Category: ಜ್ಯೋತಿರ್ಲಿಂಗ

7

ಜ್ಯೋತಿರ್ಲಿಂಗ 12 : ಘೃಶ್ನೇಶ್ವರ

Share Button

ಪಾರ್ವತಿಯ ಅಂಗೈಯಲ್ಲಿ ಉದ್ಭವವಾದ ಜ್ಯೋತಿರ್ಲಿಂಗವನ್ನು ನೋಡೋಣ ಬನ್ನಿ. ಒಮ್ಮೆ ಪಾರ್ವತಿಯು ಹಣೆಗೆ ತಿಲಕವನ್ನು ಹಚ್ಚಲು, ಕುಂಕುಮವನ್ನು ತನ್ನ ಅಂಗೈನಲ್ಲಿಟ್ಟು, ಅಲ್ಲಿದ್ದ ಶಿವಾಲಯ ಕೊಳದ ನೀರನ್ನು ಬಳಸಿ ಉಜ್ಜಿದಳಂತೆ. ಆಗ ಸಂಭವಿಸಿದ ಚಮತ್ಕಾರವೇ – ಅಂಗೈ ಮೇಲೆ, ಬೆರಳಿನ ಘರ್ಷಣೆಯಿಂದ ಉದ್ಭವವಾದ ಜ್ಯೋತಿಸ್ವರೂಪನಾದ ಘೃಶ್ನೇಶ್ವರ ಜ್ಯೋತಿರ್ಲಿಂಗ. ಘೃಶ್ನೇಶ್ವರ ಎಂಬ...

7

ಜ್ಯೋತಿರ್ಲಿಂಗ 11: ಕಾಶಿ ವಿಶ್ವನಾಥ

Share Button

ಗಂಗಾ ತರಂಗ ರಮಣೀಯ ಜಟಾ ಕಲಾಪಂಗೌರೀ ನಿರಂತರ ವಿಭೂಷಿತ ವಾಮಭಾಗಂನಾರಾಯಣ ಪ್ರಿಯ ಮನಂಗ ಮದಾಪಹಾರಮ್ವಾರಾಣಸೀ ಪುರಪತಿ ಭಜ ವಿಶ್ವನಾಥಂ ‘ವಿಶ್ವನಾಥಾಷ್ಟಕಮ್’ ಎಂಬ ಶಿವಮಂತ್ರದಲ್ಲಿ ಬರುವ, ಈ ಸಾಲುಗಳು, ವಿಶ್ವಕ್ಕೆ ಒಡೆಯನಾದ ವಿಶ್ವನಾಥನ ಮಹಿಮೆಯನ್ನು ಲೋಕಕ್ಕೇ ಸಾರುತ್ತಿವೆ. ಕಾಶಿ ಎಂದಾಕ್ಷಣ ಹಿಂದೂಗಳ ಮೈ ಮನ ನವಿರೇಳುವುದು. ಬದುಕಿನಲ್ಲಿ ಒಮ್ಮೆಯಾದರೂ...

5

ಜ್ಯೋತಿರ್ಲಿಂಗ 10: ತ್ರಯಂಬಕೇಶ್ವರ

Share Button

ಓಂ ತ್ರಯಂಬಕಂ ಯಜಾಮಹೆ ಸುಗಂಧಿಂ ಪುಷ್ಟಿವರ್ಧನಂಊರ್ವಾರುಕಮಿವ ಬಂಧನಾತ್, ಮೃತ್ಯೋರ್ಮುಕ್ಷೀಯ ಮಾಮೃತಾತ್ ಈ ಮಹಾ ಮೃತ್ಯುಂಜಯ ಮಂತ್ರವನ್ನು ನಾವೆಲ್ಲರೂ ನಿತ್ಯ ಪಠಣ ಮಾಡುತ್ತೇವಲ್ಲವೇ? ಈ ಮಂತ್ರದ ಅರ್ಥವನ್ನು ತಿಳಿಯೋಣ – ಮೂರು ಕಣ್ಣಿನ ಪರಮೇಶ್ವರನೇ, ಈ ಲೌಕಿಕ ಜಗತ್ತಿನೊಂದಿಗೆ ನಮ್ಮ ಬಂಧನವು ಅತಿ ಸೂಕ್ಷ್ಮವಾಗಿರಲಿ. ಹೇಗೆ ಸೌತೇಕಾಯಿಯು ಬಳ್ಳಿಯೊಂದಿಗೆ...

8

ಜ್ಯೋತಿರ್ಲಿಂಗ 9: ಕೇದಾರೇಶ್ವರ

Share Button

ಹಿಮಗಿರಿಗಳ ಮಡಿಲಲ್ಲಿ ನೆಲೆಯಾಗಿರುವ ಕೇದಾರೇಶ್ವರ ಜ್ಯೋತಿರ್ಲಿಂಗ. ಮುಂಜಾನೆಯ ಸಮಯ. ರವಿಯ ಹೊಂಬೆಳಕಿನಲ್ಲಿ ಫಳಫಳನೆ ಹೊಳೆಯುತ್ತಿರುವ ಪರ್ವತಗಳು ಚಿನ್ನದ ಕಳಶಗಳಂತೆ ಕಂಗೊಳಿಸುತ್ತಿವೆ. ಬೆಳಗಿನ ನಿರ್ವಾಣ ಪೂಜೆಯ ಸಮಯ – ಯಾವ ಆಭೂಷಣಗಳನ್ನೂ ಧರಿಸದ ಶಿವನು ಪಿಂಡದ ಸ್ವರೂಪದಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ. ರುದ್ರಾಭಿಷೇಕ ಮಾಡುತ್ತಾ, ಮಂತ್ರಗಳನ್ನು ಪಠಿಸುತ್ತಿರುವ ಪುರೋಹಿತರು,...

6

ಜ್ಯೋತಿರ್ಲಿಂಗ 8: ನಾಗೇಶ್ವರ

Share Button

ನಿಸರ್ಗದ ಪ್ರತಿರೂಪದಂತಿರುವ ಈಶ್ವರನು – ತನ್ನ ಕೊರಳಿಗೆ ಹಾಗೂ ಬಾಹುಗಳಿಗೆ ಸರ್ಪವನ್ನೇ ಆಭರಣದಂತೆ ಸುತ್ತಿಕೊಂಡು ಸರ್ಪಭೂಷಣನಾದ, ಗಂಗೆಯ ರಭಸವನ್ನು ತಡೆಯಲು, ಧರೆಯ ಮೇಲಿರುವ ಗಿಡಮರಗಳಂತೆ, ತನ್ನ ಜಟೆಗಳನ್ನು ಹರಡಿ ಜಟಾಧರನಾದ, ಚಂದ್ರನನ್ನು ಮುಡಿಗೇರಿಸಿ ಚಂದ್ರಶೇಖರನಾದ, ಹುಲಿಚರ್ಮವನ್ನು ಹೊದ್ದು ಚರ್ಮಾಂಭರಧಾರಿಯಾದ, ನಂದಿಯನ್ನೇರಿ ನಂದೀಶ್ವರನಾದ, ಪ್ರಕೃತಿಯ ಲಯಕ್ಕೆ ತಕ್ಕಂತೆ ನಾಟ್ಯವಾಡುತ್ತಾ...

6

ಜ್ಯೋತಿರ್ಲಿಂಗ 7: ರಾಮೇಶ್ವರ

Share Button

ದಕ್ಷಿಣ ಭಾರತದ ಪ್ರವಾಸಕ್ಕೆಂದು ಬಂದವಳು, ರಾಮೇಶ್ವರದ ಕಡಲ ತೀರದಲ್ಲಿ ನಿಂತಾಗ, ರಾಮಾಯಣದ ಕೆಲವು ಪ್ರಸಂಗಗಳು ಮನದಲ್ಲಿ ತೇಲಿ ಬಂದವು – ದಂಡಕಾರಣ್ಯದಲ್ಲಿ ಪರ್ಣಕುಟೀರವೊಂದರಲ್ಲಿ ವಾಸವಾಗಿದ್ದ ರಾಮ, ಸೀತೆ, ಲಕ್ಷ್ಮಣರು. ಸೀತೆಯ ಮನ ಸೆಳೆದ, ಚಿನ್ನದ ಬಣ್ಣದ ಜಿಂಕೆಯ ರೂಪದಲ್ಲಿ ಪ್ರತ್ಯಕ್ಷನಾದ ಮಾರೀಚ, ಪರಮ ಸುಂದರಿಯಾದ ಸೀತೆಯನ್ನು ಕಂಡು...

7

ಜ್ಯೋತಿರ್ಲಿಂಗ 6 : ಭೀಮಾ ಶಂಕರ

Share Button

ಪಟ್ಟಣಗಳ ಸದ್ದು ಗದ್ದಲದಿಂದ ದೂರ, ಜನ ಜಂಗುಳಿಯ ನೂಕು ನುಗ್ಗಾಟದಿಂದ ಬಹುದೂರ, ಕಾಂಕ್ರೀಟ್ ಕಾಡುಗಳಿಂದ ಇನ್ನೂ ದೂರವಿರುವ ಭೀಮಾಶಂಕರನ ದರ್ಶನ ಮಾಡೋಣ ಬನ್ನಿ. ಮಹಾರಾಷ್ಟ್ರದ ಪುಣೆಯಿಂದ 129 ಕಿ.ಮೀ. ದೂರದಲ್ಲಿರುವ ಖೇಡ್ ತಾಲ್ಲೂಕಿನ ಬೋರ್‌ಗಿರಿ ಎಂಬ ಗ್ರಾಮದಲ್ಲಿ, ಡಾಕಿನಿ ಬೆಟ್ಟದ ಬಳಿಯಿರುವ, ಭೀಮಾ ನದಿಯ ತೀರದಲ್ಲಿರುವ ದೇಗುಲವೇ...

6

ಜ್ಯೋತಿರ್ಲಿಂಗ 5 : ವೈದ್ಯನಾಥೇಶ್ವರ

Share Button

‘ಬೋಲ್ ಭಂ, ಬೋಲ್ ಭಂ’, ಎನ್ನುವ ಭಕ್ತರ ಕೂಗು ಕೇಳಿಸುತ್ತಿದೆಯಾ ವೈದ್ಯನಾಥ. ಎಲ್ಲಿರುವೆ ನೀನು, ಏಕೆ ಕಾಡುವೆ ನಿನ್ನ ದರುಶನಕ್ಕಾಗಿ ಬರುವ ಭಕ್ತರನ್ನು? ಮಹಾರಾಷ್ಟ್ರದ ಪರ್ಲಿಯಲ್ಲಿರುವೆಯೋ, ಅಥವಾ ಜಾರ್ಖಂಡ್‌ನ ದೇವಘರ್ ನಲ್ಲಿರುವೆಯೋ, ಅಥವಾ ಹಿಮಾಚಲದ ಕಾಂಗ್ರಾ ನಗರದಲ್ಲಿರುವೆಯೋ ತಂದೆ? ಕನ್ವರ್ ಯಾತ್ರೆಯ ಸಮಯದಲ್ಲಿ,, ಬಿಹಾರದ ಸುಲ್ತಾನ್‌ಗಂಜ್‌ನಲ್ಲಿ ಹರಿಯುವ...

6

ಜ್ಯೋತಿರ್ಲಿಂಗ 4 ;ಓಂಕಾರೇಶ್ವರ

Share Button

ಓಂ, ಓಂ, ಓಂ, ..ಓಂಕಾರದ ನಾದ ಕೇಳಿಸುತ್ತಿದೆಯಲ್ಲವೇ? ಈ ಪ್ರಣವ ನಾದ ಅ ಕಾರ, ಉ ಕಾರ ಮತ್ತು ಮ ಕಾರಗಳಿಂದ ಉದ್ಭವವಾಗಿದೆ. ಇವು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರ ಸಂಕೇತವಾಗಿ ನಿಂತರೆ, ಓಂಕಾರವು ಪರಬ್ರಹ್ಮನ ಸಂಕೇತವಾಗಿ ನಿಲ್ಲುವುದು. ಹಿಂದು ಧರ್ಮದಲ್ಲಿ ಬರುವ ಎಲ್ಲಾ ಮಂತ್ರಗಳೂ ‘ಓಂ‘ಕಾರದಿಂದಲೇ...

9

ಜ್ಯೋತಿರ್ಲಿಂಗ 3-ಉಜ್ಜಯಿನಿಯ ಮಹಾಕಾಲೇಶ್ವರ

Share Button

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ, ಮಹಾಕಾಲೇಶ್ವರನ ಹೆಸರು ಕೇಳಿಯೇ ಮೈಯಲ್ಲಿ ನಡುಕ ಹುಟ್ಟಿ, ಮನದಲ್ಲಿ ಭಯ ಮೂಡಿತ್ತು. ಮುಂಜಾನೆ ಎರಡೂವರೆಗೇ, ತಣ್ಣೀರಿನಲ್ಲಿ ಸ್ನಾನ ಮಾಡಿ, ಮಹಾಕಾಲನ ಭಸ್ಮಾರತಿ ನೋಡಲು ದೇಗುಲಕ್ಕೆ ಹೋಗಿದ್ದೆವು. ಪ್ರತಿದಿನ ಆರು ನೂರು ಜನರಿಗೆ ಮಾತ್ರ ಅವಕಾಶ ಇರುತ್ತದೆ. ಮೂರೂವರೆ ಹೊತ್ತಿಗೇ, ಭೂಮಿಯೇ ನಡುಗಿದಂತಹ ಅನುಭವ, ಗಂಟೆ,...

Follow

Get every new post on this blog delivered to your Inbox.

Join other followers: