ಅನ್-ಲಾಕ್  ಆದ ಮನಸ್ಸು…

Share Button

ಡಾ.ವಿಮಲಶ್ರೀ, ಮೈಸೂರು


ಜಗತ್ತನ್ನು
ಕಾಡುತ್ತಿರುವ ಕೊರೊನಾದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು  ಘೋಷಿಸಲಾದ ಲಾಕ್ ಡೌನ್  ನಿಂದಾಗಿ ಮನೆಯಲ್ಲಿಯೇ ಇದ್ದ ನನಗೆ ಮನಸ್ಸಿಗೇ  ಲಾಕ್ ಡೌನ್ ಆದಂತಾಗಿತ್ತು. ಲಾಕ್ ಡೌನ್ 4.0 ಕೊನೆಯಾಗಿ ಜನಜೀವನ ಸಹಜತೆಗೆ ಮರಳಲಿದೆ ಎಂಬ ಆಶಾಭಾವನೆ ಮೂಡುತ್ತಿದೆ.   ಕೆಲವು ದಿನಗಳಿಂದ ಸಾಧಾರಣ ಮಳೆಯೂ ಸುರಿಯುತ್ತಿರುವುದರಿಂದ ವಾತಾವರಣವೂ ಸ್ವಲ್ಪ ಮಟ್ಟಿಗೆ ತಂಪಾಗಿದೆಹಾಗಾಗಿ, ಬರೋಬ್ಬರಿ ಎರಡೂವರೆ ತಿಂಗಳ ನಂತರ ನಮ್ಮ ಬಡಾವಣೆಯಲ್ಲಿ ವಾಯುವಿಹಾರಕ್ಕೆ ಹೊರಟೆನಗರದ ಹೊರವಲಯದಲ್ಲಿರುವ ಖಾಸಗಿ ನಿರ್ವಹಣೆಯಲ್ಲಿರುವ  ಬಡಾವಣೆಯಾದ ಕಾರಣ, ನಮ್ಮಲ್ಲಿ ವಾಹನ ದಟ್ಟಣೆ, ಗದ್ದಲ ಮೊದಲೂ ಇರಲಿಲ್ಲಈಗಂತೂ ಅತಿ ಪ್ರಶಾಂತವಾದ ವಾತಾವರಣ. ಬಡಾವಣೆಯಲ್ಲಿ ಇತ್ತೀಚೆಗೆ   ಆರಂಭವಾದ ಏಕೈಕ  ದರ್ಶಿನಿ ಮಾದರಿಯ ಹೋಟೆಲ್  ಅಲ್ಪಾವಧಿಯಲ್ಲಿಯೇ ನಿವಾಸಿಗಳ ಮೆಚ್ಚುಗೆ ಗಳಿಸಿತ್ತು. ಅದನ್ನು ನಿರ್ವಹಿಸುತ್ತಿದ್ದ ಮಹಿಳೆಯು ತಾನು ತಯಾರಿಸುವ  ಶುಚಿರುಚಿಯಾದ ಅಡುಗೆ ಮತ್ತು ತನ್ನ  ಹಿತಮಿತವಾದ ಮಾತುಗಳಿಂದ ವಾಯುವಿಹಾರಿಗಳನ್ನು ಆಕರ್ಷಿಸಿದ್ದರು. ನಾನೂ ನಾಲ್ಕಾರು  ಬಾರಿ ಭೇಟಿ ಕೊಟ್ಟಿದ್ದೆ. ಅಷ್ಟರಲ್ಲಿ ವಕ್ಕರಿಸಿದ ಕೊರೊನಾ ಮಾರಿಯಿಂದಾಗಿ ಅವರು ತಮ್ಮ ಹೋಟೆಲ್ ಅನ್ನು ಮುಚ್ಚಿದ್ದರು. ಆಮೇಲೆ, ನಾನು ಅವರನ್ನು ಭೇಟಿಯಾಗಿದ್ದು ಲಾಕ್ ಡೌನ್ 4.0 ನಂತರವೇ.

ಈಗ ಪಾರ್ಸೆಲ್ ವ್ಯವಸ್ಥೆಗೆ ಆದ್ಯತೆ ಇರುವುದರಿಂದ ಹಾಗೂ ನಾನು ಹೋಗಿದ್ದ ಸಮಯ ಅಲ್ಲಿ ಇತರ ಗ್ರಾಹಕರಿಲ್ಲದಿದ್ದುದರಿಂದ  ಕುಶಲೋಪರಿ ಮಾತನಾಡಿದೆವು. ಆಗ. ನನಗೆ ತಿಳಿದುದೇನೆಂದರೆ ಅವರು  ಸ್ನಾತಕೋತ್ತರ ಪದವೀಧರೆ ಹಾಗೂ ಪಿ.ಎಚ್.ಡಿಯನ್ನೂ ಮಾಡಿದ್ದಾರೆ. ಪ್ರತಿಷ್ಠಿತ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ ಕಾರ್ಯನಿರ್ವಹಿಸಿದ ಅನುಭವವಿದೆ. ಅಡುಗೆಯಲ್ಲಿ ಅವರಿಗಿರುವ ಆಸಕ್ತಿ ಹಾಗೂ ಬಿಡುವಿನ ವೇಳೆಯನ್ನು ಸದುಪಯೋಗ ಪಡಿಸಬೇಕೆಂಬ ಉದ್ದೇಶದಿಂದ  ಪುಟ್ಟದಾದ ಹೋಟೆಲ್ ನಿರ್ವಹಿಸುತ್ತಿದ್ದಾರೆ. ಇಲ್ಲಿ ಸ್ವಯಂಸೇವೆಯ ಪದ್ಧತಿಅಡುಗೆ ತಯಾರಿಗೆ ಅವರ  ಮಗಳು ಕೈಜೋಡಿಸುತ್ತಾರೆ. ಆಕೆ ಏರೋನಾಟಿಕಲ್ ಇಂಜಿನಿಯರ್. ಮನೆಮಟ್ಟಿಗೆ ಅನುಕೂಲವಾಗಿಯೇ ಇದ್ದಾರೆ. ಹೀಗಿರುವಾಗ, ಇವರೇಕೆ   ಮಾಲೀಕರು, ಅಡುಗೆಯವರು, ಸಪ್ಪ್ಲೈಯರ್ , ಕ್ಯಾಶಿಯರ್, ಕ್ಲೀನರ್’ ಎಲ್ಲವೂ ತಾನೇ ಎಂಬಂತೆ ಕೆಲಸ ಮಾಡುತ್ತಿದ್ದಾರೆ ಎಂಬ ಕುತೂಹಲ ತಡೆಯಲಾರದೆ  ‘ನೀವು ಇಷ್ಟೊಂದು ವಿದ್ಯಾವಂತರು, ಅನುಕೂಲವಾಗಿಯೂ ಇದ್ದೀರಾ…ನಿಜ ಹೇಳಬೇಕೆಂದರೆ ನೀವು ಖುದ್ದಾಗಿ ಅಡುಗೆ ಮಾಡುವುದು , ಹೋಟೆಲ್ ನಡೆಸುವುದು ಆಶ್ಚರ್ಯವೆನಿಸುತ್ತಿದೆ’ ಅಂದೆ.  

‘ತುಂಬಾ ಜನ ನನ್ನ ಬಳಿ ಹೀಗೆ ಇದೇ ಪ್ರಶ್ನೆ ಕೇಳಿದ್ದಾರೆ. ನಮ್ಮ ಸಮಾಜದಲ್ಲಿ ಎಷ್ಟು ವಿದ್ಯೆ ಕಲಿತರೆ ಯಾವ ಕೆಲಸ ಮಾಡಬಹುದು ಅಥವಾ ಮಾಡಬಾರದು ಅಂಥ ಇದೆಯಾ? ಅವೆಲ್ಲಾ ನಾವೇ ಹೇರಿಕೊಂಡ ಬಿಂಕ-ಬಿಗುಮಾನಗಳು. ಮನೆಯಲ್ಲಿ ಸುಮ್ಮನೆ ಕಾಲಹರಣ ಮಾಡುವ ಬದಲು, ನನ್ನ ಆಸಕ್ತಿಗೆ ತಕ್ಕ ಉದ್ಯೋಗ ಮಾಡುತ್ತಿದ್ದೇನೆ. ನನಗೆ ಇದರಿಂದ ಸಂತೃಪ್ತಿ, ಆದಾಯ  ಎರಡೂ ಸಿಕ್ಕಿದೆ. ಲಾಕ್ ಡೌನ್ ಇದ್ದ ಸಮಯ ಹೊರತು ಪಡಿಸಿ, ಉಳಿದ ದಿನಗಳಲ್ಲಿ ಒಳ್ಳೆ ವ್ಯಾಪಾರವಾಗುತ್ತಿತ್ತು. ಈಗ ಪುನ: ಚೇತರಿಸಿಕೊಂಡಿದೆ. ಗುಣಮಟ್ಟ, ಶುಚಿತ್ವ ಕಾಯ್ದುಕೊಂಡರೆ ಆಹಾರ ಉದ್ಯಮದಲ್ಲಿ ಗ್ರಾಹಕರು ಬರುತ್ತಾರೆ’  ಎಂದು ಖುಷಿಯಿಂದ ಹೇಳುತ್ತಾರೆ.


ಕಾಲ ಬದಲಾಗಿದೆ, ಈಗಿನ ವಿದ್ಯಾರ್ಥಿಗಳೂ ಬದಲಾಗಿದ್ದಾರೆಉದಾಹರಣೆಗೆನನ್ನ ಇಂಜಿನಿಯರ್ ಮಗಳು  ಸಂಜೆಯ ಸಮಯ ಚಾಟ್ಸ್ ತಯಾರಿ ಮಾಡುತ್ತಾಳೆ .ನಮ್ಮಲ್ಲಿ ಕೆಲವು ಸಮಯ ಒಬ್ಬ ಬಿ.ಬಿ.ಎಂ  ಓದುವ ಹುಡುಗ ಸಹಾಯ ಮಾಡುತ್ತಿದ್ದ. ಅವರು ಮನೆಯಲ್ಲಿ ಬಹಳ ಅನುಕೂಲಸ್ಥರೇ. ಬ್ಯಾಂಕ್ ಅಧಿಕಾರಿಯ ಮಗ. ತನ್ನ ಓದಿಗೆ ಪೂರಕವಾದ  ಬ್ಯುಸಿನೆಸ್ ಅನುಭವ ಪಡೆಯಲು ಕೆಲವು ದಿನ ಕೆಲಸ ಮಾಡಿದಮೊದಲೆಲ್ಲ, ಹೋಟೆಲ್ ನಲ್ಲಿ ಸಪ್ಲೈಯರ್ ಕೆಲಸ ಮಾಡುವುದು  ಬಡವರು ಎಂಬ ಭಾವನೆಯಿತ್ತು.  ಅಷ್ಟಕ್ಕೂ ನಮ್ಮ ಮಕ್ಕಳು ವಿದೇಶದಲ್ಲಿ ಹೋಗಿ, ಅಲ್ಲಿಯ ಹೋಟೆಲ್ ಗಳಲ್ಲಿ ಪಾರ್ಟ್ ಟೈಮ್ ಕೆಲಸ ಮಾಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿಲ್ಲವೇ? ಅವರ ಪೋಷಕರುನಮ್ಮ ಮಕ್ಕಳು ಅಮೇರಿಕಾದಲ್ಲಿ ಓದುತ್ತಾರೆ‘  ಎಂದು ಹೆಮ್ಮೆಯಿಂದ ಹೇಳುತ್ತಿಲ್ಲವೇಯಾವ ಕೆಲಸವಾದರೂ ಸರಿ, ಶ್ರದ್ಧೆಯಿಂದ ಮಾಡುತ್ತಾ, ಕೆಲಸವನ್ನು ಪ್ರೀತಿಸಿದರೆ ಸಿಗುವ ಖುಷಿಗೆ ಬೆಲೆ ಕಟ್ಟಲಾಗದು ಎಂದರು.  

ನಿಜ, ನಿಮ್ಮ  ಕಾರ್ಯವೈಖರಿ ಮತ್ತು ಆಲೋಚನಾ ಲಹರಿಯಲ್ಲಿ ಉತ್ತಮವಾದ ಜೀವನ ಸಂದೇಶವಿದೆ, ನನ್ನ ಮನಸ್ಸನ್ನು ಅನ್ಲಾಕ್ ಮಾಡಿದಿರಿ’, ಎಂದು ಅಭಿನಂದಿಸಿ, ಸ್ವಲ್ಪ ತಿಂಡಿಯನ್ನು ಪಾರ್ಸೆಲ್ ಕಟ್ಟಿಸಿಕೊಂಡು ಬಂದೆ. 

– ಹೇಮಮಾಲಾ.ಬಿ, ಮೈಸೂರು

  

13 Responses

  1. Shruthi Sharma says:

    ಓದಿ ತುಂಬಾ ಸಂತೋಷವಾಯಿತು. ಹೆಚ್ಚಾಗಿ ಅದೆಷ್ಟೋ ಓದಿಕೊಂಡವರೆಂದು ಎನಿಸಿಕೊಂಡವರೇ ಎಷ್ಟೋ ಅವಕಾಶಗಳಿದ್ದೂ ತಮ್ಮ ವೃತ್ತಿಯನ್ನು ಕಾಲೇಜಿನ ಅಧ್ಯಯನದ ವಿಷಯಕ್ಕೆ ಮಾತ್ರ ಸೀಮಿತಗೊಳಿಸುತ್ತಾರೆ. ವಿಮಲಾರವರು ಇತರರಿಗೆ ಮಾದರಿ.

  2. ಹರ್ಷಿತಾ says:

    ನಿಜಕ್ಕೂ ಬಹಳ ಉತ್ತಮ ವಿಚಾರಧಾರೆ…ಅಭಿನಂದನೆಗಳು ಡಾ|ವಿಮಲಶ್ರೀ ಅವರಿಗೆ, ಇವರನ್ನು ಪರಿಚಯಿಸಿದ ಲೇಖಕಿಗೂ ಧನ್ಯವಾದಗಳು

  3. ಶಂಕರಿ ಶರ್ಮ says:

    ಅತಿ ವಿರಳವಾದ ಪ್ರವೃತ್ತಿ.. ನಿಜಕ್ಕೂ ಶ್ಲಾಘನೀಯ‌ ಈ ಅಮೋಘ ಕಾರ್ಯದಲ್ಲಿ ನಿರತರಾದ ಡಾ. ವಿಮಲಶ್ರೀಯವರಿಗೆ ಹಾಗೂ ಅವರನ್ನು ಪರಿಚಯಿಸಿದ ನಿಮಗೂ ಧನ್ಯವಾದಗಳು.

  4. Ramya says:

    ಅಭಿನಂದನೆಗಳು
    ಎಲ್ಲರಿಗೂ ಮಾದರಿಯಾಗುವ ಸಾಧನೆ. ಡಾ. ವಿಮಲಶ್ರೀಯವರ ಹೋಟೆಲ್ ವಹಿವಾಟು ಮತ್ತಷ್ಟು ವೃದ್ಧಿಸಲಿ.

  5. ನಯನ ಬಜಕೂಡ್ಲು says:

    ಇಲ್ಲಿ ಎಷ್ಟೇ ಅನುಕೂಲವಿದ್ದರೂ ನಡೆಸುವ ಸರಳ ಜೀವನ ಪದ್ಧತಿ ಇಷ್ಟವಾಯಿತು. ಎಷ್ಟೇ ಶ್ರೀಮಂತಿಕೆ ಇದ್ದರೂ, ಯಾವ ಕೆಲಸವನ್ನು ಅವಮಾನ ಅಂದುಕೊಳ್ಳದೆ ಮಾಡುವ ಆ ಹೋಟೆಲ್ ನಡೆಸುತಿದ್ದವರ ನಿಗರ್ವ ವ್ಯಕ್ತಿತ್ವ ಬಹಳ ಇಷ್ಟವಾಗುತ್ತದೆ. ತುಂಬಾ ಚೆನ್ನಾಗಿದೆ ಬರಹ.

  6. KRISHNAPRABHA M says:

    ಬಹಳ ಒಳ್ಳೆಯ ಲೇಖನ. ಡಾ. ವಿಮಲಶ್ರೀಯವರನ್ನು ಪರಿಚಯಿಸಿದ ನಿಮಗೆ ಅಬಿನಂದನಾಪೂರ್ವಕ ಧನ್ಯವಾದಗಳು

  7. Dr. Vimala Sri says:

    ಅಭಿನಂದಿಸಿದ ಎಲ್ಲರಿಗು ಧನ್ಯವಾದಗಳು , ಲೇಖನದ ಮೂಲಕ ಪರಿಚಯಿಸಿದ ಹೇಮಮಾಲಾರವರಿಗೆ ಕೃತಜ್ಞತೆಗಳು.

    • ನಿಮ್ಮ ವಿದ್ಯಾರ್ಥಿ ಎಂದು ಗುರುತಿಸಿಕೊಳ್ಳಲು ಬಹಳ ಹೆಮ್ಮೆ ಇದೆ ನನಗೆ ಗುರುಗಳೇ

  8. Hema says:

    ಬರಹವನ್ನು ಓದಿದ, ಮೆಚ್ಚಿದ, ಅಭಿನಂದಿಸಿದ ಎಲ್ಲರಿಗೂ ಧನ್ಯವಾದಗಳು.

  9. ASHA nooji says:

    ಉತ್ತಮ ಲೇಖನ .ತಮಗೆ ಇಷ್ಟದಕೆಲಸಯಾವುದೆಆಗಿರಲಿ madidare adu olleyade ,ಡಾವಿಮಲಶ್ರೀಯವರನ್ನು ಗುರುತಿಸಿದ ನಿಮಗೂ ಧನ್ಯವಾದಗಳು

  10. Dr. Vimala Sri says:

    Dhanyavada galu asha ravare

  11. ಜಲಜಾರಾವ್ says:

    ಕಾಡು ಹರಟೆ, ವ್ಯರ್ಥವಾಗಿ ಕಾಲ ಕಳೆಯುವ ಬದಲು ಹೀಗೆ ಏನಾದರೊಂದು ಆಸಕ್ತಿಯ ವಿಷಯಗಳಲ್ಲಿ ತೊಡಗಿಸಿಕೊಂಡು ಚಟುವಟಿಕೆಯಿಂದ ಇರುವುದು ಒಳ್ಳೆಯದೇ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: