Category: ಕವಿತೆಗಳ ದಿನಚರಿ

ಕವಿತೆಗಳ ದಿನಚರಿ

4

ಇವು ಬರೀ ಚಿಲ್ಲರೆ ವಿಷಯಗಳಲ್ಲ!

Share Button

ನನ್ನವಳು ದಿನಸಿ ಸಾಮಾನುಗಳನ್ನು ತರಲು ಹೇಳಿದ್ದಳು. ಆ ದಿನ ಶೆಟ್ಟರ ಅಂಗಡಿಗೆ ಹೊರಟಾಗ ಅಪ್ಪಾ ನಾನೂ ಬರ್ತೀನೆಂದು ಮಗಳು ಜೊತೆಯಾದಳು. ನನ್ನವಳು ಪಟ್ಟಿ ಮಾಡಿಕೊಟ್ಟಿದ್ದ ಎಲ್ಲವನ್ನೂ ಕೊಂಡ ನಂತರ ಕೊನೆಯಲ್ಲಿ ಶೆಟ್ಟರಿಗೆ ಹಣವನ್ನು ಕೊಟ್ಟು, ಮಗಳಿಗಿಷ್ಟದ ಚಾಕೊಲೇಟನ್ನು ಮಗಳ ಕೈಗಿಟ್ಟೆ. ಚಾಕೊಲೇಟ್ ಸಿಗುತ್ತಲೇ ‘ಬಾರಪ್ಪ ಮನೆಗೆ ಹೋಗೋಣ’ವೆಂದು ಅವಸರಿಸಿದಳು. ‘ಇರಮ್ಮ ಚಿಲ್ಲರೆ ಹಣ...

3

ಗುಬ್ಬಿಗೂಡು

Share Button

ಅದೊಂದು ದಿನ ನನ್ನೊಂದಿಗೆ ಹೊಲಕ್ಕೆ ಬಂದಿದ್ದ ಜಾಣೆ ಮಗಳು ಮರಳಿನಲ್ಲಿ ಆಟವಾಡುತ್ತಿದ್ದಳು. ಮನೆಯಲ್ಲಿದ್ದರೆ ಈ ಅವಕಾಶ ದೊರೆಯುವುದಿಲ್ಲ‌‌. ಮನೆಯಿಂದಾಚೆ ಆಡಲು ಹೋದರೆ ನನ್ನವಳು   ‘ಮಣ್ಣಿನಲ್ಲೆಲ್ಲ ಆಡಬೇಡ. ಬಟ್ಟೆ, ಕೈಕಾಲುಗಳೆಲ್ಲ ಕೊಳೆಯಾಗುತ್ತೆ’ ಎಂದು ಗದರುತ್ತಾಳೆ. ಆದ್ದರಿಂದ ಹೀಗೆ ಅಪ್ಪನ ಜೊತೆ ಆಗಾಗ ಹೊಲಕ್ಕೆ ಬರುವ ಜಾಣೆ ಕಂದಮ್ಮ ಮಣ್ಣಿನಲ್ಲಿ...

6

ಸಂತೆಯೊಳಗೊಂದು ಸುತ್ತು….

Share Button

‘ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ’ ನಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ಬಹಳಷ್ಟು ಸಾರಿ ಶಾಲೆಯಲ್ಲಿ ಗುರುಗಳು ಮತ್ತು ಮನೆಯಲ್ಲಿ ಹಿರಿಯರು ಮಕ್ಕಳಿಗೆ ಎಚ್ಚರಿಸಿ ಬುದ್ದಿ ಹೇಳುವಾಗ ಒಮ್ಮೆಯಾದರೂ ಅವರ ನಾಲಗೆಯ ಮೇಲೆ ಈ ಜನಪ್ರಿಯ ಗಾದೆ ಮಾತು ಮಿಂಚಿನಂತೆ ಸುಳಿದು ಹೋಗುತ್ತಿತ್ತು. ನಾನು ಪ್ರೌಢಶಾಲೆ ಓದುವ ಸಮಯದಲ್ಲಿ ಮನೆ-ಸಂತೆ-ಶಾಲೆ ಇವು...

9

ಒಗ್ಗರಣೆ ಅನ್ನ ಉರುಫ್ ಚಿತ್ರಾನ್ನ!

Share Button

ನಿನಗೆ ಅತಿ ಪ್ರಿಯವಾದ ಬ್ರೇಕ್ ಫಾಸ್ಟ್ ಅಥವಾ ಟಿಫನ್ ಯಾವುದೆಂದು ಯಾರಾದರು ಪ್ರಶ್ನಿಸಿದರೆ ನನ್ನ ಉತ್ತರ ಇದೇ ಆಗಿರುತ್ತದೆ. ಅದು ಅಮ್ಮ ಮಾಡಿಕೊಡುತ್ತಿದ್ದ ಒಗ್ಗರಣೆ ಅನ್ನ ಉರುಫ್ ಚಿತ್ರಾನ್ನ! ರಾತ್ರಿಯ ಅನ್ನ ಉಳಿದರೆ ಬೆಳಿಗ್ಗೆ ಅದೇ ತಂಗಳನ್ನಕ್ಕೆ ಎರಡೇ ಎರಡು ಈರುಳ್ಳಿ ಹಚ್ಚಿ, ಬಿಸಿ ಎಣ್ಣೆಯಲ್ಲಿ ಸಾಸಿವೆ...

14

ನಿನ್ನ ಬಿಟ್ಟಿರುವ ಶಿಕ್ಷೆ..

Share Button

ಇತ್ತೀಚೆಗೆ ನಮ್ಮ ಬಂಧುಗಳ ಮನೆಯಲ್ಲೊಂದು ಮದುವೆ ಸಮಾರಂಭವಿತ್ತು. ಈ ಸಮಯದಲ್ಲಿ ಮಗಳನ್ನು ಕರೆದುಕೊಂಡು ಹೋಗುವುದು ಸೂಕ್ತವಲ್ಲ ಅನಿಸಿದ್ದರಿಂದ ಎರಡು ದಿನಗಳ ಮುಂಚಿತವಾಗಿ ನನ್ನವಳನ್ನು ಬಂಧುಗಳ ಮನೆಗೆ ಬಿಟ್ಟುಬಂದು, ನಾನು ಮಗಳೊಂದಿಗೆ ಮನೆಯಲ್ಲಿಯೇ ಉಳಿದೆ. ಆ ಸಮಯದಲ್ಲಿ ನನ್ನ ದಿನಚರಿ ಪುಸ್ತಕದಲ್ಲಿ ಬರೆದ ಈ ಕವಿತೆಯ ಕುರಿತು ಹೆಚ್ಚೇನು...

10

ಎಲ್ಲಿರುವೆ ಎಂದರೆ ಎಲ್ಲೆಲ್ಲೂ ಇರುವೆ!

Share Button

ನಮ್ಮ ಬಾಲ್ಯದ ಪುಟಗಳಲ್ಲಿ ಇರುವೆಯದು ಒಂದು ಅಧ್ಯಾಯವಿದೆ. ನಮ್ಮದು ರೈತಾಪಿ ಕುಟುಂಬ ಆದ್ದರಿಂದ ಮನೆಯಲ್ಲಿ ಮುನ್ನೂರ ಅರವತ್ತೈದು ದಿನವು ದವಸ ಧಾನ್ಯದ ಮೂಟೆಗಳು ಇದ್ದೇ ಇರುತ್ತಿದ್ದವು. ಮುಸುರೆ ಇದ್ದಲ್ಲಿ ನೊಣ ಬರುವಂತೆ ಮನೆಯ ಯಾವುದೋ ಮೂಲೆಯಿಂದ ಸಾಲು ಸಾಲಾಗಿ ಶಿಸ್ತಿನ ಸಿಪಾಯಿಗಳಂತೆ ಹಾಜರಾಗುತ್ತಿದ್ದ ಇರುವೆಗಳು ಅಕ್ಕಿ, ರಾಗಿ,...

2

ಸದಾ ನಿಂತಲ್ಲೇ ನಿಂತಿದ್ದರೂ..

Share Button

ಒಂದಾನೊಂದು ಕಾಲದಲ್ಲಿ ಒಂದು ಕಾಡಿನಲ್ಲಿ ಸಿಂಹರಾಜ ವಾಸವಾಗಿದ್ದ. ಆ ಸಿಂಹರಾಜ ಬಹಳ ಕ್ರೂರಿಯಾಗಿದ್ದ. ತನಗೆ ಹಸಿವಾದಾಗೆಲ್ಲ ಕೈಗೆ ಸಿಕ್ಕ ಪ್ರಾಣಿಗಳನ್ನು ಬೇಟೆಯಾಡಿ ತಿಂದು ತನ್ನ ಹಸಿವನ್ನು ನೀಗಿಸಿಕೊಳ್ಳುತ್ತಿದ್ದ. ಇದರಿಂದಾಗಿ ಆ ಕಾಡಿನ ಉಳಿದೆಲ್ಲ ಪ್ರಾಣಿಗಳು ಜೀವ ಭಯದಿಂದ ಬದುಕುತ್ತಿರುತ್ತವೆ. ಅದೊಂದು ದಿನ ಕಾಡಿನ ಪ್ರಾಣಿಗಳೆಲ್ಲ ಸೇರಿ ಸಿಂಹರಾಜನಿಂದಾಗಿ...

5

ಅಳಿಸಿದ ಹಾಯ್ಕು

Share Button

ಸಡಗರವಿಲ್ಲ ಹೂದೋಟದಲ್ಲಿ ಹಕ್ಕಿ ಅಳಿಲುಗಳ ಗದ್ದಲವಿಲ್ಲ ಅದೊಂದು ದಿನ ಹೀಗೊಂದು ಹಾಯ್ಕು ಬರೆದಿದ್ದೆ. ಈಗೇಕೋ ಈ ಹಾಯ್ಕು ಸುಳ್ಳೆನಿಸುತ್ತಿದೆ. ಆದ್ದರಿಂದ ಈ ಹಾಯ್ಕುವನ್ನು ಅಳಿಸಿ ಹಾಕುತ್ತಿದ್ದೇನೆ. ಹಾಯ್ಕು ಕವಿಗಳು ಸತ್ಯವನ್ನಷ್ಟೇ ಬರೆಯಬೇಕು. ಸತ್ಯವನ್ನಷ್ಟೇ ಬರೆಯುತ್ತಾರೆ. ತಮ್ಮ ಪಂಚೇಂದ್ರಿಯಗಳ ಅನುಭವಕ್ಕೆ ದೊರೆತ ಸಂಗತಿಗಳನ್ನಷ್ಟೇ ಬರೆಯುತ್ತಾರೆ. ಸುಳ್ಳುಗಳನ್ನು ಅವರೆಂದೂ ಬರೆಯುವುದಿಲ್ಲ....

11

ಹಸಿರು ಜೋಳ ಹೊಲದಲ್ಲಿ..

Share Button

ಅದು ನಮ್ಮ ಮದುವೆಯಾದ ಹೊಸತು. ನಾವಾಗ ಬೆಂಗಳೂರಿಗೆ ಹೋಗಿದ್ದೆವು. ನೂತನ ದಂಪತಿಗಳಿಗೆ ಅಂತಹ ಜವಾಬ್ದಾರಿಗಳೇನು ಇರುವುದಿಲ್ಲ. ಆ ದಿನಗಳಲ್ಲಿ ಅವರನ್ನು ಊರೂರಿನಲ್ಲಿರುವ ಬಂಧು ಬಳಗದವರು ಕರೆದು ಕಳಿಸುವುದು ನಮ್ಮ ಕಡೆಯ ವಾಡಿಕೆ. ನಾವು ಸಹ ಹಾಗೆಯೇ ಬೆಂಗಳೂರಿನಲ್ಲಿರುವ ನಮ್ಮ ಬಂಧುಗಳ ಮನೆಗೆಂದು ಹೋಗಿದ್ದು. ಅಲ್ಲಿ ಮೂರ್ನಾಲ್ಕು ದಿನಗಳಿದ್ದು,...

5

ಅವಳ ಮೂಗುತಿಯಲ್ಲಿ ಒಂಟಿ ಇಬ್ಬನಿ

Share Button

ಮೂರು ಸಾಲಿನಲ್ಲಿ ಬರೆದಿದ್ದೆಲ್ಲ ಹಾಯ್ಕುವಾಗುವುದಿಲ್ಲ. ಮತ್ತು ಪದೇಪದೇ ಬರೆದಿದ್ದನ್ನೇ ಬರೆದರೆ ಕವಿತೆಗಳಲ್ಲಿ ಯಾವ ಸೃಜನಶೀಲತೆಯೂ ಉಳಿದಿರುವುದಿಲ್ಲ. ಇರುವುದರಲ್ಲಿಯೇ ಹೊಸತನ್ನು ತರುವುದು ಇಂದಿನ ಕವಿಯ ಪಾಲಿಗಿರುವ ವರವೂ ಹೌದು, ಶಾಪವೂ ಹೌದು. ಬರವಣಿಗೆಯ ಮಜಾ ಇರುವುದೇ ಇಲ್ಲಿ. ಎಲ್ಲರೂ ಬರೆದಿದ್ದನ್ನೇ ಬರೆಯುವುದು ಕಲೆಗಾರಿಕೆಯಲ್ಲ. ಹಿಂದಿನವರು ಬರೆದಿದ್ದನ್ನೇ ಮುಂದುವರಿಕೆಯಂತೆ ಬರೆಯುವುದರಲ್ಲಿ...

Follow

Get every new post on this blog delivered to your Inbox.

Join other followers: