Author: Vidyashree Adoor

3

ಅವಳೊಬ್ಬಳೆ ಸರಯೂ

Share Button

ಅವಳೊಬ್ಬಳೆ ಅವಳೊಬ್ಬಳೆ ಅವಳೊಬ್ಬಳೆ ಸರಯೂ….ನರ ಶ್ರೇಷ್ಠನ ನವ ನಿರ್ಮಿತ ಅರಮನೆಯ ಸುಳುಹು…ಶತಮಾನದ ಅಸಮಾನತೆ ಸಹಿಸುತ್ತಿರೋ ಕಡಲು …ಪ್ರತಿನಿಮಿಷವೂ ಕಣ್ಣೀರನೆ ಉಂಡಿರುವ ಒಡಲು… ಅವಳೊಬ್ಬಳೆ ಸರಯೂ…ಅವಳೊಬ್ಬಳೆ ಸರಯೂ… ಶ್ರೀರಾಮನ ಪ್ರತಿ ಕ್ಷಣ ಕ್ಷಣವು ಈಕೆಯ ತಟದಲ್ಲೇ..ಆ ಪಾದದ ಮೆದು ಕಮಲಕೆ ನೀರೆರೆದವಳಿವಳೇ..ಮೌನ ರಾಗದಲಿ… ನಿತ್ಯ ಹಾಡುವಳು ..ಭರತಾಗ್ರಜ ಶ್ರೀರಾಮನ...

7

ಸಂಭವಾಮಿ ಯುಗೇ ಯುಗೇ

Share Button

ಕೃಷ್ಣನಾಗುವ ನೆಪದಿ ಕಂಸನಂತಾಡುವರುಪುoಸವನಕೂ ಮುಂಚೆ ಪುಂಡಾಟ ಕಲಿತಿಹರುಹಂಸ ವರ್ಣದ ಮನಕೆ ಕೆಂಗೆಸರನೆರಚಿಹರುಸಂಗ ಸಜ್ಜನರದೇ ಕೊಡಿಸು… ಹರಿಯೇ…. ಬರಿದೆ ನೊಂದವರನೇ ಹುರಿದು ತಿನ್ನುವರುಮುರಿದ ಕೋಲನೆ ಮೆರೆಸಿ ಜಗವ ಮೇಸುವರುಬಗೆ ಬಗೆಯ ವೇಷದಲಿ ಮರುಳು ಮಾಡಿಹರುದುರುಳ ಮುಷ್ಟಿಯ ಬಿಡಿಸಿ… ಕಾಯೋ ಹರಿಯೇ…. ಹರಿಪಾದ ಗತಿಯೆಂದು ಎಂದಿಗರಿಯುವರುಹಿಂದು ಮುಂದಿನ ಕರ್ಮ ಎಂತು...

7

ಹತ್ತಿಯಂತೆ ಜೀವನ

Share Button

ಬಂಧ ಭಾರವೆನ್ನಬೇಡಗಂಧ ಹಗುರ ಮರೆಯಬೇಡನಿಂದ ನೆಲದಿ ಬೆಳೆಯಬೇಕು ಬೇರನಿಳಿಸುತಸಂದುಹೋದ ವಿಷಯಕೆಲ್ಲಇಂದು ಮರುಗಲೇಕೆ ಮರುಳೆಬೆಂದು ಹೋಗಬೇಡ ನಿನ್ನೆ ನಾಳೆ ನೆನೆಯುತ ಚಿಂತೆಯೆಂಬುದೊಂದು ಹೊರೆಯುಸಂತೆಯಲ್ಲು ನಿನ್ನ ಕೊರೆದುಭ್ರಾಂತಮಾಡಲ್ಯಾರ ನೀನು ಹೊಣೆಯ ಮಾಡುವೆ?ನಿತಾಂತನನ್ನು ಮನದಿ ನೆನೆಯೆಕಾಂತದಂತೆ ಕಷ್ಟ ಸೆಳೆದುಶಾಂತಿಯನ್ನು ಮನಕೆ ಕೊಡುವ ಏಕೆ ಅಂಜುವೆ? ಮತ್ತು ತಲೆಗೆ ಏರೋ ಮುನ್ನಗತ್ತುಗಳನು ಬದಿಗೆ...

12

ಕವಿತೆ ಎಂಬ ಮೂಡಣ, ಪಡುವಣ

Share Button

ಕವಿತೆಯೆoಬುದು ಮನದ ರಿಂಗಣಬದುಕ ನುಸುಲಿನ ಹೂರಣ..ಮಿಡತೆ ಚಿಟ್ಟೆಯದಾಗಿ ಹಾರುವಭಾವ ಯಾನದ ಚಿತ್ರಣ.. ನೋವು ನಲಿವಿನ ಪಾಕ ಕವಿತೆಗೆಸೋಲು ಗೆಲುವೂ ಕಾರಣ..ಅಮ್ಮನಪ್ಪುಗೆ ಕಂದನೆಳೆತಸಿಹಿಯು ಕಹಿಯ ಮಿಶ್ರಣ.. ತಿಮಿರ ಕವಿದಿಹ ಭಾವ ಜೀವಿಗೆಬೆಳಕನುದಿಸುವ ಮೂಡಣ..ಬೆಂದು ಬಳಲಿದ ಕರ್ಮಚಾರಿಗೆತಂಪ ನೀಡುವ ಪಡುವಣ.. –ವಿದ್ಯಾಶ್ರೀ ಅಡೂರ್, ಮುಂಡಾಜೆ +8

11

ಮುಳ್ಳ ಬೇಲಿಯ ಹೂವು

Share Button

ಮುಳ್ಳ ಬೇಲಿಯ ಮೇಲೆಬಳ್ಳಿ ಹೂವದು ಹರಡಿಘಮಿಸುತಿದೆ ಪರಿಮಳವ ಒಲವು ಹೆಚ್ಚಿ….ಅಂತರಂಗದ ತಮವಕಳೆಯಲೆಂದೇ ನಾನುಹೊರಟಿಹೆನು ಕತ್ತಲಲಿ ದೀಪ ಹಚ್ಚಿ…. ಘಮವ ಬೀರುವ ಹೂವುಉಳಿಯುವುದೇ ಗಿಡದಲ್ಲಿಬಗೆ ಬಗೆಯ ಕಾರಣಕೆ ಬಲಿಯದಾಗಿನನ್ನಿರವು ನನ್ನುಳಿವುನನ್ನದಾಗುಳಿಯುವುದೇ?ಹೋರಾಡುತಿರುವೆ ನಾನಲ್ಲಿ ಏಕಾಂಗಿ… ಹೂವ ಬಂಧಿಸಬಹುದುಬಗೆ ಬಗೆಯ ರೀತಿಯಲಿಗಾಳಿ ಗಂಧದ ಜತೆಯ ಬಿಡಿಸಬಹುದೇ….ಕುಗ್ಗಿಸಿಯು ಬಗ್ಗಿಸಿಯುಜಗ್ಗಲಾರೆನು ನಾನುಹಿಗ್ಗಿ ಬೆಳೆಯುವ ಇಚ್ಛೆ...

8

ಮರೆಯಾಗದಿರಲಿ ಸೀತೆ

Share Button

ಮಾತೆಯಾದಳು ಸೀತೆಮಾತನಾಡದೆ ಪ್ರೀತೆಭೂತ ಭವಿತದ ಗಾಥೆಅಂತವಿರದ ಪುನೀತೆ ನೀರೆ ಮಾತನು ಕಲಿತುಭಾವ ಬಗೆ ಬಗೆ ಬಲಿತುಬಂಧ ಕಳಚುತ ಹಳತುಕಟ್ಟಿ ನೂಪುರ ಹೊಸತು ಹಾರಲೆಳಸಿ ದಿಗಂತಎದುರಿಸುತ ಹಲ ಪಂಥಭಾವ ಬಗೆ ಬಗೆ ಸ್ವಂತಅಂಕೆಯಿರದೆ ಅನಂತ ಸೀತೆಯುಳಿಯಲಿ ಮನದಿಮಾತೆ ಭಗಿನಿಯ ಬಲದಿಗಾಥೆಯಾಗುವ ವಿಧ ವಿಧದಿಭರತ ಭೂಮಿಯ ನೆಲದಿ…. –ವಿದ್ಯಾಶ್ರೀ ಅಡೂರ್,...

6

ಭಾವ ಬೇತಾಳ

Share Button

ಗಡಿಬಿಡಿಯಲ್ಲೂ ಒಡಮೂಡುವುದು ಭಾವಗಳಡಿಗಡಿಗೇ.. ಪಡಿಯಚ್ಚಿನ ತರ ಮನದ ಬಿಕ್ಕುಗಳು ರೆಕ್ಕೆ ಪಡೆವ ಘಳಿಗೇ… ಸಣ್ಣಗೆ ಹರಿಯುವ ಜುಳು ಝರಿಯಂತೆ ಕವಿತೆಯ ಸಂಚಾರ.. ಕಣ್ಣಿಗೆ ಕಾಣದ ಆತ್ಮದ ಒಳಗೆ ಮಾರ್ದನಿಸುವುದಿಂಚರ.. ಶೀತಲ ಗಾಳಿಗೆ ಥರಗುಡುವಂತೆ ಮನದೊಳಗಿನ ಮಾತು.. ಬೇತಾಳದ ತರ ಬೆನ್ನನುಬಿಡದೆ ಕಾಡುವ ಪಿಸುಮಾತು.. ಸೋನೆ ಮಳೆಯಂತೆ ತೊಟ್ಟಿಕ್ಕುವುದು...

5

ಹಿತ್ತಿಲ ಮಲ್ಲಿಗೆ

Share Button

ಹಿತ್ತಿಲಲಿ ಅರಳಿರುವ ಮಲ್ಲಿಗೆಯ ಹೂವೊಂದು ಸೋತಿಹುದು ಜನಗಡಣ ಕಣ್ಸೆಳೆಯಲು ಬೆಳಗು ಬೈಗುಗಳಲ್ಲೇ ದಿನಚರಿಯು ಕಳೆದಿಹುದು ಅರಳುವಿಕೆಗಡರಿಹುದು ಕಾರ್ಮುಗಿಲು ಗಂಧವಿಲ್ಲದ ಹೂವೊಂದು ಮುಂಬಾಗಿಲಲಿ ಮೆರೆದು ಗಳಿಸಿಹುದು ಮೂಜಗದ ಜನ ಮನ್ನಣೆ ಹಿತ್ತಿಲಿನ ಹೂ ಬಳ್ಳಿ ಒಡ್ಡೊಡ್ಡು ಬೆಳೆದಿರಲು ಹೆದರಿಹುದು ನೋಡುತ್ತಾ ಕತ್ತರಿಯ ಸಾಣೆ ನೀರು ಗೊಬ್ಬರದಾರೈಕೆ ಮುಂಬಾಗಿಲಿನ ಗಿಡಕೆ...

6

ಕನವರಿಕೆ

Share Button

  ಖಾಲಿಯಾಗಿದೆ ಜೋಲಿಹೊಡೆದಿದೆ ಮನದ ಒಳಗಿನ ಮಂಥನ ನಿನ್ನೆ ನೆನಪಲಿ ನಾಳೆ ಭ್ರಮೆಯಲಿ ಬದುಕು ಸತ್ತಿದೆ ಇಂದಿನ ಸುತ್ತ ಸಾಗುವ ಜಾತ್ರೆ ದಿಬ್ಬಣ ಮುಸುಕ ಮಸುಕನು ಕಳೆಯದೇ ಭಾವ ತಬ್ಬಲಿ ಮರುಗುತಿರುವುದು ಬೆಳ್ಳಿ ಕಿರಣವು ಹೊಳೆಯದೆ ನೋವಿನಾಸರೆ ಬೇಕು ಬದುಕಲಿ ನಲಿವ ಮಹಡಿಯ ಕಟ್ಟಲು ಆಸೆ ಇಟ್ಟಿಗೆ...

6

ಮನದೊಳಗೊಂದು ಮಲ್ಲಯುದ್ಧ

Share Button

ಮುದವಿಲ್ಲ ಮನಕೆನ್ನ ಹದವಿಲ್ಲ ನಡೆಯೆನ್ನ ವದನದಲಿ ಸೂಸುವ ಹುಸಿಯಾದ ನಗೆಯನ್ನ ಹೇಗೆ ಬಚ್ಚಿಡಲಿ… ಎಲ್ಲಿ ಬಿಚ್ಚಿಡಲಿ…. ಜತನದೊಳು ಕಾಯ್ದಂತ ಕಥನಗಳು ಬಹಳಿಹುದು ಮಥನಮಾಡಲು ಮನದ ಮಡಿಕೆಯೊಳು ತೇಲಿ ಹೇಗೆ ಬಚ್ಚಿಡಲಿ…. ಎಲ್ಲಿ ಬಿಚ್ಚಿಡಲಿ….. ಮುಸುಕೊಳಗಿನಾ ಗುದ್ದು ರೇಶಿಮೆಯ ಹೊರಹೊದ್ದು ಸರಿತಪ್ಪು ಸೀಮೆಗಳು ಮಸುಕಿನಲಿ ಬಿದ್ದು ಹೇಗೆ ಬಚ್ಚಿಡಲಿ…....

Follow

Get every new post on this blog delivered to your Inbox.

Join other followers: