ಭರವಸೆ

Share Button

“ಏಕೆ ಹೀಗೆ
ಮೂಕವಾಗಿ ರೋದಿಸುತ್ತಿದೆ
ಈ ಮನ….?,
ತುಂಬಿಕೊಳ್ಳದಿರು ಹೀಗೆ
ಕಣ್ಣೀರ….
ಹೊಳೆವ ನಯನ “.

“ಮರೆತು ಬಿಡು ನೀ
ಬಿಚ್ಚಿ ಬಣ್ಣ ಬಣ್ಣದ ನೆನಪುಗಳ
ನೋವಿನ ಗಳಿಗೆ,
ಮತ್ತೆ ಬರುವುದು ನಲಿವಿನ ಕ್ಷಣವೆಂಬ
ಭರವಸೆಯ ಬೆಳಕು
ಈ ಬದುಕಿನ ಹಾದಿಗೆ”.

“ಕಾಯುವಿಕೆಯೊಂದು ತಪ
ಮರೆತೆಯಾ ನೀನು…?
ಒಲವ ಉಸಿರಾಗಿಸಿ ಸಾಗೇ
ಈ ಬಾಳು ಬೆರೆತಂತೆ
ಹಾಲು-ಜೇನು “.

“ನಿರ್ಜೀವ ಶಿಲೆಯೂ ಕರಗುವುದು
ಪ್ರಕೃತಿಯ ಬದಲಾವಣೆಯಲ್ಲಿ,
ನೀನೇಕೆ ಹೀಗೆ ನಲುಗುವೆ ಮನವೇ…
ಕಲ್ಪಿತ ಬವಣೆಯಲ್ಲಿ…? “.

“ಕನಸುಗಳು ತುಂಬಿದ ಕಣ್ಣಲ್ಲಿ
ನೀರಾಡದಿರಲಿ,
ಇಂದು ಕಳೆದು
ಮತ್ತೆ ಬರುವುದೊಂದು ನಾಳೆ ಎಂಬ ಭರವಸೆ ಸದಾ
ಬೆಳಗುತ್ತಿರಲಿ “.

– ನಯನ ಬಜಕೂಡ್ಲು

7 Responses

  1. ಪ್ರಭಾಕರ ತಾಮ್ರಗೌರಿ ಗೋಕರ್ಣ says:

    ತುಂಬಾ ಚೆಂದದ ಕವಿತೆ . ಮನ ಮುಟ್ಟುವ ಕವಿತೆ .ಅದರಲ್ಲೂ ಕವಿತೆಯ ಎರಡನೇಯ ಪ್ಯಾರಾ ತುಂಬಾ ಹಿಡಿಸಿತು.

  2. ಶೈಲಜಾ ಪುದುಕೋಳಿ says:

    ಚೆನ್ನಾಗಿದೆ

  3. ಬಿ.ಆರ್.ನಾಗರತ್ನ says:

    ಖಂಡಿತ ಮೇಡಂ ಭರವಸೆಯೇ ಬಾಳಿನ ಬೆಳಕು .ಆಶಾದಯದತ್ತ ಹೊರಟಿರುವ ಕವನ.ಅಭಿನಂದನೆಗಳು.

  4. ಶಂಕರಿ ಶರ್ಮ, ಪುತ್ತೂರು says:

    ಭರವಸೆಯ ಬೆಳಕು ತುಂಬಿದ ಸುಂದರ ಕವನ..ಧನ್ಯವಾದಗಳು ನಯನ ಮೇಡಂ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: