ಸಂಕಲನ

Spread the love
Share Button

ನಾನು
ಭೂಮಿಯ ಬಿಟ್ಟು
ಹೋಗುವ ಮುನ್ನ
ನಿನಗಾಗಿ
ಬಿಟ್ಟು ಹೋಗುವೆ
ಈ ಪ್ರೇಮದ ಸಂಕಲನ,

ಉಳಿಸಿ ಹೋಗಿರುವೆ
ಅದರಲ್ಲಿ ನನ್ನ ಗುರುತು
ನೀಡಲೇನು ಇಲ್ಲ
ನಿನಗಾಗಿ ನನ್ನಲ್ಲಿ
ಇದರ ಹೊರತು,

ಬದುಕಲಿ ಭಾಗವಾಗದಿದ್ದರು
ಪುಸ್ತಕವಾಗಿ ಜಾಗ ಪಡೆಯುವೆ
ನಿನ್ನ ಮನೆಯಲ್ಲಿ,,,
ನಿನ್ನ ಮನದಲ್ಲಿ,,,,,
ನಾನಿದ್ದರು
ನಾನಿಲ್ಲದಿದ್ದರೂ,,,,,,,

-ವಿದ್ಯಾ ವೆಂಕಟೇಶ್

8 Responses

 1. ನಯನ ಬಜಕೂಡ್ಲು says:

  ಚೆನ್ನಾಗಿದೆ ಕವನ

 2. ಬಿ.ಆರ್.ನಾಗರತ್ನ says:

  ಸೂಕ್ಷ್ಮ ಆಲೋಚನೆಗೆ ನಮ್ಮನ್ನು ಕೊಂಡೊಯ್ಯುತ್ತದೆ ನಿಮ್ಮ ಈ ಕವನ ಸೋದರಿ ವಿದ್ಯಾ ಅಭಿನಂದನೆಗಳು.

 3. Padma Anand says:

  ಒಂದು ಪುಸ್ತಕದ ಸ್ಥಾನಮಾನವನ್ನು ಚೆನ್ನಾಗಿ ಗುರುತಿಸಿದ್ದೀರಿ.. ಅಭಿನಂದನೆಗಳು ನಿಮಗೆ.

 4. ಶಂಕರಿ ಶರ್ಮ says:

  ಜೀವನದಲ್ಲಿ ಪುಸ್ತಕದ ಸ್ಥಾನವನ್ನು ಕವನದಲ್ಲಿ ಬಹಳ ಸೂಕ್ಷ್ಮವಾಗಿ ತಿಳಿಯಪಡಿಸಿದ ರೀತಿ ಸೊಗಸಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: