ಚಟದ ಚಾಳಿ

Spread the love
Share Button
Nagesha MN

ಮೈನಂನಾಗೇಶ

ಚಪಲದಿಂದ ಹುಟ್ಟಿ ಚಟ
ಚಟಪಟನೆ ನಾಗಾಲೋಟ
ನೋಡುನೋಡುತೆ ಅದ್ಭುತ
ಅಭಿವ್ಯಕ್ತಿ ವ್ಯಕ್ತ ತಾನಾಗುತ ||

ಚಟಪಟನೆ ಚಿನಕುರುಳಿ
ಹುರಿದ ಹುರಿಗಾಳ ಚಾಳಿ
ಮಾತ ಧಾಳಿ ಜತೆ ಗೂಳಿ
ಚಟವಾಗಿ ಕೆಳದಿ ಧೂಳಿ ||

ಸಿಗರೇಟು ಕಾಫಿ ಸಮನೆ
ಸೇದೊ ಕುಡಿತ ಸುಮ್ಮನೆ
ವಿರಾಮ ಚಿತ್ತ ಪಿಶಾಚಿ ಮನೆ
ಒಳಿತು ಕೆಡುಕಿನೊಟ್ಟು ಕಾರ್ಖಾನೆ ||

ತಾಂಬೂಲ ತಂಬಾಕು ಹಂಬಲ
ನಾಸಿಕ ಪುಡಿ ಕುಡಿತದ ಜಾಲ
ಏನಾದರೊಂದು ಹೆಮ್ಮಾರಿ ದುರಿ
ವಿವೇಚಿಸದಿರೆ ಸರಿತಪ್ಪ ದಾರಿ ||

ಇರಬೇಕು ಚಟ ಮನಕಮ್ಮಟ
ಓದರಿವ ಕಲಿವ ಹೊಸತಿನಾಟ
ಕೆರಳಿಸುತುತ್ಸಾಹ ಉಲ್ಲಾಸ ದಿಟ್ಟ
ಬಿಡದೆ ತಲುಪಿಸುತ ಉನ್ನತ ಘಟ್ಟ ||

Habits
 
ಮೈನಂನಾಗೇಶ
.

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: