Category: ಚಾರ್ ಧಾಮ್ ಯಾತ್ರಾ 2016
ಮಹಾಭಾರತದಲ್ಲಿ ಬರುವ ಕಥೆ-ಉಪಕಥೆಗಳು ಅಸಂಖ್ಯಾತ. ಅವುಗಳಲ್ಲಿ ಸ್ಥಳೀಯ ಮಾರ್ಪಾಡು ಮತ್ತು ಜನಪದ ಸೊಗಡು ಸೇರಿಕೊಂಡಿವೆ. ಪ್ರತಿ ಊರಿನಲ್ಲಿಯೂ ಅಲ್ಲಿಗೆ ಪಾಂಡವರು ಬಂದಿದ್ದರೆಂದು ಸಾರುವ ಉದಾಹರಣೆಗಳು ಬಹಳಷ್ಟು ಸಿಗುತ್ತವೆ. ಒಂದು ವೇಳೆ ಇದು ಕಲ್ಪನೆಯೇ ಆಗಿದ್ದರೂ, ಕಲ್ಪನೆಯಲ್ಲಿ ಸಾಮ್ಯತೆ ಇದೆ. ಈಗಿನಂತೆ ಮಾಹಿತಿಯ ಸಂರಕ್ಷಣೆ ಮತ್ತು ಸಂವಹನ ಮಾಧ್ಯಮಗಳು...
ಪುಟ್ಟ ಹಳ್ಳಿಯಲ್ಲಿ ಬಾಲ್ಯ ಕಳೆದ ನಮಗೆ ಅಲ್ಲಿ ಆಗಿನ ಕಚ್ಚಾಮಣ್ಣಿನ ರಸ್ತೆಯ ಮೇಲೆ ವಿಪರೀತ ಧೂಳೆಬ್ಬಿಸಿಕೊಂಡು ಹೋಗುತ್ತಿದ್ದ ಲಾರಿ, ಬಸ್ಸುಗಳನ್ನು ನೋಡುವುದೇ ಆಧುನಿಕತೆಯ ಸಂಪರ್ಕ ಎನಿಸುತ್ತಿತ್ತು. ಬಾನಿನಲ್ಲಿ ಅಪರೂಪಕ್ಕೆ ಕಾಣಸಿಗುತ್ತಿದ್ದ ‘ಲೋಹದ ಹಕ್ಕಿ’ ವಿಮಾನದ ಸದ್ದು ಅಪ್ಪಿ-ತಪ್ಪಿ ಕೇಳಿಸಿದರೆ, ಮನೆಯಂಗಳಕ್ಕೆ ಓಡೋಡಿ ಬಂದು ಅದು ಕಾಣಿಸುವಷ್ಟೂ ದೂರ...
ಬೆಳಗ್ಗೆ (23-09-2016) ಬೇಗ ಏಳುವ ಸಂದರ್ಭ ಇಲ್ಲದೆ ಇದ್ದರೂ ಆರೂವರೆಗೆ ಎಚ್ಚರ ಆಯಿತು. ಎದ್ದು ನಿತ್ಯವಿಧಿ ಪೂರೈಸಿ ನಾನೂ ಹೇಮಮಾಲಾ ಹೊರಗೆ ಹೋದೆವು. ಹೇಮಮಾಲಾ ಅವರು ಚಹಾ ಕುಡಿದರು. ಅಲ್ಲಿ ರಸ್ಕ್ ತೆಗೆದುಕೊಂಡು ಬಂದು ಎಲ್ಲರಿಗೂ ಹಂಚಿದರು. ನಮ್ಮ ಇಬ್ಬರು ಅನ್ನಪೂರ್ಣೆಯರು ಚಿತ್ರಾನ್ನ ಮಾಡಿದ್ದನ್ನು ತಿಂದು...
ಉದರಪೋಷಣೆ ಬೆಳಗ್ಗೆ (೨೧-೯-೧೬) ಆರು ಗಂಟೆಗೆ ಎದ್ದು ಬಿಸಿನೀರು ಪಡೆದು ಸ್ನಾನ ಮಾಡಿದೆವು. ಒಂದು ಬಾಲ್ದಿಗೆ ರೂ.೩೦. ಲತಾ ಅವರೇ ಕೊಟ್ಟರು. ಎದ್ದು ಸ್ನಾನವಾಗಿ ಸುಮ್ಮನೆ ಕೂತೆವು. ಇನ್ನು ಕೂತು ಕಾಲ ಕಳೆಯುವ ಬದಲು ದೇವಾಲಯಕ್ಕೆ ಹೋಗಬಹುದು. ಎಲ್ಲರೂ ಹೊರಟಿದ್ದಾರ ನೋಡಿ ಬರುತ್ತೇನೆಂದು ಎದ್ದು ಹೊರಗೆ ಬಂದು...
ಸೆಪ್ಟೆಂಬರ್ 06 ರಿಂದ 25, 2016 ರ ವರೆಗೆ 17 ಮಂದಿಯಿದ್ದ ನಮ್ಮ ತಂಡವು ಚಾರ್ ಧಾಮ್ ಯಾತ್ರೆ ಕೈಗೊಂಡಿತ್ತು. ಪ್ರಯಾಣದ ಭಾಗವಾಗಿ, 20 ಸೆಪ್ಟೆಂಬರ್ ನಂದು, ಬದರೀನಾಥ ಕ್ಷೇತ್ರದಿಂದ ಕೇವಲ 4 .ಕಿ.ಮೀ ದೂರದಲ್ಲಿರುವ ಮಾನಾ ಎಂಬ ಪುಟ್ಟ ಹಳ್ಳಿಗೂ ಭೇಟಿಕೊಟ್ಟಿದ್ದೆವು. ” ಇನ್ನು ಮುಂದೆ...
ವಿಶಾಲ ಬದರಿ ಜೋಷಿಮಠದಿಂದ ೨೦-೯-೨೦೧೬ರಂದು ಹೊರಟು ೧೨ಗಂಟೆಗೆ ವಿಶಾಲಬದರಿ ತಲಪಿದೆವು. ಕೇದಾರನಾಥದಿಂದ (ಗೌರಿಕುಂಡ) ಬದರಿನಾಥ ಸುಮಾರು ೨೩೩ ಕಿ.ಮೀ. ದೂರದಲ್ಲಿದೆ. ರಿಷಿಕೇಶದಿಂದ ೩೦೧ ಕಿ.ಮೀ. ದೂರ. ಬದರಿ ಸಮುದ್ರಮಟ್ಟದಿಂದ ೧೦೩೫೦ ಅಡಿ ಎತ್ತರದಲ್ಲಿದೆ. ಅಲ್ಲಿಯ ದೀಪಕ್ ವಸತಿಗೃಹದಲ್ಲಿ ಲಗೇಜು ಇಟ್ಟು ೧೨.೪೫ಕ್ಕೆ ವಾಪಾಸು ಬಸ್ ಹತ್ತಿ ಮಾನಾದೆಡೆಗೆ...
ತ್ರಿಯುಗಿ ನಾರಾಯಣ ನಾವು ಬಸ್ ಏರಿ ನಮ್ಮ ಸ್ಥಳದಲ್ಲಿ ಕೂತೆವು. ನಾವು ಬಸ್ ಹತ್ತಿದ್ದೇ ಮಂಗಾರಾಮ ಒಂದು ಬೀಡಿ ಹಚ್ಚಿ ಬಸ್ ಚಲಾಯಿಸಿದರು! ಅಲ್ಲಿಂದ ಹೊರಟು ದಾರಿಯಲ್ಲಿ ತ್ರಿಯುಗಿ ನಾರಾಯಣ ಎಂಬ ಪ್ರಾಚೀನ ದೇವಾಲಯಕ್ಕೆ ೨.೩೦ಗೆ ಬಂದೆವು. ಇದು ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯಲ್ಲಿದೆ. ತ್ರಿಯುಗಿನಾರಾಯಣ ದೇವಾಲಯವು...
ಕೇದಾರನಾಥನಿಗೆ ವಿದಾಯ ೧೮-೯-೨೦೧೬ರಂದು ಬೆಳಗ್ಗೆ ೫.೧೫ ಕ್ಕೆ ನಾವು ಕೋಣೆ ಖಾಲಿ ಮಾಡಿ ದೇವಾಲಯಕ್ಕೆ ಬಂದೆವು. ದೇವಾಲಯದ ಪಕ್ಕದಲ್ಲೇ ವಿಶಿಷ್ಟವಾಗಿ ಟೆಂಟ್ ಮಾದರಿಯ ವಸತಿಗೃಹ ನಿರ್ಮಿಸಿದ್ದಾರೆ. ಹಿಮದ ನಡುವೆ ಕೇದಾರನಾಥ ಬೆಟ್ಟ ಪ್ರದೇಶ ನಯನಮನೋಹರವಾಗಿ ಕಾಣುತ್ತದೆ. ಅದನ್ನು ಬೆಳಗಿನಝಾವ ನೋಡುವುದೇ ಸೊಬಗು. ಬೆಳಗ್ಗೆ ಹಿಮಪರ್ವತ ಶುಭ್ರ ಬಿಳಿಯಾಗಿ...
ಪೌರಾಣಿಕ ಪಾತ್ರವಾದ ಭಗೀರಥನ ತಪಸ್ಸಿನಿಂದ ಮತ್ತು ಅಪ್ರತಿಮ ಪ್ರಯತ್ನದಿಂದ ಸ್ವರ್ಗದಿಂದ ಭೂಮಿಗಿಳಿದು ಬಂದ ಪಾವನಗಂಗೆಯ ಬಗ್ಗೆ ವರಕವಿ ದ.ರಾ.ಬೇಂದ್ರೆಯವರು ಬರೆದ ‘ಇಳಿದು ಬಾ ತಾಯಿ ಇಳಿದು ಬಾ ‘ ಕವನವನ್ನು ಶಾಲಾದಿನಗಳಲ್ಲಿ ಓದಿದ್ದೇವೆ. ಭೌಗೋಳಿಕವಾಗಿ ಗಂಗಾ ನದಿಯು ಹುಟ್ಟುವ ಮೂಲಸ್ಥಳವಾದ ‘ಗೋಮುಖ’ ಎಂಬಲ್ಲಿನ ಹಿಮ ನೀರ್ಗಲ್ಲು ಗಂಗೋತ್ರಿಯಿಂದ ಸುಮಾರು...
ಹೆಲಿಕಾಫ್ಟರ್ ಏರಿದ ಮೊದಲ ಅನುಭವ ಕೇದಾರಕ್ಕೆ ಹೋಗುವ ಮಾರ್ಗದಲ್ಲಿ ನಾಲ್ಕಾರು ಕಡೆ ಬೇರೆ ಬೇರೆ ಕಂಪನಿಯ ಹೆಲಿಪ್ಯಾಡ್‌ಗಳಿವೆ. ನಾರಾಯಣಕಟ್ಟ ಎಂಬ ಊರಿನಲ್ಲಿ ಆರ್ಯನ್ ಎಂಬ ಕಂಪನಿಯ ಹೆಲಿಪ್ಯಾಡ್ ಇರುವ ಸ್ಥಳದಲ್ಲಿ ನಮ್ಮ ಬಸ್ ನಿಲ್ಲಿಸಿದರು ಮಂಗಾರಾಮ. ಅಲ್ಲಿ ಎರಡು ಹೆಲಿಪ್ಯಾಡ್ ಇದೆ. ಅವರಿಗೆ ಅಲ್ಲಿ ಕಮಿಶನ್ ಇರಬೇಕು....
ನಿಮ್ಮ ಅನಿಸಿಕೆಗಳು…