ನಾನೊಂದು ಶಕ್ತಿಯೆಂದು ತೋರಿಹೆನು

Share Button

      ಹೆಣ್ಣೆಂಬ ಜನ್ಮ ನನ್ನದು
ಸಹನೆಯಲ್ಲಿ ನಾನೇ ಮುಂದು
.
ತಾಯ ಗರ್ಭದಿಂದಲೇ
ನನಗೆ ಸಂಕಷ್ಟ ಶುರು
ಹೋರಾಡಬೇಕಲ್ಲಿ ನಾ ಪಾರಾಗಲು
.
ಬದುಕಿನಲಿ ಎಷ್ಟೊಂದು ಪಾತ್ರ
ನಿಭಾಯಿಸುವೆ ಅದೆ ನನ್ನ ಸೂತ್ರ
ಹೆಣ್ಣನ್ನ ದೇವರೆನ್ನುವವರ ಜೊತೆ
ಕಿರಾತಕರ ಕ್ರೌರ್ಯಕೆ ಬಲಿಯಾಗುವ ವ್ಯಥೆ
.
ಹೊನ್ನು ಮಣ್ಣಿನ ಜೊತೆಗೆ
ಹೆಣ್ಣಿಗೂ ಒಂದು ಸ್ಥಾನವಿದೆ
ಮಣ್ಣಿನಂತೆಯೇ ಹೆಣ್ಣ ಮೇಲೂ
ನಿತ್ಯ ಅತ್ಯಾಚಾರ ನಡೆಯುತ್ತಲೇ ಇದೆ
.
ತ್ಯಾಗಕ್ಕೆ ಮತ್ತೊಂದು ಹೆಸರು ನಾನು
ಪ್ರೇಮದ ಆ ಮೇರುವೇ ನಾನು
ಮಮತೆ ನನ್ನ ಮಂತ್ರ
ಕರುಣೆಯೇ ನನ್ನ ಸೂತ್ರ
.
ನಿತ್ಯ ದುಡಿವೆ ಹರಿಸಿ ಬೆವರು
ಅದಕೆ ನನಗೆ ಸಿಕ್ಕಿದ್ದು ಬರಿ ಕಣ್ಣೀರು
ನನ್ನ ಶೀಲದ ಮೇಲೆಯೇ ಎಲ್ಲರ ಕಣ್ಣು
ಅದರಿಂದ ನನ್ನ ಬದುಕಾಗಿದೆ ಹುಣ್ಣು
.
ವರದಕ್ಷಿಣೆಗೆ ಬಲಿ ನಾನು
ಹುಟ್ಟಿನಿಂದ ಸಾವಿನವರೆಗೆ ಅಡಿಯಾಳಾಗಿಹೆನು
ಆದರೂ ಛಲ ಬಿಡದೆ ಸಾಧಿಸುತಿಹೆನು
ಹೆಣ್ಣೆಂಬುದೊಂದು ಶಕ್ತಿಯೆಂದು ತೋರಿಹೆನು
.
-ಅಮು ಭಾವಜೀವಿ

.

2 Responses

  1. ನಯನ ಬಜಕೂಡ್ಲು says:

    ಸುಂದರ ಕವನ,
    ಹೆಣ್ಣಿನ ಮನದ ಅನಾವರಣ .

  2. Shankari Sharma says:

    ಹೆಣ್ಣು ಸಂಕಷ್ಟಗಳನ್ನು ಮೆಟ್ಟಿ ನಿಂತು ಮುನ್ನಡೆಯಲು ಧೈರ್ಯ ತುಂಬುವ ಕವನ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: