Author: Jessy PV, jessypv77@gmail.com

3

ಅಮ್ಮ ಎಂಬ ಅಭಿಮಾನ…

Share Button

“ಅಮ್ಮ” ಎಂಬ ಎರಡಕ್ಷರದಲ್ಲಿ ಅದೆಂಥಾ ಮಾಂತ್ರಕತೆಯಿದೆ! ಆ ಶಬ್ದ ಮಾತ್ರ ಉಳಿದ ಶಬ್ದಗಳಂತೆ ಅಧರದಿಂದ ಹೊರಡದೇ ಹೃದಯದಿಂದ ಹೊರಡುತ್ತದೆ. ಇದು ಅತ್ಯಂತ ಹೆಚ್ಚು ಬಾರಿ ಉಚ್ಛರಿಸಲ್ಪಡುವ ಶಬ್ದವೂ ಹೌದು. ಪುಟ್ಟ ಮಗು ಸಂಪೂರ್ಣವಾಗಿ ಅಮ್ಮನನ್ನು ಆಶ್ರಯಿಸಿರುತ್ತದೆ. ಸಂತೋಷವಾದರೂ, ದುಃಖವಾದರೂ, ಭಯವಾದರೂ, ಬಿದ್ದು ನೋವು ಮಾಡಿಕೊಂಡರೂ ಮಗುವಿನ ಬಾಯಿಂದ...

2

ಚಂದ್ರು ಆರ್ ಪಾಟೀಲರ ಕಥಾ ಸಂಕಲನ “ಬಡ್ತಿ”

Share Button

ಚಂದ್ರು ಆರ್ ಪಾಟೀಲರ “ಬಡ್ತಿ” ಕಥಾ ಸಂಕಲನ ಓದಿಯಾಯ್ತು.  ವಿಭಿನ್ನ  ಕಥಾವಸ್ತುಗಳನ್ನೊಳಗೊಂಡ ಹನ್ನೆರಡು ಕತೆಗಳು ಈ ಸಂಕಲನದಲ್ಲಿವೆ. ಮೂಢನಂಬಿಕೆಯ ಕಾರಣಕ್ಕಾಗಿ ನಡೆಯಲಿರುವ ತನ್ನ ಬಲಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ಸಂಗೀತಾ ಎಂಬ ಹುಡುಗಿಯ ಕತೆ ಹೇಳುವ “ನೆಲವೆ ಹಸಿದು ನಿಂತೊಡೆ” ಎಂಬ ಕತೆಯ ಕ್ಲೈಮ್ಯಾಕ್ಸ್ ತನಕವೂ ಅವಳ...

3

ಪುಸ್ತಕ ದಿನ…’ಒಡಲ ಕಿಚ್ಚಿನ ಹಿಲಾಲು ಹಿಡಿದು’

Share Button

ವಿಶ್ವ ಪುಸ್ತಕ ದಿನದ ದಿನ ನನ್ನ ಓದುವ ಹವ್ಯಾಸವನ್ನೊಮ್ಮೆ ನೆನೆದೆ. ಬಾಲ್ಯದಲ್ಲಿ ಓದುವ ಹುಚ್ಚು ಹಿಡಿಸಿದ್ದು ಅಪ್ಪ. ಪ್ರಾಥಮಿಕ ಶಾಲೆಯಲ್ಲಿ (ಆಗ ಅದು ಏಕೋಪಾಧ್ಯಾಯ ಶಾಲೆಯಾಗಿದ್ದರೂ) ಪುಸ್ತಕಗಳನ್ನು ಓದಲು ಕೊಡುತ್ತಿದ್ದರು. ಮತ್ತೆ ಮತ್ತೆ ನಾನೇ ಶಾಲಾ ಲೈಬ್ರೆರಿಯಿಂದ ಪುಸ್ತಕಗಳನ್ನು ಪಡೆದು ಓದಲು ಶುರು ಮಾಡಿದೆ. ಪುಸ್ತಕಗಳು ಮನುಷ್ಯನ...

4

ಜಲ ಎಂದರೆ ಬರಿ ನೀರಲ್ಲ ಅಮೂಲ್ಯ ನಿಧಿ

Share Button

“ಅಬ್ಬಬ್ಬಾ, ಏನು ಸೆಕೆ! ಕೆರೆಯೋ, ನದಿಯೋ ಇದ್ದಿದ್ದರೆ ಹಾರಿ ಬಿಡಬಹುದಿತ್ತು ಅನಿಸ್ತದೆ.” ನನ್ನ ಬಾಯಿಂದ ಹೊರಬಂದ ಈ ಮಾತುಗಳು ಸುಮ್ಮನೇ ಅಲಂಕಾರಿಕವಾಗಿ ಹೇಳಿದ್ದಲ್ಲ. ಬೇಸಿಗೆಯಲ್ಲಿ ನೀರಾಟದಲ್ಲಿ ಕಾಲ ಕಳೆಯುವ ಬಾಲ್ಯ ನನಗಿತ್ತು. ಬಾಳೆದಿಂಡನ್ನು ಹಿಡಿದು ಈಜು ಕಲಿತು,ಮೊದಮೊದಲು  ಸಾಕಷ್ಟು ನೀರು ಕುಡಿದು, ಮುಳುಗಿ ಎದ್ದು ತಕ್ಕಮಟ್ಟಿಗೆ ಈಜು...

3

ಪ್ಲೀಸ್, ನಮಗೊಂದಿಷ್ಟು ಸಮಯಕೊಡಿ!

Share Button

“ಪ್ಲೀಸ್, ನಮಗೊಂದಿಷ್ಟು ಸಮಯಕೊಡಿ!” ಹಲವು ವಿವಾಹಿತ ಮಹಿಳೆಯರ ಹೃದಯ ಈ ರೀತಿ ಆರ್ದ್ರವಾಗಿ ಬೇಡುತ್ತಿರುತ್ತದೆ. ಆ ಕೂಗು ಬಹುಶಃ ಅರಣ್ಯ ರೋದನವಾಗುವುದೇ ಹೆಚ್ಚು. ಮದುವೆಯಾಗಿ, ಮಕ್ಕಳಾದರೆ ಮಹಿಳೆಗೆ ಮತ್ತೆ ಇನ್ನೇನೂ ಬೇಡ. ತನ್ನ ಬೇಕು-ಬೇಡಗಳ ಕುರಿತು ಚಿಂತಿಸಲು ಆಕೆಗೆ ಸಮಯವಿದ್ದರೆ ತಾನೇ? ಅವಳಿಗೆ ಬೇಕಾದದ್ದು ಒಂದಿಷ್ಟು ಸಮಯ...

5

ಅಡುಗೆ ಎಂಬ ಆಟವೂ, ಕೆಲಸವೂ..

Share Button

ನನ್ನ ಅಕ್ಕ ಫೋನ್ ಮಾಡುವಾಗಲೆಲ್ಲ ಆ ದಿನ ತಾನೇನು ಅಡುಗೆ ಮಾಡಿದೆ ಎಂದು ವಿವರಿಸುತ್ತಿದ್ದಳು. ಮುಂಬಯಿಯಲ್ಲಿ ವಾಸವಿದ್ದ ಅವಳು ಸಾಮಾನ್ಯವಾಗಿ ಭಾನುವಾರ ಫೋನ್ ಮಾಡುತ್ತಿದ್ದಳು. ಆ ದಿನ ಹೆಚ್ಚಾಗಿ ಏನಾದರೂ ಸ್ಪೆಷಲ್ ಅಡುಗೆ ಇರುತ್ತಿತ್ತು. ತನಗೆ ತಿಳಿದಿದ್ದ ಚಿಕನ್ ವೆರೈಟಿಗಳ ಬದಲು ಇಂಟರ್ನೆಟ್ಟಲ್ಲಿ ಹೊಸ ರೆಸಿಪಿಗಳನ್ನು ಹುಡುಕಿ,...

3

ತೂಕದೊಂದಿಗೆ ಪ್ರಯೋಗಗಳು..

Share Button

ಇದು ಬಹುಶಃ ನನ್ನೊಬ್ಬಳ ಕತೆಯಲ್ಲ. ಬಹುತೇಕ ಹೆಣ್ಣುಮಕ್ಕಳ ವ್ಯಥೆ ( ಕತೆ) ಇದೇ. ಈ  ವ್ಯಥೆ ಭಾರ ಅಥವಾ ಶರೀರ ತೂಕಕ್ಕೆ ಸಂಬಂಧಿಸಿದ್ದು. ನನ್ನ ಬಾಲ್ಯಕಾಲದಲ್ಲಿ ಅದೂ ಇದೂ ಅಂತ ಸಿಕ್ಕಿದ್ದನ್ನೆಲ್ಲ ತಿನ್ನುತ್ತಿದ್ದೆ. ಮನೆ ವಠಾರದಲ್ಲಿ ಸಿಗುವ ಹಣ್ಣುಗಳಲ್ಲದೇ ಕಾಡಿಗೂ ಲಗ್ಗೆಯಿಟ್ಟು ಅದನ್ನೂ ಕಬಳಿಸಿ ಸ್ವಾಹಾ ಮಾಡುವ ಮಕ್ಕಳ...

4

ನೀವೂ ಕಲಿಯಿರಿ, “ವಾಟ್ಸಾಪ್ ಮನಶ್ಶಾಸ್ತ್ರ”

Share Button

“ಹೀಗೂ ಒಂದು ಮನಃಶ್ಶಾಸ್ತ್ರ ಇದೆಯೇ?ನಮಗೆ ಗೊತ್ತೇ ಇರಲಿಲ್ಲ” ಅನ್ನಬೇಡಿ. ಇಂಥದ್ದೊಂದು ಮನಶ್ಶಾಸ್ತ್ರದ ಶಾಖೆ ಇನ್ನೂ ಶುರುವಾಗಿಲ್ಲ. ಸದ್ಯದ ವಿದ್ಯಮಾನಗಳನ್ನು ಗಮನಿಸಿದಾಗ ಹೊಸ ಮನಶ್ಶಾಸ್ತ್ರ ಶಾಖೆಯಾಗಿ ಇದು ಸೇರ್ಪಡೆಯಾಗುವ ಸಾಧ್ಯತೆಯಂತೂ ದಟ್ಟವಾಗಿದೆ. ಅಂಗೈಯಲ್ಲಿರುವ ಈ ವಾಟ್ಸಾಪ್ ಬ್ರಹ್ಮಾಂಡದ ಮುಂದೆ ಯಾವ ಪ್ರಪಂಚವೂ ಲೆಕ್ಕಕ್ಕಿಲ್ಲದಂತಾಗಿದೆ. ವಾಟ್ಸಾಪ್ ನಲ್ಲಿ ಏನುಂಟು?ಏನಿಲ್ಲ? ಅದರ...

2

ಬಸ್ಸು ಬಂತು ಚುನಾವಣೆ ಬಸ್ಸು

Share Button

ಈಗ ಎಲ್ಲೆಲ್ಲೂ ಚುನಾವಣೆಯದ್ದೇ ಮಾತು.  ಚುನಾವಣೆಯೆಂದಾಗ  ಎಲ್ಲರ  ಮನಸ್ಸಲ್ಲೂ ಏನಾದರೊಂದು  ನೆನಪು  ಇಣುಕಬಹುದು.   ನಾನು ಸಣ್ಣವಳಿದ್ದಾಗ ಚುನಾವಣೆ ಬರಲೆಂದು ಹಂಬಲಿಸುತ್ತಿದ್ದೆ. ನಾನಷ್ಟೇ ಅಲ್ಲ ನನ್ನ ಒಡಹುಟ್ಟಿದವರಿಗೂ ಇದೇ ಆಸೆ ಇದ್ದಿರಬೇಕು. ಆಗ ನಮಗೆ ಚುನಾವಣೆಯ ಬಗ್ಗೆ ಸ್ಪಷ್ಟ ಕಲ್ಪನೆಯೇ ಇರಲಿಲ್ಲ.ನಾವು ವಯಸ್ಕರೂ ಆಗಿರಲಿಲ್ಲ. ಹಾಗಾಗಿ  ಮತದಾರರೂ ಆಗಿರಲಿಲ್ಲ. ಚುನಾವಣೆಯಿಂದಾಗುವ ಪರಿಣಾಮದ ಅರಿವೂ ಇರಲಿಲ್ಲ. ಚುನಾವಣೆಗಾಗಿ ನಾವು ಹಂಬಲಿಸಲು...

2

ಪ್ರೀತಿಯೆಂಬ ಮಾಯೆ‌..

Share Button

ಹೃದಯಗಳ ಕಣಿವೆಯಲ್ಲಿ ಪ್ರವಾಸ ಹೊರಟಿದ್ದೆ. ನನಗೊಂದು ಹೃದಯ ಡಿಕ್ಕಿ ಹೊಡೆಯಿತು. “ಅಬ್ಬಾ, ಯಾಕಿಷ್ಟು ಭಾರವಾಗಿದ್ದೀಯಾ?” ಹೊಡೆತದ ನೋವಿಗೆ ಕೇಳಿದೆ. “ಪ್ರೀತಿಯ ನೋವಿಗೆ ಭಾರವಾಗಿದ್ದೇನೆ.” ನಿಡುಸುಯ್ದು ಅದು ಹೇಳಿತು. ಮುಂದೆ ಹೋದಾಗ ಕಾಮನಬಿಲ್ಲಿನಂತೆ ವರ್ಣಮಯವಾಗಿ , ಚಿಟ್ಟೆಯಂತೆ ತೇಲುತ್ತಾ ಸಾಗುವ ಹೃದಯವನ್ನು ಕಂಡು ಆಶ್ಚರ್ಯದಿಂದ ಕಣ್ಣು ಬಿಟ್ಟು ನಿಂತಿದ್ದೆ....

Follow

Get every new post on this blog delivered to your Inbox.

Join other followers: