Author: K M Sharanabasavesha
ಬೆಣ್ಣೆ ಮುದ್ದೆಯಂತಹ ದೇಹಗಾಜಿನಂತಹ ಕಣ್ಣುಗಳು ಗುಲಾಬಿ ದಳಗಳಂತಹ ಕೆನ್ನೆಗಳುಹೊರಟು ನಿಂತ ಅಪ್ಪನ ತಡೆದು ನಿಲ್ಲಿಸುವ ನೋಟಗಳು ಕಾಲವೇ ನೀ ಮೆಲ್ಲಗೆ ಹರಿಯುತ್ತಿರುಸರಿದು ಹೋಗದಿರಲಿ ಈ ಕ್ಷಣಗಳುಜಾರಿ ಸಾಗದಿರಲಿ ಈ ದೃಶ್ಯಗಳು ಕುಲಾವಿ ಕಟ್ಟಿದ ಸುಂದರ ಕುಸುಮವಿಂದು ತಲೆ ಎತ್ತಿ ನಿಂತಿದೆಹಣೆಯ ಮಧ್ಯೆ ಹೊರಬಂದ ಕೂದಲಿನ ಹೊದಿಕೆ ಕಳೆಗಟ್ಟಿದೆ...
ಮನದಲ್ಲಿ ಮೂಡಿ ಬಂದ ಚಿಂತನೆಕರಗಿ ಹೋಗದಿರಲಿ ಹೇಳುವ ದಾರಿಗಾಣದೆಕೊರಗಿ ಸಾಯದಿರಲಿ ಕನ್ನಡವೊಂದು ಅದ್ಭುತ ಆಟವುಆಡುವ ಛಲವಿರಬೇಕುಕಟ್ಟುವ ಲಯವಿರಬೇಕು ಪಳ್ಳನೆ ಮಿಂಚಿನಂತೆಕಂಡು ಬಂದ ಭಾವನೆಗೆಪದಗಳ ಹೊಸೆಯಬೇಕುಸಂಬಂಧ ಬೆಸೆಯಬೇಕು ಬಳಸಿದ ನುಡಿಗಳಲ್ಲಿ ಸ್ಪಷ್ಟತೆ ತರಬೇಕುಗಳಿಸಿದ ಆಲೋಚನೆಗಳಲ್ಲಿ ನೈಜತೆ ಕಾಣಬೇಕು ಶಿಲ್ಪಿಯ ಕುಸುರಿ ಕೆತ್ತನೆಯಂತೆಜೀವಕಳೆ ತುಂಬಿದ ಮೂರ್ತಿಯಂತೆ ಎಂದೂ ಕೇಳದ ಭೃಂಗದ...
ಮನವೆಂಬ ಯಮುನಾ ನದಿಯಲಿ ಅಹಂಕಾರದ ಕಾಳಿಂಗ ಸರ್ಪ ನೆಲಸಿಹುದುಅಪಖ್ಯಾತಿ ಅಪಜಯ ಅಸಹನೆ ಅಸಹಕಾರ ಅಪಕ್ವತೆ ಅರಾಜಕತೆ ಅಸುರಕ್ಷತೆ ಎಂಬ ಹೆಡೆಗಳ ಪಡೆದಿಹುದು ಸರೀಸೃಪದ ವಿಷವು ಪ್ರೀತಿ ವಾತ್ಸಲ್ಯಗಳ ಅಸ್ವಸ್ಥತೆಗೆ ಕಾರಣವಾಗಿಹುದುಇದ ಕಂಡ ಸಾತ್ವಿಕ ಗುಣಗಳೆಂಬ ಕೃಷ್ಣ ಜಾಗೃತನಾಗಿಹನು ಯೋಗವೆಂಬ ಕದಂಬ ವೃಕ್ಷದಿಂದ ನದಿಗೆ ಜಿಗಿದಿಹನುಪ್ರಾಣಾಯಾಮ ಧ್ಯಾನವೆಂಬ ಪುಟ್ಟ...
ಹಂಬಲಿಸಿ ತಂದ ಹೊಸ ವಾಹನದ ಸಂತಸ ಉಳಿಯುವುದು ಅದು ಮಾಸಲಾಗುವ ತನಕಹಪಹಪಿಸಿ ಕಟ್ಟಿಸಿದ ಮನೆಯ ಖುಷಿ ಇರುವುದು ಅದಕ್ಕಿಂತ ದೊಡ್ಡ ಮನೆ ನೋಡುವ ತನಕ ಅಂಗಡಿ ಅಂಗಡಿ ತಿರುಗಿ ತಂದ ಹೊಸ ವಿನ್ಯಾಸದ ಅಂಗಿಯ ಮೇಲಿನ ಅಕ್ಕರೆ ಒಂದೆರಡು ಬಾರಿ ಉಡುವ ತನಕಇಷ್ಟಪಟ್ಟು ಸವಿಯಲು ಮಾಡಿಸಿಕೊಂಡ ಪಂಚ...
ಪ್ರಾಣ ಪಕ್ಷಿ ದೇಹವೆಂಬ ಪಂಜರವ ಬಿಟ್ಟು ಹಾರಿಮೃತ್ಯು ಚುಂಬನದಿಂದ ನಿನಗೆ ಹೆಣವೆಂಬ ಹೊಸ ಹೆಸರು ಬಂದಿರಲು ಹಸಿದ ಹೊಟ್ಟೆಯಲಿ ಸಂಕಟ ತುಂಬಿಕೊಂಡು ಕಣ್ಣೀರು ಸುರಿಸಿದ ಬಂಧುಗಳೆಲ್ಲಾಅಂತ್ಯಸಂಸ್ಕಾರದ ತಯಾರಿಯಲ್ಲಿ ತೊಡಗಿರಲು ಹಚ್ಚಿದ ಊದುಬತ್ತಿಯ ಸುವಾಸನೆ ವಿಚಿತ್ರ ಅನುಭೂತಿ ತರುತಿರಲುಹಾಕಿದ ಹಾರಗಳು ಭಾರವೆಂದು ಹೇಳಲು ಬಾಯೆಲ್ಲಿ ? ಕೂತು ಕಿರಿ...
ಎಷ್ಟೊಂದು ಮುಗ್ದತೆ ಇದೆ ಮೊಗದಲ್ಲಿಅಷ್ಟೊಂದು ನಿಸ್ವಾರ್ಥ ಭಾವವಿದೆ ಆ ನಗೆಯಲ್ಲಿ ಅಮ್ಮನ ಕಾಡಿ ಬೇಡಿ ಜಾತ್ರೆಯಲಿ ತಂದ ಮಣಿಸರಅಕ್ಕನಿಗೆ ಗೊತ್ತಾಗದಂತೆ ಕದ್ದು ಬಳೆದುಕೊಂಡ ತುಟಿಯ ಬಣ್ಣ ಮಾಮ ಕೊಡಿಸಿದ ಜರತಾರಿ ಲಂಗಈ ಕಿವಿಯಿಂದ ಆ ಕಿವಿಯವರೆಗೆ ದೊಡ್ಡಮ್ಮ ಮುಡಿಸಿದ ಕನಕಾಂಬರಿ ಮಾಲೆ ಸೇರಿದ ಬಂಧು ಬಳಗವೆಲ್ಲಾ ಎನ್ನ...
ಒಂಭತ್ತು ತಿಂಗಳ ಹಿಂದೆ ಅಂಕುರವಾದ ಮುದ್ದು ಸಸಿಯಿಂದು ಪ್ರಪಂಚಕೆ ಸೇರುತಿದೆನವಿರಾದ ಈ ಕುಸುಮವನ್ನು ಬಹು ಜತನದಿಂದ ಸ್ವಾಗತಿಸುತ್ತಿದೆ ವೈದ್ಯ ಲೋಕದ ಜೀವ ಅಮ್ಮನ ಕರುಳಿಂದ ಬೇರ್ಪಡಿಸಿದ ಡಾಕ್ಟರಮ್ಮಳ ಹೊಡೆಯಲು ಪುಟ್ಟ ಮುಷ್ಟಿ ಕಟ್ಟಿದೆಒಲವು ತುಂಬಿದ ಕಂಗಳ ನೋಡಿ ಹಾಗೇ ನಿದ್ದೆಗೆ ಜಾರಿದೆ ತೆಳು ಗುಲಾಬಿ ಬಣ್ಣದ ತ್ಚಚೆಯಲ್ಲಿ...
ಹಾರುವ ಹೂವೊಂದು ಮರದ ಮೇಲೆ ಕುಳಿತಿದೆಸಿಹಿಯಾದ ಹಣ್ಣು ಸವಿಯಲು ಅರಗಿಳಿಯು ಕಾಯುತ್ತಿದೆ ಬಾಗಿದ ಕೊಕ್ಕು ಅತ್ತಿತ್ತ ಹೊರಳುವ ಗುಲಗಂಜಿಯಂತ ಕಣ್ಣುಗಳುಕತ್ತು ಅಲ್ಲಾಡಿಸಿದಾಗ ಮೇಲೆದ್ದು ಕೂರುವ ಕೆಂಪನೆಯ ಜುಟ್ಟಿನ ಭಾಗಗಳು ಕಡು ನೀಲಿ ಬಣ್ಣದ ಪುಕ್ಕಗಳು ಹಳದಿ ವರ್ಣದ ಮೈಗೆ ಮೆರಗು ನೀಡಿವೆಚೂಪಾದ ಉಗುರುಗಳು ಕಾಂಡಕ್ಕೆ ಚುಚ್ಚಿ ಬಳಸಿ...
ಸಂಬಂಧಗಳ ಸಂತೆಯಲ್ಲಿ ಒಬ್ಬಂಟಿ ನಾನುನಿಸ್ವಾರ್ಥ ಪ್ರೇಮವ ಮಾರಲು ಬಂದವನು ಶ್ರೀಮಂತ ವ್ಯಾಪಾರಿಗಳ ತಳುಕು ಬಳುಕಿನ ಸರಕಲ್ಲಿ ಎನ್ನ ವ್ಯಾಪಾರವ ಕಳೆದುಕೊಂಡವನುಬಣ್ಣದ ಮಾತುಗಳ ಭರದಲ್ಲಿ ತನ್ನ ಮೌಲ್ಯವ ಕುಗ್ಗಿಸಿಕೊಂಡವನು ಹಣ ಅಂತಸ್ತಿನ ಸಂಬಂಧಗಳೇ ಈ ಸಂತೆಯಲಿ ಜೋರು ಮಾರಾಟವಾಗುವವುಅಧಿಕಾರ ದರ್ಪಗಳ ಅಂಗಡಿ ಮುಂದೆ ಸಾಲುಗಳೇ ತೋರುತಿಹವು ಮೊದಲು ತೋರಿದ...
ತೀವ್ರ ನಿಗಾ ಘಟಕ ಎಂಬ ಬರಹದ ಕೋಣೆ ಪ್ರವೇಶಿಸಿ ಇಂದಿಗೆ ಮೂರು ದಿನ ಮೈ ಕೊರೆಯುವಷ್ಟು ತಂಪು ಮೂಗಿಗೆ ಕೈಗೆ ಅಳವಡಿಸಿದ ವಿಚಿತ್ರ ಪರಿಕರಗಳುಆಸ್ಪತ್ರೆಯವರು ತೊಡಿಸಿದ ಹಸಿರು ಬಣ್ಣದ ಗೌನುಗಳುಆಗಾಗ ಬಂದು ಅವರನ್ನು ನನ್ನ ಸ್ಥಾನದಲ್ಲಿ ಕಲ್ಪಿಸಿಕೊಂಡು ಭಯಪಡುವ ಬಂಧುಗಳು ಎಪ್ಪತ್ತೆಂಟು ವರ್ಷ ಸರಾಗವಾಗಿ ಹೊರ ಹೋಗುತ್ತಿದ್ದ...
ನಿಮ್ಮ ಅನಿಸಿಕೆಗಳು…