ಜಗದ್ವಂದ್ಯ ಭಾರತಂ…

Share Button


ಬಾವುಟವಿಲ್ಲದ
ಭಾರತದ ಪರಿಕಲ್ಪನೆ ಅಸಂಭವವೆ? ಹೌದು. ಜಗತ್ತಿನ ಅತ್ಯಂತ ಪುರಾತನ ನಾಗರಿಕತೆಗಳಲ್ಲಿ ಒಂದಾದ ಭಾರತ ಮಹಾಕಾವ್ಯಗಳ ಕಾಲದಿಂದಲೂ ಬಾವುಟವನ್ನು ಕುರಿತು ಪ್ರಸ್ತಾಪಿಸುತ್ತದೆ. ಗುಪ್ತರ ಕಾಲದಿಂದ ಮಧ್ಯಯುಗೀನ ಮುಸ್ಲಿಂ ಆಳ್ವಿಕೆಯವರೆಗಿನ ಬಾವುಟಗಳ ಕಥೆ ಒಂದಾದರೆ, ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದ ಸಂಪೂರ್ಣ ಸ್ವರಾಜ್ಯದ ಹೋರಾಟದವರೆಗಿನ ಬಾವುಟದ ಕಥೆ ಮತ್ತೊಂದು ರೀತಿಯದು. ಭಾರತದ ರಾಜಕೀಯ ಸ್ಥಿತ್ಯಂತರಗಳೊಂದಿಗೆ ಬಾವುಟದ ವಿನ್ಯಾಸವಿಕಾಸದಲ್ಲಿಯೂ ಕೂಡಾ ಎಷ್ಟೆಲ್ಲ ಬದಲಾವಣೆಗಳಾಗಿವೆ

ಇಡೀ ಭಾರತವನ್ನು ಆಳಿದ ಮೌರ್ಯರ ಬಾವುಟ ಒಂದು ತೆರನಾದರೆ ಮೊಘಲ್ ಹಾಗೂ ಬ್ರಿಟಿಷ್ ಭಾರತದ ಬಾವುಟ ಮತ್ತೊಂದು ರೀತಿಯದಾಗಿದ್ದವು. ಸ್ವಾತಂತ್ರ್ಯ ಸಂಗ್ರಾಮದ ಹಲವು ಹಂತಗಳಲ್ಲಿ ದೇಶದ ರಾಜಕೀಯ ಹಾಗೂ ಭೌಗೋಳಿಕ ಪರಿಕಲ್ಪನೆಯಷ್ಟೇ ಗಂಭೀರವಾಗಿ ಚರ್ಚೆಯಾದ ಬಾವುಟತಿರಂಗಾಈಗ ನಮ್ಮೆಲ್ಲರ ಅಭಿಮಾನ, ಸ್ವಾತಂತ್ರ್ಯ ಹಾಗೂ ಆತ್ಮೋನ್ನತಿಯ ಸಂಕೇತವಾಗಿ ಹಾರಾಡುತ್ತಿದೆ. ನಿಟ್ಟಿನಲ್ಲಿ ಭಾರತದ ಕಥೆ ಎನ್ನುವುದು ಬಾವುಟದ ಕಥೆಯೇ ಆಗಿದೆ. ಪ್ರಸ್ತುತ ಕಾದಂಬರಿಜಗದ್ವಂದ್ಯ ಭಾರತಂಬಾವುಟದ ಇತಿಹಾಸಕ್ಕೆ ಹಿಡಿದ ಕನ್ನಡಿಯಾಗಿದೆ.

ದೇಶವೆಂದರೆ ದೇವರಿಗೂ ಮಿಗಿಲು. ನಮ್ಮ ಕಲ್ಪನೆಯಲ್ಲಿ ಹುಟ್ಟುವ ದೇವರುಗಳು ಕೋಟಿಕೋಟಿ. ಅವರ ರೂಪ, ಅವತಾರಗಳು ಸಾವಿರ, ಸಾವಿರ. ಆದರೆ ದೇಶ ಹಾಗಲ್ಲ. ಅದು ನಾವು ನೆಲೆಸಿದ ನೆಲವಾಗಿಯೂ ಬರೀ ನೆಲವಷ್ಟೇ ಅಲ್ಲ. ನಮ್ಮ ಅನ್ನ, ಅಸ್ತಿತ್ವ. ಸ್ವಾತಂತ್ರ್ಯಗಳ ಭರವಸೆ. ನಾವು ಕಂಡು, ಮುಟ್ಟಿ ಅನುಭವಿಸುವ ವಾಸ್ತವ. ದೇಶ ಭದ್ರವಾಗಿದ್ದರೆ ನಾವು ಭದ್ರ. ನಮ್ಮ ನಾಳೆಗಳೂ ಭದ್ರ. ದೇಶದ ಗೌರವಕ್ಕೆ ಧಕ್ಕೆಯಾಗದಂತೆ ಬಾಳಬೇಕು.

ಯಾವ ದೇಶವೂ ಯಾರಪ್ಪನ ಮನೆಯ ಆಸ್ತಿಯೂ ಅಲ್ಲ. ಧರತಿಗೆ ಯಾರೂ ಮಾಲೀಕರಿಲ್ಲ ಯುಸೂಫ್ ಜಿ. ಇಂದು ಪಾಕಿಸ್ತಾನ ಹಾಡಿ ಹೊಗಳುವ ಮೊಹಮ್ಮದ್ ಇಕ್ಬಾಲ್ ಹಾಗೂ ಜಿನ್ನಾ ಇಬ್ಬರಿಗೂ ದೇಶದ ಇತಿಹಾಸ ಎಷ್ಟೊಂದು ದೀರ್ಘವಾಗಿದೆ ಎಂಬುದು ಚೆನ್ನಾಗಿ ಗೊತ್ತಿದೆ. ಅದೆಷ್ಟು ಭಿನ್ನಭಿನ್ನ ಜನಾಂಗಗಳು ಇಲ್ಲಿ ಶತಮಾನಗಳಿಂದ ಸೌಹಾರ್ದದಿಂದ ಬಾಳಿವೆ. ಇದನ್ನಾಳಿದ ಸಾಮ್ರಾಟ್ ಅಶೋಕನಿಗೆ, ಇಲ್ಲಿಂದ ನನ್ನು  ಎತ್ತಿಕೊಂಡು ಹೋಗಲಾಗದ ಸಿಕಂದರನಿಗೆ ಹಾಗೂ ಸಮಗ್ರ ಭಾರತದ ಬಾದಷಾ ಆಗಿದ್ದ ಅಕ್ಬರನಿಗೆ, ಎಲ್ಲ ಸಾಂಸ್ಕೃತಿ ಹಾಗೂ ಭೌಗೋಳಿಕ ವ್ಯತ್ಯಾಸಗಳ ಮಧ್ಯದಲ್ಲೂ ಭಾರತ ಹೇಗೆ ಅವಿಚ್ಛಿನ್ನ ಹಾಗೂ ಅಖಂಡ ಎಂಬುದು ಚೆನ್ನಾಗಿ ಗೊತ್ತಿತ್ತು. ಹೀಗಾಗಿ ಅವರೆಂದೂ ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸಲು ಯತ್ನಿಸಲಿಲ್ಲ.

ಧ್ವಜ ಅಂದ್ರೆ ಬರೀ ರಂಗಬೀರಂಗೆ ಕಪಡಾ ಅಲ್ಲ, ಚಿತ್ರವಿಚಿತ್ರ ಚಿತ್ರಗಳಲ್ಲ, ಧ್ವಜ ಅಂದರೆ ಭರೋಸಾ, ನಮ್ಮ ವಿರಾಸತ್, ದೇಶವನ್ನಾಳಿದ ರಾಜಮಹಾರಾಜರ ನಿಶಾನಾ”. ಶಾಂತಿ, ಸಹನೆ, ಸಹಬಾಳ್ವೆಯನ್ನೇ ಬೋಧಿಸುತ್ತ ಬಂದ ದೇಶ ಈಗ ಎಂತೆಂಥ ಅವಘಡಗಳಿಗೆ ಸಾಕ್ಷಿಯಾಗುತ್ತಿದೆ. ನೂರಾರು ವರ್ಷ ಭಾಯಿಭಾಯಿ ಎಂದುಕೊಂಡಿದ್ದ ಹಿಂದೂಮುಸ್ಲಿಮರು ತಿಂಗಳುಗಳಲ್ಲಿ ಆಜನ್ಮ ಶತ್ರುಗಳಾಗಿಬಿಟ್ಟಿದ್ದಾರೆ. ಕೆಂಪು ಕಮಂಗಿಗಳ ಕೈಗೆ ತಮ್ಮ ಬುದ್ಧಿ ಕೊಟ್ಟು ತಮ್ಮ ಮೌಲ್ಯಗಳನ್ನು ತಾವೇ ಮಣ್ಣು ಪಾಲು ಮಾಡಿದ್ದಾರೆ. ನಿಜ, ಬುದ್ಧಿ ನಿದ್ರೆಗೆಡುವಷ್ಟು ಆತ್ಮ ಆಕಾಶಮುಖಿಯಾಗಬಾರದು, ವಾಸ್ತವಗಳ ಆಚೆಗಿನ ಭ್ರಮೆಯನ್ನೇ ಬದುಕೆಂದು ನಂಬಿಬಿಡಬಾರದು.

 “ಶಿವಾಜಿಯ ಧ್ವಜ ಕೇಸರಿ ಬಣ್ಣದ್ದಾಗಿತ್ತು. ಎಲ್ಲ ಝಂಡಾಗಳಂತೆ ಅದು ಆಯತಾಕಾರದಲ್ಲಿದ್ದರೂ ಕೊನೆಯ ಭಾಗದಲ್ಲಿ ತ್ರಿಭುಜಾಕಾರದಲ್ಲಿ ಧ್ವಜವನ್ನ ಕತ್ತರಿಸಲಾಗಿತ್ತು. ವಿಶೇಷ ಅಂದ್ರೆ ಹಿಂದೂಗಳು ಈಗಲೂ ಕೇಸರಿ ಬಣ್ಣದ ಧ್ವಜವನ್ನೇ ತಮ್ಮ ದೇವಸ್ಥಾನಗಳಲ್ಲಿ ಹಾರಿಸ್ತಾರೆ. ಕೇಸರಿ ಧ್ವಜ ಅನ್ನೊದು ಈಗ ಹಿಂದೂಗಳ ನಿಶಾನಾ ಆಗಿಬಿಟ್ಟಿದೆ

ಬಾವುಟ ಇಲ್ಲದೆ ಭಾರತ ಹಿಂದೆಯೂ ಇರಲಿಲ್ಲ ಮುಂದೆಯೂ ಇರೋದಿಲ್ಲ. ಭಾರತವೆಂದರೆ ಬಾವುಟ. ಅಷ್ಟೊಂದು ಪ್ರಮಾಣದಲ್ಲಿ ಬಾವುಟದ ವಿಕಾಸದ ಕತೆ ಭಾರತೀಯ ಇತಿಹಾಸದೊಂದಿಗೆ ಬೆರೆತು ಹೋಗಿದೆ.

 -ಡಾ.ರಾಜಶೇಖರ ಮಠಪತಿ (ರಾಗಂ ) 

2 Responses

  1. ನಯನ ಬಜಕೂಡ್ಲು says:

    ಚೆನ್ನಾಗಿದೆ ಸರ್. ನಮ್ಮ ದೇಶದ ಇತಿಹಾಸವನ್ನು ಓದುತ್ತಾ ಓದುತ್ತ ದೇಶಪ್ರೇಮದ ಭಾವ ಆವರಿಸುತ್ತದೆ . ನಮ್ಮ ದೇಶದ ಮೇಲೆ ಅಭಿಮಾನ ಮೂಡುತ್ತದೆ .

  2. Shankari Sharma says:

    ದೇಶದೊಡನೆ ಬಾವುಟದ ಇತಿಹಾಸ ಅರಳುವ ಬಗೆ ಚೆನ್ನಾಗಿದೆ…ಉತ್ತಮ ಬರಹ..ಅಭಿನಂದನೆಗಳು ಸರ್.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: