Category: ಪರಾಗ

8

ಮತ್ತೆ ಪಂಜರದೊಳಗೆ……

Share Button

ಅಂದು ನಸುಕು ಹೆಚ್ಚು ಮಸಕಾಗೇ ಇತ್ತು.  ಮೂಡಣದಲ್ಲಿ ಸೂರ್ಯ ಕಣ್ಣು ಬಿಡಲಾಗದೆ ಪ್ರಯಾಸ ಪಡುತ್ತಿದ್ದ.  ಕೋಳಿಕೂಗುವ ಹೊತ್ತಿಗೆ ಎದ್ದ  ಅಕ್ಕ (ಅಮ್ಮ) ಕೊಟ್ಟಿಗೆಯಲ್ಲಿದ್ದ ಗಬ್ಬದ ಎಮ್ಮೆಯನ್ನು ಆಚೆಗೆ ಕಟ್ಟಿ,  ಕೊಕ್ಕೊ ಅಂತಿದ್ದ ಕೋಳಿಯನ್ನು ಬಿಡಲು ಪಂಜರ ಎತ್ತಿದಳು. ತನ್ನ ಆರೇಳೂ ಮರಿಗಳು ಹೊರಬಂದುದನ್ನು ತಿರುತಿರುಗಿ ನೋಡಿ ಖಚಿತಪಡಿಸಿಕೊಂಡು...

10

ವಾಟ್ಸಾಪ್ ಕಥೆ 27 : ಸ್ನೇಹ ಮತ್ತು ಸ್ವಾರ್ಥ.

Share Button

ಒಂದೂರಿನಲ್ಲಿ ರಾಮಯ್ಯ, ಭೀಮಯ್ಯ ಎಂಬಿಬ್ಬರು ಸ್ನೇಹಿತರಿದ್ದರು. ಅವರಿಬ್ಬರೂ ವೃತಿಯಲ್ಲಿ ವ್ಯಾಪಾರಿಗಳು. ಒಮ್ಮೆ ಭೀಮಯ್ಯನಿಗೆ ವ್ಯಾಪಾರದಲ್ಲಿ ವಿಪರೀತ ನಷ್ಟವಾಗಿ ತುಂಬ ಕಷ್ಟ ಪರಿಸ್ಥಿತಿ ಒದಗಿತು. ಅವನ ದೈನಂದಿನ ಜೀವನ ನಡೆಸುವದೂ ಕಷ್ಟವೆನ್ನಿಸಿತು. ತುಂಬ ದುಃಖವಾಯಿತು. ಅವನ ಸ್ಥಿತಿ ಕಂಡು ಗೆಳೆಯ ರಾಮಯ್ಯನಿಗೆ ಕನಿಕರವಾಯಿತು. ಅವನನ್ನು ಸಮಾಧಾನ ಪಡಿಸಿ ”ವ್ಯಾಪಾರವೆಂದರೆ...

8

ವಾಟ್ಸಾಪ್ ಕಥೆ 26: ಸ್ಥಳ ಮಹಿಮೆ.

Share Button

ಒಂದು ಗುಡ್ಡದ ಮೇಲೆ ದಷ್ಟಪುಷ್ಟವಾದ ಎಮ್ಮೆಯೊಂದು ಹುಲ್ಲು ಮೇಯುತ್ತಿತ್ತು. ಏಕೋ ಅದರ ಕಣ್ಣು ಗುಡ್ಡದ ಕೆಳಗೆ ನಿಂತಿದ್ದ ತನ್ನ ಯಜಮಾನನತ್ತ ಹೊರಳಿತು. ಅದಕ್ಕೆ ಆ ಮನುಷ್ಯ ಅದಕ್ಕೆ ತುಂಬ ಚಿಕ್ಕದಾಗಿ ಕಾಣಿಸಿದ. ”ಅಯ್ಯೋ ನನ್ನ ಒಡೆಯ ಎಷ್ಟು ಚಿಕ್ಕವನಾಗಿ ಕಾಣುತ್ತಿದ್ದಾನೆ. ಇದೇಕೆ ಹೀಗೆ?” ಎಂದುಕೊಂಡಿತು. ಆದರೆ ಕಾರಣ...

10

ವಾಟ್ಸಾಪ್ ಕಥೆ 25: ಸ್ವರ್ಗದ ಮಣ್ಣು.

Share Button

ಒಂದು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯೊಬ್ಬಳು ತನ್ನ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನವನ್ನು ಪರೀಕ್ಷೆ ಮಾಡಲು ಒಂದು ಪ್ರಶ್ನೆ ಕೇಳಿದಳು. ”ಮಕ್ಕಳೇ, ನಾಳೆ ನೀವೆಲ್ಲರೂ ಶಾಲೆಗೆ ಬರುವಾಗ ಸ್ವಲ್ಪ ಸ್ವರ್ಗದ ಮಣ್ಣನ್ನು ನಿಮ್ಮೊಡನೆ ತಂದು ನನಗೆ ತೋರಿಸಿ” ಎಂದಳು. ಮಕ್ಕಳಿಗೆ ಏನೂ ಅರ್ಥವಾಗಲಿಲ್ಲ. ಮನೆಗೆ ಹೋಗಿ ತಮ್ಮ ತಾಯಿ ತಂದೆಯರಿಗೆ...

14

ಪರಿಹಾರ

Share Button

ಮಧುಕರ ಮತ್ತು ಕಮಲಾ ದಂಪತಿಗಳಿಗೆ ವಾಷಿಂಗಟನ್‌ ಡಿಸಿಯ ಅಗಾಧ ವಿಮಾನ ನಿಲ್ದಾಣ ನೋಡಿ ಕೈಕಾಲುಗಳು ಆಡದಂತೆ ಆಯಿತು. ಆದರೆ ತಕ್ಷಣ ಮಗ ಹೇಳಿದ್ದ ಮಾತುಗಳು ಜ್ಞಾಪಕಕ್ಕೆ ಬಂತು. ಮಗ ಹೇಳಿದ್ದ – ‘ಅಪ್ಪಾ ನೀವುಗಳು ಗಾಭರಿಯಾಗುವ ಯಾವುದೇ ಅಗತ್ಯವಿಲ್ಲ. ವಿಮಾನ ನಿಲ್ದಾಣಗಳಲ್ಲಿ ಬೋರ್ಡುಗಳನ್ನು ನೋಡಿಕೊಂಡು ಮುಂದುವರೆಯಿರಿ. ವಿಮಾನ...

7

ವಾಟ್ಸಾಪ್ ಕಥೆ 24 : ದಾನದ ಮಹತ್ವ

Share Button

ಒಂದೂರಿನಲ್ಲಿ ಒಬ್ಬ ಆಗರ್ಭ ಶ್ರಿಮಂತನಿದ್ದ. ಅವನ ಬಳಿಯಲ್ಲಿ ಬೆಲೆಬಾಳುವ ಕಾರೊಂದಿತ್ತು. ಅವನು ಅದರಲ್ಲಿ ಕುಳಿತು ತನ್ನ ಕೆಲಸಕಾರ್ಯಗಳಿಗೆ ಒಡಾಡುತ್ತಿದ್ದ. ಜನರೆಲ್ಲ ‘ಎಷ್ಟು ಚೆನ್ನಾಗಿದೆ ಕಾರು! ‘ಎಂದು ಆಶ್ಚರ್ಯ ಪಡುತ್ತಿದ್ದರು ಒಂದು ದಿನ ಶ್ರೀಮಂತನು ಮಾಧ್ಯಮದವರನ್ನೆಲ್ಲ ಆಹ್ವಾನಿಸಿ ಒಂದು ಪ್ರಕಟಣೆ ಮಾಡಿದ. ”ನಾನು ನನ್ನ ಈ ಕಾರನ್ನು ಭೂಮಿಯೊಳಗಡೆ...

9

ವಾಟ್ಸಾಪ್ ಕಥೆ 23 : ಪೂಜ್ಯ ಭಾವನೆ.

Share Button

ತಂದೆಯೊಬ್ಬ ಮಗನ ಕೈಹಿಡಿದು ದೇವಾಲಯಕ್ಕೆ ನಡೆದಿದ್ದ. ದೇವಾಲಯದ ಮಹಾದ್ವಾರದ ಬಳಿ ಎರಡೂ ಕಡೆಗಳಲ್ಲಿ ಕಲ್ಲಿನಲ್ಲಿ ಕಡೆದಿದ್ದ ಸಿಂಹಗಳಿದ್ದವು. ಅವುಗಳ ಆಕಾರವನ್ನು ಕಂಡು ಚಿಕ್ಕ ಹುಡುಗ ಬೆದರಿದ. ‘ಅಪ್ಪಾ ನಡೆ ವಾಪಸ್ಸು ಹೋಗೋಣ’ವೆಂದು ಹಠಮಾಡಿದ ತಂದೆಯು ಅವನನ್ನು ಸಮಾಧಾನಪಡಿಸಿ ”ಏಕೆ ಮಗೂ?” ಎಂದು ಪ್ರಶ್ನಿಸಿದ. ಆ ಹುಡುಗ ”ಅಪ್ಪಾ...

12

ಅಮರ ಪ್ರೇಮ

Share Button

ಆಗ ತಾನೇ ಕರೋನಾ ಮೂರನೇ ಅಲೆಯಿಂದ ಜನತೆ ಹೊರಬರುತ್ತಿದ್ದರೂ, ಇನ್ನೂ, ಕೊನೆಯ ಪಕ್ಷ ಆಸ್ಪತ್ರೆಗಳಲ್ಲಿ ಅನುಸರಿಸುತ್ತಿದ್ದ ʼದೈಹಿಕ ಅಂತರವಿರಲಿʼ ಮತ್ತು ʼಮಾಸ್ಕ್‌ ಧರಿಸಿರಿʼ ನಿಯಮಗಳು ಕಡ್ಡಾಯವಾಗಿ ಆಚರಣೆಯಲ್ಲಿದುದರಿಂದ ನೋಂದಣಿಗಾಗಿ ನಗರದ ಪ್ರತಿಷ್ಟಿತ ನರ್ಸಿಂಗ್‌ ಹೋಂನಲ್ಲಿ ಮುಂದಿನ ವ್ಯಕ್ತಿಯಿಂದ ಎರಡು ಅಡಿ ಹಿಂದೆ ನಿಂತಿದ್ದ ಸುಧಾಕರನ ಮನದಲ್ಲಿ, ನಡೆದ...

7

ವಾಟ್ಸಾಪ್ ಕಥೆ 22 : ಮೂಢ ನಂಬಿಕೆ

Share Button

ಒಂದು ರಾಜ್ಯದ ರಾಜಧಾನಿ. ಅಲ್ಲೊಬ್ಬ ರಾಜನಿದ್ದ. ಅವನು ಪ್ರತಿದಿನ ಮುಂಜಾನೆ ಸೂರ್ಯೋದಯವಾದ ಕೂಡಲೇ ಸೂರ್ಯದೇವನ ದರ್ಶನ ಮಾಡಿ ನಮಸ್ಕರಿಸಿ ತನ್ನ ದೈನಂದಿನ ಕೆಲಸ ಕಾರ್ಯಗಳನ್ನು ಕೈಗೊಳ್ಳುತ್ತಿದ್ದ. ಅವನಿಗೆ ಮಾನಸಿಕವಾಗಿ ಇದರಿಂದ ಆತ್ಮವಿಶ್ವಾಸ ಉಂಟಾಗುತ್ತಿತ್ತು. ಉತ್ಸಾಹ ಹುಟ್ಟುತ್ತಿತ್ತು. ಅವನು ಸೂರ್ಯದೇವನ ದರ್ಶನ ತನಗೆ ಒಳ್ಳೆಯ ಶಕುನವೆಂದು ಭಾವಿಸಿ ಅದನ್ನೇ...

15

ಸಮ್ಮಿಲನ

Share Button

ಜಾಹ್ನವೀ ಅಕ್ಕಾ, ಪ್ಲೀಸ್‌ ಬೇಗ ಬನ್ನಿ, ಬೇಗ ಬನ್ನೀ . . .  ಎಂದು ಮನೆಕೆಲಸದಾಕೆ ಹೇಮಾ ಗಾಭರಿಯಿಂದ ಕೂಗುತ್ತಾ ಬಾಗಿಲಲ್ಲಿ ಬಂದು ನಿಂತಿದ್ದಳು. ಆಗ ತಾನೆ ತನ್ನ ಬೆಳಗಿನ ವೀಡಿಯೋ ಕಾಲ್‌ ಮೀಟಿಂಗ್‌ ಮುಗಿಸಿ ಕಾಫಿ, ಸ್ಯಾಂಡ್‌ ವಿಚ್‌ ಗಳನ್ನು ಹಿಡಿದು ಕುಳಿತಿದ್ದ ಜಾಹ್ನವಿ ಕೇಳಿದಳು...

Follow

Get every new post on this blog delivered to your Inbox.

Join other followers: