ಎರಡು ಉತ್ತರ
ಮಧುರಭಾವಗಳ ಏರಿಳಿತಗಳ ಸಂವಹನ
ಒಳಿತೋ, ಕೆಡುಕೋ, ಹ್ರದಯಗಳ ಮಿಲನ
ಎನಗೂಆಣೆ, ನಿನಗೂ ಆಣೆಯ ಪಾಣಿಗ್ರಹಣ
ಸುಂದರ ಕನಸುಗಳ ಸಾಕಾರ ಜೀವನ
ಸುಖವೋ-ದುಃಖವೋ ಕರಗುವ ಯೌವ್ವನ
ಪತಿಗೂ-ಪತ್ನಿಗೂ ಸಾವಧಾನವೇ ಆಭರಣ.
ಮನೆಯೊಳಗೇ ಹಿಂಸೆ, ವರದಕ್ಷಿಣೆ, ಅತ್ಯಾಚಾರ
ಮನದೊಳಗೇ ನೊಂದು ಬೆಂದು ತಿರಸ್ಕಾರ
ಮದದೊಳಗೆ ಮೆರೆವ ಖೂಳ ರಕ್ಕಸರನು
ಏಸು ಸಹಿಸುವೆಯೋ ನೀ ನಿರಂತರ
ಮುರಿದೇಳು ದಾಸಿಜೀವನದ ದೌರ್ಜನ್ಯವನು
ಹೆಡೆಮುರಿಕಟ್ಟಿ ನಿಂತರೆ, ಸಿಗುವುದಾಗ ಉತ್ತರ…!
– ಅಶೋಕ್ ಕೆ.ಜಿ.ಮಿಜಾರು
ಮೊದಲ ಪ್ಯಾರ ,ಅದರಲ್ಲೂ ಕೊನೆಯ ಸಾಲು ತುಂಬ ಹಿಡಿಸಿತು .ಶಬ್ದ ಚೆನ್ನಾಗಿ ಜೋಡಿಸ್ತೀರಿ.
ಚೆನ್ನಾಗಿದೆ ಕವಿತೆ ಅಭಿನಂದನೆಗಳು -ಸ್ಮಿತಾ