ಹುಲ್ಲು

Share Button

ಹುಲ್ಲು ಹಾಸಿನಲಿ ಸ್ವಚ್ಛಂದ ಸುಳಿಯುವ ಪತಂಗ
ಹೂಕುಂಡಗಳ ಕಣ್ಣಕರೆಯನ್ನು ಕಡೆಗಣಿಸಿ
ಯಾವಯಾವದೊ ಗುಂಗಿನಲಿ ಮತ್ತೇರಿ ಮೆರೆಯುತಿತ್ತು
ಅದರ ಹಾಸವಿಲಾಸ ವಿಭ್ರಮದ ಪರಿಗೆ
ಮುಸಿಮುಸಿ ನಗುತಿತ್ತು ಹುಲ್ಲುಹಾಸು |1|

ಯಾವಜನ್ಮದ ಕರೆಯೊ ಎಸಳುಹುಲ್ಲಿನ ಕಿವಿನಿಮಿರಿ
ಜನ್ಮಾಂತರದ ಭೋಗದ ಕರೆಯ ಬಿಸುಟು
ಹಲವುಹಂಬಲದ ಕಳೆಯನೆ ಕಳೆದು
ಊರ್ಧ್ವಮುಖನಾಗಿ ನೆಲವನೆ ಮರೆತು
ಕಾ ಕಾ ಕಾ ಕಾದಿದೆ ಹೇ ಹೇ ಹೇ ಹೇಗೆ |2|

ಹುಲು ಹುಲ್ಲು ಎಂದು ನೀ ಹೀಗಳೆದೆಯಲ್ಲ
ಸುಡು ಪಾರೆಯಲಿ ಹೀಗೆ ಸುಡುಸುಡು
ತಡಕಾಡಬೇಕಿತ್ತೆ ನಿನಗೆ, ಎಸಳು ಹುಲ್ಲಿನ
ಸರಳ ನೇವರಿಕೆ ಬೇಕಿತ್ತೆ ಅಂತು ಕೊನೆಗೆ |3|

-ಡಾ.ಮಹೇಶ್ವರಿ. ಯು

4 Responses

  1. ನಯನ ಬಜಕೂಡ್ಲು says:

    ನೈಸ್

  2. ಶಂಕರಿ ಶರ್ಮ, ಪುತ್ತೂರು says:

    ಹುಲ್ಲು ಮತ್ತು ಪತಂಗದ ಸಂಬಂಧದ ಭಾವ ಬಂಧ ಎಳೆ ಎಳೆಯಾಗಿ ಮೂಡಿದೆ…ಕವಿತೆಯಲ್ಲಿ

  3. Padma Anand says:

    ಸುಂದರ ಕವನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: