Author: Vidya Venkatesh

4

ಋಣ

Share Button

ನಾ ಹೇಗೆ ತೀರಿಸಲಿನನ್ನವರ ಪ್ರೀತಿಯ ಋಣವಾ ಹಾದಿಯಲ್ಲಿ ಕಾಣದೆನಾ ಎಡವಿದಾಗಕೈ ಹಿಡಿದು, ಎಬ್ಬಿಸಿ,ನಿಲ್ಲಿಸಿದವರಾಮುಂದಿನ ದಾರಿಯ ತೋರಿದವರಾಪ್ರೀತಿಯ ಋಣವಾನಾ ಹೇಗೆ ತೀರಿಸಲಿ,,,,,,! ಯಾರೋ ಗೀರಿದ ಗಾಯಗಳಿಗೆಪ್ರೀತಿಯ ಮುಲಾಮು ಹಚ್ಚಿದವರಾನೋವ ಕಂಬನಿಯ ಒರೆಸಿದವರಾದುಃಖವ ಮರೆಸಿದವರಾಪ್ರೀತಿಯ ಋಣವಾನಾ ಹೇಗೆ ತೀರಿಸಲಿ,,,,,,! ಬದುಕು ಹೆದರಿಸಿದಾಗಹೆಜ್ಜೆ ಹಿಂದೆ ಸರಿಯದಂತೆ,ಧೈರ್ಯದ ಗೆಜ್ಜೆ ಕಟ್ಟಿಸೋಲದಂತೆ ಗೆಲ್ಲಿಸಿದವರಾಪ್ರೀತಿಯ ಋಣವಾನಾ...

5

“ಹರಸು”

Share Button

ಅರಿವಿನಾ ಅರಿವಿಲ್ಲದಮನುಜರ ನಡುವೆಬಾಳುವ ಅರಿವನೀಡೆನೆಗೆ ದೇವಾ, ಸಾವು ಬೆನ್ನ ಹಿಂದೆವಿಧಿ ನನ್ನ ಮುಂದೆ,ಆದರು ನಗುತ ಬಾಳುವನಗಿಸುತ್ತಾ ಭಾಳುವಬುಧ್ದಿಯ ನೀಡೆನೆಗೆ ದೇವಾ ಮೂರು ದಿನದ  ಬಾಳೆಂದರಿತರೂಹಗೆ ಸಾಧಿಸುವುದ ಬಿಡದ,ಸೋಲುವುದ ಕಲಿಯದ,ಮಂದಿಯ ನಡುವೆಮಾನವ ಧರ್ಮದಿಬಾಳುವ ಮತಿಯೆನೆಗಿರಲಿ ದೇವಾ… ವಿವೇಕ ಬೆಳಗದುಅಹಂಕಾರ ಕಳೆಯದುಅಸೂಯೆ ಸಾಯದುದುರಾಸೆಗೆ ಕೊನೆಯಿರದ ಜಗದಿನಾ ನೋಯದೆ ನರಳದೆನಿಸ್ವಾರ್ಥ ದಿ...

6

ಹನಿಗವನಗಳು

Share Button

ಮನಸ್ಸು ಸರಿಯಾಗಿದ್ದವರಿಗೆಎಲ್ಲವೂ ಹತ್ತಿರ,ಯಾವುದು ಭಾರವಲ್ಲ,ಮನ ಸರಿಯಿಲ್ಲದವರಿಗೆಹತ್ತಿರವೂ ದೂರವೇ,,,ಹಗುರವೂ ಭಾರವೇ,,,,,,, ***†********** ಕೆಲವರುಅರ್ಥ ವಾಗದ ಪುಸ್ತಕಗಳುಹಲವರುಓದಲಾಗದ ಪುಸ್ತಕಗಳು ********** ಕಾಣಲಾಗುವುದು ಎಲ್ಲರಿಗೂಎದುರಿಗೆ ಕಾಣುವಸುಂದರ ಮುಖಲಕ್ಷಣಕಾಣಲಾಗುವುದಿಲ್ಲ ಯಾರಿಗೂಮನದೊಳಗಿನಹಗೆಯ ಹೊಗೆಯ ಅವಲಕ್ಷಣ ******** ಮಿಲಿಟರಿಯಲ್ಲಿ ಕೊಲ್ಲಲುಬಂದೂಕ ಬೇಕುಕೆಲವರಿಗೆ ಕೊಲ್ಲಲುನಾಲಿಗೆ ಸಾಕು –ವಿದ್ಯಾ ವೆಂಕಟೇಶ್. ಮೈಸೂರು +5

6

“ಗಂಗೆ”

Share Button

ಗಂಗೆ ಅಗಬೇಕುಪುಣ್ಯವತಿ ಗಂಗೆ,ಎಲ್ಲವನ್ನು ಮೀರಿಹರಿವ ಗಂಗೆಎಲ್ಲವನ್ನು ದಾಟಿದಡ ಮುಟ್ಟುವ ಗಂಗೆನಾನಾಗಬೇಕು,,,,, ನನ್ನ ಮಡಿಲಿಗೆ ಬಿದ್ದಕಲಕುವ ಮಾತುಗಳು,,,,ಕೊಳಕು ಮನಸುಗಳು,,,ನೋಯಿಸುವ ನಡುವಳಿಕೆಗಳು,,,ಬೆಣ್ಣೆ ಮಾತಾಡುತಾಬೆನ್ನಿಗೇ ಇರಿಯುವವರು,,,ಚುಚ್ಚಿ ರಕುತ ಬರೆಸಿಸಂತೋಷಿಸುವವರು,,,ಎಲ್ಲಾ ಅಂದರೆಎಲ್ಲವನ್ನು ಎಲ್ಲರನ್ನುಅರಗಿಸಿಕೊಂಡುಕರಗಿಸಿಕೊಂಡುಹಿಂದೆ ಸರಿಯದ ಗಂಗೆಯಂತೆನಾನು ಹರಿಯುತ್ತೇನೆ ಒಳಗೆಭೋರ್ಗರೆತದೊಂದಿಗೆಹೊರಗೆಗಂಭೀರ ಗಂಗೆಯಂತೆ,,,,,, ಭೂ ಜಾತೆ ಗಂಗೆಸೋತಿದ್ದುಂಟೆ,,,,,ಈ ಜಗದೊಳಗೆ,,,,ನಾನು,,,ಅಷ್ಟೇ,,,, –ವಿದ್ಯಾ ವೆಂಕಟೇಶ್ , ಮೈಸೂರು +10

8

ಮನೆಗೊಬ್ಬ ಕವಯತ್ರಿ…

Share Button

ಸತ್ಯವಾಗಿಯೂಸಹಜವಾಗಿಯೂಪ್ರತಿ ಹೆಣ್ಣುಒಬ್ಬ ಕವಯತ್ರಿಯೇ,,,, ಒಬ್ಬಳು ಬಗೆಬಗೆಯಅಡುಗೆಯ ಸ್ವಾದಗಳಲ್ಲಿತನ್ನ ಭಾವ ಬೆರೆಸುತ್ತಾರುಚಿಗಳ ಮೂಲಕ ಕವನಗಳ ಬರೆಯತ್ತಾಳೆ, ಮತ್ತೊಬ್ಬಳುಬಣ್ಣಬಣ್ಣಗಳ ದಾರಮಣಿಗಳಲ್ಲಿ ಭಾವಗಳ ಬೆರೆಸುತ್ತಾಕಸೂತಿಯ ಕಲೆಗಳ ಚಿತ್ತಾರದಿಕವನಗಳ ಬಿಡಿಸುತ್ತಾಳೆ, ಇನ್ನೂಬ್ಬಳುಮಣ್ಣನ್ನು ಹದಗೊಳಿಸಿಭಾವಗಳ ಬೀಜ ಬಿತ್ತಿಪುಷ್ಷಗಳ ಚೆಲ್ವಿಕೆಯಲ್ಲಿಕವನಗಳ ಅರಳಿಸುತ್ತಾಳೆ, ಮನೆ ಮನೆಯ ಮುಂದೆಬಿಟ್ಟಿರುವ ಚುಕ್ಕಿಗಳಲ್ಲಿಸೇರಿಸಿ ಎಳೆದಿರುವ ಗೆರೆಗಳಲ್ಲಿಕವನಗಳು ಬಣ್ಣ ತುಂಬಿಕೊಂಡುರಂಗು ರಂಗಿನ ರಂಗೋಲಿಗಳಾಗಿರುತ್ತವೆ, ಕವಿಗಳೆಂದು...

5

”ಆಟ”

Share Button

ಹಾವು ಏಣಿಆಟದ್ಹಾಂಗೆ ಈ ಬದುಕು ಕನಸುಗಳ ಏಣಿಯಆಸೆಯಿಂದ ಹತ್ತುತ್ತೇವೆಕಾದಿರುತ್ತದೆ ಅಲ್ಲಿ ವಿಧಿಹಾವಿನ ರೂಪದಲ್ಲಿನಿರಾಸೆಯಿಂದ ಪಾತಾಳಕ್ಕೆಬಿದ್ದಿರುತ್ತೇವೆ,,, ಮೋಹವೋಆಶಾವಾದವೋಮತ್ತೆ ದಾಳ ಉರುಳಿಸಿಸಿಕ್ಕಿದ ಏಣಿ ಹತ್ತುತ್ತೇವೆ,,, ನಾನು ಬರಲೆಂದೆಕಾದು ಕುಳಿತ್ತಿತ್ತುವಿಧಿ ಮತ್ತೆ ಹಾವಾಗಿ,ಮತ್ತೆ ,,,ಕೆಳಗೆ ಉರುಳಿದೆ, ಗುರಿ ಮುಟ್ಟುವವರೆಗೂಬಿಡುವುದಿಲ್ಲ ನಾನು ಎಂದುನಾಳೆಗಳೆಂಬ ಏಣಿಯಪುನಃ ಹತ್ತುತ್ತೇನೆ,ಬಿದ್ದರೂ ,,, ವಿಧಿಗೆ ಹೇಳಿದ್ದೇನೆನೀನಾ,,,ನಾನಾ,,,ಎಂದು,,,ನೋಡೆಬಿಡೋಣವೆಂದು,,, ಎಷ್ಟು ಸಾರಿ...

6

”ಲಕ್ಷ್ಮಣ ರೇಖೆ”

Share Button

ಸೀತೆಗೆಂದು ಎಳೆದನುಲಕ್ಷ್ಮಣನೊಂದು ರೇಖೆರಕ್ಷಣೆಗೆಂದು….ಮರೆತು ದಾಟಿದತಪ್ಪಿಗೆ …ಆಯಿತುರಾಮಾಯಣ….. ಇಂದುನಾವೇ ಹಾಕಿಕೊಳ್ಳಬೇಕುನಮ್ಮೊಳಗೊಂದು ರೇಖೆ,ನಮ್ಮನ್ನಾಳುವ  ಅಹಂಕಾರಕ್ಕೆಗೆರೆ ಹಾಕಿ…..ಹೊರ ಬರದಂತೆ…ರೇಖೆ ದಾಟದಂತೆ… ನಮ್ಮ ಸಂತೋಷಗಳ ಶತೃಅಸೂಯೆ ಅತೃಪ್ತಿ ದುರಾಸೆಗೆನಾವೇ ಹಾಕಬೇಕು ರೇಖೆಯೊಂದನುಒಳಗೆ ಇರುವಂತೆ…ಹೊರಬಂದು….ಕಲಕಿ ರಾಡಿಗೊಳಿಸದಿರಲೆಂದು… ನಮ್ಮೊಳಗೆ ನಾವೇಹಾಕಿಕೊಳ್ಳಬೇಕು“ಲಕ್ಷ್ಮಣ ರೇಖೆ”ಒಳಿತು ಕೆಡಕುಗಳ ನಡುವೆ….. -ವಿದ್ಯಾ ವೆಂಕಟೇಶ್. ಮೈಸೂರು +9

11

“ಡಿಗ್ರಿ”

Share Button

ದೊಡ್ಡ ದೊಡ್ಡಕಾಲೇಜು ಕಟ್ಟಡಗಳಮೆಟ್ಟಿಲು ಹತ್ತಿ ಇಳಿದವಳಲ್ಲ-ಆದರೆಜೀವನದ ನಿಜ ಸಂತೆಯಲಿಬರಿಗಾಲಲ್ಲಿ ಓಡಾಡಿದಣಿದು ಪಡೆದಿಹೆಡಿಗ್ರಿಗಳ ಸರಮಾಲೆಯಲ್ಲ,ಬದುಕಿನ,,,,ಸತ್ಯಧನುಭವಗಳ ವರಮಾಲೆಯನ್ನ,,, ಚುಚ್ಚಿದ ಮುಳ್ಳುಗಳೆಷ್ಷೋಒತ್ತಿದ ಕಲ್ಲುಗಳೆಷ್ಷೋಎಲ್ಲವೂ ಬರೆಸಿದವುಕವನಗಳ ಸಾವಿರಾರು, ಗಟ್ಟಿಯಾಗಿಸಿದವು,ಬಂಡೆಯಾಗಿಸಿದವು,ಚುಚ್ಚಿದವರ ಮುಂದೆಕಣ್ಣೀರು ಹಾಕದಂತೆ ಕಲಿಸಿದವುಕುಗ್ಗಿದರು ಬಗ್ಗಿದರುಎದೆಸೆಟೆಸಿ ಎತ್ತರಕ್ಕೆ ಬೆಳೆಸಿದವು –ವಿದ್ಯಾ ವೆಂಕಟೇಶ್. ಮೈಸೂರು +32

10

“ಗುರುತು”

Share Button

ಮನೆಯ ಮಹಾಲಕ್ಷ್ಮಿ ನೀನುಎನ್ನುತ್ತಾನೆ ಗಂಡಪಾಪ ಮರತೇ ಬಿಡುತ್ತಾಳೆಮನೆಯ ಕಸ ಗುಡಿಸುವುದರಲ್ಲೇಬದುಕು ಕಳೆದಿದ್ದು,,, ಮನದ ಮಹಾರಾಣಿ ನೀನುಎನ್ನುತ್ತಾನೆ ಗಂಡಪಾಪಾ ನೆನಪಾಗುವುದಿಲ್ಲ ಅವಳಿಗೆಸಂಸಾರ ಸಾಗರದಲ್ಲಿಮುಳುಗಿದವಳಿಗೆವಯಸ್ಸು ಕಳೆದಿದ್ದು… ನೆನಪಾದಾಗ,,ಕನ್ನಡಿಯಲ್ಲಿನೋಡಿಕೊಂಡಾಗಅವಳ ಗುರುತುಅವಳಿಗೇ ಹತ್ತಲಿಲ್ಲ…. *ವಿದ್ಯಾ ವೆಂಕಟೇಶ್. ಮೈಸೂರು +13

7

ತಲೆಮಾರು

Share Button

ಹೊಸ ತಲೆಮಾರಿನಲಿನಮ್ಮ ಮಕ್ಕಳೇನಮಗೆ ಅಪರಚಿತರಾದರೇಕೊ ಕಾಣೆ, ಮಕ್ಕಳುಕಷ್ಟಕ್ಕೆ- ಭಾವಕ್ಕೆಹೆಗಲು ಕೊಡದ ಮೇಲೆಕರುಳಿನ ಚೂರುಗಳಲ್ಲ ಅವರು, ಕಳೆದ ಜನುಮದಸಾಲದ ಬಾಕಿಯವಸೂಲಿಗಾರರು, ಹೃದಯ ಹೆತ್ತಿದಕ್ಕೆಧನ್ಯತೆ ಅನುಭವಿಸದ ಮೇಲೆನಾವು ಮಾಡಿದ ಪಾಪದಪ್ರತಿರೂಪಗಳು, ಸಂಸಾರ ಸಾಗರದಲ್ಲಿಮುಳುಗುವಾಗ ದೋಣಿಯಾಗಿಮಕ್ಕಳು ಬರದ ಮೇಲೆ ಮಕ್ಕಳಲ್ಲ ಅವರುಗಳುದೃಷ್ಟಿಯಿರದ ಕಣ್ಣುಗಳು -ವಿದ್ಯಾ ವೆಂಕಟೇಶ್. ಮೈಸೂರು +8

Follow

Get every new post on this blog delivered to your Inbox.

Join other followers: