ಜರ್ಮನಿಯ ತರಕಾರಿ ಅಂಗಡಿಯಲ್ಲಿ – ಅಟಿಚೋಕ್’

Spread the love
Share Button

ಕಾರ್ಯನಿಮಿತ್ತ ಜರ್ಮನಿಯ ಮ್ಯೂನಿಕ್ ನಗರದಲ್ಲಿರುವ ನಮ್ಮ ಸಂಸ್ಥೆಯ ಕೇಂದ್ರ ಕಛೇರಿಗೆ ಹೋಗಿದ್ದೆ. ನಾನು ಅಲ್ಲಿ ಇದ್ದ ಮೂರೂ  ದಿನಗಳಲ್ಲೂ, ಆಯಾಯ ದಿನದ ಅಫೀಸಿನ  ಕಾರ್ಯಕ್ರಮಗಳು ಮುಗಿದ ನಂತರ ಊರಲ್ಲಿ ಸುತ್ತಾಡಲು ಸ್ವಲ್ಪ ಸಮಯ ಸಿಗುತಿತ್ತು.  ನಾನು ಹೋಗಿದ್ದ ಸಮಯದಲ್ಲಿ ಅಲ್ಲಿ ಚಳಿಗಾಲ ಕಳೆದು ವಸಂತ ಕಾಲ ಶುರುವಾಗುತ್ತಿತ್ತು. ಎಲೆ ಉದುರಿಸಿಕೊಂಡ ಮರಗಿಡಗಳು  ಇನ್ನು ಕೆಲವು ದಿನಗಳಲ್ಲಿ ಚಿಗುರುವಂತೆ ಕಾಣಿಸುತಿದ್ದುವು. ಸಂಜೆ ಸುಮಾರು 12-13 ಡಿಗ್ರಿ ಉಷ್ಣತೆ ಇದ್ದಿರಬಹುದು, 7.30  ಗಂಟೆಯಾದರೂ, ಇನ್ನೂ ಸೂರ್ಯನ ಬೆಳಕಿತ್ತು.

ಮ್ಯೂನಿಕ್ ಸಿಟಿಯ ರಸ್ತೆಯೊಂದರಲ್ಲಿ ನಡೆಯುತಿದ್ದಾಗ ತರಕಾರಿ ಅಂಗಡಿಯೊಂದರಲ್ಲಿ ಬುಟ್ಟಿಯಲ್ಲಿ ಜೊಡಿಸಿಟ್ಟಿದ್ದ, ಹೂವಿನಂತೆ ಕಾಣುವ ತರಕಾರಿ ಗಮನ ಸೆಳೆಯಿತು. ಸಾಮಾನ್ಯವಾಗಿ ಹೂವು ತರಕಾರಿಗಳಲ್ಲಿ ಕ್ಯಾಬೇಜ್, ಕಾಲಿಫ್ಲವರ್, ಬ್ರೊಕೋಲಿ ಗೊತ್ತು. ಸಾಂಪ್ರದಾಯಿಕ ಅಡುಗೆಗೆ ಬಳಸುವ ಹಿತ್ತಲಿನ  ನುಗ್ಗೆ ಹೂ, ಬಾಳೆ ಹೂ, ಕುಂಬಳಕಾಯಿ ಹೂ ಇತ್ಯಾದಿಗಳೂ ಗೊತ್ತು.ಇವುಗಳಲ್ಲಿ ಹಲವು ಬಣ್ಣದವುಗಳು ಹಾಗು ವಿವಿಧ ಗಾತ್ರ ದವುಗಳನ್ನು ನೋಡಿದ್ದೆ. ಆದರೆ ಗುಲಾಬಿ ಹೂವಿನಂತೆ ಕಾಣುವ, ತುಸು ಒರಟಾದ ಈ ತರಕಾರಿ ಏನೆಂದು ಗೊತ್ತಾಗಲಿಲ್ಲ.

artichokes-tender
ಅಂಗಡಿಯಾತನನ್ನು ಇದೇನೆಂದು ಇಂಗ್ಲಿಷ್ ನಲ್ಲಿ ಕೇಳಿದೆ. ಆತನಿಗೆ   ಇಂಗ್ಲಿಷ್ ನಲ್ಲಿ ಮಾತನಾಡಲು ಕಷ್ಟವಾಗುತಿತ್ತು. ನನಗೆ ಜರ್ಮನ್ ಭಾಷೆಯ ಕೆಲವು ವ್ಯಾವಹಾರಿಕ  ಪದಗಳು ಮಾತ್ರ ಗೊತ್ತು.  ಒಟ್ಟಿನಲ್ಲಿ ಆತ  ಹೇಳಿದುದರಲ್ಲಿ ನನಗೆ ಅರ್ಥವಾದದ್ದು ಇಷ್ಟು:
ಇದು ‘ಅಟಿಚೋಕ್‘ ಎಂಬ  ತರಕಾರಿ. ಹಸಿ  ಸಲಾಡಿನಂತೆಯೂ ಬಳಸಬಹುದು, ಒಲಿವ್ ಎಣ್ಣೆಯ ಜತೆ ಸೇರಿಸಿ ಹುರಿದು ತಿನ್ನಬಹುದು.  ಅಥವಾ ಬೇಯಿಸಿ ತಿನ್ನಬಹುದು. ಬೆಂದಾಗ  ಹೂವಿನ ದಳಗಳ ಹೊರಭಾಗ ಗಟ್ಟಿಯಾಗುತ್ತದೆ. ಬೆಂದ ಅಟಿಚೋಕ್ ಅನ್ನು ಮೂಳೆ ತಿನ್ನುವಂತೆ ಸಾಸ್ ನಲ್ಲಿ ಅದ್ದಿ  ತಿನ್ನಬಹುದು ಎಂದು ಅಭಿನಯಿಸಿ ತಿಳಿಸಿದ.  ಸಸ್ಯಾಹಾರಿಗಳು ಇದನ್ನು ‘ನುಗ್ಗೆಕಾಯಿ ದಂಟು ತಿಂದಂತೆ’ ಎಂದು ಹೋಲಿಕೆ ಕೊಡಬಹುದು!
.
– ಹೇಮಮಾಲಾ.ಬಿ
.

1 Response

 1. pushpalatha mudalamane says:

  ಇದು Globe Artichoke ಎಂಬ ತರಕಾರಿ !
  ಸೂರ್ಯಕಾಂತಿ ಜಾತಿಗೆ ಸೇರಿದ Cynara cardunculus var. scolymus ಎಂಬ ಹೆಸರು !
  Asteraceae ಕುಟುಂಬಕ್ಕೆ ಸೇರಿದ್ದು !
  ಈ ಗಿಡದ ಎಳೆ ಹೂಗುಚ್ಚವೇ ಅರ್ಟಿಚೋಕ್ !
  ನಡುವೆ ಮೊಗ್ಗು ಗಳಿದ್ದು ಅವನ್ನು ಹಸುರಾದ ಎಲೆಗಳು ( Involucral Bracts )ಮುಚ್ಚಿರುತ್ತವೆ !
  ಎಳೆಯ ಅರ್ಟಿಚೋಕ್ ಹಾಗೆ ಅಥವಾ ಬೇಯಿಸಿ ತಿನ್ನಬಹುದು ! ಬೇಯಿಸಿದಾಗ ಎಲ್ಲ ಎಲೆಗಳನ್ನು ಬಿಡಿಸಿ white sauce ಅಥವಾ ಬೆಣ್ಣೆ ಜೊತೆ ತಿಂದ ಮೇಲೆ ನಡುವೆ ಮೊಗ್ಗುಗಳಿರುವ ಭಾಗವನ್ನು ಚೋಕ್ ಎನ್ನುತ್ತಾರೆ ! ಇದನ್ನು ತಿನ್ನುವುದಿಲ್ಲ !

Leave a Reply to pushpalatha mudalamane Cancel reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: