ಈ- ಸಂಭಾಷಣೆ

Share Button

ನಿಮಗೆಷ್ಟು ಮಕ್ಕಳು?
-ಇಬ್ಬರು
ಗಂಡೋ ಹೆಣ್ಣೋ?
-ಎರಡೂ
ಸಣ್ಣವಿರಬೇಕು ?
-ಹೌದು ಹೆತ್ತವರಿಗೆ ಹಾಗೆಯೇ.
ಏನು ಮಾಡುತ್ತಾರೆ?
-ಎಂದರೆ!
ಓದು ಕೆಲಸ ಮದುವೆ?
-ಮದುವೆ ಇಲ್ಲ.
ಏಕೆ? ವಯಸ್ಸೆಷ್ಟು?
-ಮಗನಿಗೆ 30, ಮಗಳಿಗೆ 28
ಮದುವೆ ಏಕಿಲ್ಲ?
-ದುಡಿಯುತ್ತಿದ್ದಾರಲ್ಲ!

ಇಪ್ಪತ್ತೆಂಟು ತುಂಬಿತೆಂದಿರಿ?
-ಹೌದು. ಮಗನಿಗೂ 30.
ಮಗಳಿಗೆ  25 ರೊಳಗೆ ಆಗಬೇಕಿತ್ತು?
– ಮಗನಿಗೂ 30 ಆಯ್ತಲ್ಲ!
ಗಂಡು ಹೇಗಾದರೂ ಆಗದೆ?
-ಅದು ಹೇಗಾದೀತು!
ಮತ್ತೇನು ನೀವು ಹೇಳುವುದು?
-ಇಬ್ಬರೂ ನನ್ನ ಮಕ್ಕಳೇ.
ಅಲ್ಲಾ… ಅದು ಹಾಗಲ್ಲಾ…ಆ…
-ನೀವು ಸುಮ್ಮನಿರಿ. ನೆರೆಮನೆಯ
ದುಃಖಕ್ಕೆ ಮೂಲವಾಗದಿರಿ.
ಏನು ನೀವು ಹೇಳುವುದು?
– ಇಷ್ಟೇ..
ಇಬ್ಬರೂ ಓದಿದ್ದಾರೆ, ಬದುಕುತ್ತಿದ್ದಾರೆ
ಮಿಗಿಲಾಗಿ ಖುಷಿಯಿಂದಿದ್ದಾರೆ.
.
– ವಸುಂಧರಾ ಕದಲೂರು.
.

4 Responses

  1. ನಯನ ಬಜಕೂಡ್ಲು says:

    ಇವತ್ತಿನ ವಾಸ್ತವ ಪರಿಸ್ಥಿತಿಗೊಂದು ಉತ್ತಮ ಸಲಹೆ ನೀಡಿವಂತಹ ಕವನ

  2. Dharmanna dhanni says:

    ಅರ್ಥಪೂರ್ಣವಾಗಿದೆ. ಧನ್ಯವಾದಗಳು

  3. Anonymous says:

    ವಾಸ್ತವ ಜಗತ್ತಿನ ಕಠೋರ ಸತ್ಯ ದರ್ಶನ.ಅಭಿನಂದನೆಗಳು ಮೇಡಂ.

  4. ಶಂಕರಿ ಶರ್ಮ, ಪುತ್ತೂರು says:

    ಸತ್ಯ ಸಹಜವಾಗಿ ಮೂಡಿಬಂದಿದೆ.

Leave a Reply to Dharmanna dhanni Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: