ಮತ್ತೆ ಬಂದಿತು ಉಗಾದಿ

Spread the love
Share Button

ಹೊಸ ಸಂವತ್ಸರದ ಪ್ರಾರಂಭಕಿದು ನಾಂದಿ,
ಚೈತ್ರಮಾಸದ ಈ ಪ್ರಥಮ  ಶುಭದಿನದಿ
ಆಚರಿಸುವರು ಹಬ್ಬವನು ಉಲ್ಲಾಸದಿ ಉತ್ಸಾಹದಿ.. .
ಹಸಿರು ಹೂವಿನೆಲೆಮಧ್ಯೆ ಬೇವಿನೆಲೆ ಗೊಂಚಲಿರಿಸಿ ಕಟ್ಟುವರು ತಳಿರು ತೋರಣ,
ಎಲ್ಲರ ಮನೆಮುಂದೆ ಕಂಗೊಳಿಸುವದಂದು ಬಣ್ಣಬಣ್ಣದ ರಂಗೋಲಿಯ ಚಿತ್ರಣ. .

 .

ಬೆಳಿಗ್ಗೆ ಬೇಗನೆದ್ದು ಮಾಡುವರಂದು ಅಭ್ಯಂಜನ ಸ್ನಾನ
ನಂತರ ಹೊಸ ವಸ್ತ್ರ ಧಾರಣ
ಮಹಿಳೆಯರು ದೇವಿಗುಡಿಗೆ ತೆರಳಿ ಪಾದಗಟ್ಟೆಗೆ ನೀರೆರೆದು ಪಡೆಯುವರು ದರುಶನ
ಕೋರುವರು ಮನೆಮಂದಿಯ ಒಳಿತನ್ನ…
 .
ದೇವರ ಪೂಜೆಗೈದು ಅಂದು ಹಿರಿಯರು ಮಾಡುವರು ಪಂಚಾಂಗ ಪಠಣಾ,
ನಂತರ ಮನೆಮಂದಿಯಿಂದ ಅದರ ಶ್ರವಣಾ,
ಕಷ್ಟ ಸುಖಗಳೆರಡೂ ಜೀವನದ ಸಿಹಿಕಹಿ ಎಂದು ಅರಿತು ಸೇವಿಸುವರಂದು ಬೇವುಬೆಲ್ಲದ ಮಿಶ್ರಣಾ,
ಸವಿಯುವರು ನಂತರ ಹೋಳಿಗೆ ಪಾಯಸದ ಸಿಹಿ ಭೋಜನ…

 .

ಯುಗಾದಿ -ದೇಶೀ ವರ್ಷಾಚರಣೆಯ ಹಬ್ಬವೆಂದು ನಮಗೆ ಅಭಿಮಾನ,
ಅಂದು ಎಲೆಗಳು  ಚಿಗುರೊಡೆಯುವ ದಿನ
ವಸಂತ ಕಾಲ ಆಗಮನದ ದಿನ
ಸಂತಸ ಸಂಭ್ರಮ ಸಡಗರದ ದಿನ,
ಈ ದಿನ ಮೂಡಿಸುವದು ಎಲ್ಲರಲಿ ಅದಮ್ಯ ಚೇತನ…

 .

ಅಂದು ಮಕ್ಮಳೊಂದಿಗೆ ತೆರಳಿ ಗುರುಹಿರಿಯರನ್ನು ಭೇಟಿಯಾಗೋಣಾ
ಪಡೆಯೋಣಾ ಆಶೀರ್ವಾದ
ಮುಟ್ಟಿ ಅವರ ಚರಣಾ
ಹೊಸ ವರ್ಷದ ‘ನಿರ್ಣಯ’ ಕೈಗೊಳ್ಳೋಣಾ
ಅದರ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸೋಣಾ…
.

– ಮಾಲತೇಶ ಎಮ್ ಹುಬ್ಬಳ್ಳಿ

1 Response

  1. Ranganath Nadgir says:

    ಪ್ರೀಯ ಮಾಲತೇಶ್ , ಯುಗಾದಿ ಆಚರಣೆ ಕುರಿತಾಗಿ ರಚಿಸಿದ ಪದ್ಯ
    ಪರಿಪೂರ್ಣವಾಗಿದ್ದು ತುಂಬಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ನಿಮಗೆ ಹಾಗು
    ಸುರಹೊನ್ನೆಯ ಎಲ್ಲ ಬಳಗಕ್ಕೆ ಶುಭ ಹಾರೈಕೆಗಳು.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: