ಬಿಡುಗಡೆಯ ಬೇಲಿ

Share Button

ಹರೆಯದ ತುಂಬೆಲ್ಲಾ ಕಲ್ಪನೆಯ ಮಾಲೆ

ನನ್ನವನು ಬರುತಾನೆ ಚಂದಿರನ ಹಾಗೆ

ಸುಡುವನೆತ್ತಿಯ ತಂಪೆರೆದು ಕೊಡುತಾನೆ

ಬಾಳುವೆ, ನಾ ಬಯಸಿದ ಹಾಗೆ..!

ನನ್ನಂದಕೆ ಸೋತನೋ, ನಾನವಗೆ ಸೋತೆನೋ

ಎನ್ನೊಡಲ ತುಂಬೆಲ್ಲಾ ಅವನದೇ ಹುಚ್ಚು

ವರಿಸಿದಾತನೇ ಅನ್ನದಾತನು, ಪ್ರಾಣನಾಥನು

ಪ್ರೀತಿಯಿಂದಲಿ ಪಡೆದೆ ನಮ್ಮದೇ ಪಡಿಯಚ್ಚು…!

ಮದುವೆಯೆಂದರೆ ಒಂಟಿಜೀವನದಿಂದ

ಹಾರಾಡುವ ಬಾನಾಡಿ ಜೋಡಿಅಂದಿದ್ದೆ;

ಮೊದಮೊದಲು ತೇಲಾಡಿ ಬಿದ್ದುಬಿಟ್ಟೆ

ಬಂಧನದಿಂದ ಚೌಕ್ಕಟ್ಟಿನೊಳಗೆ ಮರೆಯಾಗಿಬಿಟ್ಟೆ…!

 

ಅತ್ತೆಯಗತ್ತು, ಮಾವನಶಿಸ್ತು

ಪತಿಯೂ ಮರುಮಾತಿಲ್ಲದ ಸಿಪಾಯಿ

ಧನಕನಕದ ರಾಶಿ, ಸಿರಿವಂತಿಕೆ ಶೋಕಿ

ನಾನೋ ಪಂಜರದ ಹಕ್ಕಿ….!

 

ಮತ್ತದೇ ಕನಸುಗಳ ಉಯ್ಯಾಲೆ

ಬೇಲಿ ದಾಟುವ ಆಸೆ;

ಮೌನ ಮುರಿಯುವ ತವಕ

ಸ್ವತಂತ್ರಳಾಗುವ ತನಕ….!

 

-ಅಶೋಕ್ ಮಿಜಾರ್

4 Responses

  1. smitha says:

    ಕವಿತೆ ಚೆನ್ನಾಗಿದೆ .-ಸ್ಮಿತಾ

  2. jayashree says:

    excellent Ashok. You have great amount of compassion and empathy.

  3. Krishnaveni Kidoor says:

    ನಾನೋ ಪಂಜರದ ಹಕ್ಕಿ .-ಬೇಲಿ ದಾಟುವ ಆಸೆ.ಮೌನ ಮುರಿಯುವ ತವಕ .ಸಾಲುಗಳು ಮನ ಮುಟ್ಟುತ್ತದೆ .ಆಸೆಗಳೆಲ್ಲ ಮುರಿದಾಗ ಕನಸು ಮಾತ್ರ ಉಳಿಯುತ್ತದೆ .ಒಳ್ಳೆಯ ಹಿಡಿತವಿದೆ ಭಾಷೆಯ ಮೇಲೆ .ಇನ್ನೂ ಓದಬೇಕು ಹೊಸತು ಕವನ. ಬರೆಯುತ್ತೀರಲ್ಲವಾ ?

  4. Ghouse says:

    Very well written…

Leave a Reply to jayashree Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: