ಥ್ಯಾಂಕ್ಯೂ ಗ್ಯಾಂಗ್ ಮೆನ್!

Spread the love
Share Button

 

Gangman

ಇದುವರೆಗೆ ಹಲವು ಬಾರಿ ರೈಲ್ ನಲ್ಲಿ ಪ್ರಯಾಣಿಸಿದ್ದೇನೆ. ಆದರೆ ಎಂದೂ ರೈಲ್ ಹಳಿ ಮೇಲೆ ನಡೆದಿದ್ದಿಲ್ಲ. ರೈಲ್ ಹಳಿ ಮೇಲೆ ನಡೆಯುವುದು  ಅಪರಾಧ ಕೂಡ ಹೌದು. ಆದರೆ ಕೆಲವು ನಿಗದಿತ ಟ್ರ್ಯಾಕ್ ಗಳಲ್ಲಿ ಪ್ರವಾಸೋದ್ಯಮ ದೃಷ್ಟಿಯಿಂದ ಪೂರ್ವಾನುಮತಿಯೊಂದಿಗೆ ನಡೆಯುವುದಕ್ಕೆ ಅವಕಾಶವಿದೆ. ಗೋವಾದ ‘ಕಾಸಲ್ ರೋಕ್’ ನಿಂದ ‘ದೂಧ್ ಸಾಗರ್’  ವರೆಗಿನ 14 ಕಿ. ಮಿ ದೂರದ ರೈಲ್ ವೇ ಟ್ರ್ಯಾಕ್ ಇಂತಹ ಚಾರಣಕ್ಕೆ ಅವಕಾಶ ಒದಗಿಸುವ ತಾಣ.

ದೂಧ್ ಸಾಗರ್ ನಲ್ಲಿ ಮಾಂಡೋವಿ ನದಿಯು ಸೃಷ್ಟಿಸಿರುವ ಸೊಗಸಾದ ಜಲಪಾತವಿದೆ. ಇದನ್ನು ವೀಕ್ಷಿಸಲು ಹಲವಾರು ಪ್ರವಾಸಿಗರು ಈ ರೈಲ್ ಮಾರ್ಗದಲ್ಲಿ ಬರುತ್ತಾರೆ. 

ಹಸಿರು ಕಾಡಿನ  ಮಧ್ಯೆ ಹಾದು ಹೋಗಿರುವ ಈ ರೈಲ್ ಮಾರ್ಗದಲ್ಲಿ ಹಳಿಯುದ್ದಕ್ಕೂ ಹಲವಾರು ಸುರಂಗಗಳು ಎದುರಾಗುತ್ತವೆ. ರೈಲ್ ಹಳಿ ಮೇಲೆ ನಡೆಯುವುದು ಎಷ್ಟು ಕಷ್ಟ ಎಂದು 1-2  ಕಿ.ಮಿ. ನಡೆದಾಗ ಅರ್ಥವಾಯಿತು. ಜಲ್ಲಿ ಕಲ್ಲುಗಳ ಮೇಲೆ   ಕಾಲು ಉಳುಕದಂತೆ ಜಾಗರೂಕತೆ ವಹಿಸಬೇಕು. ಸಮಾನ ಅಂತರದಲ್ಲಿರುವ ರೈಲ್ ಪಟ್ಟಿಯ ಮೇಲೆ ನಡೆಯುವಾಗ ಒಂದು ಲಯ/ಗತಿ  ಬೇಕು. ಜತೆಗೆ ರೈಲ್ ಪಟ್ಟಿಯಲ್ಲಿ ಇರುವ ಕೊಳಕು ಪಾದಕ್ಕೆ ಹತ್ತದಂತೆ ಗಮನ ಹರಿಸುತ್ತಲೇ ಇರಬೇಕು!

gangmen

 

ಹೀಗೆ ನಡೆಯುತ್ತಾ ಮುಂದೆ ಹೋದಂತೆ ಕೆಲವು  ಟ್ರೈನ್ ಗಳು ಎದುರಾದುವು.  ಹಳಿಯಲ್ಲಿ ಅಲ್ಲಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ಯಾಂಗ್ ಮೆನ್ ಕಾಣಸಿಕ್ಕಿದರು. ಕೆಲವರನ್ನು ಮಾತಿಗೆಳೆದಾಗ, ಅವರ ಕೆಲಸ ತುಂಬಾ ತ್ರಾಸದಾಯಕವಾದದ್ದು ಎಂದು ಅನಿಸಿತು. ಅವರು ಬಿಸಿಲಿರಲಿ, ಮಳೆಯಿರಲಿ, ಸಾಮಾನ್ಯವಾಗಿ ನಿರ್ಜನವಾದ ರೈಲ್ ಹಳಿಯ ಮೇಲೆ, ಭಾರವಾದ ಸುತ್ತಿಗೆಯಂತಹ ಉಪಕರಣ ಹೊತ್ತುಕೊಂಡು, 8 ಕಿ. ಮೀ ದೂರ ಹಳಿಯನ್ನು ಪರಿಶೀಲಿಸುತ್ತಾ ನಡೆಯಬೇಕು. ಏನಾದರೂ ಲೋಪ-ದೋಷ ವಿದ್ದರೆ ತತ್ಕ್ಷಣ ಸರಿಪಡಿಸಬೇಕು.

ಚುಕ್-ಪುಕ್ ರೈಲ್ ನಲ್ಲಿ ಆರಾಮವಾಗಿ ಪ್ರಯಾಣಿಸುವ ನಮ್ಮ ಸುರಕ್ಷತೆಯ ಹಿಂದೆ  ಈ ಬಡ ಗ್ಯಾಂಗ್ ಮೆನ್ ಗಳ ಕಠಿಣ ಶ್ರಮವಿರುತ್ತದೆಯೆಂದು ಈಗ ತಾನೇ ಅರಿವಾಯಿತು. ಅವರಿಗೆಲ್ಲಾ ತುಂಬಾ ಥ್ಯಾಂಕ್ಸ್!

 

7 Responses

 1. Prasad Sms says:

  A thanks from me too I traveled up to Delhi n down up till kanyakumari…on various occasion’s…

 2. Kiran Bolanthakody says:

  ಲೇಖನ ಚೆನ್ನಾಗಿ ಮೂಡಿ ಬ೦ದಿದೆ.ಚಾರಣಕ್ಕೆ, ಪ್ರವಾಸಕ್ಕೆ ಹೋಗಲು ಉದಾಸೀನದ ನನ್ನ೦ತವನಿಗೆ ನಿರಾಯಾಸವಾಗಿ ಪುಕ್ಕಟೆ ಪ್ರವಾಸ ! ಧನ್ಯವಾದಗಳು ಹೇಮಾ .

 3. ಬಸವರಾಜ ಜೋತಿಬಾ ಜಗತಾಪ says:

  ಲೇಖನ ಚಿಕ್ಕದಾದರೂ ವಿಷಯದಲ್ಲಿ ಅರ್ಥವಿದೆ.ಗಂಭೀರವಾದ ಚಿಂತನೆಇದೆ.

 4. Pushpalatha Mudalamane says:

  ಅತ್ಯಂತ ಆಸಕ್ತಿ ದಾಯಕ ಪ್ರವಾಸ ಕಥನ ! ನಾವೂ ಅಕ್ಟೋಬರ್ ನಲ್ಲಿ ಪ್ರವಾಸ ಹೋಗಬೇಕಾಗಿತ್ತು ! ಚಾರಣ ಅಲ್ಲ !:( ಈ ವರ್ಷ ಖಂಡಿತ ಹೋಗುತ್ತೇವೆ !

 5. Vijayanand Gurudev says:

  I had 4 kumbala kai dose and 2 uddina dose. Still wondering did I eat so much?

 6. Abhilash sharma says:

  ಗ್ಯಾಂಗ್ ಮೆನ್ ಗಳ ಕೆಲಸ ತುಂಬಾ ನಿಸ್ವಾರ್ಥಪೂರ್ಣವಾಗಿದೆ. ಇಲ್ಲಿ ಕಾಸರಗೋಡಿನಲ್ಲಿ ಒಂದು ದೊಡ್ಡ ಅಫಘಾತವನ್ನು ತಪ್ಪಿಸಿದ್ದೇ ಇವರು. ಹಳಿಯಲ್ಲಿ ನಡೆದುಕೊಂಡು ಪರಿಶೀಲಿಸುತ್ತಾ ಇದ್ದಾಗ ಒಂದು ಕಡೆ ಮಣ್ಣು ಜರಿದು ಬಿದ್ದುದನ್ನು ಕಂಡು ಕೂಡಲೇ ಸಂಬಂಧಪಟ್ಟವರಿಗೆ ತಿಳಿಸಿ ಅಲ್ಲಿಂದಾಗಿ ಬರಬೇಕಾಗಿದ್ದ ರೈಲುಗಳನ್ನು ನಿಲ್ಲಿಸಿದರು.

  Big salute to you…

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: