Author: Sunitha Kushalanagara

10

ಮಳೆಯೆಂದರೇ………

Share Button

ಮತ್ತೆ ನೆನಪುಗಳ ಹೊತ್ತ ಮಳೆಯ ರಭಸ ಹೆಚ್ಚುತ್ತಿದೆ. ಮಳೆ ಎಂದರೆ ನೆನಪೆ! ನೆನಪೆಂದರೆ ಸೊಬಗು..! ಮನದ ಕುಕ್ಕೆಯೊಳಗೆ ಬಚ್ಚಿಟ್ಟಿದ್ದ ನೆನಪುಗಳೆಲ್ಲವೂ ಅಪ್ಪಣೆ ಇಲ್ಲದೆ ಮನದ ಪರದೆಯೆಡೆಗೆ ಮಳೆಯೊಡನೆ ಹರಿದು ತೇವಗೊಳಿಸುತ್ತದೆ. ತುಂತುರು ತುಸು ಸಮಾಧಾನ ಕೊಟ್ಟರೆ, ಗುಡುಗು ಹೆದರಿಸಿ,ಮಿಂಚು ಬೆಚ್ಚಿ ಬೀಳಿಸುತ್ತದೆ. ಈ ಮಳೆ ನೆನಪನ್ನು ಹರವಿ...

12

ಪುಸ್ತಕ ಪರಿಚಯ : ‘ಪರಿಮಳಗಳ ಮಾಯೆ’, ಲೇಖಕಿ : ಸಮತಾ.ಆರ್

Share Button

”ನಾ ಬರೆ ತಲೆಹರಟೆಗಳನ್ನಷ್ಟೇ ಬರೆಯುವುದು” ಎಂದು ಹಾಸ್ಯ ಮಾಡುತ್ತಲೇ ತಮ್ಮ ಬರೆಹಗಳ ಮೂಲಕ ನಮ್ಮೆಲ್ಲರಿಗೂ ಓದುವ ಸುಖ ಕೊಟ್ಟ ಸಮತಾ ಪ್ರೌಢಶಾಲಾ ಶಿಕ್ಷಕಿಯಾಗಿ ವಿಜ್ಞಾನ ಗಣಿತಗಳ ಜೊತೆಗೆ‌ ಒಡನಾಡಿಕೊಂಡೆ ಸಾಹಿತ್ಯವನ್ನೂ ಉಸಿರಾಡುವವರು. ವಿಶೇಷ ವಸ್ತುಗಳನ್ನು ತಮ್ಮ ಬರೆಹಕ್ಕೆ ಆಯ್ದುಕೊಳ್ಳುವ ಇವರು ಪ್ರಬಂಧ,ಲಹರಿ,ಲೇಖನಗಳ ಮೂಲಕ ತಮ್ಮ ಸುತ್ತಲಿನ ಜಗತ್ತನ್ನು...

13

ಬೇಲಿ

Share Button

. ಬೇಲಿ ಹಾಕಲೇಬೇಕೆಂಬುದು ಬಹುದಿನದ ಕನಸು ಹಾಗೆ,ಹೀಗೆ ಬೇಕಾದ ಸರಕು ಜೋಡಣೆ, ಭರದ ಸಿದ್ಧತೆ ನಮ್ಮದೇ ಭದ್ರತೆಯ ಕೋಟೆಗೆ ಅದೆಂತ ಉತ್ಸಾಹ ಸಂಧಿ,ಗೊಂಧಿಗಳಲೂ ಹಾವು,ಜಂತೂ ನುಸುಳದಂತೆ ಗಿಡ ನೆಟ್ಟು ಬೇಲಿಯಲೂ ಹೂಗಳ ನಿರೀಕ್ಷೆ. ಕನಸಿನಂತೆ ಮೊಗ್ಗು ಬಿರಿದೇ ಇಲ್ಲವೆಂದಲ್ಲ ಅವು ಆರಂಭ ಶೂರತ್ವ ಗಿಡವಿರಬೇಕು ಅರಳಿ ಉದುರಿದ...

12

ಒಣಕಾಷ್ಠದಲ್ಲರಳಿದ ಮೆಹಕ್‌ನ ಗೀತಾ..

Share Button

ಮನುಷ್ಯನೆಂದ ಮೇಲೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಆಸಕ್ತಿಗಳು ಸಹಜ. ಆ ಆಸಕ್ತಿಗಳನ್ನು ವೃತ್ತಿಯನ್ನಾಗಿಯೋ, ಪ್ರವೃತ್ತಿಯನ್ನಾಗಿಯೋ ತೊಡಗಿಸಿಕೊಳ್ಳುವುದು ಮುಖ್ಯ. ಹವ್ಯಾಸಗಳು ಇರುವ ವ್ಯಕ್ತಿ ನಿಜವಾದ ಅರ್ಥದಲ್ಲಿ ಮನುಷ್ಯನಾಗುತ್ತಾನೆ. ತಮ್ಮ ಬಿಡುವಿಲ್ಲದ ಕೆಲಸಗಳ ನಡುವೆ ನಿರ್ಜೀವ ಮರದ ಕೊರಡುಗಳು ಒಲೆ ಉರಿಯಾಗುವುದನ್ನು ತಪ್ಪಿಸಿ ಅದರೊಳಗಿನಿಂದ ವಿಶಿಷ್ಠ ರೀತಿಯ ಕಲಾಕೃತಿಯನ್ನು ಹೊರ...

7

ವಸುಧೇಂದ್ರರ “ತೇಜೋ ತುಂಗಭದ್ರಾ”.

Share Button

ಕೊರೋನ ಕೊಟ್ಟ ಗೃಹವಾಸದ ಓದಿನ ಶುಭ ಹೊತ್ತಿನಲಿ ಪ್ರಾರಂಭವಾದ ತೇಜೋ ತುಂಗಭದ್ರಾ ಯಾತ್ರೆ ನಿಜಕ್ಕೂ ಕಣ ಕಣವನ್ನೂ ಮುಟ್ಟಿ ಮೂಕವಿಸ್ಮಿತಳಾಗುವಂತೆ ಮಾಡಿದೆ. ತೇಜೋ ತುಂಗಭದ್ರಾ 1492-1518ರ ವರೆಗಿನ ಲಿಸ್ಬನ್, ವಿಜಯನಗರ, ಗೋವಾದ ಇತಿಹಾಸವನ್ನು ಸಾರಿ ಹೇಳುವ ಮೈನವಿರೇಳಿಸುವ ಕಾದಂಬರಿ.ಇದರಲ್ಲಿ ಬೇರೆ ಬೇರೆ ದೇಶವಾಸಿಗಳು ಪಾತ್ರಧಾರಿಗಳಾಗಿ ಅವರ ಜೀವನಕ್ರಮ,...

8

ಜೇನು ಹಲಸು

Share Button

ಗಾಢ ನಿದ್ದೆಯಿಂದ ಎಚ್ಛರಗೊಂಡ ಸುಮಿತ್ರ ಮಗಳನ್ನು ತಬ್ಬಿ ಮಲಗಲು ಅವಳ ಮೇಲೆ ಕೈ ಇಟ್ಟಳು. ಅಲ್ಲಿ ಮಗಳಿರಲಿಲ್ಲ. ಬಚ್ಚಲು ಮನೆಗೆ ಹೋಗಿರಬಹುದೆಂದು ಕಾದು ಕಾಣದೆ ಮೆಲ್ಲನೆ ಎದ್ದಳು. ಮನೆಯ ಒಳಗೂ ಹೊರಗೂ ಹುಡುಕಿದಳು. ಹೌದು ಆ ಜೇನು ಹಲಸಿನ ಕೆಳಗೆ ನಿಂತಿರುವುದು ಅವಳೆ ! ಜೊತೆಗೆ ನೌಫಲ್...

7

ಧಗೆ

Share Button

ಅದು ನಾಲ್ಕನೆಯ ಪಂಚಾಯಿತಿ ಬಾವಿ ನೀರಿತ್ತೆನ್ನುವ ಕುರುಹೆಲ್ಲಿ ? ಹುಡುಕುವ ಕಣ್ಣೆವೆಗಳಿಗೆ ಯುದ್ಧ ಮುಂದೆ ಸಾಗಿ ಪ್ರಯೋಜನವಾದರೂ ಏನು ಬಿಸಿಲ ಧಗೆಗೆ ರಿವರ್ಸ್ ಗೇರ್ ಹಾಕಿದ ಭಯದ ಬೆವರ ಹನಿ ಕಣ್ಣುಗಳಿಗೆ ಬೀಗ ಜಡಿದು ಕಂಡಿದ್ದ ಜಲರಾಶಿ ಮತ್ತೆ ಕಂಡೆ ಕಣ್ಣ ಹನಿ, ಬೆವರ ಹನಿ ಜೊತೆಗೂಡಿ...

1

ಆರಿದ್ರ ಆವರಿಸಿದಾಗಲೆಲ್ಲಾ…

Share Button

  ಉಂಡಾಡಿಗುಂಡನಂತೆ ತಿರುಗಿಕೊಂಡು ಬೆಳ್ಳಂಬೆಳಗ್ಗೆ ಚಳಿ ಕಾಯುತ್ತಾ ಒಲೆ ಮುಂದೆ ಕುಳಿತರೆ ಮುಗಿಯಿತು, ಒಂದು ಕಡ್ಡಿಯನ್ನೂ ಎತ್ತಿಡುವ ಹಾಗಿಲ್ಲ. ಆ ತೋಡು ಕರೆಯಿಂದ ಕೆಸದೆಲೆ ತರಲು ಎಷ್ಟು ಸಲ ಹೇಳಿದರೂ ಏನು ಪ್ರಯೋಜನ? ಬೇಯಿಸಿದರೆ ಪೂರ್ತಿ ಒಬ್ಬನಿಗೆ ಬೇಕು. ಅಜ್ಜಿಯ ನಿಯತ ತಪ್ಪದೆ ಅಜ್ಜನ ಮೇಲಿನ ಅಸಹನೆಗಳೆಲ್ಲಾ...

0

ಹೊಳೆಯ ಹಾಡು

Share Button

  ಹರಿಯುತಲರಿಯುತಾ ನದಿಯ ಓಟ ಕತ್ತಲಾದರೂ ಬಿಡುವಿಲ್ಲದ ನಾಟ್ಯ ಇಕ್ಕೆಲಗಳಲ್ಲೂ ಕಪ್ಪೆಗಳ ಮೃದಂಗವಾಯನ ಜಲ ಜೀವರಾಶಿಗಳ ಕರತಾಡನ . . . ಹೊಳೆಯ ಗೆಳೆತನ ಇಳೆಯೊಡನೆ ಹೊಳೆಯ ಸೆಳೆತವು ಮಳೆಯೊಡನೆ ಸುಗಂಧ ಗಾಳಿಯು ಚಾಮರ ಬೀಸಲು ಕಾವಲಿಗೆಂದು ಚಂದ್ರನು ಮೀಸಲು ಜೋಡಿಹಕ್ಕಿಗಳ ಪಿಸುಮಾತುಗಳು ಕನಸ್ಸ ಕಾಣುವ ಜೀವಚರಗಳು...

1

ಸಂಜೆಯೊಡನೆ ಪ್ರೇಮವೇಕೆ ?

Share Button

ಮನದೊಳ ಮನ ಕೇಳುತ್ತಿದೆಯೆನ್ನ ಸಾಯಂ ಸಂಧ್ಯೆಯೊಡನೆ ಪ್ರೇಮವೇಕೆ ತಂಗಾಳಿ ಛೇಡಿಸಿ ಪೀಡಿಸುತ್ತಿದೆಯೆನ್ನ ಮುಸ್ಸಂಜೆ ವೇಳೆಯಲಿ ಉಲ್ಲಾಸವೇಕೆ ಮೇಘಗಳ ಮರೆಯಿಂದ ಮೇಘವೊಂದಿಣುಕಿ ಸರಸ ಸಂದೇಶಗಳ ರವಾನಿಸುತ್ತಿದೆಯಲ್ಲಾ ಪ್ರತಿಕ್ಷಣ ಪ್ರತಿದಿನ ಮುದ ಪಡೆಯೆಂದು ಪ್ರೇಮಾಭಿಷೇಕ ಎರೆಯುತ್ತಿದೆಯಲ್ಲಾ ಮನದೊಳಗೆ ನದಿಯೊಂದು ಹರಿಯುತಾ ಕೇಳುತ್ತಿವೆ ಬೊಗಸೆ ನೀರಿನೊಡನೆ ಚೆಲ್ಲಾಟವೇಕೆ ಮನೆಯೊಳಗೆ ದೀಪಗಳು ಉರಿಯುತಾ...

Follow

Get every new post on this blog delivered to your Inbox.

Join other followers: