Author: Sneha Prasanna, s.sonu.sneha@gmail.com

6

ಮುಗಿಲ ಮುಟ್ಟುವ ತವಕ..!

Share Button

ಗಗನವೇಕೆ ನಿ೦ತಿಹುದು ನನ್ನ ಕಣ್ಗಳ ಸೆಳೆಯುತ  ದೃಷ್ಟಿಯಾದೀತೆಂದು ಕರಿಮೋಡವು ಬೊಟ್ಟಿಟ್ಟು  ಕುಳಿತೇ ಬಿಟ್ಟಿದೆ ಮೆಲ್ಲ ನಿನ್ನನ್ನೆ ಕಾಯುತ್ತ… ‘ ನೀಲಿ ಬಣ್ಣದ ಚೆಲುವನೆ  ತುಂಟುತಾರೆಗಳ ಒಡೆಯನೆ ಅರುಣರಶ್ಮಿ ಧರೆಗಿಳಿಯಲು ನೀನೇ ತಾನೆ ರೂವಾರಿ ಸೂರ್ಯಾಸ್ತವು ರಂಗು ರಂಗಾಗಲು ನೀನಲ್ಲವೆ ಸಹಚಾರಿ ‘ ಎಷ್ಟು ವಿಶಾಲ ನೀನು! ತಿರುಗಿ...

13

ಇಬ್ಬನಿಯ ಮದರ೦ಗಿ…?!

Share Button

 . ಧರಣಿಯ ನೋಡೊ ಕುತೂಹಲದಿ ಚಿಗುರಿದ ಹೂಗಳಿಗೆ ಹಸಿರಸಿರಾಗಿ ಮೈದು೦ಬಿದ ಚೆಲುವೆಗೆ ಮಡಿಲಕ್ಕಿಯ ನೀಡುವ ಆಸೆಯಾಯಿತು…  . ಕಿಲಕಿಲನೆ ನಗುಚೆಲ್ಲಿದ ಹೂಗಳ ಹಿ೦ಡೇಕೊ ಪದವಾಡಿ ದೃಷ್ಟಿ ತೆಗೆಯಲು ಹೊ೦ಗಿರಣದ ಆರತಿ ಮಾಡಿಯಾಯಿತು…  . ಬಿಡುವಿಲ್ಲದ ರವಿಮಾಮನು ಹೂಗಳ ಗು೦ಪನು  ಸತಾಯಿಸುತಿರಲು ಕಮಲಿಯು ನಾಚಿದಳು, ಮಲ್ಲೆ,ಜಾಜಿ,ಸ್ಪಟಿಕಗಳ ಕೆನ್ನೆಯು ರ೦ಗೇರಿತು…...

7

ಕವಿತೆಯಾದಳಾ..ಗೆಳತಿ..?

Share Button

  ಭಾವಗಳ ಹಾದಿಯಲಿ ನಡೆಯುವಾಗ ಜೊತೆಯಾದಳು ಕವಿತೆ.. ನಿಸರ್ಗದ ಜಾತ್ರೆಯಲಿ ಹುಡುಕಾಡುವಾಗ ಸ್ನೇಹವರಸಿದ ಮನಕೆ ಇನ್ನೆಲ್ಲಿಯ ಕೊರತೆ..   ಕಲ್ಪನೆಯ ಚಾರಣದಿ ಅಲೆದಾಡುವಾಗ ಪದಗಳಿಗೇನೊ ನವಿರಾದ ಸ೦ಕಟವೇ ಕಾಡಿದೆ.. ಸ್ಪೂರ್ತಿಯ ಸೆಲೆತವು ಭಾವನೆಗೆ ಜೋತು ಬಿದ್ದಾಗ ಕಾದು ಬೇಸರಿಸಿದ ಸಾಲುಗಳ ಆರ್ಭಟದ ಗೋಜಿದೆ..   ಹೊತ್ತಿಗೆಗೆ ಹೊತ್ತಿಲ್ಲದ...

10

ದೂರ-ಸನಿಹಗಳ ನಡುವೆ…!

Share Button

ಮೌನದ ಕಡಲಿನಲಿ ನಿ೦ತ ನಿನ್ನ ಏಕಾ೦ತವ ತೊರೆದು ಭಾವನೆಗಳಲೆ ಮನಬಿಚ್ಚಿ ಮಾತನಾಡುತ ಭಾವಲಹರಿಯಲಿ ಮಿ೦ದಿಸುವ ನದಿಯಾದೆಯಾ…!   ದೂರದಲ್ಲಿಯೆ ಸನಿಹವ ಕ೦ಡು ತಿಳಿದು ತಿಳಿಯಲಾರದೆ ಹೋದೆ ದೂರವೇ ಆಗಬೇಕಿದ್ದ ನಿನ್ನೊಳಗಿನ ಅವಳ ಸನಿಹವೆ ಇರುವಳು ಎ೦ಬ ಹ೦ಬಲವ ಬಿಡದೆಲೆಹೋದೆಯಾ…!   ಸನಿಹವೆ ಇರಬಹುದು,ದೂರವೇ ಹೋಗಬಹುದು, ವಿಶಾಲ ನೆನಪಿಡುವ...

4

ಮುಸ್ಸಂಜೆಯ ಮೌನ..!

Share Button

  ತಿಳಿ ಮುಸ್ಸಂಜೆಯು ಮಳೆಯನು ತಂದಾಗ ಸುಯ್ಯನೆ ತಂಗಾಳಿ ಹಿತವಾಗಿ ಬೀಸುವಾಗ ಮೌನವಾಗಿ ಸ್ಪರ್ಶಿಸಿದ ಹನಿಗಳಿಗೇಕೋ ನರ್ತಿಸುವ ಚಿಂತೆ… ತಂಪಾದ ಚೆಲುವಲಿ ಮೊರೆಯಿಟ್ಟು ಬಿಡಿಬಿಡಿಯಾಗಿ ಭುವಿಯನು ಮುಟ್ಟಿ ಕೆಣಕುವಾಗ ಹೊಂಗೆಯ ಎಲೆಗಳಲಿ ಹನಿಗಳದೆ ಸಂತೆ… ಕತ್ತಲೆ ಕವಿಯುವ ಮುನ್ನ ಸ್ವಲ್ಪ ಚೆಂದದ ಬೆಳಕಲೆ ಹುಡುಕಲಾರದೆ ಹೋದೆ ನಾನು...

0

ನಿಲುಕದೆ ಓಡದಿರು ಓ ಚಂದಿರ!

Share Button

  ಬೆಳದಿಂಗಳ ಚೆಲುವ ಚಂದಿರ, ನೀನೆಷ್ಟು ಸುಂದರ!   ಧರೆಗಿಳಿದು ಒಮ್ಮೆ ಬರುವುದಾದರೆ ಸಾವಿರ ಚೆಲುವೆಯರ ಹಿಂಡು ನಿನಗಾಗಿ ಕಾದಿವೆ, ಆಗಾಗ ಮಿಂಚುವ ತಾರೆಗಳು ಕೂಡಾ ಬಿಟ್ಟು ಕೊಡಲು ಚಿಂತಿಸಿವೆ.   ನಿನ್ನ ಹೊಳಪಿನ ಕಂಪಿಗೆ ಈ ಇರುಳು ಸೊಗಸು, ಹೊಸದಾದ ಉಲ್ಲಾಸವು ಚಿಮ್ಮುತ ನವಿರಾಯಿತು ಮನಸು....

7

ಸೂರ್ಯನೆಷ್ಟು ರಸಿಕಾ!

Share Button

ಸೂರ್ಯನು ಸುಡುತ್ತಿದ್ದನು, ಅವನ ಹೃದಯ ತಣ್ಣಗಾಗಿಸಲು, ನಾನೊಂದು ಕವನ ಗೀಚಿದೆ. ಸೂರ್ಯನು ತಂಪಾಗುತ್ತಾ ಕೆಂಪಾಗಿ, ಸರಿದನು ಮೋಡದ ಮರೆಗೆ  ಆ ವಿರಹವ ತಾಳದೆ, ಅನುಭವದ ಹೆಣೆಯ ಹೆಣೆದು, ಮುಸುಕಾದ ಮೋಡದಿ, ಧರೆಗಿಳಿದು ಮಳೆಯಾಗಿ, ಕವನವ ಬರೆದ ಕೈಗಳನು ಚುಂಬಿಸಿದವು, ಆಹಾ! ಇವನೆಷ್ಟು ರಸಿಕಾ!  – ಸ್ನೇಹಾ ಪ್ರಸನ್ನ...

Follow

Get every new post on this blog delivered to your Inbox.

Join other followers: