Author: K.R.S Murthy, murthy.sreekanta66@gmail.com
ಲಕ್ಷೋಪಲಕ್ಷ ಸುಡು ಸುಡುವ, ಕೊರೆ ಕೊರೆವ, ಹೊಗೆ-ಧಗೆಯ, ನರಪಿಳ್ಳೆ, ಅರೆಪಿಳ್ಳೆ, ಜಂತು ಜೀವಾಣುಗಳಿಲ್ಲದ, ನೀರು-ನಿಡಿ ಸುಳಿಗಾಳಿಗಳಿಲ್ಲದ ಭಯಂಕರ ಗ್ರಹಗಳ ಬಿಟ್ಟು ಈ ಭುವಿಯಲ್ಲಿ ಇಳಿದದ್ದು! ಕೆಂಪೊಡೆವ ಸೂರ್ಯ, ತಂಪಿಡುವ ಚಂದ್ರರು ಮೆರೆದು ಕಾಪಿಡುವ, ಹಸಿರು ಕಾನನ, ನೀಲ ಬಾನಿನ, ಹಳದಿ ಕಿತ್ತಳೆ ಕಂದು ನೇರಳೆ ಬಣ್ಣದೋಕುಳಿಯ ನೆಲೆವೀಡಿನಲ್ಲಿ...
ಆಟಕೆಂದೆ ಬಾನಿನಿಂದ ತೂಗಲೆಂದೆ ಅತ್ತ ಇತ್ತ ಇಳೆಯವರೆಗು ತೂಗಿ ಬಿಟ್ಟ ಬೆರಗು ತುಂಬಿದುಯ್ಯಾಲೆ, ನಾವೆರೂಪದುಯ್ಯಾಲೆ! . ಮಿಣಮಿಣಿಕೆಯ ಮಿರುಗು ತೋರಿ ವಾಲಿ ವಾಲಿ ವಾಲಿಸಿಡುತ ಬೀಸು-ಗಾಳಿ ಭರದಲಿಡುತ ತೇಲು ತೇಲು ಎನುತಲೆ ಮೋಹಪಾಶಕುಯ್ಯಾಲೆ! . ಕಗ್ಗ ಕಂತೆ ಹಿಡಿಕೆ ಸಹಿತ, ಅದೆಂಥ ಹಗ್ಗ, ಅದೇನು ಬಿಗಿತ! “ಶಬ್ದ,...
ಓ ಮಾತನಾಡದ ಮುದ್ದಿನ ಗಿಣಿಯೇ, ನೋಡು… ಅದೆಷ್ಟು ಮೆಟ್ಟಿಲುಗಳಿವೆ ಆಕಾಶಕ್ಕೆ! ಏರಬೇಕಲ್ಲವೆ ನೀನು ಆ ಅಂಬರದ ಬೆರಗಿಗೆ? ಜೋಕೆ! ಉಸಿರು ಕಟ್ಟಿಸುವ ಗಾಳಿ, ಸಂದು, ಸಡಿಲಗಳಿಗೆ ಸತತ ಗಮನವಿಡುತ್ತಿರಲಿ ನಿನ್ನ ಪುಟ್ಟ ಪುಟ್ಟ ಹೆಜ್ಜೆ! . ನಿನ್ನ ಚಂಚಲ ಅಲೆಮನವನ್ನು ಹಿಡಿತದಲ್ಲಿಟ್ಟುಕೋ ಕಂಡೀತು ಸ್ಪಷ್ಟ, ತಾರೆ ತಾರೆಯ...
ಅರಸಲೇ ಬೇಕು… ಬೆಳಕನ್ನು ಕತ್ತಲಲ್ಲಿ, ನಿಜವನ್ನು ಸುಳ್ಳಿನ ಸಿಪ್ಪೆ ಸುಲಿಯುವುದರಲ್ಲಿ, ಸತ್ಯವನ್ನು ಮಿಥ್ಯೆಗಳ ಶೋಧನೆಯಲ್ಲಿ! . ಏಕೆಂದರೆ… ಕೋಟಿ ಸೂರ್ಯರನ್ನು ಕತ್ತಲಿಲ್ಲದಿದ್ದರೆ ನಿಮಗೆ ಅಸ್ಮಿತೆ, ಉಂಟೇ ಎಂದು ಕೇಳಿದರೆ “ಉಂಟು” ಎಂದು ಹೇಳುವುದೇ ಇಲ್ಲ! . ನಿಜದ ಮಾತೆಂದರೆ, ನನ್ನನ್ನು ಪ್ರೀತಿಸುವೆಯಾ? ಎಂಬ ಪ್ರಶ್ನೆಗೆ “ಇಲ್ಲ” ಎಂಬ...
ಉದ್ದ ಲಂಗ ನೆರಿಗೆ ಚಿಮ್ಮಿ ಹೊಲಿಗೆ ತೇಪೆ ಕಾಣದಂತೆ, ಕುಣಿದು ಓಡಿ ಶಾಲೆಗೆ ಬೆಳೆಯುತಿರುವ ಶಾರದೆ ಎರಡು ಜಡೆಯ ಶಾರದೆ ಅಗಲ ಕಣ್ಣು, ನೆಟ್ಟ ನೋಟ ಪಾಠ ಪದ್ಯ ತೆಕ್ಕೆಯೊಳಗೆ ಡಬ್ಬಿ ಚಿತ್ರಾನ್ನದೂಟ ಸಾಕು ಎನುವ ಶಾರದೆ ಎರಡು ಜಡೆಯ ಶಾರದೆ ಪಟ ಪಟ ಪಟ ಮಾತ...
ಆಗಲೇ ಬೆಳಗಾಯಿತೇ? ಅದೊ, ಗಿಡ ಮರಗಳ ಸಂದಿನಿಂದ ಸೂರ್ಯ, ಹಾ ಅವನೇ ಅದೆಷ್ಟು ನಾಚುತ್ತ ಹುಟ್ಟುತ್ತಿದ್ದಾನೆ! ಅಬ್ಬಾ…ಅವನ ಕಿರಣ ರೇಖುಗಳದೆಷ್ಟು ಚೆನ್ನ ಎಲ್ಲಿ, ನಾನೆಲ್ಲಿ? ಇನ್ನೂ ಹುಟ್ಟೇ ಇಲ್ಲವಲ್ಲ! . ಅಂತೂ ಅವನು ನಾಚಿಕೆ ಬಿಟ್ಟು ಮೇಲೆದ್ದ! ಅದೊ, ನಾನೂ ಹುಟ್ಟಿದೆ! ಆಶ್ಚರ್ಯ…ಎಂಥ ಬೆಳವಣಿಗೆ ನನ್ನದು? ಅದೆಷ್ಟು...
ನೋಡ ನೋಡ ಗೂಡಿನೊಳಗ, ಕಣ್ಣ ಬಿಟ್ಟು ನೋಡಾ ಆಗ ಮಾತ್ರ ದೃಷ್ಟಿ ಚೆನ್ನ, ತಿಳಿಯಿತೇನ ಮೂಢ! ಏಕೆ ನೋಡತೀಯ ಹೊರಗೆ, ಎವೆಯು ನೋಯದೇನ? ಕನಸು ಕನಸು ಮಾತ್ರವಲ್ಲಿ, ಇಲ್ಲ ಏನು ತಾನ! ಶಬ್ದ ಸದ್ದು ಮನಸಲಿದ್ದು, ಅರ್ಥ ಸಿಗುವುದೇನ? ಜಾಸ್ತಿ ಜಾಸ್ತಿ ಅದೇ ಆದ್ರ, ಮಾಡಿತೇನ ಮೌನ!...
ನಿಮ್ಮ ಅನಿಸಿಕೆಗಳು…