ಪರಿವರ್ತನೆ
by
ಕು.ಸ.ಮಧುಸೂದನ್ ನಾಯರ್, ku.sa.madhusudan@gmail.com
·
July 30, 2014

‘
ರಾಜಾ ಹರಿಶ್ವಂದ್ರ
ಸತ್ಯ ಹರಿಶ್ವಂದ್ರನಾದದ್ದು
ಯೂ(ಖೂ)ನಿವರ್ಸಿಟಿಗಳು
ಕೊಟ್ಟ ಡಾಕ್ಟರೇಟುಗಳಿಂದಲ್ಲ!
ರಾಜ್ಯವನ್ನು
ಮಗನನ್ನು
ಕೊನೆಗೆ ಹೆಂಡತಿಯನ್ನೂ
ಕಳೆದುಕೊಂಡ ಮೇಲೆಯೇ!
ಹಾಗೇನೆ ಗಾಂಧಿ
ಮಹಾತ್ಮನಾದದ್ದು
ತನ್ನ ಮೈ ಮೇಲಿನ ಅನಗತ್ಯ ಬಟ್ಟೆಯನ್ನು
ಕಿತ್ತು ಹಾಕಿದ ಮೇಲೇನೇ!
– ಕು.ಸ.ಮಧುಸೂದನ್ ನಾಯರ್