ಸೋರಲಿಲ್ಲ ನುಡಿಸಿರಿಯ ಮಾಳಿಗಿ…

Share Button

 

Hema trek Aug2014

ಹೇಮಮಾಲಾ.ಬಿ

 

ಅಂದು 14 ನವೆಂಬರ್ 2014 . ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ಆವರಣದಲ್ಲಿ ಕಿಕ್ಕಿರಿದ ಜನಸ್ತೋಮವು 11 ನೆಯ  ನುಡಿಸಿರಿಯ ಸಾಹಿತ್ಯಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಣ್ತುಂಬಿಸಿಕೊಳ್ಳುತ್ತಾ,  ಆಲಿಸುತ್ತಾ ವಿವಿಧ ಸಭಾಂಗಣಗಳಲ್ಲಿ ಆಸೀನರಾಗಿತ್ತು. ಇನ್ನು ಕೆಲವರು ಅಲ್ಲಲ್ಲಿ ಓಡಾಡುತ್ತಾ ಸಂಭ್ರಮಿಸುತ್ತಿದ್ದರು.

ಪಶ್ಚಿಮ ಕರಾವಳಿಯಲ್ಲಿ ನವೆಂಬರ್ ತಿಂಗಳಲ್ಲಿ ಸಾಮಾನ್ಯವಾಗಿ ಧಾರಾಕಾರವಾಗಿ ಮಳೆ ಬರುವುದಿಲ್ಲ. ಆದರೆ ಬಹಳ ಉತ್ತಮವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಆಳ್ವಾಸ್ ಸಂಸ್ಥೆಯ ನುಡಿಸಿರಿಯ ರೂವಾರಿಗಳ ತುರ್ತುಸಂದರ್ಭ ನಿರ್ವಹಣಾ ಸಾಮರ್ಥ್ಯವನ್ನು  (Emergency Preparedness and  Contingency Plan) ನೋಡಿಯೇ ಬಿಡೋಣ ಎಂದು ಖುದ್ದಾಗಿ   ವರುಣನೇ ಲಿಟ್ಮಸ್ ಪರೀಕ್ಷೆಯ ಸವಾಲೆಸೆದಂತೆ, ಸಂಜೆ ಸುಮಾರು ನಾಲ್ಕು ಗಂಟೆಯ ವೇಳೆಗೆ ಮೋಡ ಕವಿದ ವಾತಾವರಣ ಸೃಷ್ಟಿಯಾಯಿತು. ಗಡಚಿಕ್ಕುವ ಗುಡುಗು-ಸಿಡಿಲಿನ ಅಬ್ಬರದೊಂದಿಗೆ ನಿರಂತರ 2 ಗಂಟೆಗಳ ಕಾಲ ಮುಸಲಧಾರೆಯಾಗಿ ಮಳೆ ಸುರಿಯಿತು.

ನುಡಿಸಿರಿಗೆ ಆಗಮಿಸಿದ್ದ ಉತ್ತರ ಕರ್ನಾಟಕದವರೊಬ್ಬರು ಪಡುವಣ ತೀರದ ಕನ್ನಡ ನಾಡಿನ ಕಾರ್ಗಾಲದ ವೈಭವವನ್ನು ಕಂಡು ದಂಗಾಗಿ “ಏನ್ ಮಳಿ ಇದ…… ತಲಿ ಮ್ಯಾಲ ಬಿಂದಿಗ್ಯಾಗ ಸುರಿದಂಗೆ…..” ಎಂದು ಉದ್ಗರಿಸಿದರು.

coastal rainlightning

 

ಇಷ್ಟು ಮಳೆ ಸುರಿಯುತ್ತಿರುವಾಗ ‘ರತ್ನಾಕರ ವರ್ಣಿ ವೇದಿಕೆ’ಯಲ್ಲಿ ಚಪ್ಪರದಿಂದ ಮಳೆನೀರು ಸುರಿದು ಸಭಾಂಗಣವಿಡೀ ನೀರು ತುಂಬಿರಬಹುದು, ಜನರು ಮಳೆಯಲ್ಲಿ ಅತ್ತಿಂದಿತ್ತ ಓಡಾಡಿ  ಚಪ್ಪಲಿಯಲ್ಲಿ ಮಣ್ಣು ಸೇರಿ ಕೊಚ್ಚೆ ನಿರ್ಮಾಣವಾಗಿರಬಹುದು ……ಎಂದು ನಿರೀಕ್ಷಿಸಿದ್ದ ನನಗೆ,  ಅಲ್ಲಿ ಎಲ್ಲೂ ನೀರು ಸೋರದೆ, ಸಭಾಂಗಣವೂ ಸ್ವಚ್ಛವಾಗಿದ್ದು  ನಿಗದಿತ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯುತ್ತಿರುವುದು ನೋಡಿ ಆಶ್ವರ್ಯವಾಯಿತು! ಎಂತಹಾ ವ್ಯವಸ್ಥೆ, ಅಚ್ಚುಕಟ್ಟು, ಸ್ವಚ್ಛತೆ, ಪೂರ್ವತಯಾರಿ ಎಂದರೆ ಹೀಗಿರಬೇಕು!

ಇದು ಒಂದು ಉದಾಹರಣೆಯಷ್ಟೆ. ಆಳ್ವಾಸ್ ನುಡಿಸಿರಿಯಲ್ಲಿ ಪ್ರತಿಹೆಜ್ಜೆಯಲ್ಲೂ ಉತ್ತಮವಾದ ತಂಡಸ್ಪೂರ್ತಿ, ಸಂಯೋಜನೆ ಮತ್ತು ಕಾರ್ಯಕ್ಷಮತೆ ಎದ್ದು ಕಾಣಿಸುತ್ತಿತ್ತು.

Ratnakara Varni vedike

 

ಎಷ್ಟೇ ಕಾಳಜಿ ವಹಿಸಿ ವ್ಯವಸ್ಥಿತವಾಗಿ ಆಯೋಜಿಸಿದರೂ ಸಣ್ಣ-ಪುಟ್ಟ ಅನಾನುಕೂಲತೆಗಳು ಉಂಟಾಗುವ ಸಂಭವನೀಯತೆ ಇರುತ್ತದೆ. ಹಾಗಾಗಿ, ನನ್ನ ಪ್ರಕಾರ ನುಡಿಸಿರಿಯ ಲೋಪದೋಷಗಳನ್ನು ಎತ್ತಿ ಹಿಡಿಯುವವರು ‘ಪರರಲ್ಲಿ ಕುಂದನಲ್ಲದೆ ಒಳಿತ ಕಾಣೆ’ ಎಂದು ಅರ್ಧದಷ್ಟು ನೀರು ತುಂಬಿರುವ ಲೋಟವನ್ನು  Half Glass Empty – ಎಂದು ಸಾಧಿಸುವವರು!

ಜೈ ಆಳ್ವಾಸ್ ನುಡಿಸಿರಿ!

 

– ಹೇಮಮಾಲಾ.ಬಿ

 

 

12 Responses

  1. Jagadeesh Acharya says:

    Nice

  2. Hanumanth Gowda says:

    ಸೋರಲಿಲ್ಲ ನುಡಿಸಿರಿ ಮಾಳಿಗೆಯಲ್ಲಿ ..
    ಸುಂದರವಾದ ಶೀರ್ಷಿಕೆ ..

  3. Anant Deshpande says:

    ಈ ಬಾರಿ ನನಗೆ ಅವಕಾಶ ತಪ್ಪಿತು. ಶಿಸ್ತು ಬದ್ದಿನ ಕಾರ್ಯಕ್ರಮ ತಪ್ಪಿದಾಗ ಬೇಸರವಾಗುತ್ತೆ.

  4. krishnaveni.kidoor says:

    ನಮ್ಮಲ್ಲಿನ ಅಭ್ಯಾಸ ಏನೆಂದರೆ ಮೊದಲು ಹುಡುಕುವುದು ಎಲ್ಲಿದೆ ನೆಗೆಟಿವ್ ಅಂತ . ಅದಕ್ಕೆ ಅವಕಾಶ ಆಗದ ಹಾಗೆ ಇದ್ದ ವ್ಯವಸ್ತೆಗೆ ಮೆಚ್ಚಬೇಕು.ಬರಹ ಚೆನ್ನಾಗಿದೆ .”ಏನ್ ಮಳಿ…………………..ತಲೀ ಮ್ಯಾಲ ಬಿಂದಿಗ್ಯಾಗ ಸುರಿದಂಗ “———–ಈ ನುಡಿಯೆ ಮಳೆಯ ಅಬ್ಬರ ಹ್ಯಾಗಿತ್ತು ಅಂತ ಹೇಳುತ್ತದೆ.

  5. Ranganath Nadgir says:

    ನಮಗಂತೂ ನುಡಿಸಿರಿಯ ಯಾವುದೇ ಕಾರ್ಯಕ್ರಮಗಳಲ್ಲಿ ತಪ್ಪುಗಳು ಕಾಣಿಸಲಿಲ್ಲ
    ನುಡಿಸಿರಿಯ ಸಲುವಾಗಿ ನನ್ನದು ಮೂಡಬಿದ್ರೆಗೆ ಆರನೆಯ ಸಲ ಭೆಟ್ಟಿ ,
    ೧) ಮಧ್ಯರಾತ್ರಿಯಲ್ಲಿ ಬಂದಾಗ ಸಹಿತ ಎಲ್ಲ ಜನರಿಗೂ ನಗೆ ಮುಖದ ಸ್ವಾಗತ ಹಾಗು
    ವಸತಿ ಗ್ರಹಗಳ ವ್ಯವಸ್ಥೆ , ೨) ಗಾದಿ ಸಹಿತ ಪಲ್ಲಂಗಗಳು.೩)ಸುವ್ಯವಸ್ಥಿತ್ ಸ್ವಚ್ಚ ಬಾತ್ ರೂಂ ಗಳು
    ೪ ) ಹೊಟ್ಟೆತುಂಬ ನಾಷ್ಟ, ರುಚಿ ರುಚಿ ವಿವಿಧ ಖಾದ್ಯಗಳು ೫) ಮಧ್ಯಾನ್ಹ ಹಾಗು ರಾತ್ರಿ ಸುಗ್ರಾಸ ಭೋಜನ
    ೬) ವಿದ್ವತ್ಪೂರ್ಣ ಭಾಷಣಗಳು, ೭) ಕವಿ ಸಮಯ ೮) ಇಂಪಾದ ಉದಯ ರಾಗಗಳು ೯) ಲಯಬದ್ಧವಾದ್
    ಡೊಳ್ಳಿನ ಸಪ್ಪಳ ,ಕಾಳಿಯ ನಿನಾದ ,ಇತ್ತ್ಯಾದಿ ,೯ ) ಜೂನಿಯರ್ ರಾಜಕುಮಾರ ,ಅಶೋಕ ಬಸ್ತಿಯವರ ಗುಂಪಿನ
    ಮನೋರಂಜನೆ ,ವಿವಿಧ ನೃತ್ಯ ಪ್ರಾಕಾರಗಳು ೧೦) ಆಳ್ವ ಕಾಲೇಜ್ ವಿದ್ಯಾರ್ಥಿಗಳು ನಡೆಸಿ ಕೊಟ್ಟ ಸುಸಜ್ಜಿತ
    ಕಾರ್ಯಕ್ರಮಗಳು, ಯಕ್ಷಗಾನದ ವೈಭವ ನೋಡಲು ಸಹಸ್ರ ಕಣ್ಣುಗಳಿಗೂ ಅಸಾಧ್ಯ ಒಟ್ಟಿನಲ್ಲಿ ಸದರೀ ಸಮಾರಂಭವು
    ಪುರುಷರಿಗೆ ಮಾವನ ಮನೆಯ ದೀಪಾವಳಿ ಅಳಿಯತನದ , ಹಾಗೂ ಸ್ತ್ರೀಯರಿಗೆ ನಾಗ ಪಂಚಮಿಯ ತವರು ಮನೆಯ
    ನೆನಪು ಮರುಕಳಿಸುವಂತೆ ಅನುಭವ ನೀಡುತ್ತದೆ . ಶ್ರೀ ಮೋಹನ ಆಳ್ವ ರವರ ಸಮಯ ಪರಿಪಾಲನೆಗೆ ಶಿರ ಬಾಗಿ
    ನಮಿಸುತ್ತಾ ಮುಂದಿನ ವರ್ಷದ ಕನ್ನಡ ಹಬ್ಬಕ್ಕೆ ರಾಮನ ಆಗಮನಕ್ಕಾಗಿ ಶಬರಿಯ ತೆರದಿ ಕಾಯೋಣ..

    ರಂಗಣ್ಣ ನಾಡಗೇರ್ , ಶ್ರೀನಗರ , ಹುಬ್ಬಳ್ಳಿ

    :

    • Hema says:

      ಶ್ರೀ ರಂಗಣ್ಣ ನಾಡಗೇರ್ ಅವರೇ, ತಮ್ಮ ವಿವರವಾದ ಪೂರಕ ಪ್ರತಿಕ್ರಿಯೆ ತುಂಬಾ ಇಷ್ಟವಾಯಿತು. ‘ಆರನೆಯ ಸಲ’ ಮೂಡಬಿದ್ರಿಗೆ ಬಂದಿರುವುದಾದರೆ, ನುಡಿಸಿರಿಯ ಬಗ್ಗೆ ನಿಮ್ಮ ಅಭಿಮಾನಕ್ಕೆ ಪ್ರಮಾಣಪತ್ರ ದೊರೆತಂತಾಯಿತು!

  6. savithrisbhat says:

    ಈ ಲೇಖನದ ಶೀರ್ಷಿಕೆ ಹಾಗೂ ಲೇಖನ ತುಂಬಾ ಇಷ್ಟವಾಯಿತು

  7. Ghouse says:

    Very nice article. After reading this, I feel like visiting it next time.

  8. krishnaveni.kidoor says:

    ಸುರಗಿ ಆರಂಭಗೊಂಡ ದಿನಗಳಿಂದಲೇ ಓದುತ್ತಿದ್ದೇನೆ .ನುಡಿಸಿರಿ ವಿಶೇಷ ಸಂಚಿಕೆ ಸೊಗಸಾಗಿ ಮೂಡಿಬಂದಿದೆ .ಅಭಿನಂದನೆಗಳು .

  9. ಬಹಳ ಪ್ರಶಂಸನೀಯ ಹೆಮಮಾಲಾ ನಿಮ್ಮನ್ನು ಮೆಚಿಕೊಂದೆದ್ದೇನೆ ನಿಮ್ಮ ಆಕ್ಟಿವಿಟಿ ಇಂಟೆರೆಸ್ಟಿಂಗ್ ಇ ಕೇಪ್ ಆನ್ ಮೈ ಆಕ್ಟಿವಿಟಿ ಆನ್ ಟ್ವಿಟ್ಟರ್,ಫೇಸ್ಬುಕ್ ಅಂಡ್ ಇ ಹವೆ ಮೈ ಓನ್ ಬ್ಲಾಗ್……ತಾಣಕ್ ಯು ಹೇಮಾ ಲೇಟ ಅಸ್ ಕೇಪ್ ಇನ್ ಟಚ್.

    • Hema says:

      ಶ್ರೀ ಸೂರ್ಯನಾರಾಯಣ ಬೇಗೂರು ಅವರೇ, ಧನ್ಯವಾದಗಳು. ತಮಗೆ ಬರೆಯುವ ಹವ್ಯಾಸವಿದೆ ಎಂದು ತಿಳಿದು ಸಂತೋಷವಾಯಿತು. ನಮ್ಮ ಜಾಲತಾಣಕ್ಕೂ ಲೇಖನಗಳನ್ನು ಕಳುಹಿಸಿ. ಸ್ವಾಗತ.

Leave a Reply to Hema Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: