ದಿವ್ಯ ದೀಪಾವಳಿ

Share Button

ಗಝಲ್

ದಿವ್ಯ ದೀಪಾವಳಿಯ ಸುಂದರ ದೀಪಗಳು ಪ್ರಜ್ವಲಿಸಲಿ
ಭವ್ಯ ದೈವಿಕತೆಯ ಮಂದಾರ ಕಾಂತಿಯನು ಪ್ರವಹಿಸಲಿ

ನಿತ್ಯದ ಕತ್ತಲೆ ಸರಿಸಿ ಬೆಳಕಿನೆಡೆಗೆ ಕರೆಸು ದೇವನೇ
ಸತ್ಯದ ಪ್ರಣತಿ ಎಲ್ಲೆಡೆ ಜ್ಞಾನಜ್ಯೋತಿಯ ಪ್ರಸರಿಸಲಿ

ಸುತ್ತು ಕವಿದಿದೆ ತಮೋ ರಜ ಗುಣಗಳ ಕಾವಳ
ಮುತ್ತಿ ಅವುಗಳ ದಮನಿಸುತ ಸಾತ್ವಿಕತೆ ಪ್ರಚೋದಿಸಲಿ

ಜಗದ ಆಡುಂಬೊಲದಿ ಅರಿಷಡ್ವರ್ಗಗಳದೆ ಮೇಲುಗೈ ಏಕೆ
ಮನದ ಕೋಟೆಯಲಿ ಸಜ್ಜನತೆ ಪ್ರಕಾಶವು ಪ್ರವೇಶಿಸಲಿ

ಸುಜಿಯ ಜೀವನದಿ ಸತ್ಸಂಗ ಸಹವಾಸ ಸದಾ ದೊರೆಯುತಿರಲಿ
ವಿಜಯ ಪತಾಕೆಯು ವೈಭವದಿ ಹಾರಾಡುತ ಪ್ರಕಾಶಿಸಲಿ

ಸುಜಾತಾ ರವೀಶ್

6 Responses

  1. ಉತ್ತಮ.. ಸಂದೇಶ. ಹೊತ್ತ.. ಗಝಲ್…ವಂದನೆಗಳು… ಮೇಡಂ.

  2. Padma Anand says:

    ದೀಪಾವಳಿಯ ವರ್ಣನೆ ಭವ್ಯವಾಗಿದೆ, ದಿವ್ಯವಾಗಿದೆ. ಚಂದದ ಗಝಲ್. ಅಭಿನಂದನೆಗಳು.

    • Anonymous says:

      ಮೆಚ್ಚುಗೆಯ ನುಡಿಗಳಿಗೆ ಧನ್ಯೋಸ್ಮಿ ಮೇಡಂ

      ಸುಜಾತಾ ರವೀಶ್

  3. ಮೆಚ್ಚುಗೆಯ ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು ಮೇಡಮ್

    ಸುಜಾತಾ ರವೀಶ್

  4. ಬಾಗೇಪಲ್ಲಿ ಕೃಷ ಮೂರ್ತಿ says:

    ಸರಳ ಸುಂದರ

  5. ಶಂಕರಿ ಶರ್ಮ says:

    ಬೆಳಕಿನ ಹಬ್ಬಕ್ಕೆ ಸುಂದರ ಗಜಲ್

Leave a Reply to Anonymous Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: