ಸ್ನೇಹ

Share Button

ಸ್ನೇಹವೆಂದರೆ
ಎಂದೂ ಜೊತೆಗೇ
ಇರಬೇಕಾದ
ಸಂಬಂಧವೇನಲ್ಲ
ಎಂದಿಗೂ ಮರೆಯದ
ಮನದಲುಳಿವ
ಅನುಬಂಧ

ಕಷ್ಟಸುಖಗಳಲಿ
ಜೊತೆಯೇನು ಬೇಕಿಲ್ಲ
ಜೊತೆಯಲಿರುವಾಗ
ಮಾತನಾಡೆ ಮೈಮನ
ಹಗುರವಾಗುವುದಲ್ಲ

ಸ್ನೇಹದಲ್ಲಿ
ಪ್ರತಿದಿನ ನೆನೆಯುವ
ಪ್ರಮೇಯವೇನಿಲ್ಲ
ನಿಜಸ್ನೇಹದಲಿ
ಮರೆಯುವ ಮಾತೇ ಇಲ್ಲ

ಸ್ನೇಹಕ್ಕೆ ಸಿರಿತನ
ಬಡತನ ಬೇಕಿಲ್ಲ
ಸ್ನೇಹಸಿರಿಗಿಂತ
ಹೆಚ್ಚಿನದಾವುದೂ ಇಲ್ಲ

ಇತಿಮಿತಿ ಎಂಬುದು
ಸ್ನೇಹದಲ್ಲೇನಿಲ್ಲ
ವಿಶಾಲವಾದ ಸ್ನೇಹ
ಇದಕ್ಕೆ ಎಲ್ಲೆಯೆಂಬುದಿಲ್ಲ

ನಟೇಶ

4 Responses

  1. ಹೌದು.. ಸ್ನೇಹದ ಬಗ್ಗೆ ..ಕವನದ ಮೂಲಕ ಪಡಿಮೂಡಿಸಿರುವ…ಅಭಿಪ್ರಾಯ.. ಸತ್ಯಸ್ತ ಸತ್ಯ ..ಹಾಗೇ ಸ್ನೇಹ ನಮ್ಮ ಬದುಕಿನ ಆಯ್ಕೆಮಾಡಿಕೊಳ್ಳಲು..ಇರುವ..ಸ್ವತಂತ್ರ.. ಭಾಗ..ಸಾರ್..ಧನ್ಯವಾದಗಳು.

  2. . ಶಂಕರಿ ಶರ್ಮ says:

    ಸ್ನೇಹವೆಂದು ಬೆಲೆ ಕಟ್ಟಲಾಗದ ಅನರ್ಘ್ಯ ರತ್ನ… ಪಡೆದವರು ಭಾಗ್ಯವಂತರು! ಕವನ ಚೆನ್ನಾಗಿದೆ.

  3. ಸ್ನೇಹದ ಸಿಂಚನವನ್ನು ಸವಿ ಸವಿಯಾಗಿ ಉಣಬಡಿಸಿರುವ ಪರಿ ಅದ್ಭುತ

  4. ನಯನ ಬಜಕೂಡ್ಲು says:

    ಬಹಳ ಸುಂದರವಾಗಿದೆ ಕವಿತೆ

Leave a Reply to . ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: