ಚಿಗುರಿಸಬಹುದು ಹೊಸದೊಂದ!

Share Button

Ku.Sa.Madhusudan

 

ಮಾತುಗಳೆಲ್ಲ ಮುಗಿದು ನೀರವ ಮೌನ

ನಿರಾಳತೆಯ ಬಾವ

ಬೇಕಾಗಲಿಲ್ಲ  ಕತ್ತರಿಸಲು ಮಾರುದ್ದದಕೊಡಲಿ

ಸಂಬಂದವ

ಸಾಕಿತ್ತು ಒಂದೇ ಮಾತು

ಹಾಳಾಗಿ ಹೋಗು

ತಥಾಸ್ತು ಅಂದರೇನು?

ಅಶ್ವಿನಿ ದೇವತೆಗಳು!

.

ತಿರುಗಿನಡೆದ ಬೆನ್ನಿಗಿರಲಿಲ್ಲ ಕಾಳಜಿ

ಒದ್ದೆಯಾದ ಕಣ್ಣುಗಳ ಕಾಣಲು.

ಕಷ್ಟಕಷ್ಟ!

ಕಾಪಾಡಿಕೊಳ್ಳುವುದು ಹಾಗೆ ನೋಡಿದರೆ

ಸಂಬಂದಗಳ

ಕೆಲವನ್ನು ಕಾಪಾಡಬೇಕು

ಕೋಟೆಗಳ ಕಟ್ಟಿ ಕಾಪಿಡುವಂತೆ ಗುಪ್ತನಿಧಿಯ

ಇನ್ನು ಕೆಲವನ್ನು  ಬಯಲೊಳಗೆ ಬೀಸುಬಿಡಬೇಕು

ಹಾರಿಕೊಂಡಿರಲೆಂದು ಹಕ್ಕಿಯಂತೆ.

.

ಪಯಣವಂತು  ಸಾಗಲೇಬೇಕು  ಮುರಿದದ್ದ ಮರೆತು

ಹುಡುಕಬಾರದು ನಡುಹಾದಿಯಲಿ ನಿಂತು ತಪ್ಪಿಹೋದ ದಿಕ್ಕುಗಳ

ಕತ್ತರಿಸಿದ ಕಾರಣಗಳ.

 ಮುರಿದು ಹೋದದ್ದ ಕಟ್ಟಲಾಗದು ನಿಜ,

ಹಾಗಂತ ಹೊಸದೊಂದನು

ಚಿಗುರಿಸಬಾರದೆಂದೇನೂ ಅಲ್ಲ!

blooming

 

 – ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ

 

1 Response

  1. Hema says:

    “ಮುರಿದು ಹೋದದ್ದ ಕಟ್ಟಲಾಗದು ನಿಜ, ಹಾಗಂತ ಹೊಸದೊಂದನು ಚಿಗುರಿಸಬಾರದೆಂದೇನೂ ಅಲ್ಲ! ” ಈ ಸಾಲು ಆಶಾವಾದಿಯಂತೆ ಆಪ್ತವೆನಿಸಿತು. ಕವನ ಇಷ್ಟವಾಯಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: