ಬದುಕು ಒಂದು ಚಿಂತನ
‘ಬದುಕು ಎಷ್ಟು ಸುಂದರ’ ಎಂದರೆ, ಎಲ್ಲರೂ ಒಪ್ಪುವ ಮಾತಲ್ಲ, ಎಲ್ಲರ ಬದುಕು ಒಂದೇ ರೀತಿ ಇರುವುದಿಲ್ಲ. ಬದುಕು ಎಂದರೆ ಏನು ಎಂದು ಕೇಳಿದರೆ ತಕ್ಷಣ ಉತ್ತರಿಸಲು ಆಗುವುದಿಲ್ಲ. ಬದುಕು ಒಂದು ಸುಂದರ ಜೀವನ ಚಿತ್ರದಂತೆ , ಬದುಕು ಹರಿಯುವ ನದಿಯಂತೆ
ನಮ್ಮ ಜೀವನದಲ್ಲಿ ನಾವು ಅಂದುಕೊಂಡಂತೆ ಆಗುವುದಿಲ್ಲ , ಅದಕ್ಕೆ ಸತತ ಪ್ರಯತ್ನ ಬೇಕು. ಕೆಲವೊಮ್ಮೆ ಪ್ರಯತ್ನಿಸಿದರೂ ಕಾರ್ಯಗತವಾಗುವುದಿಲ್ಲ. ಫಲಾಪೇಕ್ಷೆ ಇಲ್ಲದೆ ಮರಳಿ ಯತ್ನವ ಮಾಡುವುದೆ ಮಾನವನಿಗೆ ಇರುವ ಒಂದೇ ಮಾರ್ಗ. ಮನುಷ್ಯನಿಗೆ ಅಸಾಧ್ಯವಾದುದೇನು ಇಲ್ಲ. ಅವನು ಅಗಾಧ ಶಕ್ತಿಯನ್ನು ಹೊಂದಿದ್ದಾನೆ. ಏನನ್ನಾದರೂ ಸಾಧಿಸುವೆನೆಂಬ ಮನೋಬಲ ಮತ್ತು ಛಲವಿದ್ದಲ್ಲಿ ಯಶಸ್ಸು ಅಸಾಧ್ಯವಾದುದಲ್ಲ. ಸೋಲಿಗೆ ಹೆದರದೆ ಉತ್ಸಾಹದಿಂದ ಮುಂದುವರಿದರೆ ಗೆಲುವು ಖಂಡಿತ ನಮ್ಮದಾಗುತ್ತದೆ. ಪ್ರತಿ ಸೋಲು ಒಂದು ಪಾಠ ಕಲಿಸುತ್ತದೆ. ಮಗುವಿನ ಉತ್ಸಾಹದೊಂದಿಗೆ ಮರಳಿ ಯತ್ನವ ಮಾಡಿದರೆ ಎಲ್ಲವೂ ಸಾಧ್ಯ
ಸಾಧನೆಗಳಷ್ಟೆ ಮುಖ್ಯವಲ್ಲ. ಒಳ್ಳೆಯ ಭಾವನೆ ತುಂಬಿದ ಸಹೃದಯಿಯಾಗಿರಬೇಕು. ನಮ್ಮ ಹೃದಯದಲ್ಲಿ ಒಳ್ಳೆ ಭಾವನೆಗಳನ್ನು ಬಿತ್ತಿ ಬೆಳೆಯಬೇಎಕು. ಸ್ವಾರ್ಥಪರರಾಗಿರದೆ ಬೇರೆಯವರಿಗೆ ಒಳ್ಳೆಯದನ್ನೇ ಆಶಿಸಬೇಕು. ಕಷ್ಟದಲ್ಲಿರುವರಿಗೆ ಸಹಾಯ ಮಾಡುವುದು, ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಡುವುದು ಸಹ ಬದುಕಿಗೆ ಸಂತೋಷ ನೀಡುವುದು. ನಮ್ಮ ಮನಸ್ಸಿಗೆ ನೋವು ಕೊಡುವ ಅಹಿತಕರ ಘಟನೆಗಳನ್ನು, ಸಂಗತಿಗಳನ್ನೂ ಮರೆತರೆ ಒಳ್ಳೆಯದು.
ಸುಂದರ ಸವಿ ನೆನಪುಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಮನಸ್ಸಿಗೆ ಸಂತೋಷ ನೀಡುವುದು. ಪುನರ್ಜನ್ಮ ಇದೆಯೂ,ಇಲ್ಲವೊ ನಂಬಿಕೆ ಇಲ್ಲ. ಇರುವ ಜೀವನವನ್ನು ವ್ಯರ್ಥ ಮಾಡದೆ ಉತ್ಸಾಹದಿಂದ ಕಳೆಯೋಣ, ಜೀವನದ ಸವಿಯನ್ನು ಮಕರಂದದಂತೆ ಸವಿಯುತ್ತ, ಹಕ್ಕಿಯಂತೆ ಹಾಡುತ್ತ, ನದಿಯಂತೆ ಸ್ವಚ್ಛಂದವಾಗಿ ಹರಿಯುತ್ತ ಎಲ್ಲರಿಗೂ ಒಳ್ಳೆಯದನ್ನು ಹಾರೈಸುತ್ತ ಮುಂದಿನ ಜನಾಂಗದ ಏಳಿಗೆಗೆ, ನಮ್ಮ ಭಾರತದ ಉಜ್ವಲ ಭವಿಷ್ಯಕ್ಕಾಗಿ ದುಡಿಯುತ್ತಾ, ಜೀವನವನ್ನು ಸವಿಯೋಣ.
– ನೀಲಮ್ಮ ಮೈಸೂರು.
ಉತ್ತಮ ಬರಹ.
dhanyavadagalu
ಚೆನ್ನಾಗಿದೆ