ಟೀಕಿಸುವವರು
ಅನುಕ್ಷಣ ದೇವರ ನೆನೆಯುತ್ತಲೇಅವನಿರುವಿಕೆಯ ಟೀಕಿಸುವವರುಆಡಂಬರದಿ ಹಬ್ಬವ ಮಾಡುತ್ತಲೇಆಚರಣೆಗಳನು ಟೀಕಿಸುವವರು. ಇತಿಹಾಸ ಪುರಾಣಗಳ ಗೊತ್ತಿಲ್ಲದೇಇಲ್ಲಸಲ್ಲದ್ದು ಹೇಳಿ ಟೀಕಿಸುವವರುಈಶ್ವರ ಸೃಷ್ಟಿಯಿಂದಲೇ ಹುಟ್ಟಿಈಶ್ವರ ನಶ್ವರವೆಂದು ಟೀಕಿಸುವವರು. ಉಪಕಾರದ ಸ್ಮರಣೆಯಿಲ್ಲದೇಉಪ್ಪುಂಡ ಮನೆಯ ಟೀಕಿಸುವವರುಊಟ ತನ್ನಿಚ್ಛೆ, ನೋಟ ಪರರಿಚ್ಛೆಯರಿಯದೇಊಟ ನೋಟಗಳನ್ನೇ ಟೀಕಿಸುವವರು. ಋಣತ್ರಯ ತತ್ತ್ವ ತಿಳಿಯದೇಋಣಾತ್ಮಕವಾಗಿ ಟೀಕಿಸುವವರುಎಲುಬಿಲ್ಲದ ನಾಲಗೆ ಮನುಜರುಎಡಬಿಡಂಗಿಗಳಾಗಿ ಟೀಕಿಸುವವರು. ಏನು ತಿಳಿಯದೇ...
ನಿಮ್ಮ ಅನಿಸಿಕೆಗಳು…