ಬದುಕಿನ ಬಯಕೆ

Spread the love
Share Button

ಭಾವಲೋಕದ
ಬದುಕಿನಲಿ
ಕನಸಿನ ಸಿಹಿ ಸಿಂಚನ
.
ಬಯಕೆ ತುಂಬಿದ
ಮನದ ಗೂಡಲಿ
ಕನಸಿನ  ಗಿರಿಶೃಂಗದ
ಸೌಂದರ್ಯದ ಸಂಗಮ
.
ಇರುಳ ಬೆಳಕಲಿ
ಕನಸುಗಳ
ಗಿರಿಯೇರುವ ಮನದಲಿ
ಯುದ್ಧ ಸಾರುವ ಪಯಣ..
.
ಮುಸ್ಸಂಜೆಯ
ಮಂದಹಾಸಕೆ
ಕನಸುಗಳ ಭಾವನೆಯ ಕಲರವಕೆ
ಸುಖ ದುಃಖದ ಹಾದಿಯ
ಸವೆದು ಗುರಿ ಮುಟ್ಟುವ ತವಕ
.
ಕಾರ್ಮೋಡದ ಸಿಡಿಲು ಮಿಂಚಿಗೆ
ಮಳೆಯ ಅಬ್ಬರಕೆ
ಕನಸಿನ ಪರ್ವತ ವೇರಿ
ನನಸುಗಳ ಸವಿ ನೆನಪು
ಸವಿಯುವ ತವಕ

-ರಾಘವ್ ರಾವ್ , ಚೆನ್ನೈ.
.

3 Responses

  1. ನಯನ ಬಜಕೂಡ್ಲು says:

    ಸುಂದರವಾಗಿದೆ ಕವನ. ಬದುಕಿನ ಪಯಣದಲ್ಲಿ ಕನಸಿನ ಮೆರವಣಿಗೆ ಬೇಕೇ ಬೇಕು ಇಲ್ಲದಿದ್ದರೆ ಬರಡು ಈ ಬದುಕು

  2. Shankari Sharma says:

    ಬದುಕಿನ ಸುಂದರ ಕನಸು…ನವಿರಾದ ಕವನ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: