ಪ್ರಿಯದರ್ಶಿನಿ

Share Button


PC: ಸಾಂದರ್ಭಿಕ ಚಿತ್ರ, ಅಂತರ್ಜಾಲ

ಬೆಡಗು ಬೆರಗಿನ ಹಾಯ್-ಹಲೋಗಳ ನಡುವೆ
ಅಂದು ನಾ ನಿನ್ನ ಗುರುತಿಸಿದೆ,
ನನಗೂ ನಿನಗೂ ಇಲ್ಲ ಯಾವ ಜನ್ಮದ ನಂಟು,
ಆದರಿದೋ ಬಿದ್ದಿದೆ ನಮ್ಮ ಸ್ನೇಹಕ್ಕೆ ಗಂಟು .

ನೀಳಾದ ನವುರಾದ ಆ ಕೇಶ ರಾಶಿ
ಕರೆಯುತ್ತಿರೆ ನಯನಗಳು ಸ್ನೇಹ ಸೂಸಿ
ಚೈತನ್ಯ ಪುಟಿಯುವ ಸೌಮ್ಯ ವದನ
ಲತೆಯ ಸೊಬಗಿನ ಭಾವ ಬಂಧುರದ ಸದನ.

ಸ್ನೇಹ ಸಂಪತ್ತಿಗೆ ನೀ ಮಾರ್ಗದರ್ಶಿ
ಹೊಳೆಯುವ ಕಣ್ಣುಗಳೇ ಹೇಳುತ್ತಿವೆ ಸಾಕ್ಷಿ
ಮನ ನೋಯಿಸುವವರ ಕಂಡು ನಿನಗೇನೂ
ಬೇನೆ –  ಬೇಸರಿಕೆಗಳು ಬಾರವೇನು?.

ನಿನ್ನ ನುಡಿಯಲಿ ಜೇನಿನಮೃತದ ಸವಿಯು
ನಿನ್ನ ಬಣ್ಣಿಸಲೆಂದೇ ಆಗುವೆನು ಕವಿಯು
ಗೆಳತಿಯೇ ಹಾರೈಸುವೆ  ನಾನು ಇಂದು
ಸ್ನೇಹದಾ ಲತೆಯು ತಾ ಪಲ್ಲವಿಸಲೆಂದು.

 

– ಶೈಲಜಾ ಅಮರನಾಥ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: