ಜ್ಯೋತಿರ್ಲಿಂಗ
ವಿಮರ್ಶೆ ಇಲ್ಲ
ನನ್ನ ಮಾತುಗಳಿಗೆ
ಅವು ನನಗಾಗಿ
ನಾನು ಹೇಳಿಕೊಂಡವುಗಳು.
ಸಮರ್ಥನೆ ಬೇಕೆಂದಿಲ್ಲ್ಲ
ನನ್ನ ಮಾತುಗಳಿಗೆ
ಅವು ಯಾರ ಬೆಂಬಲ ಬಯಸಿ
ಬಂದವುಗಳಲ್ಲ.
ಇದ್ದದ್ದು ಇದ್ದಂತೆ ಹೇಳುವುದು
ನನ್ನ ಮಾತುಗಳು.
ನನ್ನವರೂ ಒಮ್ಮೊಮ್ಮೆ ಸಿಟ್ಟಾಗಿ
ಸಿಡಿದು ಹೋಗುತ್ತಾರೆ.
ನನಗೆ ಇಷ್ಟ ಕಷ್ಟ
ನನ್ನ ಮಾತುಗಳು.
ಅವು ನಂಬಿಕೆ ಮೂಡಿಸಿ
ಭರವಸೆಯ ಆಟವಾಡುತ್ತದೆ.
ಮಾತು ಜ್ಯೋತಿರ್ಲಿಂಗ
ನನ್ನ ಪಾಲಿಗೆ.
ಸಿರಿ ತಂದಿಲ್ಲ ಅವು ನನಗೆ
ನನ್ನುಸಿರಿಗೆ ಜೀವ ತುಂಬಿದೆ.
– ಉಮೇಶ ಮುಂಡಳ್ಳಿ, ಭಟ್ಕಳ
ಕವನ ಚೆನ್ನಾಗಿದೆ ‘ ಸಿರಿ ತಂದಿಲ್ಲ ಅವು ನನಗೆ ನನ್ನುಸಿರಿಗೆ ಜೀವ ತುಂಬಿದೆ’ ಈ ಸಾಲು ಬಹಳ ಅರ್ಥಪೂರ್ಣ.
ಕವನ ಪ್ರಕಟಿಸಿ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ ತಮಗೆ ವಂದನೆಗಳು.
ಅರ್ಥಪೂರ್ಣ.. ಸುಂದರ. .! 🙂
ಪ್ರೀತಿಯಿಂದ ಕವನವನ್ನು ಓದಿ ಒಳ್ಳೆಯ ಮಾತುಗಳನ್ನಾಡಿ ಬರೆಯುವ ಹುಮ್ಮಸ್ಸು ಮೂಡಿಸಿದ್ದೀರಿ ವಂದನೆಗಳು
ಮನದಾಳದ ಅನಿಸಿಕೆಗೆ ಮೂತ ರೂಪ ಕೊಟ್ಟಿದ್ದಿರಿ. ಚೆನ್ನಾಗಿದೆ. ಬರೆಯುತ್ತೀರಿ
ನಿಮ್ಮ ಅನಿಸಿಕೆಯಂತೆ ಮುಂದುವರೆಯುತೇನೆ