Author: K M Sharanabasavesha
ಕವಿತೆಯೆಂದರೇನು ?
ಮಣ್ಣಿನ ಕಣ ನೋಡಿ ಆ ಜಾಗದಸಮಸ್ತ ಕಥೆ ಹೇಳುವ ಶಕ್ತಿ ವನಸುಮದ ಸೌಂದರ್ಯವಸ್ವರ್ಗ ಸಮಾನವಾಗಿಸುವ ಭಕ್ತಿ ಅನಂತತೆಯನ್ನು ಅಂಗೈಯಲ್ಲಿಹಿಡಿಯುವ ಅನುಭೂತಿ ಜನಮಾನಸದಲಿ ಅಮರತ್ವವಪಡೆಯಲು ಭಗವಂತ ನೀಡಿದ ಯುಕ್ತಿ ವಾಸ್ತವತೆಯ ಅಶ್ವವೇರಿ ಕಲ್ಪನಾ ಲೋಕದಲಿವಿಹರಿಸಲು ಪಡೆದ ರಹದಾರಿ ಸಾಲುಗಳ ಪದ ಪುಂಜಗಳ ಬೆನ್ನೇರಿಬಂದ ಬತ್ತದ ಭಾವನೆಗಳ ಝರಿ ಒಮ್ಮೊಮ್ಮೆ...
ಅಪ್ಪನ ಹೆಗಲ ಮೇಲಿಂದ ನೋಡಿದ ಜಾತ್ರೆ
ಊರಲಿ ಆರಾಧ್ಯದೈವದ ರಥೋತ್ಸವ ನಡೆದಿತ್ತುಜನಜಂಗುಳಿಯ ನಡುವೆ ಆಕರ್ಷಕ ಜಾತ್ರೆ ನೆರೆದಿತ್ತು ಅಪ್ಪನ ಹೆಗಲ ಮೇಲೆ ನನ್ನ ಸವಾರಿ ಸಾಗಿತ್ತುಕೊಬ್ಬರಿ ಎಣ್ಣೆ ಹಚ್ಚಿ ಅಮ್ಮ ಕ್ರಾಪು ತೆಗೆದ ತಲೆ ಬಿಸಿಲಿಗೆ ಕಾದಿತ್ತು ನೆಟ್ ಬನೀನು ತೊಟ್ಟು ಲುಂಗಿ ಮೇಲೆ ಎತ್ತಿ ಕಟ್ಟಿಬಾಯಿ ಅವಡುಗಚ್ಚಿ ತೊಟ್ಟಿಲುಗಳ ನೆಗೆದು ಹಿಡಿದುಕೆಳಕ್ಕೆ ತಳ್ಳುವ...
ಭುವಿಗಿಳಿದ ದೇವತೆ
ಮಗಳಲ್ಲ ನೀನು ದೇವತೆಹೆಗಲ ಮೇಲೆ ಹೊತ್ತು ಮೆರವಣಿಗೆ ಹೊರಟಿರುವೆ ಶಾಪವಲ್ಲ ನೀನು ಭರವಸೆಕಂಗಳಲ್ಲಿಟ್ಟು ಜೋಪಾನ ಮಾಡುತ್ತಿರುವೆ ಅಪಶಕುನವಲ್ಲ ನೀನು ಅದೃಷ್ಟಹೃದಯದಲ್ಲಿಟ್ಟು ಬೆಳಸುತ್ತಿರುವೆ ದುರಾದೃಷ್ಟವಲ್ಲ ನೀನು ಸೌಭಾಗ್ಯಕಣ್ಣಿಗೆ ಒತ್ತಿಕೊಂಡು ಪೊರೆಯುತ್ತಿರುವೆ ಕಾಡುವ ಕಷ್ಟವಲ್ಲ ನೀನು ಮಮತೆಯ ಪುತ್ಥಳಿಪ್ರೀತಿ ಮಮಕಾರ ಸುರಿಸಿ ಪೋಷಿಸಿಸುತ್ತಿರುವೆ ಬೆಂಬಿಡದ ಭೂತವಲ್ಲ ನೀನು ಭೂತಾಯಿತಲೆಯ ಮೇಲಿಟ್ಟು...
ಹೀಗೊಂದು ಪ್ರಾರ್ಥನೆ
ಮರಗಳ ಮಾರಣ ಹೋಮ ಮಾಡಿಉಸಿರಾಡುವ ಗಾಳಿಯನ್ನೇ ಕಲುಷಿತಗೊಳಿಸಿಅನೇಕ ಖಾಯಿಲೆಗಳಿಗೆ ಕಾರಣವಾಗಿರುವ ನನಗೆಹಸಿರು ಬೆಳಸಿ ಉಸಿರು ಉಳಿಸಿಕೊಳ್ಳಲುಕೊಡು ಎನಗೆ ಓ ದೇವ ಇನ್ನೊಂದು ಅವಕಾಶವ ಕೈಗಾರೀಕರಣ ಹೆಸರಲ್ಲಿ ಮಾರಣಾಂತಿಕ ರಾಸಾಯನಿಕಗಳನದಿ ಪಾತ್ರಕ್ಕೆ ಯಥೇಚ್ಛವಾಗಿ ಹರಿಯ ಬಿಟ್ಟುಕೊಚ್ಚೆ ಕೊಳಕುಗಳನ್ನು ಪವಿತ್ರ ಜಲಕ್ಕೆ ಹಕ್ಕಂತೆ ಸೇರಿಸಿಜಲಮಾಲಿನ್ಯವ ಉಂಟು ಮಾಡಿದ ಎನಗೆತ್ಯಾಜ್ಯಗಳ ಶುಚಿಗೊಳಿಸಿ...
ನಿಲ್ಲದ ಹೋರಾಟ
ಸುತ್ತಲೂ ಕಾರ್ಗತ್ತಲೆ ತುಂಬಿರಲುಬೆಳಕನ್ನು ನುಂಗಿ ಅಂಧಕಾರ ಮೆರೆಯುತ್ತಿರಲು ಭರವಸೆಯ ಕಿರಣಗಳೇ ಮರೆಯಾಗಿ ಕಾರ್ಮೋಡ ಕವಿದಿರಲುಗುಡುಗು ಮಿಂಚುಗಳ ನಡುವೆ ಸುಳಿಗಾಳಿ ಬೀಸುತಿರಲು ಒಬ್ಬಂಟಿಯಾಗಿ ಈ ಕತ್ತಲೆ ದೂರಮಾಡಲು ಬೆಳಗುತಿರುವೆನನ್ನ ನಾನು ಕರಗಿಸಿಕೊಂಡು ಉರಿಯುತ್ತಿರುವೆ ಕಡು ಕತ್ತಲಿನ ಕೂಡ ಯುದ್ಧದಲ್ಲಿ ತೊಡಗಿಕೊಂಡಿರುವೆಅತಿ ಸಣ್ಣ ಮೊಂಬತ್ತಿಯೆಂಬ ಕೀಳರಿಮೆ ಎನಗಿಲ್ಲ ಈ ಕಾಳಗದಲ್ಲಿ...
ಮುದ್ದು ಕಂದ
ಬೆಣ್ಣೆ ಮುದ್ದೆಯಂತಹ ದೇಹಗಾಜಿನಂತಹ ಕಣ್ಣುಗಳು ಗುಲಾಬಿ ದಳಗಳಂತಹ ಕೆನ್ನೆಗಳುಹೊರಟು ನಿಂತ ಅಪ್ಪನ ತಡೆದು ನಿಲ್ಲಿಸುವ ನೋಟಗಳು ಕಾಲವೇ ನೀ ಮೆಲ್ಲಗೆ ಹರಿಯುತ್ತಿರುಸರಿದು ಹೋಗದಿರಲಿ ಈ ಕ್ಷಣಗಳುಜಾರಿ ಸಾಗದಿರಲಿ ಈ ದೃಶ್ಯಗಳು ಕುಲಾವಿ ಕಟ್ಟಿದ ಸುಂದರ ಕುಸುಮವಿಂದು ತಲೆ ಎತ್ತಿ ನಿಂತಿದೆಹಣೆಯ ಮಧ್ಯೆ ಹೊರಬಂದ ಕೂದಲಿನ ಹೊದಿಕೆ ಕಳೆಗಟ್ಟಿದೆ...
ಕನ್ನಡ ಪದಗಳು
ಮನದಲ್ಲಿ ಮೂಡಿ ಬಂದ ಚಿಂತನೆಕರಗಿ ಹೋಗದಿರಲಿ ಹೇಳುವ ದಾರಿಗಾಣದೆಕೊರಗಿ ಸಾಯದಿರಲಿ ಕನ್ನಡವೊಂದು ಅದ್ಭುತ ಆಟವುಆಡುವ ಛಲವಿರಬೇಕುಕಟ್ಟುವ ಲಯವಿರಬೇಕು ಪಳ್ಳನೆ ಮಿಂಚಿನಂತೆಕಂಡು ಬಂದ ಭಾವನೆಗೆಪದಗಳ ಹೊಸೆಯಬೇಕುಸಂಬಂಧ ಬೆಸೆಯಬೇಕು ಬಳಸಿದ ನುಡಿಗಳಲ್ಲಿ ಸ್ಪಷ್ಟತೆ ತರಬೇಕುಗಳಿಸಿದ ಆಲೋಚನೆಗಳಲ್ಲಿ ನೈಜತೆ ಕಾಣಬೇಕು ಶಿಲ್ಪಿಯ ಕುಸುರಿ ಕೆತ್ತನೆಯಂತೆಜೀವಕಳೆ ತುಂಬಿದ ಮೂರ್ತಿಯಂತೆ ಎಂದೂ ಕೇಳದ ಭೃಂಗದ...
ನಿಮ್ಮ ಅನಿಸಿಕೆಗಳು…