ಶಿಕ್ಷಣ ಮತ್ತು ಶಿಕ್ಷಕ

Spread the love
Share Button

ಮನುಷ್ಯ ನಾಗರಿಕತೆಯ ಅನ್ವೇಷಣೆಯ ಬೆಳವಣಿಗೆಯಲ್ಲಿ ತಾನು ಕಂಡುಕೊಂಡ ಒಂದು ಮಾಗ೯” ಶಿಕ್ಷಣ”.

ಭಾರತದ ಶಿಕ್ಷಣ ಪದ್ಧತಿ ವಿಶ್ವಕ್ಕೆ ಮಾದರಿಯಾದ ಕಾಲ ಒಂದಿತು, ವಿಶ್ವದ ಜನರಿಗೆ ಭಾರತ ಶಿಕ್ಷಕನಾಗಿ ಪಾಠ ಮಾಡುತ್ತಿದ್ದ ಕಾಲ ಅದಾಗಿತ್ತು. ಭಾರತದ ಅಂತಃಸತ್ವ ಅಷ್ಟು ಸದೃಢವಾಗಿತ್ತು ಎಂದು ಇದರಿಂದ ತಿಳಿಯಬಹುದು. ಆಗ ಅಂತಹ ಉತ್ತಮ ಶಿಕ್ಷಣವನ್ನು ನೀಡುವ ಶಿಕ್ಷಕರ ವಗ೯, ಪಂಡಿತರ ವಗ೯ ಇತ್ತು, ಅವರು ತಮ್ಮ ನೆಲೆಯನ್ನು, ಸ್ಥಾನವನ್ನು ಗಟ್ಟಿಯಾಗಿ, ಶಾಶ್ವತವಾಗಿ ಉಳಿಸಿಕೊಳ್ಳುವ ದೃಷ್ಠಿಯಿಂದ ಪಾಠ ಭೋದನೆ ಮಾಡುತ್ತಿರಲಿಲ್ಲ, ಬದಲಾಗಿ ತಮ್ಮ ಸಂಸ್ಕೃತಿ, ಪರಂಪರೆಯ ಜ್ಞಾನವನ್ನು ಎಲ್ಲೆಡೆ ಹರಡಬೇಕು, ಶಿಕ್ಷಣ ಎಂಬುದು ಕೇವಲ  ಸಂಪಾದನೆಯ  ಮಾರ್ಗವಾಗಿರದೆ, ಜ್ಞಾನವನ್ನು ನಿಷ್ಠೆಯಿಂದ ಪಸರಿಸುತ್ತಿದ್ದರು ಅದಕ್ಕಾಗಿ ಇರಬೇಕು ಇಡೀ ವಿಶ್ವವೇ ನಮಗೆ ತಲೆಬಾಗಿ ಜ್ಞಾನವನ್ನು ಪಡೆದುಕೊಳ್ಳಲು ಬರುತ್ತಿದ್ದರು.

ಆದರೆ ಇಂದಿನ ಪರಿಸ್ಥಿತಿ? ಒಮ್ಮೆ ಎಲ್ಲರೂ ಅಂತರಾವಲೋಕನ ಮಾಡಿಕೊಳ್ಳಿ?

ಇಂದು ಅನುಭವವಿಲ್ಲದ , ಕತ೯ವ್ಯದಲ್ಲಿ ನಿಷ್ಠೆಯಿಲ್ಲದ, ವಿದ್ಯಾಥಿ೯ಗಳ ಭವಿಷ್ಯ ಬಗ್ಗೆ ಚಿಂತಿಸದ, ತಮ್ಮ ಜವಾಬ್ದಾರಿಯ ಬಗ್ಗೆ ಹೊಣೆಗಾರಿಕೆಯ ಬಗ್ಗೆ ಅರಿವಿಲ್ಲದ , ತಾವು ಕಾಯ೯ ನಿವ೯ಹಿಸುತ್ತಿರುವ ಸಂಸ್ಥೆಯವರ ಆಶಯದ ಬಗ್ಗೆ ಒಂದಿಷ್ಟು ಲೆಕ್ಕಿಸದ ಅತೀ ಕೆಳಮಟ್ಟದ ಶಿಕ್ಷಕರು, ಕೇವಲ ತಮ್ಮ ಭವಿಷ್ಯ ಹಾಗೂ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಅವಮಾಯಕ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.

ಪಾಲಕರು ಸಕಾ೯ರಿ ಶಾಲೆಗಿಂತ ಖಾಸಗಿ ಶಾಲೆಯಲ್ಲಿ ತನ್ನ ಮಗುವಿನ ಭವಿಷ್ಯ ಚೆನ್ನಾಗಿ ನಿಮಾ೯ಣವಾಗಬಹುದು ಎಂಬ ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ, ಆದರೆ ಈಗಾಗಲೇ ತಿಳಿಸಿದ ಕೆಳ ಮಟ್ಟದ ಶಿಕ್ಷಕರು ಇದ್ಯಾವಯದಕ್ಕೂ ಬೆಲೆ ನೀಡದೇ ಎಲ್ಲರಿಗೂ “ಬಕೆಟ ಹಿಡಿಯುತ್ತಾ”, ವೃತ್ತಿಗೆ ದ್ರೋಹ ಮಾಡುತ್ತಾ, ಪರೀಕ್ಷೆಗೂ ಮುನ್ನ ಪ್ರಶ್ನೆ ಪತ್ರಿಕೆ ನೀಡಿ ಅದಷ್ಟೇ ಓದಿ ಸಾಕು ಎನ್ನುವ ನೀಚ ಶಿಕ್ಷಕರು ಕೆಲವರು.. ಇನ್ನೂ ಕೆಲವರು ತಾವು ಮ್ಯಾನೇಜ್ಮೆಂಟ್ ಅವರ ಹಾಗೂ ಪಾಲಕರ ಮುಂದೆ ಸಂಭಾವಿತರು ಎಂದು ತೀರಿಸಿಕೊಳ್ಳಲು ತಾವು ಪಾಠ ಮಾಡುತ್ತಿರುವ ಪಠ್ಯಕ್ರಮಕ್ಕಿಂತ ತೀರಾ ಕೆಳಮಟ್ಟದ, ಅತೀ ಸುಲಭದ ಪ್ರಶ್ನೆಗಳನ್ನು ತೆಗೆದು ಅದರಲ್ಲಿ ಅತೀ ಹೆಚ್ಚು ಅಂಕ ಬರುವ ಹಾಗೇ ಮಾಡುವ ಶಿಕ್ಷಕರು ಕೆಲವರು.

ಅಧಿಕಾರ ಇದ್ದರೂ ಸರಿ ಪಡಿಸಲಾಗದೇ ವಿದ್ಯಾರ್ಥಿಗಳ ಭವಿಷ್ಯವನ್ನು ಪಣಕ್ಕಿಡುವ ಒಂದಿಷ್ಟು ಅಧಿಕಾರಿಗಳು. ಇಂದು ಇಲ್ಲಿ ನಾಳೆ ಬೇರೆ ಕಡೆ ಕೆಲಸ ನೋಡಿಕೊಳ್ಳುತ್ತೇವೆ, ಇರುವಷ್ಟು ದಿನ ” ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕು” ಎನ್ನುವವರು ಇನ್ನು ಕೆಲವರು. ಇವರೆಲ್ಲರ ಮಧ್ಯೆ ಮೂರಾಬಟ್ಟೆಯಾಗುವುದು ಮಾತ್ರ ವಿದ್ಯಾರ್ಥಿಗಳ ಹಾಗೂ ಕೆಲವು ಪ್ರಾಮಾಣಿಕ ಶಿಕ್ಷಕರ ಬದುಕು!  ಇಂತಹ ಶಿಕ್ಷಕರಿಂದಲೇ ಇರಬೇಕು ಇಂದು ಪಾಲಕರಿಗೆ ಸಕಾ೯ರಿ ಶಾಲೆಯ ಬಗ್ಗೆ ಅಸಹ್ಯ ಹುಟ್ಟಿರಬೇಕು.

ಕೆಲವೊಂದು ಪ್ರಾಮಾಣಿಕ ಶಿಕ್ಷಕರ ತೇಜೋವಧೆ ಆಗಲು ಕಾರಣ ಪಾಲಕರ ಮನಸ್ಥಿತಿ. ತನ್ನ ಮಕ್ಕಳು 100 % ತೆಗೆದರೆ ಅಷ್ಟೇ ಶಿಕ್ಷಕರು ಚೆನ್ನಾಗಿ ಪಾಠ ಮಾಡುತ್ತಿದ್ದಾರೆ ಎಂಬ ತಪ್ಪು ಕಲ್ಪನೆ ಮನೆ ಮಾಡಿದೆ. ಅದನ್ನು ನೆರೆವೇರಿಸಲು ಶಿಕ್ಷಕ ಹಲವಾರು ವಾಮಮಾಗ೯ ಬಳಸಿ 100% ಬರುವಂತೆ ಮಾಡಿ, ಪಾಲಕರ ಮುಂದೆ “ಹೀರೊ” ಆಗ್ತಾನೆ. ಇದು ಎಂತಹ ಕಥೆ ಸ್ವಾಮಿ ಹ್ಹಾ!!!  ಅದಕ್ಕೆ ತಕ್ಕ ಹಾಗೇ ಪರೀಕ್ಷಾ ದಿನಕ್ಕೊಂದು ಅಧಿಸೂಚನೆ ಹೋರಡಿಸಿ ಪ್ರತಿ ಮಗುವು ಪಾಸಾಗುವ ಹಾಗೇ ನೀತಿ ಬದಲಾವಣೆ ಮಾಡುತ್ತದೆ.
ಇದಕ್ಕೆ ಇರಬೇಕು, ಇಂದು ಭಾರತದವರು ಉನ್ನತ ವ್ಯಾಸಂಗಕ್ಕಾಗಿ ಇಲ್ಲಿವರ ಸಂಗ ತೋರೆದು ವಿದೇಶಕ್ಕೆ ಹೋಗುತ್ತಿರುವುದು..
ಅಂದು ವಿಶ್ವವಿದ್ಯಾಲಯದ ಹೊರಗಡೆ ಗೇಟ್ ಕಾಯುತ್ತಿದ್ದವರಿಗೆ “ದ್ವಾರ ಪಂಡಿತರೆಂದು” ಕರೆದರೆ ಇಂದು “ವಾಚ್ಮೇನ್” ಆಗಿದ್ದಾನೆ.

ಈಗಾಗಲೇ ಶಿಕ್ಷಣ ಇದ್ದರೂ ಮನುಷ್ಯ ಅನಾಗರಿಕನ ಹಾಗೇ ವತಿ೯ಸುತ್ತಿದ್ದಾನೆ, ಇನ್ನೂ ಸ್ವಲ್ಪ ವಷ೯ದಲ್ಲಿ ಪೂತಿ೯ ಹುಚ್ಚನಂತೆ ವತಿ೯ಸುವಲ್ಲಿ ಅನುಮಾನವಿಲ್ಲ..  “ನಾವು ಸೇವಿಸುವ ಆಹಾರ ನಮ್ಮ ಬೆಳವಣಿಗೆಗೆ ಪೂರಕವಾಗಿರಬೇಕೇ ವಿನಃ ಮಾರಕವಲ್ಲ”
ಶಿಕ್ಷಕ ತನ್ನ ಸ್ಥಾನದ ಭದ್ರತೆ ಲೆಕ್ಕಿಸದೇ ಜ್ಞಾನ ನೀಡುವಲ್ಲಿ ಮುಂದಾದರೆ ಮತ್ತೇ ವಿಶ್ವ ಭಾರತದ ಕಡೆ ಮುಖ ಮಾಡುತ್ತದೆ.. ಇದು ಖಚಿತ!!

-ಸುರೇಂದ್ರ ಪೈ ,  ಭಟ್ಕಳ

2 Responses

  1. Shruthi Sharma says:

    ಓದುತ್ತಾ ನನ್ನ ಹಳೆಯ ಬರಹ ಒಂದರ ನೆನಪಾಯಿತು. ಶಿಕ್ಷಣದಲ್ಲಿ ಮೌಲ್ಯವು ಕುಸಿಯುತ್ತಿರುವುದು ಖೇದನೀಯ..

  2. ಚನ್ನಮ್ಮ S. S. says:

    ಎಲ್ಲ ಶಿಕ್ಷಕರನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ನೋಡುವುದು ಸರಿಯಾದ ಕ್ರಮವಲ್ಲ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: