ಮತ್ತೆ ಬಾ ವೀರ

Share Button

.

ಯೋಧನೇ ನಿನ್ನ ಬಲಿದಾನ,
ತಟ್ಟದು ಕಲ್ಲು ಮನವನ್ನ,
ಸುರಿಸಿ  ಕಣ್ಣೀರು ಎರಡು ದಿನ,
ಸಾಗುವರಿಲ್ಲಿ ಜನ..

ನಿನ್ನ ಬರುವಿಕೆಗೆ ಕಾತರಿಸಿ ಕಾದ ಕಣ್ಣುಗಳು ,
ಶೂನ್ಯವಾಗಿವೆ ಬತ್ತಿ ಕಣ್ಣೀರ ಹೊನಲು ,
ಹೇಗೆ ಹೊತ್ತಿಸೋಣ ಇಲ್ಲಿ ಕಂದೀಲು ,
ಮರೆತು ಕುಳಿತಿವೆ ಹಾದಿಯ ಮುಂದೆ ಸಾಗಲು.

ನಿನ್ನ ಮಡದಿ, ಹೆತ್ತವಳು, ಮಕ್ಕಳು
ಕಳೆದು ಕೊಂಡುದುದ ನೆನೆದರೆ ,
ಎಗ್ಗಿಲ್ಲದೆ ಹರಿಯುವುದು ಕಣ್ಣೀರ ಧಾರೆ,
ನೀನಲ್ಲವೇ ಅವರ ಆಸರೆ ,
ಏಕಾದೆ ನೀ ಹೀಗೆ ಹೇಳದೆ ಮರೆ ?.

ಬಾ ನೀನು ಮತ್ತೆ ಮರಳಿ ,
ನೋಡು ಒಮ್ಮೆ ನಿನ್ನವರೆಡೆಗೆ ಹೊರಳಿ ,
ನೀನಿರದೆ ಎಲ್ಲವೂ ಶೂನ್ಯ ಅವರ ಜಗದಲ್ಲಿ, ಕೊನರದು ಚಿಗುರು ಬರಡಾದ ಬಾಳಲ್ಲಿ.

ತಾಯ್ನಾಡ ಕಾಯುವವನೇ ನಿನಗೆಕಾಯಿತು ಇಷ್ಟೊಂದು ಮೋಸ ,
ಇಷ್ಟವಾಗಲಿಲ್ಲವೇ ಆ ಕಲ್ಲು ದೇವನಿಗೆ ನಿನ್ನ ಸಾಹಸ ,
ನೀಡಲಾದರೂ ಬಾ ನಮಗೆಲ್ಲ ದೇಶಭಕ್ತಿಯ ಸಂದೇಶ ,
ಜೊತೆಗೊಂದಿಷ್ಟು ಸಂತೈಸಲು ನಿನ್ನವರ ಮನಸ.

ನೀ ಪಡೆದೆ ವೀರ ಮರಣ ,
ಆದರಿಲ್ಲಿ ನಿನ್ನವರ ಜೊತೆ ನಮ್ಮೆಲ್ಲರ ಸ್ಥಿತಿಯಾಗಿಹುದು ದಾರುಣ,
ಚೂರು ಚೂರಾದಂತೆ ದರ್ಪಣ ,
ಒಡೆದ ಆ ಮನಸುಗಳ ಹೇಗೆ ಸಂತೈಸೋಣ ?.

ಪಡೆಯದೇ ನಿನ್ನ ಸಾವಿಗೆ ನ್ಯಾಯ ,
ಹಗುರಾಗದು ಹೃದಯ ,
ಹಾಕದೆ ದುಷ್ಟರಿಗೆ ಬರೆಯ ,
ಹೊಂದಲಾರೆವು ನೆಮ್ಮದಿ ಗೆಳೆಯ.

ಭಯೋತ್ಪಾದಕನ ಅಟ್ಟಹಾಸಕ್ಕೆ ಎಳ್ಳು ನೀರು ಬಿಡುವ ಕನಸ ಕಾಣುತಿಹೆವು,
ಸಂದರೂ ದಿನ, ತಿಂಗಳು , ವರುಷ,
ಹತ್ತಿಕ್ಕದೆ ಬಿಡೆವು ಅವನ ದುಸ್ಸಾಹಸ.

ಸದೆ ಬಡಿದು ಖಳರನ್ನ ,
ಸಲ್ಲಿಸುವೆವು ವೀರ ಯೋಧನಿಗೆ ನಮನ,.
ಸರಿಯದು ಈ ಲಕ್ಷ್ಯದಿಂದ ಗಮನ,
ಗೆದ್ದೇ ಗೆಲ್ಲುವೆವು ನಾವಿಲ್ಲಿ
ಪರಸ್ಪರ ಜೋಡಿಸಿ ಸಹಕಾರದ ಕೈಗಳನ್ನ.

– ನಯನ ಬಜಕೂಡ್ಲು.
( PC: ಸಾಂದರ್ಭಿಕ ಚಿತ್ರ,ಅಂತರ್ಜಾಲ)

1 Response

  1. Hema says:

    ಮತ್ತೆ ಬರುತ್ತಾರೆ, ಬರಬೇಕು ಧೀರ ಯೋಧರು..ನಮ್ಮ ನಾಡಿಗಾಗಿ, ನಮಗಾಗಿ.ಅವರಿಗೆ ಪ್ರಣಾಮಗಳು ..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: