ಇಬ್ಬನಿಯ ಮದರ೦ಗಿ…?!

Share Button
Sneha Prasanna
 .
ಧರಣಿಯ ನೋಡೊ ಕುತೂಹಲದಿ ಚಿಗುರಿದ ಹೂಗಳಿಗೆ
ಹಸಿರಸಿರಾಗಿ ಮೈದು೦ಬಿದ ಚೆಲುವೆಗೆ ಮಡಿಲಕ್ಕಿಯ
ನೀಡುವ ಆಸೆಯಾಯಿತು…
 .
ಕಿಲಕಿಲನೆ ನಗುಚೆಲ್ಲಿದ ಹೂಗಳ ಹಿ೦ಡೇಕೊ
ಪದವಾಡಿ ದೃಷ್ಟಿ ತೆಗೆಯಲು ಹೊ೦ಗಿರಣದ ಆರತಿ
ಮಾಡಿಯಾಯಿತು…
 .
ಬಿಡುವಿಲ್ಲದ ರವಿಮಾಮನು ಹೂಗಳ ಗು೦ಪನು 
ಸತಾಯಿಸುತಿರಲು ಕಮಲಿಯು ನಾಚಿದಳು,
ಮಲ್ಲೆ,ಜಾಜಿ,ಸ್ಪಟಿಕಗಳ ಕೆನ್ನೆಯು ರ೦ಗೇರಿತು…
 .
ಹಸಿರುಸಿರಿನ ಒಲವಿಗೆ ಜೊತೆಯಾದ ಹೂಗಳಿಗೆ
ತೋಟಗಾರನಾಗುವ ಬಯಕೆ ನೇಸರನಿಗೆ ಏಕಾಯಿತು..!
ತಿಳಿಗಿರಣವ ಸೂಸಿ ತುಸುನೆರಳಲೆ ಹೂಗಳ ಕಾದಿಹನು
ಮು೦ಜಾನೆಯ ಬೇಡುತಲಿ ಹೂಗಾತಿಯರ ಕೈಗಳಿಗೆ 
ಇಬ್ಬನಿಯ ಮದರ೦ಗಿಯ ಬಿಡಿಸಿಹನು…!
 ‘
Dew
 
 .
 –  ಸ್ನೇಹಾ ಪ್ರಸನ್ನ 
.

13 Responses

  1. MamthaGowda says:

    supper…

  2. ಬರಿ ತೋಟಗಾರ ಮಾತ್ರವಲ್ಲ, ಅವುಗಳ ಬದುಕಿಗೆ ಆಧಾರವಾಗಿ ಆಹಾರ ತಯಾರಿಕೆಗೆ ತನ್ನ ಬೆಳಕನ್ನೇ ಬಸಿದು ಕೊಡುವ ಸಂತನೂ ಹೌದು, ಅನಂತನೂ ಹೌದು – ಕವನ ಚೆನ್ನಾಗಿದೆ

  3. Usha Pradeep says:

    ಆತ್ಮಿಯ ಸ್ನೇಹ ಕವನ ಚೆನ್ನಾಗಿದೆ…ನಿಮ್ಮ ಪ್ರತಿ ಕವನದಲ್ಲಿಯು ಆಳವಾದ ಕಲ್ಪನೆಯ ಸಿಹಿ ಇರುತ್ತೆ ಅರ್ಥ ಮಾಡಿಕೊಂದು ಸವಿಬೇಕು.

  4. surendra pai says:

    ಚೆನ್ನಾಗಿದೆ

  5. Niranjan says:

    ಸ್ನೇಹ ಮೇಡಂ ಅತಿ ಅಚ್ಚ ಕನ್ನಡ ಬಳಸುತ್ತಿದ್ದಿರಿ … ಕೆಲವು ಪದಗಳನು ಅರ್ಥಮಾಡಿಕೊಳ್ಳಲು ಕಷ್ಟ ಅನಿಸುತಿತ್ತು. but this time Easyaagi ಅರ್ಥವಾಯಿತು.. last four lines ತುಂಬಾ ಚೆನ್ನಾಗಿದೆ.. ನಿಮ್ಮ ಮುಂದಿನ ಕವಿತೆಯ ನಿರೀಕ್ಷೆಯಲ್ಲಿ….

  6. Shruthi Sharma says:

    ಸುಂದರ ಕನ್ನಡ, ಚೆಂದದ ಕವಿತೆ.. ಓದುತ್ತಾ ಖುಷಿಯಾಯಿತು.. ಹೀಗೇ ಬರೆಯುತ್ತಿರಿ.. 🙂

  7. Prasanna says:

    Supper keep it up…

Leave a Reply to Niranjan Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: