ಅಪ್ಪನ ಹೆಗಲು

Spread the love
Share Button

ಹೆರದಿದ್ದರೂ ಹೊತ್ತು ಸಾಗಿಸುವ ಧೀರ,,,
ಹಾಲು ಬಿಟ್ಟೊಡೆ ತುತ್ತುಣಿಸುವ  ಜವಾಬ್ದಾರಿ,,,
ಹೆಗಲದು  ಪೂರ್ತಿ ಮೆತ್ತನೆ ಹಾಸಿಗೆಯಾಗಿಸಲು,,,
ಹಗಲು ರಾತ್ರಿ ಪ್ರಯಾಸ ಪಡುವವ,,,
.
ಜೀವನ ಜಾತ್ರಿಯಲಿ ವರ್ಷಕ್ಕೊಮ್ಮೆ..
ಒಂದೆರಡು ಜಾತ್ರಿ ತೋರಿಸಲು ಗುರಿ ಇಟ್ಟುಕೊಂಡು ನಡೆಯುವವ,,
ಬದುಕಿರುವವರೆಗೂ ಅಡ್ಡದಾರಿ, ಸರಿದಾರಿಗಳ,,,
ಕ್ಷಣಕ್ಷಣಕ್ಕೂ ಮಾರ್ಗದರ್ಶನ ನೀಡುವವನು,,,
.
ಕತ್ತಿನ ಸುತ್ತಲ ಕೈಗಳ ಹೂಮಾಲೆಯಾಗಿಸಲು,,
ಪ್ರಯತ್ನಸಿ ಬೆನ್ನು ಗೂನಾಗಿಸಿಕೊಂಡವ,,
ಮನೆಯಲಿ ಅವ್ವನ, ಅಕ್ಕತಂಗಿಯರ
ಉಭಯಕುಶಲೋಪರಿ ನೋಡಲು ಕಲಿಸಿದವನು,.

  ಸುಮಿ 

3 Responses

  1. ನಯನ ಬಜಕೂಡ್ಲು says:

    ಬ್ಯೂಟಿಫುಲ್ . ಅಪ್ಪನೆಂಬ ಗೆಳೆಕಾರನ ನೆನೆಯಿತು ಮನ ,ಕವನ ಓದಿ, ಸ್ವಲ್ಪವೂ ಬೇಸತ್ತುಕೊಳ್ಳದೆ ಹೊತ್ತು ಸಾಗಿದ ಅಪ್ಪನ ಹೆಗಲು ಮತ್ತೊಮ್ಮೆ ನೆನಪಾಯಿತು.

  2. Shankari Sharma says:

    ಜವಾಬ್ದಾರಿಯುತ ಅಪ್ಪನ, ಭಾವನಾತ್ಮಕ ಚಂದದ ಕವನ.

  3. Vasundhara Kadaluru Mallappa says:

    ಅಪ್ಪನನ್ನು ಕಾಣುವ ಬಗೆ.. ಆಕಾಶದ ಅಪ್ಪ ಹೆಗಲಾಗುವಷ್ಟು ಆಪ್ತ..! ಚೆನ್ನಾಗಿದೆ ಭಾವನೆ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: