Author: Dr.Maheshwari U
ಸಾವೆಂಬ ಸಂಗಾತಿ
ಮೊನ್ನೆ ಕಂಡವರು ಇಲ್ಲೆ ಕುಳಿತವರುತಾಂಬೂಲ ಮೆಲ್ಲುತ್ತ ಮಾತ ಮೊದಲಿಟ್ಟವರುಕುಳಿತ ಬಾಜಿರ ಸುತ್ತ ಸುಳಿದಾಡುತಿದೆ ಗಾಳಿನುಡಿದ ಸೊಲ್ಲಿನ ಉಲುಹು ಕಿವಿಯ ಬಂದಪ್ಪುತಿದೆತಲೆಯ ಒಲೆತದ ಭಂಗಿ ಕಣ್ತುಂಬಿ ನಿಂತಿದೆಪರಿಚಿತದ ಮೈಗಂಧ ನಾಸಿಕವ ಬಿಟ್ಟಿರದುಸ್ನೇಹ ಸ್ಪರ್ಶದ ಬಿಸುಪು ಆರದಿಹುದುಮೈಕುಲುಕು ನಗೆಯ ಅಲೆ ವರ್ತುಲದಿ ಸುತ್ತಿಹುದು ಸಾವೆಂಬ ಸಂಗಾತಿ ಕರೆದ ಮಾತ್ರಕೆ ಹೀಗೆ...
ಗೈರ ಸಮಜೂತಿ -ಒಂದು ಮಹತ್ವದ ಕಾದಂಬರಿ
ಜೈವಿಕವಾಗಿ ತಮ್ಮ ಒಡಹುಟ್ಟಿದ ಸೋದರಿಯರಿಗೆ ಮತ್ತು ಕನ್ನಡ ಭಾಷೆ ಕಾರಣವಾಗಿ ಒಡಹುಟ್ಟಿದ ಸಂಬಂಧವುಳ್ಳ ಲೇಖಕಿಯರಿಗೆ ಬಾಗಿನವಾಗಿ ಅರ್ಪಿಸಿದ ಬರಹಗಾರನೊಬ್ಬನ ( ಲೇ: ರಾಘವೇಂದ್ರ ಪಾಟೀಲ) ಈ ಕೃತಿ ಹೆಂಗರುಳ ಅಂತ:ಕರಣಕ್ಕೆ, ಒಳತಿಳಿವಿನ ಬೆಳಕಿಗೆ ಪ್ರಾಶಸ್ತ್ಯವನ್ನೀಯುವ ಮಹತ್ವದ ಕಾದಂಬರಿ. ‘ಗೈರಸಮಜೂತಿ’ ಎಂದರೆ ತಪ್ಪು ತಿಳುವಳಿಕೆ. ಈ ತಪ್ಪುತಿಳುವಳಿಕೆ ಮತ್ತು...
‘ಜೀವನ’ವೆನ್ನುವ ನೀರು.
ಹಳ್ಳಿಗಳಲ್ಲಿ ಶುದ್ಧನೀರಿನ ಒಂದು ಪ್ರಮುಖ ಆಶ್ರಯ ಅಂದರೆ ಬಾವಿ. ನೀರು ಜೀವನಾಧಾರ ವಾಗಿರುವುದರಿಂದಲೇ ಅದಕ್ಕೆ ‘ಜೀವನ’ ಎಂಬ ಹೆಸರೂ ಇದೆ.ಕೆರೆಯನ್ನು ಕಟ್ಟಿಸುವದು, ಬಾವಿಯನ್ನು ತೋಡುವುದು -ಇವೆಲ್ಲ ಪುಣ್ಯ ಕಾರ್ಯಗಳು ಎಂಬುದಾಗಿ ಶಾಸನಗಳು ,ನಮ್ಮ ಕಾವ್ಯಗಳು ಸಾರುತ್ತವೆ. ಬಹೂಪಯೋಗಿಯಾದ ಕೆರೆಯನ್ನು ಕಟ್ಟಿಸು ,ಬಾವಿಯನ್ನು ನಿರ್ಮಿಸು, ದೇವಾಲಯವನ್ನು ಕಟ್ಟು, ಸೆರೆಯಲ್ಲಿ...
ಒಂದು ಅಪೂರ್ಣ ಹೂ ಪುರಾಣ
ಹೂಗಳ ಬಗ್ಗೆ ಬರೆಯುವಾಗ ನಾನು ರಂಜೆಯ ಹೂವಿನಿಂದಲೆ ಸುರುಮಾಡಬೇಕು. ಅದು ನನ್ನಬಾಲ್ಯದ ನೆನಪಿನೊಂದಿಗೆ ಬೆಸೆದಷ್ಟು ಬೇರೆ ಯಾವ ಹೂವೂ ಬೆಸೆದಿಲ್ಲ.ನಮ್ಮಮನೆಯ ಹಿಂದಿನ ಕಾಡಿನಲ್ಲಿ ಯಥೇಚ್ಛ ಸುರಿಯುತ್ತಿದ್ದ ಈ ಪರಿಮಳದ ಹೂಗಳನ್ನು ಆಯ್ದು ಮಾಲೆ ಮಾಡಿ ಮುಡಿಯುವುದಕ್ಕೆ ನಾವು ಬೆಳ್ಳಂಬೆಳಗ್ಗೇ ಎದ್ದು ಹೋಗುತ್ತಿದ್ದೆವು.ಬಿಳಿಯೆಂದರೆ ಬಿಳಿಯಲ್ಲ. ಕೆನೆಯೆನ್ನಬಹುದಾದ ಆ ಹೂಗಳನ್ನು...
ಕಾರ್ಗಿಲ್ ಕವಿತೆ ( ಕಾರ್ಗಿಲ್ ಯೋಧರನ್ನು ನೆನೆದು)
ನಮಗೆ ನಮ್ಮ ಮನೆಗಳಲ್ಲಿ ಸೊಗದ ಊಟ ಸವಿಯ ನಿದ್ದೆ / ನಿಮಗೆ ನಿಮ್ಮ ಮನೆಗಳಲ್ಲಿ ಕಾವ ತಾಯಿ ಕರೆವ ಮಡದಿ // ನಾವು ನಮ್ಮ ಮನೆಗಳಲ್ಲಿ ಟೀವಿ ಮುಂದೆ ಕೂತ ಮಂದೆ / ನೀವು ಅಲ್ಲಿ ಶಿಖರಗಳಲಿ ಅರಿಯ ತರುಬಿ ಮುಂದೆ ಮುಂದೆ// ನಮಗೆ ನಮ್ಮ ಮನೆಗಳಲ್ಲಿ...
ಮಳೆ…ಮಳೆ…ಮಳೆ
ಮಳೆಯೆಂಬುದು ಇಳೆಗೆ ಹಳೆಯ ಗೆಳೆಯನೇ ಆದರೂ ದೂರದಲ್ಲದೊ ಬರುತ್ತಾನೆಂದು ಸುದ್ದಿ ಸಿಕ್ಕಿದರು ಸಾಕು ಚಾಮರ ಬೀಸಿ ಧೂಳೆಬ್ಬಿಸಿ ಸಡಗರವೋ ಸಡಗರ! ಋತುಸ್ನಾತೆಯ ಎದೆಯ ಅಂಗಳದಲ್ಲಿ ಡವಡವದ ರವ |1| ಹೀಗೊಂದು ಕಣ್ಣು ಮುಚ್ಚಾಲೆ ಆಡಿದರೆ ಆ ಮಳೆರಾಯ ತಾಳಬೇಕಲ್ಲವೇ ಮಕ್ಕಳೊಂದಿಗಳು ಎಷ್ಟೆಂದರೂ ಇಳೆಯಮ್ಮ ಕಿವಿಯೆಲ್ಲ ಮಳೆರಾಯನ ವೈಹಾಳಿಯ...
ಹೃದಯ, ಮನಸ್ಸು, ಬುದ್ಧಿ, ಭಾವ ಇತ್ಯಾದಿ
ಕಣ್ಣು ಮುಚ್ಚಿ ಅಂತರ್ಮುಖಿಯಾದಾಗ ಒಳಗಿನ ಲೋಕ ಏನು ಹೇಳುತ್ತದೆ? ಒಳಗಿನ ಲೋಕ ಇರುವುದಾದರೂ ಎಲ್ಲಿ?ಹೃದಯದಲ್ಲಿ? ಹೃದಯದಲ್ಲಿ ಏನಿದೆ? ಆಸೆ? ಅದು ಹೃದಯದ್ದೋ ಮನಸ್ಸಿನದ್ದೋ. ಸಂತೋಷ, ದು:ಖ- ಅದು ಹೃದಯದ್ದೋ ಮನಸ್ಸಿನದ್ದೋ? ಮಗುವಿನ ತೊದಲು ನುಡಿ, ಅದರ ಚೇಷ್ಟೆ, ಆಟ ಪಾಟಗಳು ಮುದವನ್ನು ನೀಡುವುದು ಮನಸ್ಸಿಗೋ ಹೃದಯಕ್ಕೋ? ಭಾವವುದಿಸುವುದು...
ನಿಮ್ಮ ಅನಿಸಿಕೆಗಳು…