Category: ಬೊಗಸೆಬಿಂಬ

6

ಧ್ಯಾನ ಮತ್ತು ಅದರ ಮಹತ್ವ

Share Button

ಧ್ಯಾನ ಎಂದರೆ ಏಕಾಗ್ರತೆ, ತಲ್ಲೀನತೆ, ಅದು ಸ್ವಪರೀಕ್ಷೆಯ ಕ್ರಿಯೆ, ತನ್ನೊಳಗಿನ ದೈವತ್ವವನ್ನು ಹುಡುಕುವ ಕ್ರಿಯೆ. ದೈಹಿಕ ಚಟುವಟಿಕೆ ಹಾಗೂ ಮಾನಸಿಕ ಸ್ಥಿತಿಯ ಬಗೆಗೆ ಧೀರ್ಘಚಿಂತನೆಯೂ ಹೌದು. ಧ್ಯಾನ ಎಂದರೆ ಆತ್ಮವನ್ನು ಪೂರ್ಣ ಅರಿತುಕೊಳ್ಳುವ ಕ್ರಿಯೆ. ಅಷ್ಟಾಂಗ ಯೋಗದಲ್ಲಿ ಏಳನೇ ಅಂಗವೇ ಧ್ಯಾನ. ನಿತ್ಯ ಧ್ಯಾನದ ಅಭ್ಯಾಸ ಮಾಡಲು...

8

ನೀ ನನಗಿದ್ದರೆ ನಾ ನಿನಗೆ : ಪುಟ – 2

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು) ಮಾನವನ ಸ್ವಾಸ್ಥ್ಯವನ್ನು ನಾವು ದೈಹಿಕ, ಮಾನಸಿಕ, ಭಾವನಾತ್ಮಕ, ಹಾಗೂ ವೈಚಾರಿಕ ನೆಲೆಗಳಲ್ಲಿ ವಿಶ್ಲೇಷಿಸಬಹುದು. ಮೊದಲಿಗೆ ನಮ್ಮ ಶರೀರ ಏನು ಹೇಳುವುದು ಕೇಳಿ – ನೀನು ನನ್ನನ್ನು ಚೆನ್ನಾಗಿ ನೋಡಿಕೊಂಡರೆ ಮಾತ್ರ ನಾನು ನಿನ್ನೊಂದಿಗಿರುವೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ದೇಹ ಮತ್ತು ಮನಸ್ಸನು ಸ್ವಸ್ಥವಾಗಿಟ್ಟುಕೊಂಡರೆ...

9

ನೀ ನನಗಿದ್ದರೆ ನಾ ನಿನಗೆ ಪುಟ – 1

Share Button

ಗಡಿನಾಡಿನ ಕನ್ನಡದ ಹಿರಿಯ ಕವಿ ದಿವಂಗತ ಕಯ್ಯಾರ ಕಿಞ್ಷಣ್ಣ ರೈ ರಚಿಸಿದ ‘ನೀ ನನಗಿದ್ದರೆ ನಾ ನಿನಗೆ’ ಎಂಬ ಚೆಂದದ ಮಕ್ಕಳ ಪದ್ಯದೊಂದಿಗೆ ಈ ಚಿಂತನವನ್ನು ಆರಂಭಿಸೋಣ. – “ಸಂತೆಗೆ ಹೋದನು ಭೀಮಣ್ಣ, ಹಿಂಡಿಯ ಕೊಂಡನು ಹತ್ತು ಮಣಕತ್ತೆಯ ಬೆನ್ನಿಗೆ ಹೇರಿಸಿದ ಕುದುರೆಯ ಜೊತೆಯಲಿ ಸಾಗಿಸಿದ” ಕತ್ತೆಯು...

7

ಮಾಲಿನ್ಯ – ಒಂದು ವಿವೇಚನೆ

Share Button

ಮಾಲಿನ್ಯ – ಇದನ್ನು ಆಂಗ್ಲಭಾಷೆಯಲ್ಲಿ ‘Pollution’ ಎಂದು ಹೆಸರಿಸಿದ್ದಾರೆ. ಇದೊಂದು ಅತ್ಯಂತಮಲಿನ ಪದ. ಇದು ಎಷ್ಟು ಪ್ರಖ್ಯಾತಿ ಪಡೆದಿದೆಯೆಂದರೆ ಪ್ರತಿವರ್ಷ ಜೂನ್ 5 ರಂದು ವಿಶ್ವಪರಿಸರ ದಿನ ಎಂದು ಆಚರಿಸುತ್ತಾರೆ. ವಿಪರ‍್ಯಾಸವೆಂದರೆ ಪರಿಸರದ ಬಗ್ಗೆ ಕಾಳಜಿ ತೋರಿಸಲೋಸ್ಕರ ಕೇವಲ ಒಂದು ಗಿಡನೆಟ್ಟು ತಮ್ಮ ಸೇವೆ ಸಾರ್ಥಕವಾಯಿತೆಂದು ಕೈ...

8

ಕವಿಚಕ್ರವರ್ತಿಗಳ ಪ್ರತಿಭಾ ದಿಗ್ವಿಜಯ

Share Button

(ಪ್ರಾಚೀನ ಕನ್ನಡ ಸಾಹಿತ್ಯ ಸಾಮ್ರಾಜ್ಯದ ಮೂವರು ಪ್ರತಿಭಾವಂತರನ್ನು ಕುರಿತ ರೂಪಕ) ಗುರು ಮತ್ತು ಶಿಷ್ಯರ ಸಂಭಾಷಣೆ ನಡೆಯುತ್ತಿದೆ………….ಶಿಷ್ಯ: ಗುರುವೇ ನಮಸ್ಕಾರ. ನನಗೊಂದು ಸಂಶಯ. ಕನ್ನಡದ ಸಾಹಿತ್ಯ ಚರಿತ್ರೆಯನ್ನು ಓದುವಾಗ ರತ್ನತ್ರಯರು ಮತ್ತು ಕವಿಚಕ್ರವರ್ತಿಗಳು ಅಂತ ಗಮನಿಸಿದೆ. ರತ್ನತ್ರಯರು ಯಾರು? ಕವಿ ಚಕ್ರವರ್ತಿಗಳು ಯಾರು? ಸ್ವಲ್ಪ ವಿಶದವಾಗಿ ತಿಳಿಸಿ...

12

ಯಾರ ದೂರುವೆ ? ನಿನ್ನ ಯಾನ ಶೂನ್ಯನಾವೆ !

Share Button

ಎಲ್ಲರನು ನೀ ತೂಗುವ ತಕ್ಕಡಿಇನ್ನಾದರೂ ಖಾಲಿಯಿರಲಿ!ನಿನಗೆ ನೀನೇ ದೊರೆ;ನೀನೇ ಹೊರೆ!!- ರಾಜ್ಮಂಜು ಒಮ್ಮೆ ಗೌತಮ ಬುದ್ಧರು ತಮ್ಮ ಪ್ರವಚನದ ನಡುವೆ ಒಂದು ಸಂಗತಿಯನ್ನು ಅರುಹಿದರು: ‘ನಾನೊಮ್ಮೆ ನಡೆದು ಹೋಗುತ್ತಿದ್ದಾಗ ಮರದ ರೆಂಬೆಯೊಂದು ಮುರಿದು ನನ್ನ ಮೇಲೆ ಬಿತ್ತು. ನಾನಾಗ ಗಾಯಗೊಂಡೆ. ಆ ಮರಕ್ಕೆ ನನ್ನನ್ನು ಗಾಯಗೊಳಿಸುವ ಉದ್ದೇಶವಿತ್ತು...

8

ಭಗವದ್ಗೀತಾ ಸಂದೇಶ

Share Button

ಅರ್ಜುನನಿಗೆ ವಿಶ್ವರೂಪದ ದರ್ಶನ ಮಾಡಿಸುವುದಕ್ಕಾಗಿ ಪರಮಾತ್ಮನು ತನ್ನ ಯೋಗ ಬಲದಿಂದ ಒಂದು ಪ್ರಕಾರದ ಯೋಗ ಶಕ್ತಿಯನ್ನು ಅವನಿಗೆ ನೀಡಿದನು. ಆ ಶಕ್ತಿಯ ಪ್ರಭಾವದಿಂದ ಅರ್ಜುನನಿಗೆ ಅಲೌಕಿಕ ಸಾಮರ್ಥ್ಯ ದೊರೆತು ಭಗವಂತನ ದಿವ್ಯ, ಭವ್ಯ, ಅದ್ಭುತ ರೂಪವಾದ ವಿಶ್ವರೂಪವನ್ನು ವೀಕ್ಷಿಸಲು ಸಾಧ್ಯವಾಯಿತು. ಅದೇ ಪರಮಾತ್ಮನು ಕರುಣಿಸಿದ “ದಿವ್ಯದೃಷ್ಟಿ” ಯಾಗಿದೆ....

6

ಕನ್ನಡ ಶಾಲೆ ಕದಗಳನ್ನು ಹೀಗೂ ತೆರೆಯಬಹುದು !

Share Button

ನಮ್ಮೂರು  ಧಾರಾಕಾರ ಮಳೆಗೆ  ಸಿಗುವ ಸಹ್ಯಾದ್ರಿಯ ಸೆರಗಿನಲ್ಲಿದೆ. ಪ್ರತಿ ವರ್ಷ, ಆಷಾಢದ ಮಳೆಗೆ ನಮ್ಮೂರಲ್ಲಿ ಒಂದಿಷ್ಟು ಗುಡ್ಡ ಬೆಟ್ಟ ರಸ್ತೆಯಂಚು ಕುಸಿದು ಕೊರಕಲಾಗಿ, ಮನೆ ಮುಂದಿನ ಅಂಗಳವೂ ಇಷ್ಟಿಷ್ಟೇ ಹೊಳೆ ಹಳ್ಳಗಳ ಪಾಲಾಗಿ, ಇನ್ನೇನು ನಮ್ಮೂರು ಮನೆ ಮಳೆಯಂಬ ಮೊಸಳೆ ಬಾಯಿಗೆ ಬೀಳುತ್ತಿರೋ ಭಯಾನಕತೆಯನ್ನು ಆ ಸೀಸನ್...

7

ಶಿಕ್ಷಕ ವೃತ್ತಿ ಒಂದು ಅವಲೋಕನ

Share Button

ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಗುರುವಿಗೆ ತುಂಬಾ ಮಹತ್ವದ ಸ್ಥಾನವಿದೆ. ಬ್ರಹ್ಮ,ವಿಷ್ಣು, ಮಹೇಶ್ವರರಿಗೂ ಮಿಗಿಲಾದವನೆಂದೂ, ಸಾಕ್ಷಾತ್ ಪರಬ್ರಹ್ಮನೆಂದೂ ಗುರುವನ್ನು ನಮ್ಮ ಪರಂಪರೆ ಬಣ್ಣಿಸಿದೆ. ತಾಯಿಯನ್ನು ಮೊದಲ ಗುರು ಎಂದೇ ಕವಿ ಮನಸ್ಸು ವರ್ಣಿಸಿದೆ. “ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು, ಜನನಿಯಿಂದ ಪಾಠ ಕಲಿತ...

3

ನೈತಿಕತೆ ಮತ್ತು ನ್ಯಾಯಸಮ್ಮತ

Share Button

ಸಾಲು ಮನೆಗಳಲ್ಲಿ ವಾಸವಿದ್ದ ತಂಗಿ ರೇವತಿಯ ಮನೆಗೆ ಬಂದಿದ್ದ ಕಲ್ಪನಾಗೆ ಅಕ್ಕಪಕ್ಕಗಳ ಮನೆಗಳಲ್ಲಿ ನಡೆಯುತ್ತಿದ್ದ ಮಾತುಕತೆಗಳೆಲ್ಲಾ ಕೇಳುತಿತ್ತು.  ಈ ರೀತಿಯ ಮನೆಗಳಿಗೆ ವಾಸಕ್ಕೆ ಬಂದ ಕೆಲದಿವಸಗಳು ಅವರಿವರ ಮನೆಯ ಮಾತುಗಳು, ಕೆಲವು ವೇಳೆ ಖಾಸಗೀತನವೆಲ್ಲಾ ಹರಾಜು ಆದಂತೆನಿಸಿ ತಾವುಗಳು ಮಾತನಾಡುವಾಗ ದನಿ ತಗ್ಗಿಸಿ ಮಾತನಾಡುವುದನ್ನೂ ರೂಢಿಸಿಕೊಂಡರೂ ಕೆಲವು...

Follow

Get every new post on this blog delivered to your Inbox.

Join other followers: