ನ ಆ ಮಾತೆ ಬಿಟ್ಟಿರಲಿಲ್ಲ ನೆರಳಾಗಿ ಎನ್ನ ಕಾಯುತ್ತಿದ್ದಳಲ್ಲಾಯಾವ ಮಾಯೆಯಲ್ಲಿ ತಾಯಿ ರಕ್ಷಣೆ ಬಿಟ್ಟು ತೆರಳಿದೆನೆಲ್ಲಾ ಚೂರು ಸಪ್ಪಳ ಮಾಡದೆ ಚುಕ್ಕೆ ಚಿರತೆ ಬಂದಿತ್ತುಚೂಪಾದ ಹಲ್ಲುಗಳ ತೋರಿ...
ಪಾಲಿಗೆ ಬಂದ ಅರ್ಧ ಎಕರೆ ಹೊಲದ ಒಡೆಯ ಎನ್ನಪ್ಪಬಾರದ ಮಳೆಗೆ ಮುಗಿಲ ಕಡೆ ಮುಖ ಮಾಡಿ ಕಾಯುತ್ತಿದ್ದ ಈ ಮೂಕ ಬಸಪ್ಪ ನಾನು ಹುಟ್ಟಿದಾಗ ಹೆಣ್ಣೆಂದು ಹೀಗಳೆಯದೆಓಣೆಯಲೆಲ್ಲಾ ಸಿಹಿ ಹಂಚಿದ್ದ ಈ ಸುದ್ದಿ ಸೂರಪ್ಪ ಸಾಲ ಮಾಡಿ ತಂದ ಜೋಡಿ ಎತ್ತುಗಳಿಗೆ ರಾಮ ಲಕ್ಷ್ಮಣಎಂದು ಹೆಸರಿಟ್ಟು ಕುಣಿದಾಡಿದ್ದ...
ಕಂಡುಕೊಂಡ ಜ್ಞಾನವ ಹಂಚುವುದೇ ಪರಮ ಧರ್ಮ ಎಂದು ನಂಬಿದ ಯೋಗಿತಾನು ಸ್ವತಃ ಪಾಲಿಸುತ್ತಾ ಉಪದೇಶ ನೀಡಿದ ಆಧ್ಯಾತ್ಮ ಜ್ಯೋತಿ ಆಡಂಬರದ ಜೀವನ ತೊರೆದು ಸಂಚಾರಿ ಬದುಕ ಅಪ್ಪಿಕೊಂಡ ನಿಜ ವಿರಾಗಿಮೆಲುಧ್ವನಿಯಲ್ಲಿ ಬಾಳಿನ ತತ್ವ ಸಾರಿದ ಸರಳ ಜೀವಿ ಪದವಿ ಪಟ್ಟ ಬಯಸದೆ ಜನ ಮಾನಸದಲಿ ನೆಲೆಯೂರಿದ ಸ್ವಾಮೀಜಿಬಹು...
ಕುಮಾರವ್ಯಾಸನಿಂದ ನಾಗರಸನವರೆಗೆ ಆಗಿಹೋದ ಭಾಗವತ ಕವಿಗಳು ಭಾರತ,ರಾಮಾಯಣ, ಭಾಗವತ ಹಾಗೂಭಗವದ್ಗೀತೆ ಇವನ್ನು ಕನ್ನಡಿಸಿ,ದೇಶಿಯ ಛಂದಸ್ಸಿನಲ್ಲಿ ವೈದಿಕ ಪರಂಪರೆಯ ವಾಙ್ಮಯವನ್ನು ಕನ್ನಡ ನುಡಿಯಲ್ಲಿ ನೀಡಿದ್ದರು.ಇನ್ನು ಇದೇ ಯುಗದಲ್ಲಿ ಅದೇ ಪರಂಪರೆಯ ದಾಸವಾಙ್ಮಯವು ಹಾಡಿನ ರೂಪ ತಾಳಿ ಬಳಕೆ ಮಾತಿಗೆ ಹತ್ತಿರ ಬಂದು,ರಾಶಿರಾಶಿಯಾಗಿ ಬೆಳೆಯಿತು. ಬಸವಯುಗದ ಕೊನೆಯಲ್ಲಿ ನರಹರಿ ತೀರ್ಥರು...
ಬಯಲಿನಲಿ ಹೆಮ್ಮರವೊಂದು ಸೆಟೆದು ನಿಂತಿತ್ತು ಹಮ್ಮು ಬಿಮ್ಮುನಲಿ ವಿಶಾಲವಾಗಿ ಹರಡಿಕೊಂಡಿರುವ ರೆಂಬೆ ಕೊಂಬೆಗಳುರಕ್ಕಸ ಮರದ ತುಂಬ ಹಚ್ಚ ಹಸುರಾದ ಎಲೆಗಳು ನಕ್ಕು ನಲಿದಿತ್ತು ಆಳಕ್ಕಿಳಿದ ಬೇರುಗಳಿಂದ ಪೋಷಕಾಂಶಗಳ ಪಡೆಯುತಲಿಅಹಂಕಾರದಲಿ ಮೆರೆದಿತ್ತು ತಿರುಚಿದ ಬಲವಾದ ಕಾಂಡದ ಬೆಂಬಲದಲಿ ಹಿಯ್ಯಾಳಿಸಿ ನಗುತ್ತಿತ್ತು ಕೆಳಗಿರುವ ಗರಿಕೆ ಹುಲ್ಲನ್ನು ನೋಡಿಕೊಲ್ಮಿಂಚು ಗುಡುಗು ಸಿಡಿಲುಗಳ...
ನದಿಯಾಗಿ ನಿಂದಿರುವೆ ಕಡಲ ಬಳಿಹರಿದು ಬಂದು ಕಾದಿರುವೆ ಒಳ ಸೇರಲೆಂದು ಕಂಪಿಸಿದೆ ಏಕೀ ಹೃದಯವಿಶಾಲ ಶರಧಿಯ ನೋಡಿ ಮೊರೆವ ಹೆದ್ದೊರೆಗಳ ಹೊಡೆತಕೆತುಂಬಿ ಹರಿದಿದೆ ಕಣ್ಣೀರ ಕೋಡಿ ಆಗಾಗ ಮುಗಿಲೆತ್ತರದ ಅಲೆಗಳುನೆರೆನೆರೆದು ಭುಸುಗುಟ್ಟುವ ನೀರಿನ ಕಣಗಳು ಎನ್ನೊಡಲ ಮೆಕ್ಕಲು ಮಣ್ಣು ಭಾರವಾಗಿ ಕೂತಿದೆಎನ್ನ ಕೆಂಪಾದ ಕೆನ್ನೆ ನೀಲಿಯಾಗತೊಡಗಿದೆ ನನ್ನ...
ಗೆಳೆಯರೊಂದಿಗೆ ಚಿನ್ನಿ ದಾಂಡು ಆಡಿಬೆಳಗ್ಗೆಯಿಂದ ಎಮ್ಮೆಯೊಂದಿಗೆ ಓಡಿಬಳಲಿದ ಕಾಲುಗಳ ಎದೆಗೆ ಮಡಿಸಿ ಜಾರಿದ್ದೆ ನಿದ್ರೆಗೆ ಮನೆತುಂಬ ಶಿಕ್ಷಕನಾದ ಅಪ್ಪನ ಶಿಷ್ಯಂದಿರುದೊಡ್ಡ ಅಂಕಣದ ತುಂಬಾ ಶಾಲೆಯ ಧಡೂತಿ ಹುಡುಗರುಮಧ್ಯ ರಾತ್ರಿಯಲ್ಲಿ ಎಲ್ಲೋ ಅಳುವಿನ ಧ್ವನಿಮೇಷ್ಟ್ರು ಹೋಗಿಬಿಟ್ಟರು ಎನ್ನುವ ಮಾತುಇದೇನೋ ಕನಸೋ ಎಂದು ಕಣ್ಣುಜ್ಜಿಕೊಳ್ಳುವುದರಲ್ಲಿಯಾರೋ ಬಂದು ಉಳ್ಳಾಡಿಸಿ ಎಬ್ಬಿಸಿದರುಅಪ್ಪ ಸತ್ತ...
ನಿಮ್ಮ ಅನಿಸಿಕೆಗಳು…