Author: Amubhavajeevi
ಅಪ್ಪನೆಂಬ ಅಪೂರ್ವ ಅಧ್ಯಾಯ
ಅಪ್ಪನೆಂಬ ಅದ್ಭುತವ ಏನೆಂದು ಹಾಡಲಿ ಅದು ಎಂದೂ ಮರೆಯದ ಪಾತ್ರ ನನ್ನ ಬಾಳಲಿ ಅಮ್ಮನ ಕರುಳ ಬಂಧ ಅಪ್ಪನ ನೆರಳ ಅನುಬಂಧ ಆ ಎರಡು ತೀರದ ನಡುವೆ ನಾ ಹರಿವ ನೀರ ನಿನಾದ ಅಪ್ಪ ಎನ್ನಲು ಏನೋ ಬಲ ಅಪ್ಪನಿಂದಲೇ ಬದುಕೋ ಛಲ ಅಪ್ಪ ಎಂಬ ನಂಬಿಕೆಯ...
ಮಾನವೀಯತೆ ಸತ್ತಿತ್ತು
ಎಳೆಯ ಬಾಲೆಯ ಮೇಲೆ ದುರುಳ ಕಾಮುಕನೆರಗಿ ಅತ್ಯಾಚಾರಗೈಯುವಾಗ ಮಾನವೀಯತೆ ಸತ್ತಿತ್ತು ತನ್ನನ್ನು ನಂಬಿ ಬಂದ ತನ್ನ ಮನೆ ಬೆಳಗುವವಳನ್ನು ವರದಕ್ಷಿಣೆಗಾಗಿ ಹಿಂಸಿಸುವಾಗ ಮಾನವೀಯತೆ ಸತ್ತಿತ್ತು ಮುದ್ದಿನಿಂದ ಸಲುಹಿದ ಹೆತ್ತವರ ಮಗ ನಡುರಾತ್ರಿಯಲ್ಲಿ ನಡುಬೀದಿಗೆ ತಳ್ಳುವಾಗ ಮಾನವೀಯತೆ ಸತ್ತಿತ್ತು ಹಸಿವಿನ ಜನ ತತ್ತರಿಸಿರಲು ಉಳ್ಳವರು ಪ್ರತಿಷ್ಟೆಗಾಗಿ ಅನ್ನವನು ತೊಟ್ಟಿಗೆಸೆವಾಗ...
ನನ್ನ ನಿನ್ನ ಜೀವಭಾವ ಒಂದಾಗಲಿ
ಮಾತು ಮಥಿಸಿ ಮೌನ ಗತಿಸಿ ನನ್ನ ನಿನ್ನ ನಡುವೆ ಹಮ್ಮು ಬೆಳೆದಿದೆ ಪ್ರೀತಿಯ ಹೂವ ಕಿತ್ತು ನೆಮ್ಮದಿಯ ದಳ ಬತ್ತಿ ಹೋಗಿದೆ ಮಾತು ಮಾತಿಗೂ ಇಲ್ಲಿ ಬೇರೊಂದು ಅರ್ಥ ಬರುತಿದೆ ತಾಳ್ಮೆ ಎಂಬುದು ಕಳೆದುಹೋಗಿ ಕೋಪ ತಾಂಡವವಾಡಿದೆ ಕಣ್ಣು ನೋಡಲು ಹವಣಿಸಿ ಕಿವಿಯು ಕೇಳಲು ಕಾತರಿಸಿ ಬಾಹುಬಂಧದಲಿ...
ಹೊರಡಬೇಕಿದೆ ಈಗಲೇ
ಹೊರಡಬೇಕಿದೆ ನಾನೀಗಲೇ ಕರೆ ಬಂದಿದೆ ಅಲ್ಲಿಂದಲೇ ಹೋಗದೇ ವಿಧಿ ಇಲ್ಲ ಇಲ್ಲಿರಲು ಬಿಡುತಿಲ್ಲ ಯಮನ ದೂತರು ಪಾಶ ಎಸೆದಿಹರು ಕುಣಿಕೆ ಹಿಂಡಿದೆ ಕೊರಳ ಉಸಿರು ವಿಲವಿಲ ಒದ್ದಾಡಿದೆ ಈ ದೇಹ ಭವಬಂಧನ ಕಳಚಿಕೊಳ್ಳುವ ದಾಹ ಯಾರಿತ್ತರೋ ಅಲ್ಲಿ ದೂರು ತೀರ್ಪಲ್ಲಿದೆ ನನ್ನ ಹೆಸರು ನನ್ನ ವಾದಕಿಲ್ಲ ಅವಕಾಶ...
ಮತ್ತೆ ಬಂತು ರಾಜ್ಯೋತ್ಸವ
ಮತ್ತೆ ಬಂತು ರಾಜ್ಯೋತ್ಸವ ಬಡಿದೆಬ್ಬಿಸಿ ಕನ್ನಡ ಅಭಿಮಾನವ ಉದಯವಾದ ಕರುನಾಡ ಅಭ್ಯುದಯಕಾಗಿ ಪಣತೊಡುವ ಪ್ರತಿ ಕನ್ನಡಿಗನ ಎದೆಯಲ್ಲಿ ಜಾಗೃತಗೊಳಿಸೋ ಉತ್ಸವ ನಾಡು ನುಡಿ ನೆಲ ಜಲಗಳ ರಕ್ಷಣೆಗೆ ಅಣಿಗೊಳಿಸುವ ಮಲಗಿದ ಸ್ವಾಭಿಮಾನವ ಎಚ್ಚರಿಸುವ ಮಹೋತ್ಸವ ತಾನಿರುವ ಜಾಗದಲ್ಲೇ ತನ್ನ ತಾಯ್ನಾಡಿಗೆ ನಮಿಸುವ ಕನ್ನಡ ಕುಲವನ್ನೆಲ್ಲಾ ಸೇರಿಸಿ ಸಂಭ್ರಮಿಸೋ...
ಪ್ರೀತಿಯ ಹೆಗ್ಗುರುತು
ನಾನಿರುವ ಹೆಗ್ಗುರುತು ನಿನ್ನ ಈ ಪ್ರೀತಿ ನನ್ನ ಸಾಧನೆಯ ಪ್ರತೀಕ ನೀನೇ ತಾನೇ ಓ ಸಂಗಾತಿ ನನ್ನೆಲ್ಲಾ ನೋವಿಗೆ ಹೆಗಲಾದೆ ನಿನ್ನ ಮಡಿಲಲಿ ನಾ ಮಗುವಾದೆ ನನ್ನಲಿ ನೀ ಕನಸ ಬಿತ್ತಿದೆ ಅದೀಗ ಹೆಮ್ಮರವಾಗಿ ನಿಂತಿದೆ ಬದುಕ ಬೇಸರಕೆ ನೀ ಆಸರೆ ನಿನ್ನ ಒಲವ ನೆರಳಲಿ ನಾ...
ಬತ್ತಿದ ಮರದಲಿ
ಬತ್ತಿದ ಮರದಲಿ ಸತ್ತಿದೆ ಬದುಕು ಕಟ್ಟಿದ ಗೂಡಿಗೆ ಉರಿಬಿಸಿಲ ತೊಡಕು ಮಳೆಯೇ ಮಾಯವಾಗಿ ಹಸಿರು ತಾ ನಾಶವಾಗಿ ನೆರಳೇ ನರಳಾಡಿದೆ ಬದುಕೇ ಬರಡಾಗಿದೆ ಮಾನವನ ಅತಿಯಾಸೆಗೆ ಪರಿಸರ ನಾಶವಾಯ್ತು ಮುಗಿಲು ಬಂಜೆಯಾಗಿ ಅಂತರ್ಜಲ ಪಾತಾಳ ಸೇರಿತು ನಿತ್ಯವೂ ಇಲ್ಲಿ ಹೋರಾಟ ಹೇಳತೀರದು ಆ ಸಂಕಟ ಮರುಭೂಮಿಯಲಿಷ್ಟು ತಂಪಿರಬಹುದು...
ನನ್ನೆದೆಯ ಭಾವಗೀತೆ
ನೋವಿನೊಳಗೂ ಅರಳುವ ಸಂಭ್ರಮ ಅದುವೇ ನನ್ನವಳ ನಿರ್ಮಲ ಪ್ರೇಮ ಮಗುವ ಮುಗ್ದ ಮನದವಳು ನಗುವಿನಿಂದೆಲ್ಲಾ ಧಾರೆಯೆರೆವವಳು ನನ್ನೆದೆಯ ಭಾವಗೀತೆ ಅವಳು ಹಣತೆಯಾಗಿ ಮನ ಮನೆ ಬೆಳಗುವಳು ನೋವಲ್ಲಿ ನನ್ನ ಸಂತೈಸಿ ನಲಿವಲ್ಲಿ ಬೆರೆವಳು ಸಂಭ್ರಮಿಸಿ ಬದುಕುವ ಬಲು ಹಂಬಲದಾಕೆ ಅವಳೊಲವೇ ಬೆಂಬಲವದಕೆ ಎಲ್ಲವನ್ನೂ ಎದುರಿಸೋ ಗಟ್ಟಿಗಿತ್ತಿ ಸದಾ...
ಏಕೀ ಕ್ರೌರ್ಯ ?
ನಮ್ಮನ್ನೆಲ್ಲಾ ಸುಡುವ ಕ್ರೌರ್ಯ ನಿಮಗೇಕೆ ನಾವಿರುವುದೆ ನಿಮ್ಮ ಅನುಕ್ಷಣದ ಸಹಾಯಕೆ ಯಾರದೋ ದ್ವೇಷದ ದಳ್ಳುರಿಗೆ ನಮ್ಮನ್ನೇಕೆ ಆಹುತಿ ಮಾಡುವಿರಿ ನಿರ್ಜೀವದೊಳಗೊಂದು ಭಾವವಿದೆ ಜೀವವಿರುವ ನಿಮ್ಮಿಂದ ನೋವಾಗಿದೆ ನಿಮ್ಮನ್ನೆಲಾ ಹೊತ್ತು ಸಾಗೋ ರಥವು ನಾವು ನಮಗಿಂತ ಸ್ಥಿತಿಗೆ ತರಲು ನೋಯುವೆವು ನಮ್ಮದೇನಿದೆ ಇದರಲಿ ತಪ್ಪು ನಿಮ್ಮ ಆಕ್ರೋಶಕ್ಕೆ ನಾವಾಗಿಹೆವು...
ನಿಮ್ಮ ಅನಿಸಿಕೆಗಳು…