Author: ಕು.ಸ.ಮಧುಸೂದನ್ ನಾಯರ್, ku.sa.madhusudan@gmail.com
ದು:ಖವಾಗಿತ್ತು,ಆಕಾಶದತ್ತ ನೋಡಿದೆ ಮುನಿಸಿಕೊಂಡಂತಿದ್ದ ನಕ್ಷತ್ರಗಳು ಹೊಳೆಯಲೇ ಇಲ್ಲ! ದು:ಖವಾಗಿತ್ತು,ಕಡಲಿನತ್ತ ನೋಡಿದೆ ತೆಪ್ಪಗಾಗಿದ್ದವು ಅಲೆಗಳು ಅಪ್ಪಳಿಸಲೇ ಇಲ್ಲ! ದು:ಖವಾಗಿತ್ತು,ಬಯಲ ಕಡೆ ನೋಡಿದೆ ಸತ್ತಪ್ರಾಣಿ ಕುಕ್ಕುತ್ತಿದ್ದವು ಹಸಿದ ಹದ್ದುಗಳು! ದು:ಖವಾಗಿತ್ತು,ಕವಿತೆಯ ಕಡೆ ನೋಡಿದೆ ಬಚ್ಚಿಟ್ಟುಕೊಂಡಿತ್ತು ಅವಳ ಸೆರಗಿನೊಳು! – ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ...
ಎಷ್ಟೊಂದು ಪ್ರೀತಿಸಿದೆವೆಂದರೆ ಬಂಧಿಸಿಟ್ಟ ಅನುಭವವಾಗಿ ಸರಳುಗಳ ಕತ್ತರಿಸಿಕೊಳ್ಳಲು ಹರಿತವಾದ ಗರಗಸ ಅರಸಿ, ಸೋತು ಮಾತುಗಳನೇ ಬಳಸಿಕೊಂಡೆವು! ಕತ್ತರಿಸಿಕೊಂಡ ಬಳಿಕ ಸರಳುಗಳ ನಿರಾಳರಾಗಿ ಬೆಳೆಯುತ್ತ ಹೋದೆವು. ಪರಸ್ಪರರ ನೆರಳಿನ ನರಳಾಟವಿರದೆ. ನಿಜ, ನೆರಳಲ್ಲಿ ಬೀಜ ಮೊಳಕೆಯೊಡೆಯುವುದಿಲ್ಲ ಒಡೆದರೂ ಸಸಿ ಹೆಮ್ಮರವಾಗುವುದಿಲ್ಲ! – ಕು.ಸ.ಮಧುಸೂದನ ನಾಯರ್...
ಬೆಕ್ಕುಗಳೆಂದರೆ ಅವಳಿಗೇನೋ ಆಕರ್ಷಣೆ ಅದಕೆಂದೇ ಕೆಂದು ಬಣ್ಣದ ಬೆಕ್ಕೊಂದಕ್ಕೆ ಹಾಲು ಅನ್ನ ಹಾಕಿ ಸಾಕಿ ಕೊಂಡಿದ್ದಳು ಬಂದವರೆದುರಲ್ಲಿ ಅದರದೇ ಗುಣಗಾನ ಅದರ ತೀಕ್ಷ್ಣ ಕಣ್ನುಗಳ ಬಗ್ಗೆ ನಿಮಿರುವ ಬಾಲದ ಬಗ್ಗೆ ತುಪ್ಪಳದಂತ ಅದರ ಕೂದಲ ಬಗ್ಗೆ ಸಪ್ಪಳವಾಗದಂತೆ ಬಂದು ಎದಮೇಲೆ ಮುಖವಿಟ್ಟು ತಬ್ಬಿ ಮಲಗುವ ಅದರ...
ಆಷಾಡದ ಬೀಸುಗಾಳಿಯ ಜೊತೆ ಸುರಿದ ಮಳೆಯ ನಟ್ಟಿರುಳಲ್ಲಿ ಕಿಟಕಿಯಿಂದ ಕದ್ದುಬಂದ ಬೆಕ್ಕಿಗೆ ಅಪರಿಚಿತವೇನಲ್ಲ ಅಡುಗೆ ಮನೆ. ಮಲಗುವ ಮುಂಚೆ ಕಾಯಿಸಿ ಕಟ್ಟೆಯ ಮೇಲಿಟ್ಟ ಹಾಲಿನ ಪಾತ್ರೆ ಫ್ರಿಜ್ಜಿನಲ್ಲಿಡಲು ಮರೆತು ಮಲಗಿದವಳಿಗೆ ನಟ್ಟಿರುಳಲ್ಲಿ ಚಪ್ಪರಿಸುವ ನಾಲಿಗೆಯ ಸದ್ದು ಕೇಳಿ ಗಾಬರಿಯೊಳಗೆ ಕಣ್ಬಿಟ್ಟು ದೀಪ ಹಾಕಿ...
ಕಟ್ಟಿದರೇನು ಹೂತೋಟದ ಸುತ್ತ ಎತ್ತರದ ಪಾಗಾರ ಬಂದ ಗಾಳಿ ಹೊತ್ತೊಯ್ಯುವುದು ಹೂಗಂಧವ! ಯಾವುದು ಕ್ರೂರತೆ ಕೋವಿಯನ್ನೇನು ಕೇಳುತ್ತಿ ಗುಂಡು ಹೊಡೆಸಿಕೊಳ್ಳುವ ಗುಂಡಿಗೆ ಇದ್ದರೆ ಹಿಡಿದ ಕೈಯ ಕೇಳು!. ಯುದ್ದ ಭೂಮಿಯಲ್ಲಿ ಬಿಳಿಯ ಬಾವುಟ ನಿಷಿದ್ದ ಖಡ್ಘವೊ ಕೋವಿಯೋ ಕೊನೆಗೆ ಫಿರಂಗಿಯೊ...
ಮಾತುಗಳೆಲ್ಲ ಮುಗಿದು ನೀರವ ಮೌನ ನಿರಾಳತೆಯ ಬಾವ ಬೇಕಾಗಲಿಲ್ಲ ಕತ್ತರಿಸಲು ಮಾರುದ್ದದಕೊಡಲಿ ಸಂಬಂದವ ಸಾಕಿತ್ತು ಒಂದೇ ಮಾತು ಹಾಳಾಗಿ ಹೋಗು ತಥಾಸ್ತು ಅಂದರೇನು? ಅಶ್ವಿನಿ ದೇವತೆಗಳು! . ತಿರುಗಿನಡೆದ ಬೆನ್ನಿಗಿರಲಿಲ್ಲ ಕಾಳಜಿ ಒದ್ದೆಯಾದ ಕಣ್ಣುಗಳ ಕಾಣಲು. ಕಷ್ಟಕಷ್ಟ! ಕಾಪಾಡಿಕೊಳ್ಳುವುದು ಹಾಗೆ ನೋಡಿದರೆ ಸಂಬಂದಗಳ ಕೆಲವನ್ನು ಕಾಪಾಡಬೇಕು...
ಕೋಗಿಲೆ ಹಾಡುತ್ತದೆ ಬುದ್ದಿವಂತ ತಲೆದೂಗುತ್ತಾನೆ ಅತಿಬುದ್ದಿವಂತ ತಲೆಕೆಡಿಸಿಕೊಳ್ಳುತ್ತಾನೆ ಹಾಡಿದ್ದು ಯಾರಿಗಾಗಿ? ಕತ್ತಿ ಬೀಸಿದರೆ ಕತ್ತರಿಸುವುದು ಖಚಿತ ಯಾರನ್ನೆಂದು ನಿರ್ದರಿಸಬೇಕಾದ್ದು ಹಿಡಿದ ಕೈಗಳೇ ಹೊರತು ಕತ್ತಿಯೇನಲ್ಲ! ಯಾವುದು ಕವಿತೆ ಬರೆದ ಕವಿಯನ್ನೇ ಕೇಳಬೇಕು ಇಲ್ಲ ಓದುಗನನ್ನ ಅತ್ತೆಯ ಪಾತ್ರ ನಿರ್ವಹಿಸುವ ವಿಮರ್ಶಕನಿಗೇನು ಕೇಳುತ್ತೀಯಾ? ಸಹೃದಯತೆಯೇ...
ಈಗ ಹಗಲನ್ನು ಇರುಳನ್ನೂ ಕಳೆದುಕೊಂಡೆ ಹೊಂಬಣ್ಣದ ಸಂಜೆಯೊಳಗೆ ತುಂಗೆಯ ಮರಳುರಾಶಿಯಲ್ಲಿ ಮೂಡಿದ ನಿನ್ನ ಹೆಜ್ಜೆಗಳ ಅನುಸರಿಸುವ ಭ್ರಮೆಯೊಳಗೆ ನನ್ನ ಕಾಲುಗಳು ಹೂತುಹೋದದ್ದು ನನಗೆ ಗೊತ್ತಾಗಲೇ ಇಲ್ಲ ಮೋಡಗಳ ಮರೆಯಿಂದ ಇಣುಕುತ್ತಿದ್ದ ಸೂರ್ಯ ನಿರಂತರವಲ್ಲವೆಂಬ ಅರಿವು ಮೂಡುವಷ್ಟರಲ್ಲಿ ಕಳೆದುಕೊಂಡಿದ್ದೆ ನಿನ್ನನೂ . ಕವಿತೆಯ ಪ್ರತಿಸಾಲನ್ನೂ ನೀನು ಆಕ್ರಮಿಸುವಾಗ ಪ್ರತಿ...
ಅವಳು ಗೊಣಗಿದಳು ಇವನು ರೇಗಿದ ಅವಳು ಅರಚಿದಳು ಇವನು ಕಿರುಚಿದ ಅವಳು ನೀನು ಅಹಂಕಾರಿಯೆಂದಳು ಇವನು ನೀನು ದುರಂಹಂಕಾರಿಯೆಂದ ಅವಳು ಕೈಲಿದ್ದ ತಟ್ಟೆ ಎಸೆದೆಳು ಇವನು ಲೇಸು ಕಟ್ಟುತ್ತಿದ್ದ ಬೂಟುಗಳ ಎಸೆದ ಅವಳು ಹಾಸಿಗೆ ದಿಂಬುಗಳ ಹರಿದು ಅರಳೆ ಹರಡಿದಳು ಇವನು ಅವಳ ಡ್ರೆಸ್ಸಿಂಗ್ ಟೇಬಲ್ಲಿನ...
ಹಾಗೆ ಬೆಳಕು ಹುಡುಕಿಹೊರಟವರೆಲ್ಲ ನಾಚುವಂತೆ ಮಿಂಚುಹುಳುವೊಂದು ಆ ಕತ್ತಲೆಯ ಕ್ಷಣದಲ್ಲಿ ಹಾದು ಹೋಯಿತು! ಕಣ್ಣು ಕೋರೈಸುವ ಬೆಳಕಿರದಿದ್ದರೂ ದಾರಿಗಾಣದೆ ದಿಕ್ಕೆಟ್ಟು ನಿಂತವನಿಗಷ್ಟು ಆತ್ಮವಿಶ್ವಾಸ ತುಂಬಿತು. . ಬೆಳಕಲ್ಲಿ ಬೆತ್ತಲಾಗದೀ ಜಗದೊಳಗೆಲ್ಲಿ ಕತ್ತಲಿಲ್ಲ ಹೇಳು ಮನೆಯ ಪ್ರತಿ ಮೂಲೆಯೊಳಗೆ ಮನಸಿನ ಸ್ವಂತ ಕೋಣೆಯೊಳಗೆ ಹಾಗೆ ಹೊರಬಂದರೆ...
ನಿಮ್ಮ ಅನಿಸಿಕೆಗಳು…