Yearly Archive: 2020

8

ಅತಿಯಾದರೆ….?!

Share Button

ಹೌದು, ‘ಅತಿಯಾದರೆ ಅಮೃತವೂ ವಿಷವಾಗುವುದು’.. ಇದು ಬಹಳ ಅರ್ಥವತ್ತಾದ ಗಾದೆಗಳಲ್ಲೊಂದು. ಜನರು ಸಹಜವಾಗಿಯೇ ಅವರವರ ಆರೋಗ್ಯ, ಬಾಹ್ಯನೋಟ, ನಡೆನುಡಿಗಳನ್ನು ಉತ್ತಮವಾಗಿರಿಸಿಕೊಳ್ಳಲು ಪ್ರಯತ್ನಿಸುವರು. ಅದರಲ್ಲಿ, ಈಗಿನ ಪರಿಸ್ಥಿತಿಯಲ್ಲಿ ಉಳಿದುದೆಲ್ಲವೂ ನಗಣ್ಯವಾಗಿ, ಬರೀ ಆರೋಗ್ಯದ ಕಡೆಗೆ ಎಲ್ಲರ ಗಮನ ಹರಿದಿರುವುದು ನಿಜ ತಾನೇ? ಈ ಮಹಾಮಾರಿ ಎಲ್ಲರ ತಲೆಯನ್ನು ಹಾಳುಮಾಡಿರುವುದಾಗಿ...

16

ಮರೆಯಬೇಡ

Share Button

ತಾಯ್ತಂದೆಯರ ಕೀಳಾಗಿ ಕಾಣಬೇಡವೋ ಮೂಢನೇ ತಾಯ್ತಂದೆಯರಿಂದಲೇ ಜಗಕ್ಕೆ ಬಂದಿರುವೆಂಬುದನು ಮರೆಯಬೇಡ. ಬಹು ಭಾಷೆಗಳ ಕಲಿತಿರುವೆಂದು ಗರ್ವ ಪಡದಿರು ಹೇ ಮೂರ್ಖನೇ ಮನದ ಭಾವನೆಗಳ ಅಭಿವ್ಯಕ್ತಿಗೆ ಮಾತೃಭಾಷೆಯೇ ಬೇಕು ಮರೆಯಬೇಡ. ಆಸ್ತಿ ಅಂತಸ್ತು ಅಧಿಕಾರ ಬಂದೊಡನೆ ಹಸ್ತಿ ಮದವೇರಿದಂತಾಗದಿರು ಪೆದ್ದನೇ ವಸ್ತುಗಳ ಮೋಹದಿ ಸಂಬಂಧಗಳ ಮರೆತರೆ ಅಸ್ಥಿಯಾಗುವೆ ಕೊನೆಗೆ...

4

ಮೇರು_ಕನಕ

Share Button

ವ್ಯಾಸರು ಮೆಚ್ಚಿದ ದಾಸರ ಪಂಕ್ತಿಯ ಮೋಸವನರಿಯದ ಮುಗ್ಧರಿಗೆ ತೋಷದಿ ಪರೀಕ್ಷೆ ದಾಸರುವಿಟ್ಟರು ಬೇಸರ ತೋರಿದ ಶಿಷ್ಯರಿಗೆ|| ಬಾಳೆಯ ಫಲವನು ಕಾಳಗೆ ಕಾಣದೆ ಕಾಳಜಿಯಿಂದಲಿ ಸವಿರೆಲ್ಲ ಕಾಳನುವಿಲ್ಲದ್ ಸ್ಥಳವದುವಿಲ್ಲವು ಹೇಳಿದ ಸುಂದರ ಜಗಮಲ್ಲ|| ಬಚ್ಚಮ ತನಯನು ಕೆಚ್ಚೆದೆ ಶೂರನು ಹೆಚ್ಚಿತು ಕೀರ್ತಿಯು ಮನೆತನದು ರೊಚ್ಚಿಗೆ ಬರುವನು ಚುಚ್ಚುತ ವೈರಿಯ...

16

ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 1       

Share Button

  ಪ್ರಾಚೀನ ಸಿಂಧೂ ನದಿ ಕಣಿವೆಯ ನಾಗರಿಕತೆಗೆ ಸಾಕ್ಷಿಯಾದ  ‘ಸೌರಾಷ್ಟ್ರ ದೇಶ’ ವು ಇಂದಿನ  ಭಾರತದ ಗುಜರಾತ್ ರಾಜ್ಯದಲ್ಲಿದೆ.  ದ್ವಾಪರದ ಶ್ರೀಕೃಷ್ಣನ ದ್ವಾರಕೆ ಹಾಗೂ ಜ್ಯೋತಿರ್ಲಿಂಗಗಳಿರುವ ಪುಣ್ಯಭೂಮಿ ಗುಜರಾತ್ . ಅಮರ ಸ್ನೇಹಿತ ಸುದಾಮನ ಮಂದಿರವೂ ಅಲ್ಲಿಯೇ ಇದೆ.  ಪೌರಾಣಿಕ ಹಿನ್ನೆಲೆ ಹೊಂದಿದ್ದು, ಪದೇ ಪದೇ ಪರಕೀಯರ...

12

ಬಾಳ ಇಳಿಸಂಜೆ

Share Button

ವಯಸ್ಸಾದವರನ್ನು ಕಾಣುವಾಗ ಮನಸ್ಸಿನ ಮೂಲೆಯಲ್ಲಿ ಅವರಿಗಾಗಿ ಚಿಮ್ಮುವ ಕಾಳಜಿಯ ಒರತೆ, ಹಿರಿಯರು ಅನ್ನುವ ಗೌರವ, ಪಾಪ ಮಕ್ಕಳಂತೆ ಅನ್ನುವ ಭಾವ. ಕೆಲವರು ಮಕ್ಕಳಿದ್ದು ಯಾರೂ ಇಲ್ಲದಂತೆ ಆಶ್ರಮಗಳಲ್ಲಿ ಬದುಕುವುದನ್ನು ಕಾಣುವಾಗ ಹೃದಯ ಚೀರುತ್ತದೆ- ಯಾಕೆ ಮಕ್ಕಳೆನಿಸಿಕೊಂಡವರೆ ನೀವು ನಿಮ್ಮ ತಂದೆ ತಾಯಿಗಳನ್ನು ನಿಮ್ಮಿಂದ ದೂರ ಮಾಡುವಷ್ಟು  ಕಟುಕರು...

3

ಗೂಳಿಯ ಓಟವೂ ಮರಕೋತಿ ಆಟವೂ..

Share Button

ನನ್ನ ಶಾಲಾ ದಿನಗಳ ಒಂದು ಪ್ರಕರಣ. ನಾನಾಗ ತುಮಕೂರಿನ ನ್ಯೂಮಿಡ್ಲ್‌ಸ್ಕೂಲಿನಲ್ಲಿ ಆರನೆಯ ತರಗತಿಯಲ್ಲಿ ಓದುತ್ತಿದ್ದೆ. ಶಾಲೆಯಲ್ಲಿ ಪಾಠ ಪ್ರವಚನಗಳೊಡನೆ ಪಠ್ಯೇತರ ಚಟುವಟಿಕೆಗಳಲ್ಲೂ ನನಗೆ ತೀವ್ರ ಆಸಕ್ತಿಯಿತ್ತು. ಹೀಗಾಗಿ ಶಾಲೆಯಲ್ಲಿ ನಡೆಸುತ್ತಿದ್ದ ಆಟೋಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಎಲ್ಲರಿಗಿಂತ ಒಂದು ಕೈ ಮುಂದಾಗಿರುತ್ತಿದ್ದೆ. ಪ್ರತಿವರ್ಷದಂತೆ ಆ ವರ್ಷವೂ ಶಾಲೆಯ...

6

ಬೆಳಕ ಮಾರುವವರು

Share Button

          ದೀಪಾವಳಿಯ ದಿನ ಬುಟ್ಟಿಯಲಿ ಬೆಳಕ ಹೊತ್ತು ಮಾರುತ್ತಾ ಬಂದರು. ಬಾಗಿಲಲಿ ನಿಂತ ನನಗೆ ಕಡ ಕೊಡುವೆನು ಬೆಳಕನು ಬೇಕೇ? ಎಂದರು ಸುತ್ತಲಿದ್ದವರು ತಮ್ಮೆದೆಯ ಬೆಳಕ ಕುಡಿಯ ಕಿತ್ತು ಉಡಿ ತುಂಬುವುವೆಂದರು. ಕಣ್ಣಲಿದ್ದ ಬೆಳಕನು ನಗೆಯಲೊಂದಷ್ಟು ತುಳುಕಿಸಿ ಹಿಡಿದುಕೊಳ್ಳಿ ಬೊಗಸೆಯಲಿ ಎಂದರು...

3

ಪ್ರಯತ್ನದಲ್ಲಿ ಹೆಸರುವಾಸಿಯಾದ ಭಗೀರಥ

Share Button

  ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸಾಗಲು ಎಡೆಬಿಡದೆ   ಓದಬೇಕಾಗುತ್ತದೆ. ಕೆಲವು ವೇಳೆ ಪ್ರಯತ್ನ ಸಾಕಾಗದೆಯೋ ನೆನಪು ಶಕ್ತಿ ಕುಂಠಿತವಾಗಿಯೋ, ಸೋಮಾರಿತನದಿಂದಲೋ, ಇನ್ಯಾವುದೇ ಕಾರಣದಿಂದಲೋ ಪರೀಕ್ಷೆಯಲ್ಲಿ ಸೋಲುವುದಿದೆ. ಮತ್ತೊಮ್ಮೆ ಪರೀಕ್ಷೆ ಕಟ್ಟಿ, ಕಷ್ಟಪಟ್ಟು ಓದಿ, ಪರೀಕ್ಷೆಯಲ್ಲಿ ಪಾಸಾಗುವ ತನಕ , ಪ್ರಯತ್ನ ಮುಂದುವರಿಸಬೇಕು. ಒಂದೊಮ್ಮೆ ಪ್ರಯತ್ನದಲ್ಲಿ ಸೋತರೆ ಮರಳಿ ಯತ್ನವ...

6

ಕವಿ ನೆನಪು 22: ವರನಟ ಹಾಗೂ ಮಲ್ಲಿಗೆಯ ಕವಿ

Share Button

1982ರಲ್ಲಿ ಮೈಸೂರ ಮಲ್ಲಿಗೆ ಧ್ವನಿಸುರುಳಿಯನ್ನು ವರನಟ  ಡಾ.ರಾಜ್ ಕುಮಾರ್ ಬಿಡುಗಡೆ ಮಾಡುವರೆಂದು ಸಂಗೀತ ನಿರ್ದೇಶಕರಾದ ಅಶ್ವಥ್ ನಮ್ಮ ತಂದೆಯವರಿಗೆ ತಿಳಿಸಿದಾಗ, ನಮ್ಮ ತಂದೆ ಅಚ್ಚರಿಯಿಂದ ಹೌದೇ? ಎಂದರು. ಅದಕ್ಕೆ ಅಶ್ವಥ್ ”ಕ್ಯಾಸೆಟ್ ಗೆ ಉತ್ತಮ ಪ್ರಚಾರ ಸಿಗಬೇಕಲ್ಲವೇ?“ ಎಂದರು . ನಾನು ತಿಳಿದ ಮಟ್ಟಿಗೆ ನಮ್ಮ ತಂದೆ ಅಷ್ಟಾಗಿ...

4

ನವೆಂಬರ್‌ ಅಂದ್ರೆ ನಂಗಿಷ್ಟ..

Share Button

ಪ್ರಾಥಮಿಕ ಶಾಲಾ ದಿನಗಳಿಂದಲೂ ನವೆಂಬರ ತಿಂಗಳು ಬಂತೆಂದರೆ ನಮಗೆಲ್ಲಾ‌ಎಲ್ಲಿಲ್ಲದ ಖುಷಿ. ನನಗಂತೂ ನವೆಂಬರ್ ಹದಿನಾಲ್ಕು ಮಕ್ಕಳ ದಿನಾಚರಣೆ‌ ಅಂದರೆ ಗಾಳಿಪಟದ ಹಬ್ಬದ ಸಡಗರ. ಆದರೆ ಪರಿಸ್ಥಿತಿಗನುಗುಣವಾಗಿ ಅಂದಿನ ದಿನಗಳಲ್ಲಿ ರದ್ದಿ ಪೇಪರು, ಕಿರಾಣಿ ಸಾಮಗ್ರಿಗೆ ಕಟ್ಟಿದ ದಾರ ಮತ್ತು‌ ಅನ್ನದಿಂದ‌ ಅಂಟು ಮಾಡಿ ನನಗಿಷ್ಟದ ಗಾಳಿಪಟ ತಯಾರಿಸಿ...

Follow

Get every new post on this blog delivered to your Inbox.

Join other followers: