ಕೃತಿ ಪರಿಚಯ: ಗೀತಾ ಭಾವಧಾರೆ.

Share Button

ಕೃತಿಯ ಹೆಸರು: ಗೀತಾ ಭಾವಧಾರೆ.
ಲೇಖಕರು: ಸ್ವಾಮಿ ಸೋಮನಾಥಾನಂದ.
ಪ್ರಕಾಶಕರು: ಶ್ರೀ ರಾಮಕೃಷ್ಣ ಆಶ್ರಮ.

ಹಿಂದೂಗಳ ನಂಬಿಕೆಯ ಪ್ರಕಾರ ಇಂದು ಗೀತಾ ಜಯಂತಿ. ಭಗವದ್ಗೀತೆ ಉದಿಸಿದ ದಿನ! ಆದ್ದರಿಂದ ಗೀತೆಯ ಕುರಿತಾದ ಪುಸ್ತದಿಂದಲೇ ಓದೋಣ ಬನ್ನಿ!

ಒಟ್ಟು 646 ಪುಟಗಳ ಬೃಹತ್ ಗ್ರಂಥ ಗೀತಾ ಭಾವಧಾರೆ. ಕನ್ನಡದಲ್ಲಿ ಅತ್ಯಂತ ಸರಳವಾಗಿ, ರಸವತ್ತಾಗಿ ವಿವರಿಸುವ ಕೃತಿಯಿದು. ಗೀತೆ ವಿಶ್ವ ಶ್ರೇಷ್ಠ ಆಧ್ಯಾತ್ಮ ಗ್ರಂಥ ಮಾತ್ರವಲ್ಲ, ವ್ಯಕ್ತಿತ್ವ ವಿಕಸನದ ಅನೇಕ ಸೂತ್ರಗಳು ಗೀತೆಯ ಪ್ರತಿ ಅಧ್ಯಾಯದಲ್ಲೂ ನಿಮಗೆ ಸಿಗುತ್ತದೆ. ಅದನ್ನು ಮನಮುಟ್ಟುವಂತೆ ವಿವರಿಸಿದ್ದಾರೆ ಸ್ವಾಮಿ ಸೋಮನಾಥಾನಂದ ಅವರು. ಒಂದು ಸಣ್ಣ ಸಾಲು ಇಲ್ಲಿದೆ.

ಮೊದಲ ಅಧ್ಯಾಯವಾದ ಅರ್ಜುನನ ವಿಷಾದ ಯೋಗ. ” ವಿಷಾದಕ್ಕೆ ಜೀವನದಲ್ಲಿ ಒಂದು ದೊಡ್ಡ ಸ್ಥಾನವಿದೆ. ಸಾಧಾರಣವಾಗಿ ಮನುಷ್ಯ ಕೆಳಗಿನ ಭೂಮಿಕೆಯಲ್ಲಿ ಕೆಲಸ ಮಾಡುತ್ತಿರುವನು. ಮೇಲಿನ ಭೂಮಿಕೆಗೆ ಹೋಗಬೇಕಾದಗ ಯಾತನೆಯ ಬೆಲೆಯನ್ನು ಕೊಟ್ಟಲ್ಲದೆ ಸಾಧ್ಯವಿಲ್ಲ. ಆ ಯಾತನೆ ನಮ್ಮ ಇಡೀ ಜೀವನಕ್ಕೆ ಸಿಡಿಲಿನ ಪೆಟ್ಟಿನಂತೆ ಬೀಳುವುದು. ನಮ್ಮನ್ನು ಅಲ್ಲೋಲ ಕಲ್ಲೋಲ ಮಾಡುವುದು. ಅನಂತರವೇ ಅದು ನಮ್ಮ ಜೀವನದಲ್ಲಿ ಸರಿ ಹೊಂದಿಕೊಳ್ಳುವುದು”

ಹೌದಲ್ಲವೇ ನಮ್ಮ ಜೀವನದಲ್ಲಿ ಯಾವ ಸಾಧನೆಗೂ ಕಷ್ಟದ ಬೆಲೆ ಕೊಡದೆ ಸಾಧ್ಯವೇ ಇಲ್ಲ. ಕಷ್ಟ ಕೋಟಲೆಗಳ ಸಂದರ್ಭ ವಿಷಾದವೂ ಬೆನ್ನಿಗಿರುತ್ತದೆ. ಆದರೆ ಅದಕ್ಕಾಗಿ ಚಿಂತಿಸಬೇಕಾದ್ದೇನಿಲ್ಲ ಎನ್ನುವ ಹಿತವಚನ ಈ ಪುಸ್ತಕದಲ್ಲಿದೆ. ಇಂಥ ಅನೇಕ ಆಸಕ್ತಿಕರ ವಿಚಾರಗಳಿಗೆ, ಗೀತಾ ಭಾವಧಾರೆ ಓದಿರಿ.

-ಕೇಶವ ಪ್ರಸಾದ್.ಬಿ.ಕಿದೂರು.

1 Response

  1. ಭಗವದ್ಗೀತೆ ಅತ್ಯದ್ಭುತ ಕೃತಿ. ಓದಿದಷ್ಟೂ ಹೊಸಮಜಲುಗಳನ್ನು ತೆರೆದಿಡುವ ಗೀತೆಯ ಬಗ್ಗೆ ಆಧ್ಯಾತ್ಮಿಕ ಸಾಧನೆಗೈದವರು ಮಾತನಾಡಿದರೆ ನಮ್ಮಂತಹ ಸಾಮಾನ್ಯರೂ ಕೂಡ ಅಲ್ಪ ಸ್ವಲ್ಪ ಅರಿವು ಪಡೆಯಬಹುದು. ಅಂತಹ ಪುಸ್ತಕವೊಂದರ ಪರಿಚಯಮಾಡಿಕೊಟ್ಟದ್ದಕ್ಕೆ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: