ಹಬ್ಬಕ್ಕೆ ‘ಹೋಳಿಗೆ’ ರಂಗು

Spread the love
Share Button

ನೂರಾರು ಸಿಹಿತಿಂಡಿಗಳನ್ನು ತಯಾರಿಸಿ ತಿನ್ನಬಹುದಾದರೂ  ಹೋಳಿಗೆ ಅಥವಾ ಒಬ್ಬಟ್ಟಿಗೆ ರಾಜಮರ್ಯಾದೆ. ಸಾಂಪ್ರದಾಯಿಕವಾಗಿ ಯುಗಾದಿಯನ್ನು ಸ್ವಾಗತಿಸುವಾಗ ಮನೆಮನೆಯಲ್ಲೂ ಒಬ್ಬಟ್ಟು ತಯಾರಾಗುತ್ತದೆ.  ಕಡಲೇಬೇಳೆ ಹೋಳಿಗೆ ಹಾಗೂ ಕಾಯಿ ಹೋಳಿಗೆಗಳು ಈಗಾಗಲೇ ಪ್ರಖ್ಯಾತವಾಗಿವೆ. ರುಚಿಯ ವೈವಿಧ್ಯತೆಗಾಗಿ, ಹೊಸರುಚಿಯ ಅನ್ವೇಷಣೆಯಲ್ಲಿ, ಆರೋಗ್ಯಕ್ಕೆ ಪೂರಕವಾದ    ವಿವಿಧ ತರಕಾರಿಗಳು ಮತ್ತು ಹಣ್ಣುಗಳನ್ನು ಬಳಸಿ   ಹೋಳಿಗೆಗಳನ್ನು   ತಯಾರಿಸಿ ಸವಿಯುವ ಸಂಪ್ರದಾಯ ಈಗೀಗ ಆರಂಭವಾಗಿದೆ. ಈ ನಿಟ್ಟಿನಲ್ಲಿ ಕೆಲವು ರೆಸಿಪಿಗಳು ಹೀಗಿವೆ:

1.ಕ್ಯಾರೆಟ್ ಹೋಳಿಗೆ:

ಬೇಕಾಗುವ ಸಾಮಾಗ್ರಿಗಳು  : 

 • ಕಣಕಕ್ಕೆ : ಮೈದಾ/ ಗೋಧಿ ಹಿಟ್ಟು : 3 ಕಪ್ ,    ನೀರು  :  1  ಕಪ್ ,  ಅಡುಗೆ ಎಣ್ಣೆ : ಕಾಲು ಕಪ್  , ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅರಸಿನ ಪುಡಿ
 • ಹೂರಣಕ್ಕೆ : ಕ್ಯಾರೆಟ್ ದೊಡ್ಡದು : 5 ,  ಬೆಲ್ಲ  :  1 ಕಪ್  , ತುಪ್ಪ :   2 ಚಮಚ , ಏಲಕ್ಕಿ :  4

ತಯಾರಿಸುವ ವಿಧಾನ:
ಮೈದಾ/ಗೋಧಿ ಹಿಟ್ಟನ್ನು ಪಾತ್ರೆಗೆ ಹಾಕಿಕೊಂಡು, ನೀರು, ಉಪ್ಪು, ಅರಸಿನ ಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ನಾದಿ, ಕಣಕವನ್ನು ತಯಾರಿಸಿ, ಒಂದು ಗಂಟೆಯ ಕಾಲು ಮುಚ್ಚಿಡಿ.

ಕ್ಯಾರೆಟ್ ಗಳ ಸಿಪ್ಪೆ ತೆಗೆದು ತುರಿದು, ಬಾಣಲೆಯಲ್ಲಿ ಹಾಕಿ, ಬೆಲ್ಲ ಸೇರಿಸಿ, ತುಪ್ಪ ಹಾಕಿ, ಸೀದುಹೋಗದಂತೆ  ಆಗಾಗ ಸೌಟಿನಿಂದ ಕೈಯಾಡಿಸುತ್ತ ಸಣ್ಣ ಉರಿಯಲ್ಲಿ ಬೇಯಿಸಿ . ಮಿಶ್ರಣವು  ತಳಬಿಟ್ಟು ಬರುವಾಗ ಕೆಳಗಿಳಿಸಿ. ಏಲಕ್ಕಿಯನ್ನು ಕುಟ್ಟಿ ಪುಡಿಮಾಡಿ ಬೆರೆಸಿ ಹೂರಣವನ್ನು ಸಿದ್ಧಪಡಿಸಿ. ಬಿಸಿ ಆರಿದ ಮೇಲೆ ನಿಂಬೆಯ ಗಾತ್ರದ ಉಂಡೆಗಳನ್ನು ತಯಾರಿಸಿ.

ಕಣಕವನ್ನೂ ಸಮಾನ ಗಾತ್ರದ ಉಂಡೆ ಮಾಡಿಟ್ಟಿಕೊಳ್ಳಿ. ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು, ಕಣಕದ ಉಂಡೆಯನ್ನು ಸ್ವಲ್ಪ ತಟ್ಟಿ, ಅದರ ಒಳಗೆ ಹೂರಣದ ಉಂಡೆಯನ್ನು ಇಟ್ಟು ಸಂಪೂರ್ಣವಾಗಿ ಕಣಕದಿಂದ ಮುಚ್ಚಿ ಉಂಡೆ ಕಟ್ಟಿ. ಇದನ್ನು ಎಣ್ಣೆ ಸವರಿದ ಪ್ಲಾಸ್ಟಿಕ್  ಶೀಟ್ ಮೇಲೆ ಇರಿಸಿ, ಒಬ್ಬಟ್ಟು ತಟ್ಟಿ, ಅಥವಾ ಚಪಾತಿಯಂತೆ ಮೈದಾ/ ಗೋಧಿ ಹಿಟ್ಟಿನಲ್ಲಿ ಮುಳುಗಿಸಿ ಲಟ್ಟಿಸಿ. ತವಾದಲ್ಲಿ ಎರಡೂ ಕಡೆ ಬೇಯಿಸಿ ಹೋಳಿಗೆ ತಯಾರಿಸಿ. ಆರೆಂಜ್ ಬಣ್ಣದ ‘ಕ್ಯಾರೆಟ್ ಹೋಳಿಗೆ’ಯು ನೋಡಲು ಆಕರ್ಷಕವಾಗಿಯೂ ತಿನ್ನಲು ರುಚಿಕರವಾಗಿಯೂ ಇರುತ್ತದೆ.  ಕ್ಯಾರೆಟ್ ಹೋಳಿಗೆಯನ್ನು ತುಪ್ಪದೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

ಇದೇ ರೀತಿ ಬೀಟ್ ರೂಟ್ ಹೋಳಿಗೆಯನ್ನೂ ತಯಾರಿಸಬಹುದು, ಬೀಟ್ ರೂಟ್ ನಲ್ಲಿ ಸಹಜವಾಗಿಯೇ ಸಿಹಿ ಅಂಶವಿರುವುದರಿಂದ  ಬೆಲ್ಲವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳಬಹುದು.

2,ಸೋರೆಕಾಯಿ ಹೋಳಿಗೆ:

ಬೇಕಾಗುವ ಸಾಮಾಗ್ರಿಗಳು  :
ಕಣಕಕ್ಕೆ :
ಮೈದಾ/ ಗೋಧಿ ಹಿಟ್ಟು : 3 ಕಪ್ , ನೀರು  : 1ಕಪ್ , ಅಡುಗೆ ಎಣ್ಣೆ : ಕಾಲು ಕಪ್ , ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅರಸಿನ ಪುಡಿ
ಹೂರಣಕ್ಕೆ :
ಸೋರೆಕಾಯಿ ತುರಿ: 3 ಕಪ್ , ಬೆಲ್ಲ: 1 ಕಪ್  , ತುಪ್ಪ : 2 ಚಮಚ , ಏಲಕ್ಕಿ : 4, ಚಿರೋಟಿ ರವೆ : 2 ಚಮಚ (ಬೇಕಿದ್ದರೆ)

ತಯಾರಿಸುವ ವಿಧಾನ:

ಮೈದಾ/ಗೋಧಿ ಹಿಟ್ಟನ್ನು ಪಾತ್ರೆಗೆ ಹಾಕಿಕೊಂಡು, ನೀರು, ಉಪ್ಪು, ಅರಸಿನ ಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ನಾದಿ, ಕಣಕವನ್ನು ತಯಾರಿಸಿ, ಒಂದು ಗಂಟೆಯ ಕಾಲು ಮುಚ್ಚಿಡಿ.

ಸೋರೆಕಾಯಿಯ ಸಿಪ್ಪೆ ತೆಗೆದು, ತಿರುಳು-ಬೀಜಗಳನ್ನು ಬೇರ್ಪಡಿಸಿ, ಬಿಳಿಭಾಗವನ್ನು ತುರಿದಿಟ್ಟುಕೊಳ್ಳಿ. ಸೋರೆಕಾಯಿಯ ತುರಿಯನ್ನು ಬಾಣಲೆಯಲ್ಲಿ ಹಾಕಿ, ಬೆಲ್ಲ ಸೇರಿಸಿ, ತುಪ್ಪ ಹಾಕಿ, ಆಗಾಗ ಸೌಟಿನಿಂದ ಕೈಯಾಡಿಸುತ್ತ ಸಣ್ಣ ಉರಿಯಲ್ಲಿ ಬೇಯಿಸಿ . ತಳ ಬಿಟ್ಟು ಬರುವಾಗ ಕೆಳಗಿಳಿಸಿ. ಏಲಕ್ಕಿಯನ್ನು ಕುಟ್ಟಿ ಪುಡಿಮಾಡಿ ಬೆರೆಸಿ ಹೂರಣವನ್ನು ಸಿದ್ಧಪಡಿಸಿ. ಇದು ಬಿಸಿ ಆರಿದ ಮೇಲೆ ನಿಂಬೆಯ ಗಾತ್ರದ ಉಂಡೆಗಳನ್ನು ತಯಾರಿಸಿ.

ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು, ನಿಂಬೆಯ ಗಾತ್ರದ ಕಣಕದ ಉಂಡೆಯನ್ನು ಸ್ವಲ್ಪ ತಟ್ಟಿ, ಅದರ ಒಳಗೆ ಹೂರಣದ ಉಂಡೆಯನ್ನು ಇಟ್ಟು ಸಂಪೂರ್ಣವಾಗಿ ಕಣಕದಿಂದ ಮುಚ್ಚಿ ಉಂಡೆ ಕಟ್ಟಿ. ಇದನ್ನು ಎಣ್ಣೆ ಸವರಿದ ಪ್ಲಾಸ್ಟಿಕ್  ಶೀಟ್ ಮೇಲೆ ಇರಿಸಿ, ಒಬ್ಬಟ್ಟು ತಟ್ಟಿ, ಅಥವಾ ಚಪಾತಿಯಂತೆ ಮೈದಾ/ ಗೋಧಿ ಹಿಟ್ಟಿನಲ್ಲಿ ಮುಳುಗಿಸಿ ಲಟ್ಟಿಸಿ. ತವಾದಲ್ಲಿ ಎರಡೂ ಕಡೆ ಬೇಯಿಸಿ ಹೋಳಿಗೆ ತಯಾರಿಸಿ.   ಸೋರೆಕಾಯಿ ಹೋಳಿಗೆಯನ್ನು  ಕಾಯಿಹಾಲಿನೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

ಇದೇ ರೀತಿ ಸಿಹಿಗುಂಬಳಕಾಯಿಯ ಹೋಳಿಗೆಯನ್ನೂ ತಯಾರಿಸಬಹುದು.

3. ಬಾಳೆಹಣ್ಣಿನ ಹೋಳಿಗೆ:

ಬೇಕಾಗುವ ಸಾಮಾಗ್ರಿಗಳು  : 

 • ಕಣಕಕ್ಕೆ : ಮೈದಾ/ ಗೋಧಿ ಹಿಟ್ಟು : 3 ಕಪ್ ,    ನೀರು  :  1  ಕಪ್ ,  ಅಡುಗೆ ಎಣ್ಣೆ : ಕಾಲು ಕಪ್  , ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅರಸಿನ ಪುಡಿ
 • ಹೂರಣಕ್ಕೆ : ಬಾಳೆಹಣ್ಣು : 6, ಬೆಲ್ಲ : 1 ಕಪ್,  ಚಿರೋಟಿ ರವೆ: 2 ಚಮಚ , ತುಪ್ಪ : 4 ಚಮಚ ,  ಹಾಲು : 1  ಕಪ್

ತಯಾರಿಸುವ ವಿಧಾನ:

ಮೈದಾ/ಗೋಧಿ ಹಿಟ್ಟನ್ನು ಪಾತ್ರೆಗೆ ಹಾಕಿಕೊಂಡು, ನೀರು, ಉಪ್ಪು, ಅರಸಿನ ಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ನಾದಿ, ಕಣಕವನ್ನು ತಯಾರಿಸಿ, ಒಂದು ಗಂಟೆಯ ಕಾಲು ಮುಚ್ಚಿಡಿ.

ಬಾಳೆಹಣ್ಣುಗಳನ್ನು ಸಣ್ಣಗೆ ಹೆಚ್ಚಿ, ಬಾಣಲೆಗೆ ಹಾಕಿ, ತುಪ್ಪ ಸೇರಿಸಿ, ಆಗಾಗ ಸೌಟಿನಲ್ಲಿ ಕೈಯಾಡಿಸುತ್ತಾ ಬೇಯಿಸಿ. ಹಣ್ಣುಗಳು ಬೆಂದ ಸುವಾಸನೆ ಬರುವಾಗ ಚಿರೋಟಿ ರವೆ ಸೇರಿಸಿ ಕೆದಕಿ. ಕೊನೆಯದಾಗಿ ಹಾಲು ಸೇರಿಸಿ ಪುನ: ಕೈಯಾಡಿಸಿ, ಬೆಂಕಿ ಆರಿಸಿ. ಬಾಳೆಹಣ್ಣಿನ ಹೂರಣ ಸಿದ್ಧವಾಗುತ್ತದೆ.  ಬಿಸಿ ಆರಿದ ಈ ಮಿಶ್ರಣದಿಂದ ಹೂರಣಕ್ಕಾಗಿ ಉಂಡೆಗಳನ್ನು ಮಾಡಿ..

ಕಣಕದಿಂದಲೂ ಸಮಾನ ಗಾತ್ರದ ಉಂಡೆಗಳನ್ನು ಮಾಡಿ, ತಟ್ಟಿ, ಹೂರಣದ ಉಂಡೆಯನ್ನು ಒಳಗಿಟ್ಟು ಪುನ: ಉಂಡೆ ಮಾಡಿ. ಇದನ್ನು ಎಣ್ಣೆ ಸವರಿದ ಪ್ಲಾಸ್ಟಿಕ್  ಶೀಟ್ ಮೇಲೆ ಇರಿಸಿ,  ಒಬ್ಬಟ್ಟು ತಟ್ಟಿ, ತವಾದಲ್ಲಿ ಎರಡೂ ಕಡೆ ಬೇಯಿಸಿ ಹೋಳಿಗೆ ತಯಾರಿಸಿ.  ಬಾಳೆಹಣ್ಣಿನ ಹೋಳಿಗೆ ಸವಿಯಲು ಸಿದ್ಧ. ತುಪ್ಪದೊಂದಿಗೆ ತಿನ್ನಲು ರುಚಿ.

 1. ರವೆ ಹೋಳಿಗೆ:

ಬೇಕಾಗುವ ಸಾಮಾಗ್ರಿಗಳು  : 

 • ಕಣಕಕ್ಕೆ : ಮೈದಾ/ ಗೋಧಿ ಹಿಟ್ಟು : 3 ಕಪ್ ,    ನೀರು  :  1  ಕಪ್ ,  ಅಡುಗೆ ಎಣ್ಣೆ : ಕಾಲು ಕಪ್  , ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅರಸಿನ ಪುಡಿ
 • ಹೂರಣಕ್ಕೆ : ಉಪ್ಪಿಟ್ಟು ರವೆ : 1  ಕಪ್,  ಬೆಲ್ಲ : 1.5  ಕಪ್ ,  ತುಪ್ಪ : 4 ಚಮಚ ,  ನೀರು : 3 ಕಪ್ , ತೆಂಗಿನಕಾಯಿ ತುರಿ : 1/2 ಕಪ್ , ಏಲಕ್ಕಿ : 4,

ತಯಾರಿಸುವ ವಿಧಾನ:

ಮೈದಾ/ಗೋಧಿ ಹಿಟ್ಟನ್ನು ಪಾತ್ರೆಗೆ ಹಾಕಿಕೊಂಡು, ನೀರು, ಉಪ್ಪು, ಅರಸಿನ ಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ನಾದಿ, ಕಣಕವನ್ನು ತಯಾರಿಸಿ, ಒಂದು ಗಂಟೆಯ ಕಾಲು ಮುಚ್ಚಿಡಿ.

ರವೆಯನ್ನು  ಸಣ್ಣ ಉರಿಯಲ್ಲಿ ಸುವಾಸನೆ ಬರುವಷ್ಟು ಹುರಿದು  ಇಟ್ಟುಕೊಳ್ಳಿ.   ಬಾಣಲೆಯಲ್ಲಿ ನೀರು ಕಾಯಲು ಇಟ್ಟು, ನೀರು ಕುದಿಯಲಾರಂಭಿಸಿದಾಗ ರವೆಯನ್ನು ಸೇರಿಸಿ ಬೇಯಿಸಿ. ಬೆಲ್ಲದ ಪುಡಿ, ತೆಂಗಿನಕಾಯಿ ತುರಿ ಮತ್ತು ತುಪ್ಪವನ್ನು ಸೇರಿಸಿ, ತಳ ಹಿಡಿಯದಂತೆ ಕೈಯಾಡಿಸಿ. ರವೆ ಬೆಂದ ಮೇಲೆ ಏಲಕ್ಕಿ ಪುಡಿಯನ್ನು ಸೇರಿಸಿ, ಚೆನ್ನಾಗಿ ಬೆರೆಸಿ. ಬಿಸಿ ಆರಿದ ಮೇಲೆ ಈ ಹೂರಣದಿಂದ ಉಂಡೆಗಳನ್ನು ಸಿದ್ಧಪಡಿಸಿಕೊಳ್ಳಿ.

ಕಣಕದಿಂದಲೂ ಸಮಾನ ಗಾತ್ರದ ಉಂಡೆಗಳನ್ನು ಮಾಡಿ, ತಟ್ಟಿ, ಹೂರಣದ ಉಂಡೆಯನ್ನು ಒಳಗಿಟ್ಟು ಪುನ: ಉಂಡೆ ಮಾಡಿ. ಒಬ್ಬಟ್ಟು ತಟ್ಟಿ, ತವಾದಲ್ಲಿ ಎರಡೂ ಕಡೆ ಬೇಯಿಸಿ ಹೋಳಿಗೆ ತಯಾರಿಸಿ.  ರವೆ ಹೋಳಿಗೆ ಸವಿಯಲು ಸಿದ್ಧ. ಇದು ಬಾಳೆಹಣ್ಣಿನ ರಸಾಯನದೊಂದಿಗೆ ಅಥವಾ ಕಾಯಿಹಾಲಿನೊಂದಿಗೆ ತಿನ್ನಲು ರುಚಿ.

 1. ಡ್ರೈ ಫ್ರುಟ್ಸ್ ಹೋಳಿಗೆ:

ಬೇಕಾಗುವ ಸಾಮಾಗ್ರಿಗಳು  : 

 • ಕಣಕಕ್ಕೆ : ಮೈದಾ/ ಗೋಧಿ ಹಿಟ್ಟು : 3 ಕಪ್ ,    ನೀರು  :  1  ಕಪ್ ,  ಅಡುಗೆ ಎಣ್ಣೆ : ಕಾಲು ಕಪ್  , ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅರಸಿನ ಪುಡಿ
 • ಹೂರಣಕ್ಕೆ : ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ, ಅಂಜೂರ, ಖರ್ಜೂರ ಇತ್ಯಾದಿ ಒಣಹಣ್ಣುಗಳು  ಒಟ್ಟು : 1  ಕಪ್ , ಸ್ವಲ್ಪ ಬೆಲ್ಲ (ಬೇಕಿದ್ದರೆ ಮಾತ್ರ,  ಸಿಹಿಗೆ ತಕ್ಕಷ್ಟು), ಚಿರೋಟಿ ರವೆ: 1 ಚಮಚ , ತುಪ್ಪ : 1 ಚಮಚ

ತಯಾರಿಸುವ ವಿಧಾನ:

ಮೈದಾ/ಗೋಧಿ ಹಿಟ್ಟನ್ನು ಪಾತ್ರೆಗೆ ಹಾಕಿಕೊಂಡು, ನೀರು, ಉಪ್ಪು, ಅರಸಿನ ಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ನಾದಿ, ಕಣಕವನ್ನು ತಯಾರಿಸಿ, ಒಂದು ಗಂಟೆಯ ಕಾಲು ಮುಚ್ಚಿಡಿ.

ಎಲ್ಲಾ ಒಣಹಣ್ಣುಗಳನ್ನು ಮಿಕ್ಸಿಗೆ ಹಾಗಿ ಸಣ್ಣರವೆಯ ಹದಕ್ಕೆ ಪುಡಿಮಾಡಿಕೊಳ್ಳಿ. ಸಿಹಿಗೆ ಬೇಕಿದ್ದರೆ ಸ್ವಲ್ಪ ಬೆಲ್ಲ ಸೇರಿಸಿ. ಬಾಣಲೆಗೆ ತುಪ್ಪ ಹಾಕಿ, ರುಬ್ಬಿದ ಮಿಶ್ರಣ  ಹಾಗೂ ಚಿರೋಟಿ ರವೆ ಸೇರಿಸಿ ಕೈಯಾಡಿಸಿ. ಬಿಸಿ ಆರಿದ ಮೇಲೆ ಈ ಮಿಶ್ರಣದಿಂದ ಹೂರಣಕ್ಕಾಗಿ ಉಂಡೆಗಳನ್ನು ಮಾಡಿ.

ಕಣಕದಿಂದಲೂ ಸಮಾನ ಗಾತ್ರದ ಉಂಡೆಗಳನ್ನು ಮಾಡಿ, ತಟ್ಟಿ, ಹೂರಣದ ಉಂಡೆಯನ್ನು ಒಳಗಿಟ್ಟು ಪುನ: ಉಂಡೆ ಮಾಡಿ. ಇದನ್ನು ಎಣ್ಣೆ ಸವರಿದ ಪ್ಲಾಸ್ಟಿಕ್  ಶೀಟ್ ಮೇಲೆ ಇರಿಸಿ,  ಒಬ್ಬಟ್ಟು ತಟ್ಟಿ, ತವಾದಲ್ಲಿ ಎರಡೂ ಕಡೆ ಬೇಯಿಸಿ ಹೋಳಿಗೆ ತಯಾರಿಸಿ. ಬೆಲ್ಲದ ಬದಲು ಸಿಹಿ ಒಣಹಣ್ಣುಗಳನ್ನು ಬಳಸಿ ಮಾಡಬಹುದಾದ ಈ ಹೋಳಿಗೆಯು ಬಹಳ ಪುಷ್ಟಿಕರ.

 1. ಸಿಹಿಗೆಣಸಿನ ಹೋಳಿಗೆ:

ಬೇಕಾಗುವ ಸಾಮಾಗ್ರಿಗಳು  : 

 • ಕಣಕಕ್ಕೆ : ಮೈದಾ/ ಗೋಧಿ ಹಿಟ್ಟು : 3 ಕಪ್ ,    ನೀರು  :  1  ಕಪ್ ,  ಅಡುಗೆ ಎಣ್ಣೆ : ಕಾಲು ಕಪ್  , ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅರಸಿನ ಪುಡಿ
 • ಹೂರಣಕ್ಕೆ :   : ಬೇಯಿಸಿ ಪುಡಿಮಾಡಿದ ಸಿಹಿಗೆಣಸು : 2 ಕಪ್ ,  ತೆಂಗಿನಕಾಯಿ ತುರಿ : ಅರ್ಧ ಕಪ್ , ಅಕ್ಕಿ ಹಿಟ್ಟು : 2 ಚಮಚ , ಬೆಲ್ಲ  : 1  ಕಪ್ (ಸಿಹಿಗೆ ತಕ್ಕಷ್ಟು),  ತುಪ್ಪ : 4 ಚಮಚ , ಏಲಕ್ಕಿ : 4,

ತಯಾರಿಸುವ ವಿಧಾನ:

ಮೈದಾ/ಗೋಧಿ ಹಿಟ್ಟನ್ನು ಪಾತ್ರೆಗೆ ಹಾಕಿಕೊಂಡು, ನೀರು, ಉಪ್ಪು, ಅರಸಿನ ಪುಡಿ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ನಾದಿ, ಕಣಕವನ್ನು ತಯಾರಿಸಿ, ಒಂದು ಗಂಟೆಯ ಕಾಲು ಮುಚ್ಚಿಡಿ.

ಬೇಯಿಸಿ ಪುಡಿಮಾಡಿದ ಸಿಹಿಗೆಣಸು, ತೆಂಗಿನಕಾಯಿ ತುರಿ,  ಅಕ್ಕಿ ಹಿಟ್ಟು, ಬೆಲ್ಲ, ತುಪ್ಪ . ಎಲ್ಲವನ್ನೂ ಬಾಣಲೆಗೆ ಹಾಕಿಕೊಂಡು ಸಣ್ಣ ಉರಿಯಲ್ಲಿ ಹಲ್ವದ ಹದಕ್ಕೆ ಕಾಯಿಸಿ. ಕೊನೆಯದಾಗಿ ಏಲಕ್ಕಿ ಪುಡಿಯನ್ನು ಸೇರಿಸಿ ಕೈಯಾಡಿಸಿ. ಬಿಸಿ ಆರಿದ ಮೇಲೆ ಈ ಮಿಶ್ರಣದಿಂದ ಹೂರಣಕ್ಕಾಗಿ ಉಂಡೆಗಳನ್ನು ಮಾಡಿ.

ಕಣಕದಿಂದಲೂ ಸಮಾನ ಗಾತ್ರದ ಉಂಡೆಗಳನ್ನು ಮಾಡಿ, ತಟ್ಟಿ, ಹೂರಣದ ಉಂಡೆಯನ್ನು ಒಳಗಿಟ್ಟು ಪುನ: ಉಂಡೆ ಮಾಡಿ. ಇದನ್ನು ಎಣ್ಣೆ ಸವರಿದ ಪ್ಲಾಸ್ಟಿಕ್  ಶೀಟ್ ಮೇಲೆ ಇರಿಸಿ,  ಒಬ್ಬಟ್ಟು ತಟ್ಟಿ, ತವಾದಲ್ಲಿ ಎರಡೂ ಕಡೆ ಬೇಯಿಸಿ  ಸಿಹಿಗೆಣಸಿನ ಹೋಳಿಗೆಯನ್ನು ತಯಾರಿಸಿ.

ಇದೇ ರೀತಿ ಆಲೂಗಡ್ಡೆಯ ಹೋಳಿಗೆಯನ್ನೂ ತಯಾರಿಸಬಹುದು.

ಟಿಪ್ಸ್ :

 1. ಕಣಕವನ್ನು ತಯಾರಿಸುವಾಗ ಮೈದಾಹಿಟ್ಟಿನ ಬದಲು ಗೋಧಿಹಿಟ್ಟನ್ನು ಬಳಸುವುದು ಆರೋಗ್ಯಕ್ಕೆ ಉತ್ತಮ.
 2. ಕಣಕವು ಚಪಾತಿ ಹಿಟ್ಟಿನಿಂದ ಸ್ವಲ್ಪ ತೆಳ್ಳಗೆ ಇದ್ದರೆ ಹೂರಣ ತುಂಬಿಸಲು ಸುಲಭವಾಗುತ್ತದೆ.
 3. ತರಕಾರಿಗಳನ್ನು ತುರಿಯಲು ಸಮಯಾಭಾವವಿದ್ದರೆ, ಸಿಪ್ಪೆ ತೆಗೆದು ದೊಡ್ಡ ಹೋಳುಗಳನ್ನಾಗಿ ಮಾಡಿ, ಕುಕ್ಕರಿನಲ್ಲಿ ಬೇಯಿಸಿ. ಬಿಸಿ ಆರಿದ ಮೇಲೆ ಮಿಕ್ಸಿಯಲ್ಲಿ ರುಬ್ಬಿ, ಹಲ್ವಾದ ಹದಕ್ಕೆ ಕಾಯಿಸಿ ಹೂರಣವನ್ನು ತಯಾರಿಸಬಹುದು.
 4. ಸೋರೆಕಾಯಿಯಂತಹ ನೀರಿನಂಶ ಜಾಸ್ತಿ ಇರುವ ತರಕಾರಿಗಳನ್ನು ತುರಿದು ಅದರ ನೀರನ್ನು ಹಿಂಡಿ ತೆಗೆದರೆ ಬೇಯಿಸಿ ಹೂರಣದ ಹದಕ್ಕೆ ಕಾಯಿಸಲು ಕಡಿಮೆ ಸಮಯ ಸಾಕು. ತರಕಾರಿ ಹಿಂಡಿದ ನೀರನ್ನು ಪಾನೀಯವಾಗಿ ಅಥವಾ ಸಾರಿಗೆ ಬಳಸಬಹುದು.
 5. ಹೂರಣವು ಉಂಡೆ ಮಾಡುವಾಗ ಕೈಗೆ ಅಂಟಬಾರದು. ಅಕಸ್ಮಾತ್ ಹೂರಣವು ತೆಳ್ಲಗೆ ಇದೆಯಾದರೆ, ಸ್ವಲ್ಪ ಚಿರೋಟಿ ರವೆಯನ್ನು ಸೇರಿಸಿ ಉಂಡೆ ಮಾಡಹುದು.

-ಹೇಮಮಾಲಾ.ಬಿ

6 Responses

 1. Nayana Bajakudlu says:

  ಹೇಮಕ್ಕ, ಬಗೆ ಬಗೆಯ ಹೋಳಿಗೆ ಬಾಯಲ್ಲಿ ನೀರೂರಿಸಿತು . ಸದ್ಯ ಶುಗರ್ ಪ್ರಾಬ್ಲಮ್ ಇಲ್ಲ ಸೊ ಆರಾಮ್ ಸೆ ತುಪ್ಪ ಹಾಕ್ಕೊಂಡು ಒಮ್ಮೆಗೆ 2, 3 ಹೋಳಿಗೆ ಕಬಳಿಸಬಹುದು .

 2. Suneel Barkur says:

  ಯುಗಾದಿಯ ಮೊದಲೇಬಾಯಿ ಸಿಹಿ

 3. Krishnaveni Kidoor says:

  ಮಾಡಿ ನೋಡಬೇಕು. ಸಕಾಲಿಕ ಬರಹ.

 4. Ranganath Nadgir says:

  The article On Various Types of ” Holige” Is liked By Me and My wife Smt Renuka Nadgir.

 5. Nambishan Ramesh says:

  ವೈವಿಧ್ಯಮಯವಾದ ಹೋಳಿಗೆ ಈಬಾರಿ ಯುಗಾದಿ ಹಬ್ಬದ ಆಚರಣೆ ಹೇಮಕ್ಕನ ಮನೆಯಲ್ಲಿ…….

 6. Prakash Deshpande says:

  ಓದಿದವು,ಪತ್ನಿ,ಸೊಸೆ ಕೂಡ,ಲೇಖನ ರುಚಿಕಟ್ಟಾಗಿದೆ.ಹೋಳಿಗೆ ಸವಿದಂತಾಯಿತು.ಮನೆಯಲ್ಲಿ ಮಾಡುವದಾಗಿ ಹೇಳಿದ್ದಾರೆ.

Leave a Reply to Nambishan Ramesh Cancel reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: